ಬ್ರಹ್ಮಗಂಟು ಸೀರಿಯಲ್ ದೀಪಾ ಮತ್ತು ಚಿರು ಸಂಭಾವನೆ ಬಗ್ಗೆ ಹೇಳಿದ್ದೇನು? ದೀಪಾಗೆ ಕೋಪ ಬರುವುದು ಯಾವಾಗ? ಅವರ ಬಾಯಲ್ಲೇ ಕೇಳಿ..
ಸೋಡಾಬುಡ್ಡಿ, ಕಪ್ಪು ವರ್ಣ, ಹಲ್ಲಿಗೆ ಕ್ಲಿಪ್, ಎಣ್ಣೆ ಬಳಿದ ಎರಡು ಜಡೆ, ಅದಕ್ಕೊಂದು ರಿಬ್ಬನ್.... ಹೌದು. ಇವಳೇ ಜೀ ಕನ್ನಡ ಬ್ರಹ್ಮಗಂಟು ಧಾರಾವಾಹಿಯ ನಾಯಕಿ ದೀಪಾ. ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ನಿಜ ಜೀವನದಲ್ಲಿ ಅದೆಷ್ಟೋ ಮಂದಿ ಮದುವೆಯಾಗಿ ಮೋಸ ಹೋದವರಿದ್ದಾರೆ. ಹುಡುಗ ಮತ್ತು ಹುಡುಗಿ ಇಬ್ಬರದ್ದೂ ಇದೇ ಕಥೆ. ಯುವತಿಯ ಬಾಹ್ಯ ಸೌಂದರ್ಯಕ್ಕೆ ಮನಸೋತು ಹುಡುಗರು ಅವರ ಹಿಂದೆ ಬಿದ್ದರೆ, ಹುಡುಗ ಸೌಂದರ್ಯದ ಜೊತೆಗೆ ಅವರಲ್ಲಿರುವ ಐಷಾರಾಮಿ ಸೌಲಭ್ಯ ನೋಡಿ ಹುಡುಗಿಯರೇ ಹುಡುಗರ ಹಿಂದೆ ಬಿದ್ದು ನರಕವನ್ನು ನೋಡುತ್ತಿರುವ ಹಲವಾರು ಉದಾಹರಣೆಗಳು ನಮ್ಮ ಕಣ್ಣೆದುರೇ ಇವೆ. ಒಂದಿಷ್ಟು ವರ್ಷಗಳಲ್ಲಿ ಕೊನೆಯಾಗುವ ಬಾಹ್ಯ ಸೌಂದರ್ಯವೇ ಸರ್ವಸ್ವ ಎಂದುಕೊಂಡು ಬದುಕುವ ಮನಸ್ಥಿತಿಯವರೇ ಬಹಳಷ್ಟು ಮಂದಿ ಇದ್ದಾರೆ. ಅದಕ್ಕಾಗಿಯೇ ಆಂತರಿಕ ಸೌಂದರ್ಯ ಗೌಣವಾಗಿಬಿಡುತ್ತದೆ. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಈ ಬ್ರಹ್ಮಗಂಟು ಸೀರಿಯಲ್. ಆರಂಭದಲ್ಲಿ ದೀಪಾಳನ್ನು ದ್ವೇಷಿಸುತ್ತಿದ್ದ ಚಿರು ಈಗ ಪ್ರೀತಿಸಲು ಶುರು ಮಾಡಿದ್ದಾನೆ.ಮುಂದೇನು ಎನ್ನುವುದು ನೋಡಬೇಕು.
