ಮದ್ವೆಯಾಗಿ 12 ವರ್ಷ ಆದ್ಮೇಲೆ ಡಿವೋರ್ಸ್‌; ನೋವು ಹಂಚಿಕೊಂಡ ಗಿಚ್ಚಿ ಗಿಲಿಗಿಲಿ ಜಾನ್ವಿ!

By Vaishnavi Chandrashekar  |  First Published Jun 27, 2023, 12:23 PM IST

12 ವರ್ಷ ಜೊತೆಗಿದ್ದವರೇ ನಮ್ಮನ್ನು ಗಟ್ಟಿ ಮಾಡಿ ಬಿಟ್ಟೋಗಿದ್ದಾರೆ. ನೆಗೆಟಿವ್ ಕಾಮೆಂಟ್ ಮತ್ತಯ ಗಾಸಿಪ್‌ಗಳ ಬಗ್ಗೆ ಜಾನ್ವಿ ಮಾತು....
 


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ಸೀಸನ್ 2 ರಿಯಾಲಿಟಿ ಶೋ ಸ್ಪರ್ಧಿ ಜಾನ್ವಿ ಟ್ರೋಫಿ ಪಡೆದು ಯಶಸ್ಸು ಎಂಜಾಯ್ ಮಾಡುತ್ತಿದ್ದಾರೆ. ಈ ನಡುವೆ ಜಾನ್ವಿ ವೈಯಕ್ತಿಕ ಜೀವನದ ಬಗ್ಗೆ ಕೆಲವೊಂದು ನೆಗೆಟಿವ್ ಕಾಮೆಂಟ್ ಹರಿದಾಡುತ್ತಿದೆ. ಡಿವೋರ್ಸ್ ಆಗಿದೆ ಹಾಗೆ ಹೀಗೆ ಎಂದು. ಉತ್ತರ ಕೊಡುವ ಮೂಲಕ ಗಾಸಿಪ್‌ಗೆ ಬ್ರೇಕ್ ಹಾಕಿದ್ದಾರೆ. 

'ಎಲ್ಲಾ ಕಡೆ ಪಾಸಿಟಿವ್ ಮತ್ತು ನೆಗೆಟಿವ್ ಇರುತ್ತದೆ. 20 ಅಥವಾ 21 ವರ್ಷ ಇದ್ದಾಗ ನಾನು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಆರಂಭದಲ್ಲಿ ಕೆಲವೊಂದು ವಿಚಾರಗಳಿಂದ ಬೇಸರ ಆಗುತ್ತಿತ್ತು ವರ್ಷ ಕಳೆಯುತ್ತಿದ್ದಂತೆ ಇದೆಲ್ಲಾ ಕಾಮನ್ ಇರಲಿ ಎಂದು ನೆಗೆಲೆಟ್ ಮಾಡುವುದಕ್ಕೆ ಶುರು ಮಾಡುತ್ತೀವಿ. ಬಣ್ಣದ ಲೋಕದಲ್ಲಿ ಪಾಸಿಟಿವ್‌ಗಿಂತ ನೆಗೆಟಿವ್ ಮಾತನಾಡುವವರು ಹೆಚ್ಚು ಏಕೆಂದರೆ ಒಬ್ಬರನೊಬ್ಬರು ಕಾಲು ಎಳೆಯುವುದು ಜೆಲಸಿ ಇರುತ್ತ. ಆರಂಭದಲ್ಲಿ ಭಯ ಆಗುತ್ತಿತ್ತು ಎಲ್ಲದಕ್ಕೂ ರಿಯಾಕ್ಟ್ ಮಾಡುವುದು ತುಂಬಾ ನೇರವಾಗಿ ಮಾತನಾಡುತ್ತಿದ್ದೆ ಆವಾಗ ಮೆಚ್ಯೂರಿಟಿ ಬಂತು ಅಲ್ಲಿಂದ ಸೈಲೆಂಟ್ ಅಗಿರುವುದಕ್ಕೆ ಸುಮ್ಮನಿದ್ದೆ. ಗಾಸಿಪ್‌ಗಳ ನಡುವೆ ಇರಬೇಕ ಎಲ್ಲದಕ್ಕೂ ರಿಯಾಕ್ಟ್‌ ಮಾಡಬಾರದು ಎಂದು ಅರ್ಥ ಮಾಡಿಕೊಂಡೆ. ಈ ರೂಮರ್ಸ್‌ಗಳು ನಾವು ಊರಿನಲ್ಲಿ ಇದ್ದಾಗಲೂ ನಡೆಯುತ್ತಿತ್ತು ಇಲಿ ಹೋದರೆ ಹುಲಿ ಹೋಯಿತ್ತು ಎನ್ನುತ್ತಾರೆ ಹಾಗೆ ಹೀಗೆ ಎಂದು ಸುಮ್ಮನಾಗಲು ಶುರು ಮಾಡಿದೆ' ಎಂದು ಖಾಸಗಿ ಯುಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜಾನ್ವಿ ಮಾತನಾಡಿದ್ದಾರೆ.

