ಜೀವನ ಅಂದ್ರೆ ಇಷ್ಟೇ ಆಗೋಯ್ತು ಅನ್ನುತ್ಲೇ ಡಾ. ಬ್ರೋ ಹೋಗಿದ್ದೆಲ್ಲಿಗೆ? ಗಗನ್‌ ಮಾತಿಗೆ 100 ಮಾರ್ಕ್ಸ್‌ ನೀಡಿದ ಫ್ಯಾನ್ಸ್‌

Published : Feb 27, 2025, 10:58 PM ISTUpdated : Feb 28, 2025, 10:03 AM IST
ಜೀವನ ಅಂದ್ರೆ ಇಷ್ಟೇ ಆಗೋಯ್ತು ಅನ್ನುತ್ಲೇ ಡಾ. ಬ್ರೋ ಹೋಗಿದ್ದೆಲ್ಲಿಗೆ?  ಗಗನ್‌ ಮಾತಿಗೆ 100 ಮಾರ್ಕ್ಸ್‌ ನೀಡಿದ ಫ್ಯಾನ್ಸ್‌

ಸಾರಾಂಶ

ಜನಪ್ರಿಯ ಯುಟ್ಯೂಬರ್ ಡಾ. ಬ್ರೋ   ನೇಪಾಳದ ಮುಕ್ತಿನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿನ ವಿಡಿಯೋವನ್ನು ಹಂಚಿಕೊಂಡಿದ್ದು, ಮುಕ್ತಿನಾಥ ದರ್ಶನದಿಂದ ಜೀವನದ ಜಂಜಾಟಗಳಿಗೆ ಮುಕ್ತಿ ಸಿಗುತ್ತದೆ ಎಂದು ಹೇಳಿದ್ದಾರೆ. ಹಿಂದೂ ಮತ್ತು ಬೌದ್ಧರಿಗೆ ಪವಿತ್ರ ಸ್ಥಳವಾದ ಈ ದೇವಸ್ಥಾನದ ಇತಿಹಾಸ ಮತ್ತು ಮಹತ್ವವನ್ನು ಅವರು ವಿವರಿಸಿದ್ದಾರೆ.  

ನಮಸ್ಕಾರ ದೇವ್ರು ಅಂತಾನೇ ಮಾತು ಶುರು ಮಾಡುವ, ಕನ್ನಡಿಗರ ಅಚ್ಚುಮೆಚ್ಚಿನ ಯುಟ್ಯೂಬರ್ ಗಗನ್ (YouTuber Gagan ) ಅಲಿಯಾಸ್ ಡಾ. ಬ್ರೋ (Dr. Bro) ನೇಪಾಳ ಪ್ರವಾಸ ಮುಂದುವರೆಸಿದ್ದಾರೆ. ಮುಕ್ತಿನಾಥ ದೇವಸ್ಥಾನ (Muktinath Temple)ಕ್ಕೆ ಭೇಟಿ ನೀಡಿರುವ ಗಗನ್, ವೇದಾಂತಿಯಂತೆ ಮಾತನಾಡಿದ್ದಾರೆ. ಇನ್ಸ್ಟಾ ಖಾತೆಯಲ್ಲಿ ಗಗನ್ ದೇವಸ್ಥಾನದ ವಿಡಿಯೋ ಹಂಚಿಕೊಂಡಿದ್ದಾರೆ. ಮುಕ್ತಿನಾಥನ ದರ್ಶನ ಮಾಡ್ಕೊಳ್ಳಿ ಎಂದು ಶೀರ್ಷಿಕೆ ಹಾಕಿರುವ ಗಗನ್, ಕನ್ನಡಿಗರಿಗೆ ಮುಕ್ತಿನಾಥನನ್ನು ತೋರಿಸಿದ್ದಾರೆ. 

