ಪಾದರಾಯನಪುರ ಯುವಕರಿಂದ ವೀಲಿಂಗ್; ಬೆಂಬಲಕ್ಕೆ ನಿಂತ ಕಾರ್ಪೊರೇಟರ್ ಇಮ್ರಾನ್ ಪಾಷ!

May 9, 2020, 6:52 PM IST

ಬೆಂಗಳೂರು(ಮೇ.09): ಪಾದಾರಾಯನಪುರದ ಅಟ್ಟಹಾಸ ಇನ್ನೂ ಕಡಿಮೆಯಾಗಿಲ್ಲ. ಇದೀಗ ಯುವಕರು ಸೀಲ್‌ಡೌನ್ ಧಿಕ್ಕರಿಸಿ ಊರೂರು ಸುತ್ತುತ್ತಿದ್ದಾರೆ. ಇಷ್ಟೇ ಅಲ್ಲ ಹೈವೇ ರಸ್ತೆಗಳಲ್ಲಿ ವೀಲಿಂಗ್ ಮಾಡಿದ್ದಾರೆ. ಈ ಪಾದರಾಯನಪುರ ಯುವಕರನ್ನು ಚೇಸ್ ಮಾಡುತ್ತಿದ್ದ ವೇಳೆ ಸ್ಥಳೀಯರು ಅಡ್ಡಹಾಕಿ ಯುವಕರಿಗೆ ಥಳಿಸಿದ್ದಾರೆ. ಇತ್ತ ಪೊಲೀಸರು ಆಗಮಿಸಿ ಸ್ಥಳೀಯರಿಗೆ ಎಚ್ಚರಿಕೆ ನೀಡಿದ್ದಾರೆ. ಬಳಿಕ ಯುವಕರಿಗೆ ವಾರ್ನಿಂಗ್ ಮಾಡಿ ಕಳುಹಿಸಿದ್ದಾರೆ. 

ಇದನ್ನೂ ನೋಡಿ | ಪಾದರಾಯನಪುರ ಯುವಕರಿಂದ ವೀಲಿಂಗ್; ಬೆಂಬಲಕ್ಕೆ ನಿಂತ ಕಾರ್ಪೊರೇಟರ್ ಇಮ್ರಾನ್ ಪಾಷ!...

ಇದೀಗ ವೀಲಿಂಗ್ ಮಾಡಿದ ಯುವಕರ ಮೇಲೆ ಸ್ಥಳೀಯರು ಮಾಡಿದ ಹಲ್ಲೆ ವಿಡಿಯೋ ಹಿಡಿದು ಕಾರ್ಪೋರೇಟರ್ ಇಮ್ರಾನ್ ಪಾಷ, ಪೊಲೀಸರ ಆರೋಪ ಮಾಡಿದ್ದಾರೆ. ಯುವಕರನ್ನು ಥಳಿಸುವಾಗ ಪೊಲೀಸರು ಏನು ಮಾಡುತ್ತಿದ್ದರು. ಇದು ಪೊಲೀಸರ ತಂತ್ರ ಎಂದು ಇಮ್ರಾನ್ ಪಾಷ ಆರೋಪಿಸಿದ್ದಾರೆ. ಆದರೆ ಪಾದರಾಯನಪುರ ಸೀಲ್‌ಡೌನ್ ಆಗಿದ್ದರೂ ಯುವಕರು ಯಲಹಂಕ ತಲುಪಿದ್ದಾರೆ. ಹೆಲ್ಮೆಟ್ ಹಾಕದೇ ತಿರುಗಾಡಿದ್ದು, ನಿಯಮ ಉಲ್ಲಂಘಿಸಿರುವ ಕುರಿತು ಪಾಷ ಮೌನ ವಹಿಸಿದ್ದಾರೆ.

ಜಮೀರ್ ಅಹ್ಮದ್ ಖಾನ್ ಮತ್ತೊಂದು ಯಡವಟ್ಟು..!...
"