Big Twist in Malli Role: ಅಮೃತಧಾರೆಯಲ್ಲಿ ಮಲ್ಲಿ ಪಾತ್ರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಲ್ಲಿ ಸಾಮಾನ್ಯ ಕುಟುಂಬದವಳಲ್ಲ, ರಾಜೇಂದ್ರ ಭೂಪತಿಯ ಮಗಳು ಎಂಬ ಸತ್ಯ ಗೌತಮ್ ದಿವಾನ್‌ಗೆ ತಿಳಿದಿದೆ.
Amruthadhaare Serial:ಅಮೃತಧಾರೆಯ ಮಲ್ಲಿ ಪಾತ್ರ ಬದಲಾಗಿದ್ದು, ಇದರ ಜೊತೆಯಲ್ಲಿಯೇ ಕಥೆಯಲ್ಲಿ ಬಿಗ್ ಟ್ವಿಸ್ಟ್ ನೀಡಲಾಗಿದೆ. ಇಷ್ಟು ದಿನ ಸಾಮಾನ್ಯ ಕೆಲಸಗಾರ ಮಾತು ಬಾರದ ಅಜ್ಜಯ್ಯನ ಮೊಮ್ಮಗಳಾಗಿದ್ದ ಮಲ್ಲಿಯ ಜನ್ಮರಹಸ್ಯ ಬಯಲಾಗಿದೆ. ಮಲ್ಲಿ ಪಾತ್ರದ ಕಲಾವಿದೆ ಧಾರಾವಾಹಿ ತೊರೆದಿದ್ದರಿಂದ, ಇಷ್ಟು ದಿನ ಈ ರೋಲ್ ತೋರಿಸಿರಲಿಲ್ಲ. ಇದೀಗ ಮಲ್ಲಿ ಪಾತ್ರಕ್ಕೆ ನಟಿ ಅನ್ವಿತಾ ಸಾಗರ್ ಆಗಮಿಸಿದ್ದಾರೆ. ಈ ಹಿಂದೆ ಇದ್ದ ಕಲಾವಿದೆ ರಾಧಾ ಭಗವತಿ, ಕಲರ್ಸ್ ಕನ್ನಡ ವಾಹಿನಿಯ ಭಾರ್ಗವಿ ಎಲ್‌ಎಲ್‌ಬಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮೃತಧಾರೆ ಕಥೆ ನೀರಸವಾಗ್ತಿದೆ ಅಂದುಕೊಳ್ಳುವಷ್ಟರಲ್ಲಿ ಮಲ್ಲಿಯ ಪಾತ್ರದಲ್ಲಿ ಟ್ವಿಸ್ಟ್ ನೀಡಲಾಗಿದೆ. ತನ್ನ ಸೋದರ ಜೈದೇವ್‌ನ ಹೆಂಡ್ತಿ ಮಲ್ಲಿ ಸಾಮಾನ್ಯ ಕುಟುಂಬದವಳಲ್ಲ. ಆಕೆ ರಾಜೇಂದ್ರ ಭೂಪತಿಯ ಮಗಳು ಎಂಬ ವಿಷಯ ಗೌತಮ್ ದಿವಾನ್‌ಗೆ ಗೊತ್ತಾಗಿದೆ.
ದಿವಾನ್ ಕುಟುಂಬವನ್ನು ಸರ್ವನಾಶ ಮಾಡಬೇಕೆಂದು ರಾಜೇಂದ್ರ ಭೂಪತಿ ಶಪಥ ಮಾಡಿದ್ದಾನೆ. ತನ್ನ ಪತ್ನಿ ಮತ್ತು ಮಗಳ ಸಾವಿಗೆ ದಿವಾನ್ ಕುಟುಂಬವೇ ಕಾರಣ ಎಂದು ರಾಜೇಂದ್ರ ಭೂಪತಿ ದ್ವೇಷ ಸಾಧಿಸುತ್ತಿದ್ದಾನೆ. ಗೌತಮ್ ದಿವಾನ್ ವಿರುದ್ಧ ದ್ವೇಷ ಸಾಧಿಸುತ್ತಿರುವ ರಾಜೇಂದ್ರ ಭೂಪತಿಗೆ ಜೈದೇವ್ ಸಾಥ್ ನೀಡಿದ್ದಾನೆ. ಆದ್ರೆ ಈ ಜೈದೇವ್‌ನ ಹೆಂಡತಿ ಮಲ್ಲಿಯೇ ತನ್ನ ಮಗಳು ಎಂಬ ವಿಷಯ ರಾಜೇಂದ್ರ ಭೂಪತಿಗೆ ಗೊತ್ತಿಲ್ಲ.
ಅಜ್ಜಯ್ಯನ ಮನೆ ಸೇರಿದ್ದು ಹೇಗೆ?
