ಸೀತಮ್ಮನಿಗೆ ತೊಂದ್ರೆ ಕೊಟ್ಟೋರನ್ನು ಸುಮ್ನೆ ಬಿಡೋ ಮಾತೆ ಇಲ್ಲ… ಸುಬ್ಬಿ ಧಮ್ಕಿಗೆ ಬೆಚ್ಚಿ ಬಿದ್ಲಾ ಭಾರ್ಗವಿ?!

ಸೀತಮ್ಮನಿಗೆ ಸಣ್ಣ ನೋವಾದರೂ ಒದ್ದಾಡುವ ಸುಬ್ಬಿ, ಸೀತಾ ಕೈಗೆ ಏಟಾಗುವಂತೆ ಮಾಡಿದ ಕ್ರಿಕೆಟ್ ಅಂಕಲ್ ಹಾಗೂ ಬಂಡಿ ಬಂಗಾರಮ್ಮ ಆಂಟಿಗೆ ಧಮ್ಕಿ ಹಾಕಿದ್ದಾರೆ ಮುದ್ದು ಸುಬ್ಬಿ. 
 

Subbi challenges Bhargavi and Vishwa in Seetha Rama serial pav

ಝೀ ಕನ್ನಡದ ಸೀತಾ ರಾಮ (Seetha Rama Serial) ಧಾರಾವಾಹಿಯಲ್ಲಿ ಸದ್ಯಕ್ಕಂತೂ ಸುಬ್ಬಿಯದ್ದೇ ಹವಾ. ಸುಬ್ಬಿ -ಸಿಹಿ ಜೊತೆ ಸೇರಿದ್ರೆ ಹಬ್ಬ ಖಚಿತಾ. ಇದೀಗ ಸೀತಮ್ಮನ ತಂಟೆಗೆ ಬಂದ ಕ್ರಿಕೆಟ್ ಅಂಕಲ್ ಹಾಗೂ ಭಾರ್ಗವಿಗೆ ಸುಬ್ಬಿ ಸರಿಯಾಗಿಯೇ ಪಾಠ ಕಲಿಸಿದ್ದಾಳೆ. ಅಷ್ಟೇ ಅಲ್ಲ, ಧಮ್ಕಿ ಕೂಡ ಹಾಕಿದ್ದಾಳೆ. ಪ್ರೊಮೋ ನೋಡಿ ವೀಕ್ಷಕರಂತೂ ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ.

ಅಷ್ಟಕ್ಕೂ ಆಗಿರೋದು ಏನು? 
ಭಾರ್ಗವಿಯ ತಾಳಕ್ಕೆ ತಕ್ಕಂತೆ ಕುಣಿಯುವ ವಿಶ್ವ ಸಿಹಿಯನ್ನು ಬೀಳಿಸೋಕೆ ಹೋಗೆ ಸೀತಾ ಕೆಳಕ್ಕೆ ಬಿದ್ದು ಕೈ ಮುರಿಯುವಂತೆ ಮಾಡಿದ್ದ, ಇದರಿಂದ ಸೀತಾ ಕೈಗೆ ಏಟು ಕೂಡ ಆಗಿತ್ತು. ಸೀತಾ ಕೈ, ಮೇಲೆ ಕೆಳಗೆ ಕೂಡ ಮಾಡೋದಕ್ಕೆ ಸಾಧ್ಯ ಆಗುತ್ತಿರಲಿಲ್ಲ. ಇದರಿಂದ ನೊಂದುಕೊಂಡಿರುವ ಸಿಹಿ ಅಂದ್ರೆ ಸುಬ್ಬಿ, ಸೀತಮ್ಮನಿಗೆ ನೋವು ಮಾಡಿದವರಿಗೆ ಪಾಠ ಕಲಿಸಲೇಬೇಕು ಎಂದು, ವಿಶ್ವ ಅಂದ್ರೆ ಕ್ರಿಕೆಟ್ ಅಂಕಲ್ (Cricket Uncle) ನಡೆದುಕೊಂಡು ಹೋಗುವಾಗ, ಕಾರ್ಪೆಟನ್ನು ಹಿಂದಿನಿಂದ ಎಳೆಯುವ ಮೂಲಕ ಆತ ಬಿದ್ದಿ, ಸೊಂಟ ಮುರಿಯುವಂತೆ ಮಾಡಿದ್ದಾಳೆ ಸುಬ್ಬಿ. 