ಶಾಲೆಗೆ ಸೇರ್ಕೊ, ಕೆಲ್ಸಕ್ಕೆ ಸೇರ್ಕೋ, ಕತ್ತೆ ದುಡಿದಂಗೆ ದುಡಿ, ಮದುವೆ ಮಾಡ್ಕೋ, ಮಕ್ಕಳು ಮರಿನಾ ಸಾಕು, ಸತ್ತೋಗು. ಜೀವನದ ಜಂಜಾಟ ಇದೇ ಆಗೋಯ್ತು. ಮನುಷ್ಯನ ಈ ಸೈಕಲ್ ಗೆ ಮುಕ್ತಿ ಸಿಗೋದು ಈ ಮುಕ್ತಿನಾಥನ ದರ್ಶನ ಮಾಡಿದ್ಮೇಲೆ ಎನ್ನುತ್ತಲೇ ಗಗನ್, ಮುಕ್ತಿನಾಥ ದೇವಸ್ಥಾನವನ್ನು ಪ್ರವೇಶ ಮಾಡ್ತಾರೆ. ಅನೇಕ ವರ್ಷಗಳಿಂದ ಮುಕ್ತಿನಾಥ ದೇವಸ್ಥಾನಕ್ಕೆ ಬರ್ಬೇಕು  ಎಂದು ಕನಸು ಕಂಡಿದ್ದೆ. ಅದು ಈಗ ಈಡೇರ್ತಾ ಇದೆ ಎಂದು ಗಗನ್ ಹೇಳಿದ್ದಾರೆ. ಈ ಜನ್ಮದ ನಂತ್ರ ಮತ್ತೆ ಜನ್ಮ ಬೇಡ ಅಂದ್ರೆ ಮುಕ್ತಿನಾಥನ ದರ್ಶನವನ್ನು ಮಾಡ್ಕೊಳ್ಳಿ. ಹಿಂದೂಗಳು ಮಾತ್ರವಲ್ಲ ಬೌದ್ಧರು ಕೂಡ ಈ ದೇವಸ್ಥಾನಕ್ಕೆ ಬರ್ತಾರೆ ಎನ್ನುತ್ತ ಗಗನ್, ಮುಕ್ತಿನಾಥನ ಬಗ್ಗೆ ಮಾಹಿತಿ ನೀಡಿದ್ದಾರೆ. 

ನೇಪಾಳದಲ್ಲಿ ಕುಮಾರಿಗೆ ಡಾ. ಬ್ರೋ ಪೂಜೆ, ಮದುವೆಗೆ ಹುಡುಗಿ ಬೇಡಿಕೊಂಡ್ರಾ ಕೇಳ್ತಿದ್ದಾರೆ ಫ್ಯಾನ್ಸ್‌

ಮುಕ್ತಿನಾಥ ದೇವಸ್ಥಾನ ನೇಪಾಳದ ಗಂಡಕಿ ನದಿ ಮೂಲದಲ್ಲಿರುವ ಬೆಟ್ಟದ ಮೇಲಿದೆ. ಸನಾತನ ಹಿಂದೂ ಧರ್ಮದ ಪ್ರಸಿದ್ಧ ದೇವಸ್ಥಾನ ಇದು. ಇದನ್ನು ಮೋಕ್ಷ ಪಡೆಯುವ ಸ್ಥಳ ಎಂದು ನಂಬಲಾಗಿದೆ. ಮಹಾವಿಷ್ಣು ಸಾಲಿಗ್ರಾಮ ರೂಪದಲ್ಲಿ ಇಲ್ಲಿ ನೆಲೆಸಿದ್ದಾನೆ. ಇದು ಹತ್ತೊಂಬತ್ತನೇ ಶತಮಾನದಷ್ಟು ಹಳೆಯದು. ಹಿಂದುಗಳ ಜೊತೆ ಬೌದ್ಧರು ಇದನ್ನು ಪ್ರಮುಖ ಯಾತ್ರಾ ಸ್ಥಳ ಎಂದು ನಂಬುತ್ತಾರೆ.  ಮುಕ್ತಿನಾಥ ದೇವಸ್ಥಾನದ ಹಿಂಭಾಗದಲ್ಲಿ ನಂದಿ ತಲೆಯ ಆಕಾರದ 108 ನೀರಿನ ಚಿಲುಮಿ ಇದೆ. ನಂದಿಯ ಬಾಯಿಂದ ಬರುವ ನೀರು ಕಾಳಿ ನದಿಯ ನೀರು. ಈ ನದಿಯಲ್ಲಿ ಸ್ನಾನ ಮಾಡುವುದ್ರಿಂದ ಎಲ್ಲ ಪಾಪಗಳು ಕಳೆಯುತ್ತವೆ. ಆರೋಗ್ಯ ಸಮಸ್ಯೆ ಕಡಿಮೆ ಆಗೋದಲ್ದೆ ಚರ್ಮರೋಗ ಕಡಿಮೆ ಆಗುತ್ತೆ. 