ಗೌತಮ್ ದಿವಾನ್ ಅಜ್ಜಯ್ಯನ ಮನೆಗೆ ಆಗಮಿಸಿರುತ್ತಾನೆ. ಆದ್ರೆ ಮಲ್ಲಿ ಮನೆಯಲ್ಲಿ ಇರಲ್ಲ. ಮಲ್ಲಿ ಇಲ್ಲೇ ಪಕ್ಕದ್ಮನೆಗೆ ಹೋಗಿದ್ದಾಳೆ. ಆಕೆಯನ್ನು ಕರೆದುಕೊಂಡು ಬರೋದಾಗಿ ಹೇಳಿ ಅಜ್ಜಯ್ಯ, ಹೊರಗೆ ಹೋಗುತ್ತಾನೆ. ಆಗ ದಿಂಬಿನ ಕೆಳಗಿರುವ ಪುಟ್ಟ ಬಾಲಕಿಯ ಫೋಟೋ ಗೌತಮ್ ನೋಡುತ್ತಾನೆ. ಈ ಹುಡುಗಿಯನ್ನು ಎಲ್ಲೇ ನೋಡಿದ ನೆನಪು ಆಗುತ್ತದೆ. ಅಷ್ಟರಲ್ಲಿಯೇ ರಾಜೇಂದ್ರ ಭೂಪತಿ ಮತ್ತು ಪತ್ನಿಯ ಫೋಟೋ ನೋಡುತ್ತಾನೆ. ಆಗ ಫೋಟೋದಲ್ಲಿರೋದು ರಾಜೇಂದ್ರ ಭೂಪತಿಯ ಮಗಳು ಅನ್ನೋದು ಗೌತಮ್ ದಿವಾನ್‌ಗೆ ನೆನಪು ಬರುತ್ತದೆ.
ಇದನ್ನೂ ಓದಿ: Amruthadhaare Serial: ಪಾತ್ರ ಮುಗಿಯುತ್ತಿದ್ದಂತೆ ಧಾರಾವಾಹಿಯಿಂದ ಹೊರಬಿದ್ದ ನಟಿ! ಯಾರದು?
ಕೂಡಲೇ ಅಜ್ಜಯ್ಯನನ್ನು ಹೊರಗೆ ಕರೆದು, ಈ ಫೋಟೋಗಳು ನಿಮ್ಮ ಬಳಿ ಹೇಗೆ ಬಂದವು ಎಂದು ಗೌತಮ್ ದಿವಾನ್ ಪ್ರಶ್ನೆ ಮಾಡುತ್ತಾನೆ. ಇದಕ್ಕೆಈ ಮೊದಲ ತಾನು, ರಾಜೇಂದ್ರ ಭೂಪತಿ ಮನೆಯಲ್ಲಿ ಕೆಲಸ ಮಾಡ್ತಿದ್ದೆ. ಅವರ ಮನೆಗೆ ಬೆಂಕಿ ಬಿದ್ದಾಗ ಆ ಮಗುವನ್ನು ಕರೆದುಕೊಂಡು ಬಂದೆ. ರಾಜೇಂದ್ರ ಭೂಪತಿ ಮಗಳೇ ಈ ಮಲ್ಲಿ ಎಂಬ ವಿಷಯವನ್ನು ಅಜ್ಜಯ್ಯ ಹೇಳಿದ್ದಾನೆ.
ಮತ್ತೊಂದೆಡೆ ಭೂಮಿಕಾ ಮಡಿಲು ತುಂಬಿದ್ದು, ದಿವಾನ್ ಮತ್ತು ಸದಾಶಿವ್ ಕುಟುಂಬದಲ್ಲಿ ಸಂತೋಷ ಮನೆ ಮಾಡಿದೆ. ಭೂಮಿಕಾಗೆ ಮಗು ಆದ್ರೆ ಆಸ್ತಿಯಲ್ಲಿ ಅವರಿಗೆ ಹೋಗುತ್ತೆ ಅನ್ನೋ ಆತಂಕದಲ್ಲಿ ಶಕುಂತಲಾ ಇದ್ದಾಳೆ. ಇತ್ತ ಪತ್ನಿ ಭೂಮಿಕಾಳನ್ನು ಮಗುವಿನಂತೆ ಗೌತಮ್ ನೋಡಿಕೊಳ್ಳುತ್ತಿದ್ದಾನೆ. ಪತ್ನಿಗೆ ಮುದ್ದಾದ ಮಗುವಿನ ಫೋಟೋ ಮತ್ತು ಚಿನ್ನದ ನೆಕ್ಲೇಸ್ ತಂದಿಕೊಟ್ಟಿದ್ದಾನೆ.
ಪಾತ್ರಧಾರಿಗಳು
ಗೌತಮ್ ಪಾತ್ರದಲ್ಲಿ ರಾಜೇಶ್ ನಟರಂಗ, ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್, ಶಕುಂತಲಾ ಪಾತ್ರದಲ್ಲಿ ವನಿತಾ ವಾಸು ಅವರು ನಟಿಸುತ್ತಿದ್ದಾರೆ.
ಇದನ್ನೂ ಓದಿ: Amruthadhaare Serial: ಮಹಾಸತ್ಯ ತಿಳಿದು ಗೌತಮ್‌ಗೆ ಶಾಕ್; ಅಬ್ಬಬ್ಬಾ.. ಜಾಕ್‌ಫಾಟ್ ಹೊಡೆದ ಜಯದೇವ್!