ಇದೀಗ ಇವರಿಬ್ಬರೂ ಅಂದರೆ, ದೀಪಾ ಪಾತ್ರಧಾರಿ ದಿಯಾ ಪಾಲಕ್ಕಲ್ ಹಾಗೂ ಚಿರು ಪಾತ್ರಧಾರಿ ಭುವನ್ ಸತ್ಯ ಅವರು ಯೂಟ್ಯೂಬ್ ಚಾನೆಲ್ ಒಂದರಲ್ಲಿ ಕೆಲವೊಂದು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇಬ್ಬರ ಫಸ್ಟ್ ಸೀನ್ ಏನು ಎಂದು ಪ್ರಶ್ನಿಸಿದಾಗ ಕಾಫಿ ತಂದುಕೊಡುವ ದೃಶ್ಯ ಇತ್ತು. ಅದಿನ್ನೂ ತೆರೆಮೇಲೆ ಬರಲಿಲ್ಲ. ಬರುತ್ತೋ ಇಲ್ವೋ ಗೊತ್ತಿಲ್ಲ ಎಂದಿದ್ದಾರೆ. ಇಬ್ಬರಲ್ಲಿ ಗಲಾಟೆ ಯಾರು ಹೆಚ್ಚು ಮಾಡುವುದು ಎಂದು ಪ್ರಶ್ನಿಸಿದಾಗ ದಿಯಾ, ನಾನೇ ಮಾಡೋದು, ಇವರು ಇರಿಟೇಟ್ ಮಾಡ್ತಾರೆ ಎಂದು ಭುವನ್ ಕಡೆ ತೋರಿಸಿದ್ದಾರೆ. ಇಬ್ಬರೂ ಶೂಟಿಂಗ್ನಲ್ಲಿ ಜಗಳ ಮಾಡ್ತಾನೇ ಇರ್ತೇವೆ ಎಂದಿದ್ದಾರೆ. ಶೂಟಿಂಗ್ಗೆ ಲೇಟಾಗಿ ಬರೋರು ಯಾರು ಎಂದಾಗ ದಿಯಾ, ಭುವನ್ ಕಡೆ ತೋರಿಸಿದ್ದಾರೆ. ಅದಕ್ಕೆ ಭುವನ್, ನಾನು ಟೈಮ್ಗೆ ಸರಿಯಾಗಿ ಬರ್ತೇನೆ. ಇವರಿಗೆ ಮೇಕಪ್ ಇರೋದ್ರಿಂದ ಬೇಗ ಬರ್ತಾರೆ ಎಂದಿದ್ದಾರೆ. ನಂತರ ಪ್ಯಾಕಪ್ ಯಾರಿಗೆ ಇಷ್ಟ ಎಂದಾಗ, ಭುವನ್ ಅವರು ದಿಯಾ ಕಡೆಗೆ ತೋರಿಸಿದ್ದಾರೆ. ಪ್ಯಾಕಪ್ ಆದ್ಮೇಲೆ ಜಾಗದಲ್ಲಿ ಒಂದು ಕ್ಷಣ ಇರಲ್ಲ ಎಂದಿದ್ದಾರೆ.
ಬ್ರಹ್ಮಗಂಟು ಚಿರು-ದೀಪಾ ರೊಮಾಂಟಿಕ್ ಡಾನ್ಸ್ : ಇಲ್ಲಾದ್ರೂ ಸೋಡಾ ಗ್ಲಾಸ್ ತೆಗೀಬಾರ್ದಾ ಕೇಳ್ತಿರೋ ಫ್ಯಾನ್ಸ್
ಇದೇ ವೇಳೆ ಸಂಭಾವನೆ ಬಗ್ಗೆ ಕೇಳಿದ ಪ್ರಶ್ನೆಗೆ ಭುವನ್ ಅವರು ಹಾಗೆಂದ್ರೆ ಏನು? ಕನ್ನಡದಲ್ಲಿ ಹೇಳಿ ಎನ್ನುವ ಮೂಲಕ ಜಾರಿಕೊಂಡಿದ್ದಾರೆ, ದಿಯಾ ಕೂಡ ನಕ್ಕಿದ್ದಾರೆ. ಕೊನೆಗೆ ಕೋಪ ಬರೋದು ಯಾವಾಗ ಎಂದಾಗ, ದಿಯಾ ಅವರು, ನನಗೆ ರೆಡಿಯಾಗಲು ಕೊಡಲ್ಲ. ಸೀರೆಯೆಲ್ಲಾ ಉಟ್ಕೊಬೇಕು. ಬೇಗ ಬನ್ನಿ, ಬೇಗ ಬನ್ನಿ ಅಂತಾರೆ, ಆಗ ಸ್ವಲ್ಪ ಕೋಪ ಬರುತ್ತೆ ಎಂದಿದ್ದಾರೆ. ಆಗ ಭುವನ್ ಅವರು, ಇವರಿಗೆ ಇನ್ನೊಂದು ಸಲ ಕೋಪ ಬರುತ್ತೆ ಅದು ಎಲ್ಲಾ ಕಡೆ ಇದೇ ಗೆಟಪ್ನಲ್ಲಿ ಬರಬೇಕಲ್ಲ ಅದಕ್ಕೇ ಎಂದಾಗ, ದಿಯಾ, ಹೌದೌದು ನಮ್ಮ ನಿರ್ಮಾಪಕರು ಎಲ್ಲಾ ಕಡೆ ಹೀಗೆ ಬನ್ನಿ ಅಂತಾರೆ. ಅವಾರ್ಡ್ ಫಂಕ್ಷನ್, ಇಂಟರ್ವ್ಯೂ ಎಲ್ಲಾ ಕಡೆ ಇದೇ ಗೆಟಪ್ನಲ್ಲಿ ಬರ್ಬೇಕು. ಅದಕ್ಕೆ ಸ್ವಲ್ಪ ಕೋಪ ಬರುತ್ತೆ ಎಂದಿದ್ದಾರೆ.