Tap to resize

Latest Videos

ಬಾಲಿವುಡ್‌ಗೆ ಹಾರಿದ ರಶ್ಮಿಕಾ ಮಂದಣ್ಣ, ಅವರನ್ನೇ ಇಲ್ಲಿಗೆ ಕರೆಸಿದ ಯಶ್; ಟ್ರೋಲ್ ವೈರಲ್!

'ನನಗಿರುವ ಫ್ಯಾಮಿಲಿ ಸಪೋರ್ಟ್‌ ಬಗ್ಗೆ ಹೆಮ್ಮೆಯಿಂದ ಮಾತನಾಡುವೆ. ಆಗದೇ ಇರುವವರು ಸುಮ್ಮನೆ ನೆಗೆಟಿವ್ ಮಾತನಾಡಿದಾಗ ಬೇಸರ ಅಗುತ್ತೆ ಆಗ ಫ್ಯಾಮಿಲಿ ಸಪೋರ್ಟ್ ಬೇಕೇ ಬೇಕು. ನನ್ನನ್ನು ಹತ್ತಿರದಿಂದ ನೋಡಿದವರಿಗೆ ಮಾತ್ರ ಗೊತ್ತಾಗುತ್ತದೆ ಮಾತನಾಡಿದ ಮೇಲೆ ಓ ನೀನು ಹೀಗಾ? ಎನ್ನುತ್ತಾರೆ. ದೂರದಲ್ಲಿ ನಿಂತುಕೊಂಡು ಯಾರೋ ಏನೋ ಹೇಳಿದನ್ನು ಕೇಳಿಸಿಕೊಂಡು ಒಂದು ಜಡ್ಜ್‌ಮೆಂಟ್‌ಗೆ ಬರುತ್ತಾರೆ. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು ಎನ್ನುವ ಮಾತಿದೆ. ಮಾಡರ್ನ್‌ ಅಗಿ ಕಾಣಿಸುತ್ತೀನಿ ಎಂದು ಏನ್ ಏನೋ ಕಾಮೆಂಟ್ ಮಾಡಬಹುದು ಬಣ್ಣದ ಪ್ರಪಂಚ ಏನೇ ಇದ್ದರೂ ಬೆಳಗ್ಗೆ  3 ಅಥವಾ 4 ಗಂಟೆಗೆ ಎದ್ದು ನನ್ನ ಮಗನ ತಿಂಡಿ ರೆಡಿ ಮಾಡಿ ಪ್ಯಾಕ್ ಮಾಡಿ ಆನಂತರ ಅವನಿಗೆ ಹಾಲು ಬಿಸಿ ಮಾಡಿ ಆನಂತರ ಕೆಲಸಕ್ಕೆ ಹೊರಡುವುದು. ಎಲ್ಲಾ ಹೆಣ್ಣು ಮಕ್ಕಳು ಹೇಗೆ ಕೆಲಸ ಮಾಡುತ್ತಾರೆ ನನ್ನ ಕೆಲಸ ಕೂಡ ಹಾಗೆ ಇರುತ್ತೆ ಹೊರತು ಬೇರೆ ಏನೂ ಇಲ್ಲ ಸ್ಟೈಲ್ ಮಾಡ್ತೀನಿ ಕೆಲಸ ಮಾಡಲ್ಲ ಅನ್ನೋ ತರ ಅಲ್ಲ. ಊರಿನಲ್ಲಿದ್ದಾಗ ನನ್ನ ತಾಯಿ ಹೇಳುವವರು ನೀವು ಏನ್ ಮದ್ವೆ ಆಗ್ತೀರಾ ಏನ್ ಸಂಸಾರ ಮಾಡ್ತೀರಾ ಅಂತ. ನನ್ನ ಮಗನನ್ನು ಸಾಕುವುದು ನೋಡಿದರೆ ಗಾಬರಿ ಆಗುತ್ತಿದ್ದರು ಅಷ್ಟು ಓವರ್ ಕೇರ್ ಮಾಡುತ್ತಿದ್ದ ಕಾರಣ ನನ್ನ ಮಗಳು ರೀತಿ ಯಾರೂ ಮಕ್ಕಳನ್ನು ನೋಡಿಕೊಳ್ಳುವುದಿಲ್ಲ ಎನ್ನುತ್ತಿದ್ದರು. 

