ಸೂಪರ್ ಸ್ಟಾರ್ ರಜನಿಕಾಂತ್ 170ನೇ ಸಿನಿಮಾದ ಟೈಟಲ್ ಟೀಸರ್ ಔಟ್: ಏನಿರಬಹುದು ಸಿನಿಮಾದ ಟೈಟಲ್!

Dec 13, 2023, 11:31 AM IST

ಸೂಪರ್ ಸ್ಟಾರ್ ರಜನಿಕಾಂತ್ 73ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದ್ರೇನಂತೆ ರಜನಿಕಾಂತ್ ಇಂದಿಗೂ ಬಾಕ್ಸಾಫೀಸ್ ಸುಲ್ತಾನ್. ಮೊನ್ನೆ ಮೊನ್ನೆಯಷ್ಟೆ ತಲೈವ ಜೈಲರ್ನಲ್ಲಿ ಅಬ್ಬರಿಸಿದ್ದನ್ನ ನೀವೆಲ್ಲಾ ನೋಡಿದ್ದೀರಾ. ಈಗ ಈ ಭಾರಿ ಹುಟ್ಟುಹಬ್ಬಕ್ಕೆ ರಜನಿ ಕಾಂತ್ ತನ್ನ 170ನೇ ಸಿನಿಮಾದ ಸ್ಪೆಷಲ್ ಟ್ರೀಟ್ ಕೊಟ್ಟಿದ್ದಾರೆ. ಅದೇ ತಲೈವಾ 170 ಸಿನಿಮಾದ ಟೈಟಲ್ ಟೀಸರ್ ಟ್ರೀಟ್. ಕಂಡೆಕ್ಟರ್ ಆಗಿ ಕೆಲಸ ಮಾಡ್ತಿದ್ದ ರಜನಿಕಾಂತ್ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆದವರು ಅಂತ ನಿಮ್ಗೆಲ್ಲಾ ಗೊತ್ತು. ತಲೈವಾ ಚಿತ್ರರಂಗಕ್ಕೆ ಬಂದು 5 ದಶಕ ಆಗಿದೆ.  ಇಂದಿಗೂ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಬ್ಯುಸಿ ಆಗಿರೋ ತಲೈವಾ ಈಗ 170ನೇ ಸಿನಿಮಾದ ಟೈಟಲ್ ಟೀಸರ್ ಬಂದಿದೆ. ಟಿ.ಜೆ ಜ್ಞಾನವೇಲು ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಜೈಲರ್ ಸಿನಿಮಾ ಬಳಿಕ ರಜನಿಕಾಂತ್ ಕೈಯಲ್ಲಿ ಎರಡು ಸಿನಿಮಾಗಳಿವೆ. ಪುತ್ರಿ ಐಶ್ವರ್ಯಾ ನಿರ್ದೇಶಿಸುತ್ತಿರುವ 'ಲಾಲ್ ಸಲಾಂ' ಸಿನಿಮಾ  ಹಾಗೇ ರಜನಿಯ 171ನೇ ಸಿನಿಮಾವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡುತ್ತಿದ್ದಾರೆ. ಈಗ ಟಾಕ್ ಆಫ್ ದಿ ಟೌನ್ ಆಗಿರೋದು 170 ಸಿನಿಮಾ. ರಜಿನಿ ಹುಟ್ಟುಹಬ್ಬದ ಟ್ರೀಟ್ ಈ ಟೈಟಲ್ ಟೀಸರ್.