ಕುಡಿದು ಬಾರ್‌ನಲ್ಲಿ ಕಿರಿಕ್ ಮಾಡಿದ ಯುಟ್ಯೂಬರ್; CCTV ದೃಶ್ಯ ವೈರಲ್, ಸ್ಪಷ್ಟನೆ ಕೊಟ್ಟ ಪುಂಡ!

By Vaishnavi Chandrashekar  |  First Published Jun 24, 2023, 10:57 AM IST

ಪೊಲೀಸ್ ಹೊಯ್ಸಳದಲ್ಲಿ ರೀಲ್ಸ್ ಸ್ಟಾರ್. ಕುಡಿದ ರೆಸ್ಟ್ರೋಬಾರ್‌ನಲ್ಲಿ ಕಿರಿಕ್. ಯುಟ್ಯೂಬ್ ವಿಡಿಯೋದಲ್ಲಿ ಸ್ಪಷ್ಟನೆ. ಸಿಸಿಟಿವಿಯಲ್ಲಿ ಬರ್ತಿರೋದೇ ಬೇರೆ....


ಕೊರೋನಾ ಲಾಕ್ ಡೌನ್ ಸಮಯದಲ್ಲಿ ವಿಭಿನ್ನ ರೀತಿಯ ರೀಲ್ಸ್ ಮಾಡುವ ಮೂಲಕ ಜನಪ್ರಿಯತೆ ಪಡೆದ ಅಣ್ಣ ತಂಗಿ ಈಗ ಯುಟ್ಯೂಬ್ ಚಾನೆಲ್ ಕೂಡ ಆರಂಭಿಸಿದ್ದಾರೆ. ಅಣ್ಣ ನಿಖಿಲ್ ಮೇಲೆ ತಂಗಿ ನಿಶಾ ಕಾಮಿಡಿ ಇಲ್ಲ ನಿಶಾ ಮೇಲೆ ನಿಖಿಲ್ ಕಾಮಿಡಿ ಮಾಡುತ್ತಾರೆ. ಅಣ್ಣ ತಂಗಿ ಹಿಟ್ ರೀಲ್ಸ್‌ನ ಇಡೀ ಕರ್ನಾಟಕವೇ ಮೆಚ್ಚಿಕೊಂಡಿದೆ. ಹೀಗಿರುವಾಗ ಸಣ್ಣ ಮಾತುಕಥೆಯಿಂದ ದೊಡ್ಡ ಕಿರಿಕ್ ಮಾಡಿಕೊಂಡು ನಿಖಿಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 

ಹೌದು! ಕೆಲವು ದಿನಗಳಿಂದ ನಿಖಿಲ್ ಪೊಲೀಸ್ ಹೊಯ್ಸಳದಲ್ಲಿ ಕುಳಿತುಕೊಂಡಿರುವುದು ಹೊರಗೆ ನಿಂತಿರುವ ಹುಡುಗರು ಕೆಟ್ಟ ಪದಗಳಿಂದ ಬೈಯುತ್ತಿರುವುದು ಅದಕ್ಕೆ ನಿಖಿಲ್ ಹೊಡೆಯಲು ಮುಂದಾಗಿರುವ ವಿಡಿಯೋ ವೈರಲ್ ಆಗುತ್ತಿದೆ. ರೀಲ್ಸ್ ಸ್ಟಾರ್‌ಗೆ ಏನೋ ಆಯ್ತು ಏನೋ ಆಯ್ತು ಎಂದು ನಾನ್ ಸ್ಟಾಪ್ ಮೆಸೇಜ್ ಮಾಡಿದ ಅಭಿಮಾನಿಗಳಿಗೆ ತಮ್ಮ ಯುಟ್ಯೂಬ್ ಚಾನೆಲ್ ಮೂಲಕ ಕ್ಲಾರಿಟಿ ಕೊಟ್ಟಿದ್ದಾರೆ. ಕ್ಲಾರಿಟಿ ಕೊಟ್ಟ ಮೇಲೆ ಹೋಟೆಲ್ ಮಾಲೀಕರು ಸಿಸಿಟಿವಿ ದೃಶ್ಯ ರಿಲೀಸ್ ಮಾಡಿದ್ದಾರೆ ಅದರಲ್ಲಿ ನಿಖಿಲ್ ಕುಡಿದು ಎಣ್ಣೆ ಬಾಟಲ್ ಪುಡಿ ಪುಡಿ ಮಾಡುತ್ತಿರುವುದನ್ನು ನೋಡಬಹುದು. 

