ಎಲ್ಲದಕ್ಕೂ ಮಕ್ಕಳೇ ಕಾರಣ ಅಲ್ಲ, ವೃದ್ಧ ಪಾಲಕರಿಗೆ ನಿರಂಜನ್ ದೇಶಪಾಂಡೆ ಸಲಹೆ

ನಿರೂಪಕ ನಿರಂಜನ್ ದೇಶಪಾಂಡೆ, ಪೇರೆಂಟಿಂಗ್ ಟಿಪ್ಸ್ ನೀಡಿದ್ದಾರೆ. ಪಾಲಕರು ಹೇಗೆ ನಡೆದುಕೊಳ್ಳಬೇಕು, ಒತ್ತಡ ನಿವಾರಣೆಗೆ ಏನು ಮಾಡ್ಬೇಕು ಎಂಬುದನ್ನು ತಿಳಿಸಿದ್ದಾರೆ. 
 

Anchor Niranjan Deshpande gives Effective Parenting Tips

ನಿರೂಪಕ ನಿರಂಜನ್ ದೇಶಪಾಂಡೆ (Anchor Niranjan Deshpande) ಈ ಬಾರಿ ರ್ಯಾಪಿಡ್ ರಶ್ಮಿ (Rapid Rashmi) ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವಲ್ಪ ಜಾಲಿಯಾಗಿ ಮಾತನಾಡುವ ನಿರಂಜನ್ ದೇಶಪಾಂಡೆ, ಜೀವನಕ್ಕೆ ಅಗತ್ಯವಿರುವ ಅನೇಕ ವಿಷ್ಯಗಳನ್ನು ರಶ್ಮಿ ಮುಂದೆ ಹೇಳಿದ್ದಾರೆ. ನಿಮ್ಮ ಚಾನೆಲ್ ಮೂಲಕ ನಾನು ಪಾಲಕರಿಗೆ ಒಂದು ರಿಕ್ವೆಸ್ಟ್ ಮಾಡುತ್ತೇನೆ ಎಂದ ನಿರಂಜನ್,  ಸದ್ಯ ಎಲ್ಲರ ಮನೆಯಲ್ಲಿ ಪಾಲಕರು ಮತ್ತು ಮಕ್ಕಳು ಎದುರಿಸುತ್ತಿರುವ ಸಮಸ್ಯೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ವೃದ್ಧ ಪಾಲಕರಿಗೆ ನಿರಂಜನ್ ಸಲಹೆ :  ಈಗಿನ ದಿನಗಳಲ್ಲಿ ಅನೇಕ ವೃದ್ಧರು, ವೃದ್ಧಾಶ್ರಮ ಸೇರುತ್ತಿದ್ದಾರೆ. ಮಕ್ಕಳು ಪಾಲಕರನ್ನು ಸರಿಯಾಗಿ ನೋಡಿಕೊಳ್ತಿಲ್ಲ ಎನ್ನುವ ಆರೋಪ ಮಕ್ಕಳ ಮೇಲೆ ಬರೋದು ಸಾಮಾನ್ಯವಾಗಿದೆ. ಪಾಲಕರು ಇರುವಾಗ್ಲೇ ನೋಡಿಕೊಳ್ಳಬೇಕು, ನಾಳೆ ಅವರಿಲ್ಲ ಅಂದ್ರೆ ಏನು ಕಥೆ ಅಂತ ಅನೇಕರು ಸಲಹೆ ನೀಡ್ತಾರೆ. ಆದ್ರೆ ಇದ್ರಲ್ಲಿ ಮಕ್ಕಳ ಪಾತ್ರ ಮಾತ್ರ ಮುಖ್ಯವಲ್ಲ ಅನ್ನೋದು ನಿರಂಜನ್ ವಾದ. ಪಾಲಕರು ಕೂಡ ಇದಕ್ಕೆ ಜವಾಬ್ದಾರರು. ಎರಡು ಕೈ ತಟ್ಟಿದಾಗ ಚಪ್ಪಾಳೆ ಕೇಳಿಸೋದು. ಪಾಲಕರಿಗಿಂತ ಮೊದಲೇ ಮಕ್ಕಳು ಈ ಭೂಮಿ ಬಿಡಬಹುದು. ಅದನ್ನು ಪಾಲಕರು ತಿಳಿಯಬೇಕು ಎನ್ನುತ್ತಾರೆ ನಿರಂಜನ್. ಪಾಲಕರು ಮನಸ್ಸು ಬಿಚ್ಚಿ ಮಾತನಾಡಿದಾಗ ಮಾತ್ರ ಎಲ್ಲ ಸಮಸ್ಯೆಗೆ ಪರಿಹಾರ ಎಂದಿದ್ದಾರೆ. ಮಕ್ಕಳ ಕೆಲಸವನ್ನು ಕೆಲ ಪಾಲಕರು ಶ್ಲಾಘಿಸಿದ್ರೆ ಮತ್ತೆ ಕೆಲ ಪಾಲಕರು ಸದಾ ಮಕ್ಕಳನ್ನು ತೆಗೆಳ್ತಾರೆ. ಇದು ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತೆ. ಯಾವುದೂ ಅತಿಯಾಗ್ಬಾರದು, ಆದ್ರೆ ಪಾಲಕರು ಮಕ್ಕಳ ಕೆಲಸ ಮೆಚ್ಚಿದ್ರೆ ಅದ್ರಿಂದ ಮಕ್ಕಳಿಗೆ ಆಗುವ ಖುಷಿ ಅಷ್ಟಿಷ್ಟಲ್ಲ. ಎಲ್ಲ ಪಾಲಕರು, ತಮ್ಮ ಮಕ್ಕಳ ಮುಂದೆ ಮಾತನಾಡಿ, ಸಮಸ್ಯೆ ಹಂಚಿಕೊಳ್ಳಿ, ಮಕ್ಕಳ ಕೆಲಸ ಇಷ್ಟವಾದಾಗ ಅದನ್ನು ಶ್ಲಾಘಿಸಿ ಎಂದು ನಿರಂಜನ್ ಮನವಿ ಮಾಡಿದ್ದಾರೆ. ಇದೇ ವೇಳೆ ತಮ್ಮ ಅಮ್ಮ ಹಾಗೂ ಅಪ್ಪನ ಉದಾಹರಣೆಯನ್ನು ಅವರು ವೀಕ್ಷಕರಿಗೆ ನೀಡಿದ್ದಾರೆ. 

