ಇಸ್ರೇಲ್‌ನಿಂದ ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ಭಾರಿ ವಾಯುದಾಳಿ

Published : Sep 28, 2024, 08:41 AM IST
ಇಸ್ರೇಲ್‌ನಿಂದ ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ಭಾರಿ ವಾಯುದಾಳಿ

ಸಾರಾಂಶ

ಇಸ್ರೇಲ್‌ ಲೆಬನಾನ್‌ನಲ್ಲಿರುವ ಹಿಜ್ಬುಲ್ಲಾ ಉಗ್ರರ ಕೇಂದ್ರ ಕಚೇರಿ ಮೇಲೆ ವಾಯುದಾಳಿ ನಡೆಸಿದ್ದು, ಹಲವು ಕಟ್ಟಡಗಳು ಧ್ವಂಸಗೊಂಡಿವೆ. ಯೆಮೆನ್‌ನ ಹೌತಿ ಉಗ್ರರು ಕೂಡಾ ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಇಸ್ರೇಲ್‌ ಅಧ್ಯಕ್ಷ ನೆತನ್ಯಾಹು ಕದನ ವಿರಾಮ ಸಲಹೆಯನ್ನು ತಿರಸ್ಕರಿಸಿದ್ದಾರೆ.

ಜೆರುಸೆಲಂ: ಶುಕ್ರವಾರ ಸಂಜೆ ಲೆಬನಾನ್‌ ರಾಜಧಾನಿ ಬೈರೂತ್‌ನಲ್ಲಿ ಹಿಜ್ಬುಲ್ಲಾ ಉಗ್ರರ ಕೇಂದ್ರ ಕಚೇರಿ ಮೇಲೆ ಇಸ್ರೇಲ್‌ ಭಾರಿ ವಾಯುದಾಳಿ ನಡೆದಿದೆ. 4 ಕಟ್ಟಡಗಳು ಧ್ವಂಸಗೊಂಡಿವೆ ಎಂದು ಖುದ್ದು ಇಸ್ರೇಲ್ ಹೇಳಿದೆ. ಇಸ್ರೇಲ್‌ ಅಧ್ಯಕ್ಷ ಬೆಂಜಮಿನ್‌ ನೆತನ್ಯಾಹು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿ ಹಿಜ್ಬುಲ್ಲಾ ಉಗ್ರರ ವಿರುದ್ಧ ಗುಡುಗಿದ ನಂತರ ಈ ಭಾರಿ ದಾಳಿ ನಡೆದಿದ್ದು, ಬೈರೂತ್‌ನಲ್ಲಿ ಭಾರಿ ದಟ್ಟ ಹೊಗೆ ಆವರಿಸಿದೆ.

ಇಸ್ರೇಲ್‌-ಹಮಾಸ್‌ ಯುದ್ಧಕ್ಕೆ ಹಿಜ್ಬುಲ್ಲಾ ಉಗ್ರರು ಪ್ರವೇಶಿಸಿ ಕಾವು ಹೆಚ್ಚಿಸಿರುವ ಹೊತ್ತಿನಲ್ಲೇ, ಯೆಮೆನ್‌ನ ಹೌತಿ ಉಗ್ರರು ಕೂಡಾ ಕದನ ಪ್ರವೇಶ ಮಾಡಿದ್ದಾರೆ. ಇಸ್ರೇಲ್‌ ದಾಳಿಗೆ ಗುರುವಾರ ಹಿಜ್ಬುಲ್ಲಾ ಉಗ್ರ ಮೊಹಮ್ಮದ್‌ ಸ್ರುರ್‌ ಹತನಾಗಿದ್ದ. ಇದಕ್ಕೆ ಪ್ರತಿಯಾಗಿ ಹೌತಿ ಉಗ್ರರು ಗುರುವಾರ ರಾತ್ರಿ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಆದರೆ ಈ ಕ್ಷಿಪಣಿಯನ್ನು ಗಡಿಯಿಂದ ಹೊರಗೇ ನಮ್ಮ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಇಸ್ರೇಲ್‌ ಹೇಳಿದೆ. ಹಿಜ್ಬುಲ್ಲಾ ಉಗ್ರರ ಮೇಲೆ ಪೂರ್ಣ ಪ್ರಮಾಣದ ದಾಳಿಗೆ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ತಮ್ಮ ಸೇನೆಗೆ ಸೂಚಿಸಿದ ಹೊತ್ತಿನಲ್ಲೇ, ಎದುರಾಳಿ ಬಣಕ್ಕೆ ಹೌತಿ ಉಗ್ರರ ಪ್ರವೇಶವಾಗಿರುವುದು ಯುದ್ಧವನ್ನು ಇನ್ನಷ್ಟು ತೀವ್ರ, ಭೀಕರಗೊಳಿಸುವ ಆತಂಕ ಹುಟ್ಟುಹಾಕಿದೆ.

