Feb 18, 2023, 12:06 PM IST
ಅಡಿಕೆಯಿಂದ ನಾನಾ ಆರೋಗ್ಯ ಪ್ರಯೋಜನಗಳಿದ್ದು, ಅದರಿಂದ ಡಯಾಬಿಟಿಸ್ ನಿಯಂತ್ರಣದಲ್ಲಿಡಲು ಸಹ ಇದು ಉತ್ತಮ ಎಂದು ಯುವ ಸಂಶೋಧಕ ನಿವೇದನ್ ನೆಂಪೆ ಹೇಳಿದ್ದಾರೆ.. ಅಡಿಕೆಯಿಂದ ನಾನಾ ವಿಧದ ಉತ್ಪನ್ನಗಳನ್ನು ತಯಾರಿಸಬೇಕಿದ್ದು, ಇಲ್ಲದಿದ್ದರೆ ಅಡಿಕೆಗೆ ಹೆಚ್ಚು ಉಳಿಗಾಲವಿಲ್ಲ. ಪ್ರಸ್ತುತ ಶೇ. 80 ರಷ್ಟು ಅಡಿಕೆಯನ್ನು ಗುಟ್ಕಾಗೆ ನೀಡಲಾಗುತ್ತಿದೆ. ಅಡಿಕೆ ಬೆಳೆಯುವುವು ಹೆಚ್ಚಾಗುತ್ತಿದ್ದು, ಆದರೆ ಬೇರೆ ಬೇರೆ ಉತ್ಪನ್ನಗಳಿಲ್ಲದಿದ್ದರೆ ಉದ್ಯಮ ಬೆಳೆಯುವುದು ಕಷ್ಟ ಅಂತಾರೆ ನಿವೇದನ್ ನೆಂಪೆ. ಹಾಗೆ, ಗುಟ್ಕಾ ತಿನ್ನುವವರ ಸಂಖ್ಯೆಯೂ ಕಡಿಮೆಯಾಗ್ತಿದೆ. ಇದರಿಂದ ಅಡಿಕೆ ಉದ್ಯಮದ ಮೇಲೆ ಪರಿಣಾಮ ಬೀಳಬಹುದು. ಹೀಗಾಗಿ, ಬೇರೆ ಬೇರೆ ಉತ್ಪನ್ನಗಳನ್ನು ತಯಾರಸಬೇಕು. ಹಳ್ಳಿಗಳಲ್ಲೇ ಬ್ಯುಸಿನೆಸ್ ಮಾಡ್ಬಹುದು ಎಂದೂ ಯುವ ಸಂಶೋಧಕ ನಿವೇದನ್ ನೆಂಪೆ ಹೇಳಿದ್ದಾರೆ.