Latest Videos

'ಕರಿಮಣಿ' ಸೀರಿಯಲ್​ ಜೋಡಿ ರಿಯಲ್​ ಲೈಫ್​ನಲ್ಲೂ ಮದ್ವೆಯಾಗ್ತಿದ್ದಾರಾ? ಗುಟ್ಟು ರಿವೀಲ್​ ಮಾಡಿದ ತಾರೆಯರು

ಒಳ್ಳೆ ಸ್ನೇಹಿತ ಬೇಕು : ಈಗಿನ ಮಕ್ಕಳ ಸ್ವಭಾವದ ಬಗ್ಗೆಯೂ ರ್ಯಾಪಿಡ್ ರಶ್ಮಿ ಜೊತೆ ನಿರಂಜನ್ ಚರ್ಚೆ ನಡೆಸಿದ್ದಾರೆ. ಚಿಕ್ಕ ಮಕ್ಕಳಿಗೆ ಬೈದು ಬುದ್ದಿ ಹೇಳುವ ಕಾಲ ಈಗಿಲ್ಲ. ಹಾಗಾಗಿಯೇ ಮಕ್ಕಳು ಡಿಪ್ರೆಷನ್ ಗೆ ಒಳಗಾಗ್ತಿದ್ದಾರೆ. ಮಕ್ಕಳಿಗೆ ಜೀವನ ಹೇಗೆ ಮಾಡ್ಬೇಕು ಎಂಬ ಮೂಲ ಮಂತ್ರ ತಿಳಿದಿಲ್ಲ, ಇದು ಅವರನ್ನು ನಿಧಾನಕ್ಕೆ ಒತ್ತಡಕ್ಕೆ ನೂಕುತ್ತಿದೆ ಎಂದ ನಿರಂಜನ್, ಜನರಿಗೆ ಸಂತೋಷ ಎನ್ನುವುದು ಮರೀಚಿಕೆಯಾಗಿದೆ ಎಂದಿದ್ದಾರೆ. 

