ವೀಡಿಯೋಗಾಗಿ ಕಿಟಕಿ ಬದಿ ಕುಳಿತು ಪ್ರಯಾಣಿಸುತ್ತಿದ್ದವನ ಕೆನ್ನೆಗೆ ಬಾರಿಸಿದ ಯೂಟ್ಯೂಬರ್‌ ಅರೆಸ್ಟ್

Published : Mar 02, 2025, 02:56 PM ISTUpdated : Mar 04, 2025, 11:14 AM IST
ವೀಡಿಯೋಗಾಗಿ ಕಿಟಕಿ ಬದಿ ಕುಳಿತು ಪ್ರಯಾಣಿಸುತ್ತಿದ್ದವನ ಕೆನ್ನೆಗೆ ಬಾರಿಸಿದ ಯೂಟ್ಯೂಬರ್‌ ಅರೆಸ್ಟ್

ಸಾರಾಂಶ

ವೈರಲ್ ಆಗಲು ರೈಲಿನಲ್ಲಿ ಪ್ರಯಾಣಿಕನಿಗೆ ಹೊಡೆದ ಯೂಟ್ಯೂಬರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಆತ ಕ್ಷಮೆ ಯಾಚಿಸಿದ್ದು, ಇಂತಹ ಕೃತ್ಯವನ್ನು ಮರುಕಳಿಸುವುದಿಲ್ಲ ಎಂದು ಹೇಳಿದ್ದಾನೆ.

ಕೆಲವು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ವೈರಲ್ ಆಗುವುದಕ್ಕಾಗಿ ಯಾವ ಮಟ್ಟಕ್ಕೂ ಇಳಿಯಲು ಸಿದ್ಧರಾಗಿರುತ್ತಾರೆ. ಇದರಿಂದ ಬೇರೆಯವರಿಗೆ ತೊಂದರೆಯಾಗುತ್ತದೆ ಎಂಬುದನ್ನು ಅವರು ಗಮನಕ್ಕೆ ತೆಗೆದುಕೊಳ್ಳದೇ ಸಾರ್ವಜನಿಕ ಸ್ಥಳಗಳಲ್ಲಿ ವೀಡಿಯೋ ಮಾಡುವುದರ ಜೊತೆಗೆ ಅಲ್ಲಿರುವ ಇತರರಿಗೂ ಕಿರಿಕಿರಿ ಉಂಟು ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬ ಯೂಟ್ಯೂಬರ್‌ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವುದಕ್ಕಾಗಿ ರೈಲಿನಲ್ಲಿ ಕಿಟಕಿ ಪಕ್ಕ ಕುಳಿತು ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಕೆನ್ನೆಗೆ ಬಾರಿಸಿದ್ದಾನೆ. ಬಳಿಕ ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಕಾರ್ಯಾಚರಣೆಗಿಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಿಹಾರದ ರೈಲು ನಿಲ್ದಾಣವೊಂದರಲ್ಲಿ ಈ ಘಟನೆ ನಡೆದಿದೆ. 

ವೀಡಿಯೋದಲ್ಲೇನಿದೆ?

ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್‌ನಲ್ಲಿ ನಿಂತುಕೊಂಡ ಯೂಟ್ಯೂಬರ್‌, ನಿಧಾನವಾಗಿ ಚಲಿಸುತ್ತಿದ್ದ ರೈಲಿನ ಕಿಟಕಿ ಪಕ್ಕ ತನ್ನಷ್ಟಕ್ಕೆ ತಾನು ಕುಳಿತುಕೊಂಡು ಹೊರಗೆ ನೋಡುತ್ತಿದ್ದ ಬಡಪಾಯಿ ಪ್ರಯಾಣಿಕನೋರ್ವನ ಕೆನ್ನೆಗೆ ಬಾರಿಸಿ ಏನೂ ಕೂಡ ಆಗೇ ಇಲ್ಲವೆಂಬಂತೆ ನಗುತ್ತಾ ಬರುತ್ತಿರುವುದು ಕಾಣುತ್ತಿದೆ. ಈತನ ಕೃತ್ಯವನ್ನು ಈತ ಸ್ನೇಹಿತನ ಕೈಯಲ್ಲಿ ಮೊಬೈಲ್ ನೀಡಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಈ ಕಿಡಿಗೇಡಿ ಯೂಟ್ಯೂಬರ್‌ನನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಆತ ತಾನು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗುವುದಕ್ಕಾಗಿ ಈ ಕೃತ್ಯವೆಸಗಿರುವುದಾಗಿ ಹೇಳಿ ಕ್ಷಮೆಯಾಚಿಸಿದ್ದಾನೆ. ಹೀಗೆ ಬಂಧಿತನಾದ ಆರೋಪಿಯನ್ನು ರಿತೇಶ್ ಕುಮಾರ್ ಎಂದು ಗುರುತಿಸಲಾಗಿದೆ. 

