2 ತಿಂಗಳಿನಲ್ಲಿ ಸಿಕ್ಕಾಪಟ್ಟೆ ದಪ್ಪಗಾದ 'ಅಮೃತಾಧಾರೆ' ರಾಜೇಶ್; ತಯಾರಿ ಹೀಗಿತ್ತು!

Published : Jun 24, 2023, 12:20 PM IST
2 ತಿಂಗಳಿನಲ್ಲಿ ಸಿಕ್ಕಾಪಟ್ಟೆ ದಪ್ಪಗಾದ 'ಅಮೃತಾಧಾರೆ' ರಾಜೇಶ್; ತಯಾರಿ ಹೀಗಿತ್ತು!

ಸಾರಾಂಶ

ಇದ್ದಕ್ಕಿದ್ದಂತೆ ದಪ್ಪಗಾಗಬೇಕು ಅಂದ್ರು ಎರಡು ತಿಂಗಳಿನಲ್ಲಿ ದಪ್ಪಗಾದ್ರೂ ಸಾಕಾಗಲ್ಲ ಅಂತಾರೆ. ಪಾತ್ರಕ್ಕೆ ರಾಜೇಶ್ ತಯಾರಿ ಹೀಗಿತ್ತು...    

ಜೀ ಕನ್ನಡ ವಾಹಿನಿಯಲ್ಲಿ ಹೊಸ ಸಂಚಲನ ಸೃಷ್ಟಿ ಮಾಡುತ್ತಿರುವ ಅಮೃತಾಧಾರೆ ಧಾರಾವಾಹಿಯಲ್ಲಿ ಸ್ಯಾಂಡಲ್‌ವುಡ್‌ ನಟ ರಾಜೇಶ್ ಅಭಿನಯಿಸುತ್ತಿದ್ದಾರೆ. ಖ್ಯಾತ ಉದ್ಯಮಿ ಗೌತಮ್ ಪಾತ್ರದಲ್ಲಿ ಮಿಂಚುತ್ತಿರುವ ರಾಜೇಶ್ ಮೊದಲ ಸಲ ವಿಭಿನ್ನ ಪಾತ್ರವನ್ನು ಆಯ್ಕೆ ಮಾಡಿಕೊಂಡಿರುವುದು. ವಯಸ್ಸಾಗಿದೆ ಮದುವೆ ಆಗಿಲ್ಲ, ಕೋಟಿಗಟ್ಟಲೆ  ಹಣವಿದೆ...ಒಂದು ಇಂಟ್ರೆಸ್ಟಿಂಗ್ ಸ್ಟೋರಿ ಇದಾಗಿದ್ದು ಪಾತ್ರಕ್ಕೆ ಹೇಗೆ ತಯಾರಿ ಮಾಡಿಕೊಂಡಿದ್ದು ಎಂದು ರಾಜೇಶ್ ರಿವೀಲ್ ಮಾಡಿದ್ದಾರೆ. 

