ಧಾರಾವಾಹಿ ನಟಿ ಅನುಕುಟ್ಟಿ ಗಂಡನಾಗಲು ಸಿಂಪಲ್ ಅರ್ಹತೆಗಳು ಸಾಕು; ದಪ್ಪಗಿದ್ರೂ, ಎಣ್ಣೆ ಹಾಕಿದ್ರೂ ಓಕೆ!

ಕಿರುತೆರೆ ನಟಿ ಅನುಮೋಳ್, ತಾನು ಮದುವೆಯಾಗುವ ಹುಡುಗನ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸೌಂದರ್ಯ ಮುಖ್ಯವಲ್ಲ, ಗುಣ ಮುಖ್ಯವೆಂದು ಹೇಳಿದ್ದಾರೆ. ಮದುವೆಯಾದ ನಂತರ ಡಿವೋರ್ಸ್‌ಗೆ ಅವಕಾಶವೇ ಇರಬಾರದು ಎಂದು ಹೇಳಿದ್ದಾರೆ.

Serial actress Anumol marriage Beauty is not important for boy and Divorce not allowed sat

ಕನ್ನಡ ಕಿರುತೆರೆಯ ನಿರೂಪಕಿ ಅನುಶ್ರೀ, ಅನುಪಮಾ ಗೌಡ, ನಟಿಯರಾದ ಭವ್ಯಾ ಗೌಡ, ವೈಷ್ಣವಿ ಗೌಡ, ರಂಜನಿ ರಾಘವನ್ ಸೇರಿ ಅನೇಕ ನಟಿಯರ ಮಾದರಿಯಲ್ಲಿಯೇ ಮಲೆಯಾಳಂ ಕಿರುತೆರೆಯಲ್ಲಿ ಅನುಮೋಳ್ ಕೂಡ ಭಾರೀ ಪ್ರಸಿದ್ಧಿ. ಆದರೆ, ಈ ಸುಂದರ ನಟಿ ತಾನು ಮದುವೆಯಾಗುವ ಹುಡಗನ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ಹುಡುಗನ ಸೌಂದರ್ಯ ಮುಖ್ಯವಲ್ಲ, ಗುಣ ಚೆನ್ನಾಗಿರಬೇಕು. ಮದುವೆಯಾದ ನಂತರ ಡಿವೋರ್ಸ್‌ಗೆ ಅವಕಾಶವೇ ಇರಬಾರದು. ದಪ್ಪಗಿದ್ದರೂ, ಅಪರೂಪಕ್ಕೊಮ್ಮೆ ಮದ್ಯಪಾನಕ್ಕೂ ಓಕೆ ಎಂದು ಅನುಮೋಳ್ ಹೇಳಿದ್ದಾರೆ. ಇದೀಗ ನಟಿಯ ಸಿಂಪಲ್ ಬೇಡಿಕೆಗೆ ಅಭಿಪಾನಿಗಳು ಫಿದಾ ಆಗಿದ್ದಾರೆ. ಈ ಸುಂದರಿಯನ್ನು ಮದುವೆ ಮಾಡಿಕೊಳ್ಳಲು ಯುವಕರು ಭಾರೀ ಪ್ರಪೋಸಲ್‌ಗಳನ್ನು ಕಳುಹಿಸುತ್ತಿದ್ದಾರೆ.

ಅನುಮೋಳ್ ಮಲೆಯಾಳಂ ಕಿರುತೆರೆ ಪ್ರೇಕ್ಷಕರ ನೆಚ್ಚಿನ ನಟಿಯರಲ್ಲಿ ಒಬ್ಬರು. ಟೆಲಿವಿಷನ್ ಧಾರಾವಾಹಿಗಳ ಮೂಲಕ ಅನುಮೋಳ್ ಗುರುತಿಸಿಕೊಂಡಿದ್ದಾರೆ. ಧಾರಾವಾಹಿಯ ನಂತರ ಸ್ಟಾರ್ ಮ್ಯಾಜಿಕ್ ಎಂಬ ಟೆಲಿವಿಷನ್ ಶೋ ಮೂಲಕವೂ ಪ್ರಸಿದ್ಧರಾದರು. ಅಭಿಮಾನಿಗಳು ಅನುಮೋಳನ್ನು ಪ್ರೀತಿಯಿಂದ 'ಅನುಕುಟ್ಟಿ' ಎಂದು ಕರೆಯುತ್ತಾರೆ. ಅನು ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳ ಗುಂಪುಗಳು ಕೂಡ ಇವೆ. ಇತ್ತೀಚಿನ ಸಂದರ್ಶನದಲ್ಲಿ ಅವರು ತಮ್ಮ ಮದುವೆಯ ಕಲ್ಪನೆಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಮೂವಿ ವರ್ಲ್ಡ್ ಮೀಡಿಯಾಕ್ಕೆ ನೀಡಿದ ಸಂದರ್ಶನದಲ್ಲಿ ಅನುಮೋಳ್ ಈ ರೀತಿ ಹೇಳಿದ್ದಾರೆ.

