Drug Deal: ಸಿಎಂ ಮನೆ ಮುಂದೆ ಪೇದೆಗಳ ಡ್ರಗ್ಸ್‌ ದಂಧೆ, ಇಬ್ಬರ ಹಳೆಯ ಕ್ರಿಮಿನಲ್ ಕೇಸ್ ಬಯಲು

Jan 22, 2022, 4:46 PM IST

ಬೆಂಗಳೂರು (ಜ. 2): ಗಾಂಜಾ ದಂಧೆ ಪ್ರಕರಣದಲ್ಲಿ (Ganja Deal) ಮುಖ್ಯಮಂತ್ರಿಗಳ (CM Bommai) ಖಾಸಗಿ ನಿವಾಸದ ಭದ್ರತೆಗೆ ನಿಯೋಜಿತರಾಗಿದ್ದ ಇಬ್ಬರು ಕಾನ್‌ಸ್ಟೇಬಲ್‌ಗಳ ಮೇಲೆ ಮತ್ತೊಂದು FIR ದಾಖಲಾಗಿದೆ. ಪೊಲೀಸ್ ಸಿಬ್ಬಂದಿಯ ಹಳೆಯ ಕ್ರಿಮಿನಲ್ ಕೇಸ್ (Criminal Case) ಬಯಲಾಗಿದೆ. ಆಡುಗೋಡಿ ನಿವಾಸಿ ಇಲಿಯಾಸ್ ಎಂಬುವವರು ದೂರು ದಾಖಲಿಸಿದ್ದರು. ಅ. 25 ರಂದು ಗಾಂಜಾ ಸೇವನೆ ಆರೋಪದಡಿ ಇಲಿಯಾಸ್ ಅರೆಸ್ಟ್ ಆಗುತ್ತಾರೆ. 1 ಲಕ್ಷ ರೂ ಹಣ ಕೊಡಿ, ಇಲ್ಲದಿದ್ರೆ ಕೇಸ್ ಹಾಕುತ್ತೇವೆಂದು ಶಿವಕುಮಾರ್ ಹಾಗೂ ಸಂತೋಷ್ ಬೆದರಿಕೆ ಹಾಕುತ್ತಾರೆ. ಇವರಿಗೆ ಶಿಕ್ಷೆಯಾಗಬೇಕೆಂದು ಇಲಿಯಾಸ್ ದೂರು ನೀಡಿದ್ದಾರೆ. 

Bengaluru: ಸಿಎಂ ಮನೆಯಂಗಳದಲ್ಲೇ ಪೊಲೀಸರಿಂದ ಗಾಂಜಾ ದಂಧೆ, ಇಬ್ಬರು ಅರೆಸ್ಟ್

ಗಾಂಜಾ ದಂಧೆ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಖಾಸಗಿ ನಿವಾಸದ ಭದ್ರತೆಗೆ ನಿಯೋಜಿತರಾಗಿದ್ದ ಇಬ್ಬರು ಕಾನ್‌ಸ್ಟೇಬಲ್‌ಗಳ ಬಂಧನ ಪ್ರಕರಣ ಸಂಬಂಧ ಕರ್ತವ್ಯ ಲೋಪದ ಆರೋಪದ ಮೇರೆಗೆ ಆರ್‌.ಟಿ.ನಗರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಹಾಗೂ ಸಬ್‌ ಇನ್ಸ್‌ಪೆಕ್ಟರ್‌ ತಲೆದಂಡವಾಗಿದ್ದು, ಇಬ್ಬರು ಡಿಸಿಪಿಗಳಿಗೆ ಆಯುಕ್ತರಿಂದ ಬುಧವಾರ ಶೋಕಾಸ್‌ ನೋಟಿಸ್‌ ಜಾರಿಯಾಗಿದೆ.

ಆರ್‌.ಟಿ.ನಗರ ಸಮೀಪ ಗಾಂಜಾ ಮಾರಾಟಕ್ಕೆ ಯತ್ನಿಸಿದಾಗ ಮುಖ್ಯಮಂತ್ರಿಗಳ ಖಾಸಗಿ ನಿವಾಸದ ಭದ್ರತೆ ನಿಯೋಜನೆಗೊಂಡಿದ್ದ ಕೋರಮಂಗಲ ಠಾಣೆಯ ಶಿವಕುಮಾರ್‌ ಮತ್ತು ಸಂತೋಷ್‌ ನೌಕರ್‌ ಸೇರಿ ಐವರು ಬಂಧಿತರಾಗಿದ್ದರು. ಈ ಪ್ರಕರಣವು ಸಾರ್ವಜನಿಕ ವಲಯದಲ್ಲಿ ಇಲಾಖೆಗೆ ತೀವ್ರ ಮುಜುಗರ ತಂದಿತ್ತು.