Latest Videos

Seetha Raama serial: ಸುಬ್ಬಿ ಸತ್ಯ ತಿಳಿಯಲು ಹೋಗಿ ತನ್ನ ಗುಂಡಿ ತಾನೇ ತೋಡ್ಕೊಂಡ ಭಾರ್ಗವಿ

ವಿಶ್ವ - ಭಾರ್ಗವಿಗೆ ಧಮ್ಕಿ ಹಾಕಿದ ಸುಬ್ಬಿ
ವಿಶ್ವ ನೋವಿನಲ್ಲಿ ನಡೆದುಕೊಂಡು ಹೋಗಬೇಕಾದರೆ, ಸುಬ್ಬಿ, ಅವನಂತೆ ನಟಿಸಿ ತಮಾಷೆ ಮಾಡ್ತಾಳೆ. ಇದರಿಂದ ಕೋಪಗೊಂಡ ವಿಶ್ವ ಸುಬ್ಬಿಗೆ ಬೈಯ್ತಾನೆ. ಅದಕ್ಕೆ ದಿಟ್ಟ ಉತ್ತರ ಕೊಡುವ ಸಿಹಿ, ನಮ್ಮಮ್ಮ ಹೇಳ್ತಾಳೆ ಮಾಡಿದುಣ್ಣೋ ಮಹಾರಾಯ ಅಂತ, ನನ್ನನ್ನು ಬೀಳಿಸೋಕೆ ಹೋಗಿ ಸೀತಮ್ಮನ್ನ ಕೆಳಕ್ಕೆ ಬೀಳಿಸಿಬಿಟ್ರಾ, ಈವಾಗ ನಂಗೆ ಇದೆಲ್ಲಾ ಹೆಂಗೆ ಗೊತ್ತಾಯ್ತು ಅಂತ ಯೋಚನೆ ಮಾಡ್ತಿದ್ದೀರಾ? ಅಂತ ಕೇಳ್ತಾಳೆ. ಅದಕ್ಕೆ ವಿಶ್ವ ಲಿಟಲ್ ಚಾಂಪ್ (Little Champ) ಅಂದುಕೊಂಡಿದ್ದೆ ನಿನ್ನ, ಆದರೆ ನೀನು ದೊಡ್ಡ ತರ್ಲೆ, ನೀನು ಸಿಹಿ ಅಲ್ಲ, ಸಿಹಿ ಆಗಿದ್ರೆ, ಈ ಥರ ಎಲ್ಲಾ ಮಾತಾಡ್ತಾ ಇರ್ಲಿಲ್ಲ ಎನ್ನುತ್ತಾನೆ. ಅದಕ್ಕೆ ಸುಬ್ಬಿ, ನಾನು ಯಾರಾದ್ರೆ ಏನು? ನನ್ನ ಸೀತಮ್ಮನ್ನ ತಂಟೆಗೆ ಬಂದ್ರೆ, ನಾನಂತೂ ಸುಮ್ನೆ ಬಿಡಲ್ಲ ಎಂದು ಬೆರಳು ತೋರಿಸಿ ಅವಾಜ್ ಹಾಕ್ತಾಳೆ ಸುಬ್ಬಿ. ಆವಾಗ ಅಲ್ಲಿಗೆ ಬರೋ ಭಾರ್ಗವಿ, ಏನಂದೆ ನೀನು ನಿನ್ನ ಸೀತಮ್ಮನ ತಂಟೆಗೆ ಬರೋರನ್ನು ಬಿಡೋದಿಲ್ವಾ? ಅಂದ್ರೆ ನಿನ್ನೆ ವಿಶ್ವನ್ನ ಬೀಳಿಸಿದ್ದು ನೀನೇನಾ ಅಂತ ಕೇಳ್ತಾಳೆ. ಅದಕ್ಕೆ ಸುಬ್ಬಿ ಸ್ವಲ್ಪ ಜೋರಾಗಿಯೇ ನನ್ನ ಸೀತಮ್ಮನಿಗೆ ತೊಂದ್ರೆ ಕೊಟ್ರೆ ಯಾರನ್ನೂ ಬಿಡೋದಿಲ್ಲ. ನಿಮ್ಮನ್ನೂ ಕೂಡ ಬಿಡಲ್ಲ ಎನ್ನುತ್ತಾ ಧಮ್ಕಿ ಹಾಕ್ತಾಳೆ. ಇದರಿಂದ ಭಾರ್ಗವಿ ಕೋಪ ಮತ್ತಷ್ಟು ಹೆಚ್ಚಾಗುತ್ತೆ. 