ಸಾಮಾನ್ಯ ವ್ಯಕ್ತಿ, ದುಃಖದಿಂದ ಹೊರಬರಲು ಒಳ್ಳೆ ಸ್ನೇಹಿತನನ್ನು ಹೊಂದಿರಬೇಕು. ದುಃಖ, ಖಿನ್ನತೆಯಿಂದ ಹೊರಗೆ ಬರಬೇಕು ಅಂದ್ರೆ ಒಳ್ಳೆ ಸ್ನೇಹಿತರ ಜೊತೆ ಮಾತನಾಡಿ. ನಮ್ಮ ದುಃಖ ದೂರ ಮಾಡುವವನು ಒಳ್ಳೆ ಸ್ನೇಹಿತ ಅಲ್ಲ, ನಮ್ಮ ನೋವಿನ ಸಮಯದಲ್ಲಿ ನಮ್ಮ ಜೊತೆಗಿರುವವನು ಸ್ನೇಹಿತ. ನೂರು, ಇನ್ನೂರು ಸ್ನೇಹಿತರಿಗಿಂತ ನಮ್ಮ ಕನಸಿನ ಜೊತೆ, ದುಃಖದಲ್ಲಿ ಜೊತೆಗಿರುವ ಒಬ್ಬ ಸ್ನೇಹಿತ ಇದ್ದರೆ ಸಾಕು. ಇದಕ್ಕೆ ಲಿಂಗ ಮುಖ್ಯವಲ್ಲ ಎಂದ ನಿರಂಜನ್, ತಮ್ಮ ಸ್ನೇಹಿತರ ಬಗ್ಗೆ ಹೇಳಿಕೊಂಡಿದ್ದಾರೆ.  

ಜಯಾ ಜೊತೆ ಮದುವೆಗೆ ಅಮಿತಾಭ್ ಬಚ್ಚನ್ ಇಟ್ಟಿದ್ದ ಷರತ್ತುಗಳೇನು?.. ಗತಿ ಏನಾಯ್ತು?

ಈಗಿನ ದಿನಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೃದಯಾಘಾತಕ್ಕೆ ಒಳಗಾಗ್ತಿರಲು ಇದೇ ಕಾರಣ. ಮನುಷ್ಯನಿಗೆ ಒತ್ತಡ ಹೆಚ್ಚಾಗ್ತಿದೆ. ಅದನ್ನು ಆತ ಯಾರ ಬಳಿಯೂ ಹೇಳಿಕೊಳ್ತಿಲ್ಲ. ಮನಸ್ಸಿನಲ್ಲಿಯೇ ಅದು ಉಳಿದು, ಭಾರವಾಗಿ ಅಪಾಯಕ್ಕೆ ಕಾರಣವಾಗ್ತಿದೆ ಎಂದಿರುವ ನಿರಂಜನ್, ಸ್ನೇಹಿತರ ಜೊತೆ ನೋವು ಹೇಳಿಕೊಂಡು, ಒಂದಿಷ್ಟು ಅಮೂಲ್ಯ ಸಮಯವನ್ನು ಅವರಿಗೆ ಮೀಸಲಿಟ್ಟರೆ ಎಲ್ಲ ಸಮಸ್ಯೆಗೆ ಪರಿಹಾರ ಸಿಗುತ್ತೆ ಎಂದಿದ್ದಾರೆ. 

vuukle one pixel image
click me!