ಹೌತಿ ಉಗ್ರರು ಯೆಮೆನ್‌ನಲ್ಲಿ ನೆಲೆಸಿರುವರಾದರೂ ಅವರಿಗೆ ಇರಾನ್‌ ಬೆಂಬಲ ಕೂಡಾ ಇದೆ. ಹೌತಿ ಉಗ್ರರನ್ನು ವಿವಿಧ ರೀತಿಯ ಯುದ್ಧಕಲೆಯಲ್ಲಿ ನಿಪುಣರನ್ನಾಗಿ ಮಾಡಲು ಹಿಜ್ಬುಲ್ಲಾ ಉಗ್ರರು ಮೊಹಮ್ಮದ್‌ ಸ್ರುರ್‌ನನ್ನು ಯೆಮನ್‌ಗೆ ಕಳುಹಿಸಿಕೊಟ್ಟಿದ್ದರು. ಇದೀಗ ಆತನನ್ನೇ ಇಸ್ರೇಲ್‌ ಸಾಯಿಸಿದ ಕಾರಣ ಸಿಟ್ಟಿಗೆದ್ದ ಹೌತಿ ಉಗ್ರರು, ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಇಸ್ರೇಲ್‌ ಮತ್ತು ಲೆಬನಾನ್‌ ಗಡಿಪ್ರದೇಶದಲ್ಲಿ ಪರಸ್ಪರ ಗುಂಡಿನ ದಾಳಿ ತೀವ್ರಗೊಂಡಿದೆ ಎನ್ನಲಾಗಿದೆ.

ಆತ್ಮಹತ್ಯೆ ಯಂತ್ರದಲ್ಲಿ ಕುಳಿತು ಮೊದಲ ಸಾವು; ಫೋಟೋ ತೆಗೆಯಲು ಹೋದವರ ಬಂಧನ

ಕದನ ವಿರಾಮ ಇಲ್ಲ:
ಈ ನಡುವೆ ಲೆಬನಾನ್‌ ಮೇಲಿನ ದಾಳಿ ನಿಲ್ಲಿಸಿ 21 ದಿನಗಳ ಕದನ ವಿರಾಮ ಘೋಷಿಸಿರುವ ಅಮೆರಿಕ ಸೇರಿದಂತೆ ಹಲವು ದೇಶಗಳು ನೀಡಿದ್ದ ಸಲಹೆಯನ್ನು ಇಸ್ರೇಲ್‌ ಅಧ್ಯಕ್ಷ ಬೆಂಜಮಿನ್‌ ನೆತನ್ಯಾಹು ತಿರಸ್ಕರಿಸಿದ್ದಾರೆ.

ನೆತನ್ಯಾಹು ಎಚ್ಚರಿಕೆ 
ನಮ್ಮ ಮೇಲೆ ದಾಳಿ ಮಾಡಿದರೆ ನಾವು ಇರಾನ್ ಮೇಲೂ ದಾಳಿ ಮಾಡುತ್ತೇವೆ ಎಂದು ಈಗಾಗಲೇ ಎಚ್ಚರಿಸಿದ್ದೇನೆ' ಎಂದು ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಅಲ್ಲದೆ, ಇಂದಿನ ಮಧ್ಯಪ್ರಾಚ್ಯ ಸಮಸ್ಯೆಗೆ ಇರಾನ್ ಚಿತಾವಣೆಯೇ ಕಾರಣ ಎಂದು ಆಪಾದಿಸಿದ್ದಾರೆ. ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, 'ನಮ್ಮ ಉದ್ದೇಶ ಈಡೇರುವ ತನಕ ಲೆಬನಾನ್‌ನ ಹಿಜ್ಜುಲ್ಲಾ ಉಗ್ರರನ್ನು ಬಿಡುವುದಿಲ್ಲ. ಮೇಲಾಗಿ ಈಗಾಗಲೇ ಅರ್ಧ ಹಮಾಸ್ ಉಗ್ರ ಸಂಘಟನೆಯನ್ನು ಹೊಸಕಿ ಹಾಕಲಾಗಿದೆ' ಎಂದರು.

ವಿಶ್ವದ ಅತಿ ಹೆಚ್ಚು ಸಾಲ ಹೊಂದಿರುವ ಟಾಪ್ 10 ದೇಶಗಳು, ಪಾಕ್‌ನ ಸ್ಥಾನವೆಷ್ಟು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