ಕೊನೆಗೆ ಮೊಬೈಲ್ ನಂಬರ್ ಹೇಳಿ ಎಂದಾಗ ಭುವನ್ 100 ಎಂದಿದ್ದರೆ, ದಿಯಾ 108 ಎಂದಿದ್ದಾರೆ! ಕಂಟಿನ್ಯೂ ಶೂಟಿಂಗ್ ಮಾಡಿರುವ ಬಗ್ಗೆಯೂ ಮಾತನಾಡಿರುವ ಇವರು 2-3 ಸಲ 24 ಗಂಟೆನೂ ಶೂಟಿಂಗ್ ಮಾಡಿದ್ದಿದೆ. ಆದರೆ ಯಾವತ್ತೂ ಕಷ್ಟ, ಬೇಸರ ಆಗಿಲ್ಲ ಎಂದಿದ್ದಾರೆ. ವೆಜ್ ನಾನ್ವೆಜ್ ಬಗ್ಗೆ ಕೇಳಿದಾದ, ದಿಯಾ ನಾನು ಪ್ಯೂರ್ ನಾನ್ವೆಜ್ಜು, ಇವರು ಪ್ಯೂರ್ ವೆಜ್ಜು ಎಂದಿದ್ದಾರೆ. ದಿಯಾ ಪಾಲಕ್ಕರ್ ಅವರು ತಮಿಳು ಸೀರಿಯಲ್ನಲ್ಲಿಯೂ ಗುರುತಿಸಿಕೊಂಡಿದ್ದಾರೆ. ಮೊದಲಿಗೆ ಬಾಲನಟಿಯಾಗಿ ಕನ್ನಡದಲ್ಲಿ ಗುರುತಿಸಿಕೊಂಡವರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ (Kinnari) ಸೀರಿಯಲ್ನಲ್ಲಿ ಪುಟಾಣಿ ಐಶ್ವರ್ಯಾ ಪಾತ್ರದಲ್ಲಿ ಈಕೆ ನಟಿಸಿದ್ದರು. ಬಳಿಕ ಲಕ್ಷ್ಮೀ ಸ್ಟೋರ್ಸ್ ಎನ್ನುವ ಜನಪ್ರಿಯ ತಮಿಳು ಧಾರಾವಾಹಿಯಲ್ಲಿ ನಟಿ ಖುಷ್ಬು ಜೊತೆಗೂ ನಟಿಸಿದ್ದರು ಇವರು. 2018ರಲ್ಲಿ ಬಿಡುಗಡೆಯಾದ ಅಮ್ಮಚ್ಚಿಯೆಂಬ ನೆನಪು (Ammacchi emba nenapu) ಸಿನಿಮಾದಲ್ಲಿ ದಿಯಾ ಎನ್ನುವ ಪುಟ್ಟ ಹುಡುಗಿಯ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ರಾಜ್ ಬಿಶೆಟ್ಟಿ, ವೈಜಯಂತಿ ಅಡಿಗ ನಟಿಸಿದ್ದರು. ಇನ್ನು ಚಿರು ಪಾತ್ರಧಾರಿ ಭುವನ್ ಸತ್ಯ ಅವರು, ಈ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಣ್ಯವತಿ' ಧಾರಾವಾಹಿಯಲ್ಲಿಯೂ ನಾಯಕನಾಗಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು.
ಹೆಜ್ಜೆಹೆಜ್ಜೆಗೂ ಬಾಡಿಶೇಮಿಂಗ್ ಅನುಭವಿಸ್ತಿರೋ ಬ್ರಹ್ಮಗಂಟು ನಾಯಕಿ ದೀಪಾ ನಿಜಜೀವನ ಗೊತ್ತಾ?