ಈ ಲಕ್ಸುರಿ ಹೊಟೇಲ್‌ನಲ್ಲಿ ಎಲ್ಲವೂ ಫ್ರೀ, ಆದ್ರೆ ಕಂಡೀಷನ್ಸ್ ಅಪ್ಲೈ !

By Suvarna News  |  First Published Jul 7, 2022, 11:00 AM IST

ಐಷಾರಾಮಿ ಹೊಟೇಲ್‌ (Luxury Hotel)ಗಳು ಒಂದು ದಿನ ತಂಗೋದಕ್ಕೆ ಲಕ್ಷಗಟ್ಟಲೆ ಚಾರ್ಜ್‌ ಮಾಡ್ತವೆ. ಹೀಗಾಗಿಯೇ ಜನರು ಟೂರ್ (Tour) ಮೇಲೆ ಹೋದಾಗ ಇಂಥಾ ಹೊಟೇಲ್‌ಗಳನ್ನು ಬಿಟ್ಟು ಹೋಮ್‌ಸ್ಟೇ ನೋಡ್ಕೊಳ್ತಾರೆ. ಆದ್ರೆ ಇಲ್ಲೊಂದೆಡೆ ಲಕ್ಸುರಿ ಹೊಟೇಲ್‌ ಫ್ರೀ (Free)ಯಾಗಿ ಲಭ್ಯವಿದೆ. ಆದ್ರೆ ಷರತ್ತುಗಳು ಅನ್ವಯ. ಅದೇನು 


ಐಷಾರಾಮಿ ಹೊಟೇಲ್‌ (Luxury Hotel) ಗಳ ವೈಭವಾನೇ ಬೇರೆ. ಕಾಸ್ಟ್ಲೀ ನೆಲಹಾಸು, ಬೆಡ್‌, ಬಾತ್‌ರೂಮ್, ಬಾಲ್ಕನಿ. ಎಲ್ಲವೂ ಅದ್ಭುತವಾಗಿರುತ್ತೆ. ಹೀಗಾಗಿಯೇ ಜನರು ವೆಕೇಷನ್‌ಗಳಲ್ಲಿ ಟ್ರಿಪ್ ಹೋಗಿ ಐಷಾರಾಮಿ ಹೊಟೇಲ್‌ಗಳಲ್ಲಿ ಸ್ಟೇ (Stay) ಆಗಿ ಎಂಜಾಯ್ ಮಾಡುತ್ತಾರೆ. ಆದ್ರೆ ಬೇಜಾರಿನ ವಿಷ್ಯ ಅಂದ್ರೆ ಈ ಲಕ್ಸುರಿ ಹೊಟೇಲ್‌ಗಳು ಸಿಕ್ಕಾಪಟ್ಟೆ ಕಾಸ್ಟ್ಲೀ (Costly)ಯಾಗಿರುತ್ತವೆ. ಹೀಗಾಗಿ ಕೆಲವೊಬ್ಬರು ಇಂಥಾ ಹೊಟೇಲ್‌ಗೆ ಹೋಗಿ ಉಳಿದುಕೊಳ್ಬೇಕು ಅಂತ ಅಂದುಕೊಂಡ್ರೂ ಸಾಧ್ಯವಾಗುವುದಿಲ್ಲ. ದೊಡ್ಡ ದೊಡ್ಡ ಐಷಾರಾಮಿ ಹೊಟೇಲ್‌ನಲ್ಲಿ ಸ್ಟೇ ಆಗ್ವೇಕು ಅನ್ನೋ ಕನಸು ನನಸಾಗಿಯೇ ಉಳಿದುಬಿಡುತ್ತದೆ. ಆದ್ರೆ ಇಲ್ಲೊಂದು ಹೊಟೇಲ್‌ ಇದೆ. ಇಲ್ಲಿಗೆ ಯಾರು ಬೇಕಾದ್ರೂ ಹೋಗ್ಬೂದು. ಅಚ್ಚರಿಯ ವಿಷ್ಯ ಅಂದ್ರೆ ಇಲ್ಲಿ ಸ್ಟೇ ಆಗೋಕೆ ದುಡ್ಡು (Money) ಕೊಡ್ಬೇಕಾಗಿಲ್ಲ. 

ಹೌದು, ಈ ಐಷಾರಾಮಿ ಹೋಟೆಲ್‌ನ ಕೋಣೆಯಲ್ಲಿ ನೀವು ಉಚಿತ (Free)ವಾಗಿ ಉಳಿಯಬಹುದು. ಅರೆ ಇದು ಹೇಗೆ ಸಾಧ್ಯ. ಲಕ್ಸುರಿ ಹೊಟೇಲ್‌ ಅಂತೀರಾ, ಫ್ರೀಯಾಗಿ ಕೊಡ್ತಾರಾ ಅಂತ ಅಚ್ಚರಿಪಡ್ಬೇಡಿ. ಫ್ರೀ ಅನ್ನೋ ಕಾರಣಕ್ಕೆ ಸೌಲಭ್ಯಗಳಲ್ಲೇನೋ ಕಡಿಮೆಯಾಗಲ್ಲ. ಆದ್ರೆ ಈ ಹೊಟೇಲ್‌ನಲ್ಲಿ ಉಳ್ಕೊಳ್ಳೋಕೆ ಕೆಲವೊಂದು ಕಂಡೀಷನ್ಸ್ ಅಪ್ಲೈ ಆಗುತ್ತದೆ. ಅದೇನು ?