ಹುಳಾ ಒಳಗೆ ಸೇರಿದ್ರೆ ಕಷ್ಟ ಬೇಗ ಎದ್ದೇಳು;ರಾಗಿಣಿ ದ್ವಿವೇದಿ ಕಾಲೆಳೆದ ನೆಟ್ಟಿಗರು

'ನಾನು ತುಂಬಾ ಸ್ಟ್ರಾಂಗ್ ವ್ಯಕ್ತಿ. ಸಿಂಗಲ್ ಪೇರೆಂಟ್ ಆಗಿ ನಾನು ಸ್ಟ್ರಾಂಗ್ ಆಗಿದ್ದರೆ ಮಾತ್ರ ಅವರು ಕೂಡ ಸ್ಟ್ರಾಂಗ್ ಆಗಿರುತ್ತಾರೆ. ನಾನು ಯೋಚನೆ ಮಾಡಿಕೊಂಡು ಏನೋ ಆಯ್ತು ಅಂದ್ರೆ ಅವ್ರು ಕೂಡ ಯೋಚನೆ ಮಾಡುತ್ತಾರೆ. 12 ವರ್ಷದಿಂದ ಏಳು ಬೀಳುಗಳನ್ನು ನೋಡಿ ನೋಡಿ ಗಟ್ಟಿಯಾಗಿದ್ದೆ ಅಭ್ಯಾಸ ಆಗಿತ್ತು ಬಿಟ್ಟೋದ ವ್ಯಕ್ತಿಗಳೇ ನಮ್ಮನ್ನು ಸ್ಟ್ರಾಂಗ್ ಮಾಡಿಬಿಟ್ಟರು. ಮದ್ವೆ ಆದ್ಮೇಲೆ ಫುಲ್ ಶಾಕ್ ಆಗಿತ್ತು ಈ ರೀತಿ ಜನನೂ ಇರ್ತಾರಾ ಬೇರೆ ರೀತಿ ಲೈಫ್‌ಸ್ಟೈಲ್ ಎಲ್ಲವೂ. ಪ್ರಪಂಚ ಹೀಗೆ ಇರುವುದು ಎಂದು ಅಜೆಸ್ಟ್‌ ಮಾಡಿಕೊಂಡೆ ಆದರೆ ಹಾಗೆ ಇರಲಿಲ್ಲ ಈಗ ನನ್ನ ಜೀವನ ನೆನಪಿಸಿಕೊಂಡು ನಾನು ನಗುವೆ' ಎಂದು ಜಾನ್ವಿ ಹೇಳಿದ್ದಾರೆ.

click me!