Tap to resize

Latest Videos

ಒಳ ಉಡುಪು ಹಾಕಿದ್ದಾರೆ ಹಾಗೆ ನೋಡ್ಬೇಡಿ; ಆಶಿಕಾ ರಂಗನಾಥ್ ಕಾಲೆಳೆದ ನೆಟ್ಟಿಗರು

ನಿಖಿಲ್ ತುಂಬಾ ಪರಿಚಯವಿದ್ದ ಹೋಟೆಲ್‌ನಲ್ಲಿ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದರು. ನಿಖಿಲ್ ಗುಂಪಿನಲ್ಲಿ ಸಸ್ಯಹಾರಿ ಸ್ನೇಹಿತಾ ವೆಬ್‌ ಬಿರಿಯಾನಿ ಆರ್ಡರ್‌ ಮಾಡಿದ್ದಾರೆ ಆದರೆ ಹೋಟೆಲ್‌ನವರು ಚಿಕನ್ ಬಿರಿಯಾನಿ ಕೊಟ್ಟಿದ್ದಾರೆ. ಇದನ್ನು ಗೊತ್ತಿಲ್ಲದೆ ತಿಂದ ಸ್ನೇಹಿತಾ ಮಾಲೀಕರ ವಿರುದ್ಧ ಗರಂ ಆಗಿದ್ದಾರೆ. ಗಂಟೆಗಟ್ಟಲೆ ಕಾದು ಇದರ ಬಗ್ಗೆ ಮಾತನಾಡಲು ಮಾಲೀಕರು ನಿರಾಕರಿಸಿದಾಗ ಎಣ್ಣೆ ಬಾಟಲ್ ಎಸೆದಿದ್ದಾರೆ ಬಾಟಲ್‌ನ ಒಂದು ಪುಡಿ ಪಕ್ಕದ ಟೇಬಲ್‌ನಲ್ಲಿ ಕುಳಿತಿರುವ ವ್ಯಕ್ತಿಗೆ ತಾಗಿದೆ. ಆಗ  ಆ ಟೇಬಲ್‌ನಲ್ಲಿದ್ದವರು ಕೂಡ ಪಾರ್ಟಿ ಮಾಡುತ್ತಿದ್ದ ಕಾರಣ ಎಣ್ಣೆ ಟೈಟ್‌ನಲ್ಲಿ ಕಿರಿಕ್ ಶುರುವಾಗಿತ್ತು. ಆನಂತರ ಪೊಲೀಸರು ಬಂದು ನಿಖಿಲ್‌ರನ್ನು ಹೊಯ್ಸಳದಲ್ಲಿ ಕರೆದುಕೊಂಡು ಹೋಗಿದ್ದಾರೆ. ಮತ್ತೊಂದು ತಂಡದಲ್ಲಿದ್ದ ಒಬ್ಬ ವ್ಯಕ್ತಿ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ ಅವರಿಗೆ ಪ್ರಚಾರ ಕೊಡುವ ವಿಡಿಯೋ ಮಾತ್ರ ಹಂಚಿಕೊಂಡಿದ್ದಾರೆ ಆದರೆ ಸತ್ಯ ತಿಳಿಸಿಲ್ಲ ಎಂದು ನಿಖಿಲ್ ಹೇಳಿದ್ದಾರೆ.

ನಿಖಿಲ್ ಸ್ಪಷ್ಟನೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಮತ್ತೊಂದು ಸಿಸಿಟಿವಿ ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲಿ ಹೋಟೆಲ್‌ ಸಿಬ್ಬಂದಿ ಕಸ ಗುಡಿಸುತ್ತಿದ್ದಾರೆ ಆಗ ನಿಖಿಲ್ ಎಣ್ಣೆ ಬಾಟಲ್ ಹಿಡಿದುಕೊಂಡು ಸಿಬ್ಬಂದಿ ಜೊತೆ ಮಾತನಾಡಿದ್ದಾರೆ. ಅಲ್ಲಿಗೆ ಮಾತಿನ ಚಕಾಮಕಿ ಹೆಚ್ಚಾಗಿದೆ ಮತ್ತೊಂದು ಬಾಟಲ್ ತೆಗೆದುಕೊಂಡು ಬಿಸಾಡುತ್ತಾರೆ. ಪುಡಿಯಾದ ಬಾಟಲ್ ಮೇಲೆ ಸಿಬ್ಬಂದಿ ಕಾಲಿಟ್ಟು ಪೆಟ್ಟು ಮಾಡಿಕೊಂಡಿದ್ದಾರೆ. 

Bebika Dhurve: ಇವಳಂತ ಟ್ಯಾಲೆಂಟು, ಬ್ರಿಲಿಯಂಟು & ಹಾಟು ಮತ್ಯಾರಿಲ್ಲ

'ಘಟನೆ ನಡೆದ ಜಾಗದಲ್ಲಿ ನಾವು ಇರಲಿಲ್ಲ. ನನ್ನ ಅಣ್ಣ ಎಂದೂ ಕಿರಿಕಿರಿ ಮಾಡಿಕೊಳ್ಳುವ ವ್ಯಕ್ತಿ ಅಲ್ಲ ಈಗ ಅವನು ಪೊಲೀಸ್ ಠಾಣೆಯಲ್ಲಿ ಇಲ್ಲ. ಮನೆಯಲ್ಲಿ ಇದ್ದಾನೆ. ಮೆಸೇಜ್ ಮಾಡಿ ವಿಚಾರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು' ಎಂದು ನಿಖಿಲ್ ಸಹೋದರಿ ನಿಶಾ ಮಾತನಾಡಿದ್ದಾರೆ. 

 

click me!