ಮುಕ್ತಿನಾಥ ದೇವಸ್ಥಾನದ ಇತಿಹಾಸ : ಜಲಂದರ್ ರಾಜನು, ಶಿವನ ವೇಷ ಧರಿಸಿ ಪಾರ್ವತಿ ಬಳಿಗೆ ಬರ್ತಾನೆ. ಪಾರ್ವತಿಗೆ ಆತ ಶಿವನಲ್ಲ ಎಂಬುದು ಗೊತ್ತಾಗುತ್ತದೆ. ನಂತ್ರ ಜಲಂಧರ ಶಿವ ಹಾಗೂ ಉಳಿದ ದೇವತೆಗಳಿಗೆ ತೊಂದರೆ ನೀಡಲು ಮುಂದಾಗ್ತಾನೆ. ಈ ವೇಳೆ ಜಲಂದರನ ಪತ್ನಿ ವೃಂದಾ ಬಳಿ ಹೋಗುವ ವಿಷ್ಣು, ಜಲಂಧರ ಎಂದು ಆಕೆಯನ್ನು ನಂಬಿಸುತ್ತಾನೆ. ವೃಂದಾ, ವಿಷ್ಣುವಿಗೆ ಹತ್ತಿರ ಆಗ್ತಾಳೆ. ಇತ್ತ ಶಿವ, ಜಲಂಧರನನ್ನು ವಧಿಸುತ್ತಾನೆ. ಆ ನಂತ್ರ ವೃಂದಾಗೆ, ತನ್ನ ಬಳಿ ಬಂದವರು ವಿಷ್ಣು ಎಂಬುದು ಗೊತ್ತಾಗುತ್ತದೆ. ಕೋಪದಲ್ಲಿ ವಿಷ್ಣುವಿಗೆ ಕಲ್ಲಾಗು ಎಂದು ಶಾಪ ನೀಡ್ತಾಳೆ. ಕಲ್ಲಾಗುವ ವಿಷ್ಣು ಮುಂದೆ ನೇಪಾಳದಲ್ಲಿ ಸಾಲಿಗ್ರಾಮವಾಗಿ ಜನಿಸ್ತಾನೆ ಎಂದು ನಂಬಲಾಗಿದೆ. 

ಕಂಡವರ ತೋಟದಲ್ಲಿ ಆಪಲ್ ತಿನ್ನೋದೇ ಮಜ, ಹೊಸ ಸ್ಟೈಲ್ ನಲ್ಲಿ ಡಾ. ಬ್ರೋ ಮಿಂಚಿಂಗ್

ಇನ್ಸ್ಟಾಗ್ರಾಮ್ ನಲ್ಲಿ ಚಿಕ್ಕದಾಗಿ ದೇವಸ್ಥಾನದ ಬಗ್ಗೆ ಡಾ. ಬ್ರೋ ಮಾಹಿತಿ ನೀಡಿದ್ದಾರೆ. ಯುಟ್ಯೂಬ್ ನಲ್ಲಿ ದೇವಸ್ಥಾನದ ಇನ್ನಷ್ಟು ವಿಶೇಷತೆ ನೋಡಲು ಜನರು ಕಾಯ್ತಿದ್ದಾರೆ. ಆದಷ್ಟು ಬೇಗ ವಿಡಿಯೋ ಪೋಸ್ಟ್ ಮಾಡುವಂತೆ ಮನವಿ ಮಾಡಿದ್ದಾರೆ. ಗಗನ್ ಹೇಳಿದ ಜೀವನ ಸತ್ಯವನ್ನು ಜನರು ಮೆಚ್ಚಿದ್ದಾರೆ. ಡಾ. ಬ್ರೋ ಹೇಳಿದ ಮಾತು ನೂರಕ್ಕೆ ನೂರು ಸತ್ಯ. ಜನರು ಮನೆ, ಸಂಸಾರದಲ್ಲಿಯೇ ಜೀವನ ಮುಗಿಸ್ತಾರೆ ಅಂತ ಕಮೆಂಟ್ ಮಾಡಿದ್ದಾರೆ. ಈ ಹಿಂದೆಯೂ ಗಗನ್ ಸಂಸಾರ ಅಂದ್ರೆ ಜಂಜಾಟ ಎಂದಿದ್ದರು ಎನ್ನುವ ಮೂಲಕ ಗಗನ್ ಮದುವೆ ಆಗೋದಿಲ್ವಾ ಎಂಬ ಅನುಮಾನವನ್ನೂ ಅಭಿಮಾನಿಗಳು ಮುಂದಿಟ್ಟಿದ್ದಾರೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯಾವುದೇ ಪಾಸ್‌ಪೋರ್ಟ್ ಇಲ್ಲದೆ ಜಗತ್ತು ಸುತ್ತಬಲ್ಲ ಟಾಪ್- 3 ವ್ಯಕ್ತಿಗಳಿವರು!
ರಾಜಸ್ಥಾನದ ಈ ಜನಾಂಗದಲ್ಲಿ ಮದುವೆಗೂ ಮುನ್ನ Live in Relationship ಕಾಮನ್, ಮಗು ಆದ್ರೇನೆ ಮದುವೆ!