'ಗೌತಮ್ ಪಾತ್ರ ಮಾಡಲು ನಾನು ಮಾನಸಿಕವಾಗಿ ತಯಾರಿ ಮಾಡಿಕೊಳ್ಳಬೇಕಿತ್ತು. ಒಂದಿಷ್ಟು ಸೋಂಬೇರಿತನಕ್ಕೆ ನನ್ನನ್ನು ನಾನು ಕುಗಿಸಿಕೊಂಡಿದ್ದೆ. ಒಂದು ಪ್ರಾಜೆಕ್ಟ್‌ ಶುರುವಾದರೆ ಒಂದಿಷ್ಟು ದಿನಗಳಲ್ಲಿ ಮುಗಿಯುತ್ತದೆ ಅನ್ನೋದು ತಲೆಯಲ್ಲಿ ಇರುತ್ತದೆ ನನ್ನ ಕೆಲಸ ನಾನು ಮಾಡುವ ಕೆಟ್ಟದು ಒಳ್ಳೆಯದು ಜನರಿಗೆ ಬಿಟ್ಟಿದ್ದು ನಾನು ನಟಿಸಿ ಹೊರ ಬರುವುದು ಅಷ್ಟೇ ನನ್ನ ಕೆಲಸ. ಆದರೆ ಧಾರಾವಾಹಿ ಅಂದ್ರೆ ದಿನ ಬೆಳಗ್ಗೆ ಎದ್ದು ಚಿತ್ರೀಕರಣಕ್ಕೆ ಹೋಗಬೇಕು ಆ ಪಾತ್ರ ಪ್ರತಿ ದಿನ ಹೇಗೆ ಬೆಳೆಯುತ್ತದೆ ಗೊತ್ತಿಲ್ಲ ಅದಕ್ಕೆ ನನ್ನ ಕೊಡುಗೆ ಹೆಚ್ಚಿರಬೇಕು. ಈ ರೀತಿ ತಯಾರಿ ಬಿಟ್ಟರೆ ನಾನು ತೂಕ ಹೆಚ್ಚಿಸಿಕೊಳ್ಳಬೇಕಿತ್ತು ನೇರವಾಗಿ ನೋಡಿ ನೀವು ಇನ್ನು ದಪ್ಪಗಾಗಬೇಕು ಎಂದು ಹೇಳಿದರು ಹೊರತು ಸಣ್ಣಗಾಗಬೇಕು ಎಂದು ಹೇಳಲಿಲ್ಲ. ಎರಡು ತಿಂಗಳು ಸಮಯ ಕೊಡಿ ಸಣ್ಣ ಅಗುವೆ ಅಂದ್ರೆ ಬೇಡ ಸರ್ ನೀವು ಇನ್ನು ಸಣ್ಣ ಆಗಬೇಕು ಅಂತಾರೆ. ದಪ್ಪ ಆಗಬೇಕಾ ಎಂದು ಗಾಬರಿ ಅಗಿದೆ...ಆಗ ಇಲ್ಲ ಇಲ್ಲ ಹೀಗೆ ಇರಿ ಆದರೆ ಸಣ್ಣಗಾಗಬೇಡಿ ಅಂದ್ರು. ಅಪ್ಪ ಅಮ್ಮ ಹಾರೈಕೆ ದೇವರು ಕೊಟ್ಟಿರುವ ಮುಖ ಪಾತ್ರಕ್ಕೆ ಹೇಗೆ ಬೇಕು ಹಾಗೆ ಇತ್ತು ಸೂಟ್ ಆಂಡ್ ಕೋಟ್ ಹಾಕಿದರೆ ಚೆನ್ನಾಗಿ ಕಾಣಿಸುತ್ತೀನಿ ಅಂತಿತ್ತು ಅಷ್ಟು ಬಿಟ್ಟರೆ ಬೇರೆ ಯಾವ ರೀತಿನೂ ತಯಾರಿ ಮಾಡಿಕೊಳ್ಳುವ ಅಗತ್ಯವಿರಲಿಲ್ಲ' ಎಂದು ರಾಜೇಶ್ ಮಾತನಾಡಿದ್ದಾರೆ.

ಕುಡಿದು ಬಾರ್‌ನಲ್ಲಿ ಕಿರಿಕ್ ಮಾಡಿದ ಯುಟ್ಯೂಬರ್; CCTV ದೃಶ್ಯ ವೈರಲ್, ಸ್ಪಷ್ಟನೆ ಕೊಟ್ಟ ಪುಂಡ!

