ಮಳೆಯಿಂದ ಮೋರಿಯಲ್ಲಿ ಸಿಲುಕಿದ್ದ ನಾಯಿಮರಿ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂಧಿ!

Apr 29, 2020, 11:26 PM IST

ಬೆಂಗಳೂರು(ಏ.29): ಧಾರಾಕಾರ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದ ಮಾತ್ರವಲ್ಲ, ಪ್ರಾಣಿ ಪಕ್ಷಿಗಳು ಬದುಕಿಗೆ ತೀವ್ರ ಸಮಸ್ಯೆ ಎದುರಾಗಿದೆ. ಹೆಚ್‌ಎಸ್ಆರ್ ಲೇಔಟ್‌ನ ಮೋರಿ ಕೆಳಗಿ ನಿನ್ನೆಯಷ್ಟೇ ನಾಯಿ ಮರಿ ಹಾಕಿತ್ತು. ಆದರೆ ಮಳೆ ಸುರಿಯುತ್ತಿದ್ದ ಬೆನ್ನಲ್ಲೇ ನಾಯಿ ಮರಿಗಳನ್ನು ಬೇರೆಡೆಗೆ ಸ್ಥಳಾಂತರ ಮಾಡಿತ್ತು. ಆದರೆ ಒಂದು ಮರಿ ಮಾತ್ರ ನೀರಿನಿಂದ ಮೋರಿಯಡಿಯಲ್ಲಿ ಸಿಲುಕಿ ಹಾಕಿತ್ತು. 

ತಾಯಿ ನಾಯಿಯ ಕೂಗು ಕೇಳಿದ ಗಮನಿಸಿದ ಎಲೆಕ್ಟ್ರಾನಿಕ್ ಸಿಟಿ  ಅಗ್ನಿಶಾಮಕದಳ ಠಾಣಾ ಇನ್ಸಪೆಕ್ಟರ್ ಮಂಜುನಾಥ್ ಹಾಗೂ ಸಿಬ್ಬಂಧಿಗಳು ನಾಯಿ ಮರಿ ಸಿಲುಕಿರುವುದು ಗಮನಿಸಿದ್ದಾರೆ. ತಕ್ಷಣವೇ ನಾಯಿ ಮರಿಯನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ತಾಯಿ ನಾಯಿ ಪೊಲೀಸರ ಸುತ್ತವೇ ಸುತ್ತಿ ನಾಯಿ ಮರಿಗಾಗಿ ಕಾಯುತ್ತಿರುವ ದೃಶ್ಯ ಮನಕಲುಕುವಂತಿದೆ. ಇತ್ತ ಸತತ ಪ್ರಯತ್ನದಿಂದ ಅಗ್ನಿಶಾಮಕ ಸಿಬ್ಬಂದಿ ನಾಯಿ ಮರಿಯನ್ನು ರಕ್ಷಿಸಿ ಮೇಲಕ್ಕೆ ತೆಗೆದಿದ್ದಾರೆ. ಈ ವೇಳೆ ತಾಯಿ ನಾಯಿ, ಮರಿಯನ್ನು ಹೊತ್ತೊಯ್ದಿದೆ.