ಬಂಧನದ ನಂತರ ಕ್ಷಮೆ!

ಟ್ವಿಟ್ಟರ್‌ನಲ್ಲಿ ಈ ವಿಚಾರವನ್ನು ರೈಲ್ವೆ ಪೊಲೀಸ್ ಪೋರ್ಸ್‌(RPF) ಖಚಿತಪಡಿಸಿದೆ.  ಪ್ರಯಾಣಿಕರ ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ, ಸಾಮಾಜಿಕ ಮಾಧ್ಯಮದಲ್ಲಿ ಖ್ಯಾತಿಗಾಗಿ ಚಲಿಸುವ ರೈಲಿನಲ್ಲಿದ್ದ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ ಯೂಟ್ಯೂಬರ್‌ನನ್ನು ಆರ್‌ಪಿಎಫ್‌ನ ಡೆಹ್ರಿ-ಆನ್-ಸೋನ್ ಕೂಡಲೇ ಪತ್ತೆಹಚ್ಚಿ ಬಂಧಿಸಿದೆ. ನಿಮ್ಮ(ಪ್ರಯಾಣಿಕರ) ಸುರಕ್ಷತೆ ನಮಗೆ ಮುಖ್ಯವಾಗಿದೆ,  ಇಂತಹ ಕೃತ್ಯಗಳನ್ನು ಸಹಿಸಲಾಗುವುದಿಲ್ಲ' ಎಂದು ಆರ್‌ಪಿಫ್‌ ತನ್ನ ಎಕ್ಸ್  ಪೋಸ್ಟ್‌ನಲ್ಲಿ ಹೇಳಿದೆ.  ಇದರ ಜೊತೆಗೆ ಯೂಟ್ಯೂಬರ್ ರಿತೇಶ್‌ ಕುಮಾರ್ ಕ್ಷಮೆ ಕೇಳುತ್ತಿರುವ ದೃಶ್ಯವನ್ನು  ವೀಡಿಯೋ ಮಾಡಿ ಪೋಸ್ಟ್ ಮಾಡಲಾಗಿದೆ. 

Julie Lakshmi: ತೆಲುಗಿನ ಆ ನಟ ಓಡಿಬಂದು ಜಯಂತಿ ಕೆನ್ನೆಗೆ ಜೋರಾಗಿ ಬಾರಿಸಿದ್ದ..!

ಈ ವೀಡಿಯೋದಲ್ಲಿ ಆತ ತನ್ನ ಈ ಸಾಹಸವು ಕೇವಲ ಪ್ರಚಾರಕ್ಕಾಗಿ ಮಾತ್ರ ಎಂದು ಆತ ಒಪ್ಪಿಕೊಂಡಿದ್ದಾನೆ. ನಾನು ಯೂಟ್ಯೂಬರ್. ನನ್ನ ಫಾಲೋವರ್ಸ್‌ಗಳನ್ನು ಹೆಚ್ಚಿಸಲು ನಾನು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊಗಳನ್ನು ತಯಾರಿಸುತ್ತೇನೆ ಮತ್ತು ಪೋಸ್ಟ್ ಮಾಡುತ್ತೇನೆ. ನಾನು ಅನುಗ್ರಹ ನಾರಾಯಣ್ ರಸ್ತೆಯ ರೈಲ್ವೆ ನಿಲ್ದಾಣಕ್ಕೆ ಬಂದು, ನನ್ನ ಫಾಲೋವರ್ಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು, ಚಲಿಸುವ ರೈಲಿನಲ್ಲಿ ಒಬ್ಬ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದೆ. ಇದು ನನ್ನ ತಪ್ಪು, ಮತ್ತು ನಾನು ಅದನ್ನು ಪುನರಾವರ್ತಿಸುವುದಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಆತ ವೀಡಿಯೋದಲ್ಲಿ ಕ್ಷಮೆ ಯಾಚಿಸಿದ್ದಾನೆ. 

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ತಾಯಿಗೆ ಕಪಾಳ ಮೋಕ್ಷ ಮಾಡಿದ ಪಿಎಸ್‌ಐ! ಏನಿದು ಪ್ರಕರಣ?



 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!
ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್