'ಸುಮಾರು 15 ವರ್ಷಗಳು ಆಗಿತ್ತು ಈ ರೀತಿ ಪಾತ್ರ ಮಾಡಿ ಅದಕ್ಕೆ ಸಿದ್ಧತೆ ಮಾಡಿಕೊಂಡೆ ಅಷ್ಟೆ. ಆಗಿನ ಕಾಲದಲ್ಲಿ ನಾವು ಮಾಡುತ್ತಿದ್ದ ಸೀರಿಯಲ್‌ಗಿಂತ ಈಗ ಚೆನ್ನಾಗಿ ಜನರ ಮುಂದೆ ಕಥೆ ಇಡುತ್ತಿದ್ದಾರೆ ಅದೇ ಹಳೆ ಕಥೆ ಆದರೆ ಮಾಡಬೇಕಾ ಅನ್ನೋ ಯೋಚನೆಯಲ್ಲಿ ಎರಡು ದಿನ ಕಳೆದೆ ಅಷ್ಟೆ. ಇಲ್ಲ ಎಂದು ಹೇಳುವುದಕ್ಕೆ ಮನಸ್ಸು ಇರಲಿಲ್ಲ' ಎಂದು ರಾಜೇಶ್ ಹೇಳಿದ್ದಾರೆ.

ತಂದೆ ತಾಯಿ 25ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ ಕೆಂಡಸಂಪಿಗೆ ನಟಿ ಕಾವ್ಯಾ!

'ಪಾತ್ರದ ಬಗ್ಗೆ ಕೆಲಸ ಜೊತೆ ಚರ್ಚೆ ಮಾಡಿದಾಗ ಧೈರ್ಯವಾಗಿ ಮಾಡು ಎಂದು ಹೇಳಿದವರು ಹೆಚ್ಚಿದ್ದರು ಹೀಗಾಗಿ ಇದು ನನ್ನ ವೃತ್ತಿ ಬದುಕಿಗೆ ಪಾಸಿಟಿವ್ ಆಗಿದೆ. ದಿನ ಚಿತ್ರೀಕರಣಕ್ಕೆ ಹೋಗಬೇಕು ಒಂದು ದಿನವೂ ಮಿಸ್ ಮಾಡುವಂತಿಲ್ಲ ಗಂಟೆಗಟ್ಟಲೆ ನಡೆಯುತ್ತದೆ ಏಕೆಂದರೆ ಸೀರಿಯಲ್ ಒಂದು ಟೈಮ್ ಫ್ರೇಮ್‌ನಲ್ಲಿ ನಡೆಯುತ್ತದೆ ಒಂದು ದಿನಕ್ಕೆ ಇಷ್ಟು ಕಂಟೆಂಟ್‌ ರೆಡಿ ಮಾಡಿ ಕೊಡಬೇಕು ಹೆಚ್ಚಿಗೆ ಚರ್ಚೆ ಮಾಡುವುದಕ್ಕೆ ಜಾಗವಿಲ್ಲ ಒಂದು ಸೀನ್ ಹಾಟ್‌ ಕೇಕ್ ರೀತಿ ಬರುತ್ತದೆ ಈ ಸೀನ್ ಮಾಡಲು ಆಗಲ್ಲ ನನಗೆ ಈ ಡೈಲಾಗ್ ಮಾಡಲ್ಲ ಎಂದು ಹೇಳುವಂತಿಲ್ಲ. ಅದು ಇದು ಬದಲಾವಣೆ ಮಾಡೋಣ ಎಂದು ನಾನು ಹೇಳಲು ಶುರು ಮಾಡಿದರೆ ಅದ involvement ಅಂತ ಆಗೋಲ್ಲ ಜಡ್ಜೆಂಟ್ ಅಂತ ಆಗುತ್ತೆ' ಎಂದಿದ್ದಾರೆ ರಾಜೇಶ್. 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೈ-ಬಿಪಿಯಿಂದ ಮದುವೆ ಮರುದಿನವೇ ಪ್ರಖ್ಯಾತ ಹಾಸ್ಯನಟನ ಎರಡೂ ಕಿಡ್ನಿ ಫೇಲ್‌, ತನ್ನ ಕಿಡ್ನಿ ನೀಡಿ ಜೀವ ಉಳಿಸಿದ್ದಳು ಪತ್ನಿ!
ಬಿಗ್ ಬಾಸ್ ಮನೆಗೆ ಪವರ್ ಕಟ್, ಕಗ್ಗಲತ್ತಲ್ಲಿ ಕಂಟೆಸ್ಟೆಂಟ್‌ಗಳು; BESCOM ಕಿತಾಪತಿ ಇರಬಹುದೇ?