Latest Videos

ಇದನ್ನೂ ಓದಿ: ರಸ-ವಿರಸ ಎರಡೂ ಇಲ್ಲದ ಬಾಳು ನೀರಸ ಅನ್ನಿಸ್ತಾ? ಮಗು ಮಾಡಿಕೊಳ್ಳುವ ಬಗ್ಗೆ ಕಿತ್ತಾಟ ಆಯ್ತಾ?

'ನನ್ನ ತಂದೆ ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಹಾಗೆಯೇ ನನ್ನನ್ನು ಮದುವೆಯಾಗುವ ಗಂಡನೂ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವ ವ್ಯಕ್ತಿ ಆಗಿರಬೇಕು. ನನ್ನನ್ನು ಬಿಟ್ಟು ಹೋಗಬಾರದು. ನಾನು ಒಮ್ಮೆ ಮದುವೆಯಾದ ಮೇಲೆ ಡಿವೋರ್ಸ್‌ಗೆ ಅವಕಾಶವೇ ಇಲ್ಲ. ನನಗೆ ಸೌಂದರ್ಯ ಮುಖ್ಯವಲ್ಲ. ಒಳ್ಳೆಯ ಗುಣ ಇರಬೇಕು. ಎತ್ತರ, ದಪ್ಪ ಇವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಆರೋಗ್ಯವಾಗಿರಬೇಕು. ಅಪರೂಪಕ್ಕೆ ಮದ್ಯಪಾನ ಮಾಡಿದರೆ ತೊಂದರೆಯಿಲ್ಲ. ಆದರೆ ಧೂಮಪಾನ ಮಾಡುವುದು ನನಗೆ ಇಷ್ಟವಿಲ್ಲ. ನಾನು ಮದುವೆ ಮಾಡಿಕೊಳ್ಳುವ ಗಂಡು ನನಗಿಂತ ಐದು ವರ್ಷ ದೊಡ್ಡವರಾದರೂ ಪರವಾಗಿಲ್ಲ. ಸಮಾನ ವಯಸ್ಸಾದರೂ ಸರಿ. ಆದರೆ ತುಂಬಾ ವಯಸ್ಸಾಗಿರಬಾರದು. ನನ್ನನ್ನು ಚೆನ್ನಾಗಿ ತಿಳಿದಿರುವ, ನನ್ನನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ವ್ಯಕ್ತಿ ಆಗಿರಬೇಕು. ಇದು ಎಲ್ಲಾ ಹುಡುಗಿಯರ ಕಲ್ಪನೆಗಳೇ ಆಗಿರುತ್ತವೆ, ಎಂದು ಅನುಮೋಳ್ ಹೇಳಿದರು.

ಇದನ್ನೂ ಓದಿ: ಸೀತಮ್ಮನಿಗೆ ತೊಂದ್ರೆ ಕೊಟ್ಟೋರನ್ನು ಸುಮ್ನೆ ಬಿಡೋ ಮಾತೆ ಇಲ್ಲ… ಸುಬ್ಬಿ ಧಮ್ಕಿಗೆ ಬೆಚ್ಚಿ ಬಿದ್ಲಾ ಭಾರ್ಗವಿ?!

ಅನುಮೋಳ್ ನಟನೆಯ ಜೊತೆಗೆ ಮಾಡೆಲಿಂಗ್ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಅನುಮೋಳ್‌ಗೆ ಓದುವಾಗಲೇ ನಟನೆ ಮತ್ತು ಮಾಡೆಲಿಂಗ್ ಬಗ್ಗೆ ಹೆಚ್ಚಿನ ಆಸಕ್ತಿ ಇತ್ತು. ಅವರು ಅನೇಕ ಬ್ರ್ಯಾಂಡ್‌ಗಳಿಗೆ ಮಾಡೆಲ್ ಆಗಿದ್ದಾರೆ. ತಿಂಗಳ್ ಮುತಲ್ ವೆಳ್ಳಿ ವರೆ, ಕಲ್ಯಾಣಂ, ಮಹೇಶುಂ ಮಾರುತಿಯುಂ ಮುಂತಾದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಅನುಮೋಳ್ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನಟಿಯ ಚಿತ್ರಗಳು ಮತ್ತು ವೀಡಿಯೊಗಳು ಬೇಗನೆ ವೈರಲ್ ಆಗುತ್ತವೆ.

vuukle one pixel image
click me!