ಸೀತಾರಾಮ ಧಾರಾವಾಹಿ ಬಿಗ್ ಟ್ವಿಸ್ಟ್: ಅಘೋರಿ ಬಾಬಾ ಸಿಹಿಗೆ ಕೊಟ್ಟ 'ಹನುಮ ರಕ್ಷೆ'ಯ ಶಕ್ತಿ ಏನು ಗೊತ್ತಾ?

 ಸುಬ್ಬಿ ಭಾರ್ಗವಿಗೆ ಧಮ್ಕಿ ಹಾಕಿರೋದನ್ನು ಮೆಚ್ಚಿಕೊಂಡು ವೀಕ್ಷಕರು ಕಾಮೆಂಟ್ ಮಾಡಿದ್ದಾರೆ. ಏನೇನು ಕಾಮೆಂಟ್ ಮಾಡಿದ್ದಾರೆ ನೋಡಿ

  • ನಮ್ ಸುಬ್ಬಿ ರಾಕ್ಸ್ ಕ್ರಿಕೆಟ್ ಅಂಕಲ್ ಶಾಕ್ ಮೇಲೆ ಶಾಕ್
  • ಸಿಹಿಯಾದರು ಸರಿ ಸುಬ್ಬಿ ಆದ್ರು ಸರಿ, ಕೊಡ್ತಾ ಇರೋ ಏಟು ಅಂತೂ ಚೂರುಕ್ ಮುಟ್ಟುತಾ, ಇದೆ ನಮ್ಮ ಭಾರ್ಗವಿಗೆ
  • ನಮ್ ಭಾರ್ಗು ನೋಡ್ತಿದ್ರೆ, ಪಾಪ ಅನಿಸ್ತಿದೆ
  • ಈ ವಾರದ ಕಿಚ್ಚನ ಚಪ್ಪಾಳೆ ಸುಬ್ಬಿಗೆ
  • ಶಬ್ಬಾಶ್ ಸಿಹಿ ಅಮ್ಮನ ತಂಟೆಗೆ ಬಂದೋರನ ಸುಮ್ನೆ ಬಿಡ್ಬಾರ್ದು
  • ವೇರಿ ಗುಡ್ ಸುಬ್ಬಿ ಗುಬ್ಬಿ ಭಾರ್ಗವಿ ಇನ್ ಮುಂದೆ ಇದೆ ಮಾರಿಹಬ್ಬ
  • ಭಾರ್ಗವಿ ಚೋಟ್ ಮೆಣಸಿನಕಾಯಿ ಮುಂದೆ ಹುಷಾರಾಗಿರು ನೀನು ಇಲ್ಲ ಅಂದ್ರೆ ನಿನಗೂ ಇದೆ ಮುಂದೆ ಮಾರಿ ಹಬ್ಬ
  • ನಿಂಗ್ ಇದೆಲ್ಲ ಬೇಕಿತ್ತಾ ಅಂಕಲ್, ಇಲ್ಲಿ ಇರೋದು ಯಾರ್ ಹೇಳಿ ನಮ್ ಸಿಹಿ ಅಲ್ಲ ಅಲ್ಲ ಲೋಕಲ್ ಸುಬ್ಬಿ

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

vuukle one pixel image
click me!