3ನೇ ಪತ್ನಿ ರಮ್ಯಾ ರುಘುಪತಿ ಆರೋಪಕ್ಕೆ ದಾಖಲೆ ಸಮೇತ ನರೇಶ್ ಬಾಬು ಉತ್ತರ

Jun 30, 2022, 11:39 PM IST

ತೆಲುಗು ನಟ ನರೇಶ್ ಬಾಬು ಏಕಾಏಕಿ ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಆದರೆ ಈ ಸದ್ದು ವಿವಾದದ ಮೂಲಕ. ಕನ್ನಡ ನಟಿ ಪವಿತ್ರ ಲೋಕೇಶ್ ಮದುವೆಯಾಗಿದ್ದಾರೆ ಅನ್ನೋ ಮಾತುಗಳಿಂದ ಆರಂಭಗೊಂಡ ವಿವಾದ ಇದೀಗ ಮೂರನೇ ಪತ್ನಿ ರಮ್ಯಾ ರುಘುಪತಿ ಆರೋಪಗಳಿಂದ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದೆ. ರಮ್ಯಾ ಆರೋಪಕ್ಕೆ ತಿರುಗೇಟು ಮಾತ್ರವಲ್ಲ, ಹಲವು ಸ್ಫೋಟಕ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾರೆ.