ಅಮೀರ್ ಖಾನ್-ಸಿದ್ದರಾಮಯ್ಯ ಮುಖಾಮುಖಿ! ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡ ನಟ

ಅಮೀರ್ ಖಾನ್-ಸಿದ್ದರಾಮಯ್ಯ ಮುಖಾಮುಖಿ! ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡ ನಟ

Published : Jun 25, 2025, 06:20 PM IST

ಸಿಎಂ ಸಿದ್ದರಾಮಯ್ಯ ಹಾಗೂ ಬಾಲಿವುಡ್ ನಟ ಅಮೀರ್ ಖಾನ್ ದೆಹಲಿಯಲ್ಲಿ ಆಕಸ್ಮಿಕವಾಗಿ ಭೇಟಿ ಆಗಿದ್ದಾರೆ. ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳ ಭೇಟಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿದ್ದರು.

ಸಿಎಂ ಸಿದ್ದರಾಮಯ್ಯ ಹಾಗೂ ಬಾಲಿವುಡ್ ನಟ ಅಮೀರ್ ಖಾನ್ ದೆಹಲಿಯಲ್ಲಿ ಆಕಸ್ಮಿಕವಾಗಿ ಭೇಟಿ ಆಗಿದ್ದಾರೆ. ಸಿದ್ದರಾಮಯ್ಯ ಅವರು ರಾಷ್ಟ್ರಪತಿಗಳ ಭೇಟಿಗೆ ರಾಷ್ಟ್ರಪತಿ ಭವನಕ್ಕೆ ತೆರಳಿದ್ದರು. ಅದೇ ವೇಳೆ ಅಮೀರ್ ಖಾನ್ ಸಹ ಅಲ್ಲಿಯೇ ಹಾಜರಿದ್ರು. ಅಮೀರ್ ಖಾನ್ ಹಾಗೂ ಸಿದ್ದರಾಮಯ್ಯ ಕುಷಲೋಪರಿ ವಿಚಾರಿಸಿಕೊಂಡಿದ್ದಾರೆ. ಅಮೀರ್ ಖಾನ್ ನಿರ್ಮಿಸಿರುವ ‘ಸಿತಾರೆ ಜಮೀನ್ ಪರ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಅಮೀರ್ ಖಾನ್, ಸಿದ್ದರಾಮಯ್ಯ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ.

ತೆರೆ ಮೇಲೆ ಬರಲಿದೆ ಸೌರವ್ ಗಂಗೂಲಿ ಜೀವನ ಕಥೆ: ಭಾರತ ಕ್ರಿಕೆಟ್​​​ ಕಂಡ ಶ್ರೇಷ್ಠ ಆಟಗಾರ ಕಮ್ ನಾಯಕ ಸೌರವ್ ಗಂಗೂಲಿಯ ಜೀವನಾ ಗಾಥೆ ಈಗ ಸಿನಿಮಾ ಆಗುತ್ತಿದೆ. ಸ್ವತಹ ಸೌರವ್ ಗಂಗೂಲಿಯೇ ಈ ವಿಚಾರವನ್ನ ಖಚಿತಪಡಿಸಿದ್ದಾರೆ. ಸೌರವ್ ಗಂಗೂಲಿ ಪಾತ್ರದಲ್ಲಿ ನಟ ರಾಜಕುಮಾರ್ ರಾವ್ ನಟಿಸಲಿದ್ದಾರೆ. 2026ರ ಜನವರಿಯಲ್ಲಿ ಸಿನಿಮಾ ನಿರ್ಮಾಣದ ಶೂಟಿಂಗ್ ಆರಂಭವಾಗಲಿದೆ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಸ್ಯಾಂಡಲ್​ವುಡ್​​ನಲ್ಲಿ ಭರವಸೆ ಮೂಡಿಸಿದ ಹೊಸ ಸಿನಿಮಾ: ಕನ್ನಡ ಸಿನಿಮಾ ರಂಗಕ್ಕೆ ಈಗ ಭರವಸೆಯ ಸಿನಿಮಾಗಳು ಬೇಕಾಗಿದೆ. ಇದೀಗ ಅದೇ ಭರವಸೆ ಹೆಸರಿನಲ್ಲಿ ಸಿನಿಮಾ ಒಂದು ಸಿದ್ಧವಾಗಿದ್ದು ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ನಾಗರಾಜ್ ನಿರ್ಮಾಣದ ಭರವಸೆ ಸಿನಿಮಾವನ್ನ ಮುತ್ತು ಗಂಗೂರ ನಿರ್ದೇಶನ ಮಾಡಿದ್ದಾರೆ. ತಾರಾಗಣದಲ್ಲಿ ವಿನಾಯ ರಾಜ್, ಅಹಲ್ಯ ಸುರೇಶ್, ಹೊನ್ನವಳ್ಳಿ ಕೃಷ್ಣ, ಶೋಭ ರಾಜ್, ಮನಮೋಹನ್‌ ರೈ, ಕಿಲ್ಲರ್‌ ವೆಂಕಟೇಶ್, ಕೆಂಪೆಗೌಡ ನಟಿಸಿದ್ದಾರೆ. ಬೆಂಗಳೂರು, ಶಿವಮೊಗ್ಗ, ಮಂಗಳೂರು, ಉಡುಪಿ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ನಟ ಪ್ರಕಾಶ್ ರಾಜ್ ಅವರ ನಿರ್ದಿಗಂತ 2ನೇ ವರ್ಷದ ವಾರ್ಷಿಕೋತ್ಸವ: ನಟ ಪ್ರಕಾಶ್ ರಾಜ್ ಅವರರ ರಂಗಶಾಲೆ ನಿರ್ದಿಗಂತಕ್ಕೆ ಎರಡನೇ ವರ್ಷದ ವಾರ್ಷಿಕೋತ್ಸವ. ಹೀಗಾಗಿ ಮೈಸೂರಿನ ಕಿರುರಂಗಮಂದಿರದಲ್ಲಿ ನಿರ್ದಿಗಂತದ ಹರ್ಷ, ಎರಡನೇ ವರ್ಷ ಅನ್ನೋ ಕಾರ್ಯಕ್ರಮ ನಡೆದಿದೆ. ಇದೇ ಸಮಯದಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ ವಾರ್ಷಿಕ ಸಂಚಿಕೆ‌ ಬಿಡುಗಡೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರಾಜ್ ಲೇಖಕ‌ ನಾರಾಯಣಸ್ವಾಮಿ ಸೇರಿದಂತೆ ನಟರು ರಂಗ ನಿರ್ದೇಶಕರು ಭಾಗಿ ಆಗಿದ್ರು. ಪ್ರಕಾಶ್ ರಾಜ್ ಹಾಗೂ ತಂಡದಿಂದ ಸಮತೆಯ ಹಾಡುಗಳು ಹಾಗೂ ಕುಹೂ ನಾಟಕ ಪ್ರದರ್ಶನ ಮಾಡಲಾಯ್ತು.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more