Tap to resize

Latest Videos

Traveling Tips : ಹೋಟೆಲ್‌ನಲ್ಲಿ ತಂಗುವ ಮುನ್ನ ಇದನ್ನು ತಿಳಿದಿರಿ 

ರೂಮ್‌ನಲ್ಲಿ ಉಳ್ಕೊಳ್ಳೋಕಕೆ ಚಾರ್ಜ್ ಮಾಡಲ್ಲ, ಕಂಡೀಷನ್ಸ್ ಅಪ್ಲೈ 
ಐಷಾರಾಮಿ ಹೊಟೇಲ್‌, ಐಷಾರಾಮಿ ರೂಮು. ಇಲ್ಲಿ ಎಲ್ಲವೂ ಸಿಕ್ಕಾಪಟ್ಟೆ ಕಾಸ್ಟ್ಲೀ. ನೀವು ಇಲ್ಲಿಆರಾಮವಾಗಿ ಸಮಯ ಕಳೆಯಬಹುದು. ದುಡ್ಡು ಕೊಡೋದು ಸಹ ಬೇಡ. ಆದ್ರೆ ಈ ಹೊಟೇಲ್‌ ರೂಮ್‌ನಲ್ಲಿ ಉಳಿದುಕೊಳ್ಬೇಕಾದ್ರೆ ಷರತ್ತು ಅನ್ವಯವಾಗುತ್ತದೆ. ಈ ಹೊಟೇಲ್‌ ಕೋಣೆ ಪಾರದರ್ಶಕ (Transparent)ವಾಗಿದೆ. ಇಲ್ಲಿ ಕುಳಿತರೆ ರೂಮಿನ (Room) ಹೊರಗಡೆಯಿಂದಲೂ ಎಲ್ಲರೂ ನಿಮ್ಮನ್ನು ನೋಡಬಹುದು.  ಸ್ಪ್ಯಾನಿಷ್ ದ್ವೀಪ ಐಬಿಜಾದಲ್ಲಿ ಈ ಹೋಟೆಲ್ ಕೋಣೆ ಇದೆ. ಇಲ್ಲಿ ಅತಿಥಿಗಳು ಉಚಿತವಾಗಿ ಉಳಿಯಬಹುದು. ಆದರೆ, ಪ್ಯಾರಡಿಸೊ ಆರ್ಟ್ ಹೋಟೆಲ್‌ನಲ್ಲಿರುವ ಝೀರೋ ಸೂಟ್ ಪಾರದರ್ಶಕ ಗೋಡೆಗಳಿಂದ ಮಾಡಿದ ಕೋಣೆಯಾಗಿದೆ. ಹೋಟೆಲ್‌ಗೆ ಬರುವ ಯಾರಾದರೂ ನಿಮ್ಮನ್ನು ನೋಡಬಹುದು.

ಐಷಾರಾಮಿ ಹೊಟೇಲ್‌ನಲ್ಲಿದೆ ಪಾರದರ್ಶನಕ ರೂಮ್‌
ಹೋಟೆಲ್ ತನ್ನ ವೆಬ್‌ಸೈಟ್‌ನಲ್ಲಿ ವಿವರಿಸಿದಂತೆ ನೀವು ಈ ರೂಮಿನಲ್ಲಿ ಉಳಿದುಕೊಂಡರೆ ನೀವು ಖಂಡಿತವಾಗಿಯೂ ಆಕರ್ಷಣೆಯ ಕೇಂದ್ರವಾಗಿರುತ್ತೀರಿ. ಪ್ಯಾರಡಿಸೊ ಆರ್ಟ್ ಹೋಟೆಲ್ ಲಾಬಿಯ ಮಧ್ಯದಲ್ಲಿ ಗಾಜಿನ ಗೋಡೆಯ ಕೋಣೆ, ಅಲ್ಲಿ ನೀವು ಒಂದು ರಾತ್ರಿ ಉಚಿತವಾಗಿ ಮಲಗಬಹುದು. ರೂಮಿನಲ್ಲಿ ಕಲಾತ್ಮಕ ಪ್ರದರ್ಶನಗಳು, ರೇಡಿಯೊ ಪ್ರಸಾರಗಳು, ಡಿಜೆ ಸೆಟ್‌ ಸೌಲಭ್ಯ ಸಹ ಲಭ್ಯವಿದೆ.
ಆದರೆ ಕೋಣೆಯ ಗೋಡೆಗಳು ಗಾಜಿನಿಂದ ಮಾಡಲ್ಪಟ್ಟಿದ್ದರೆ, ಅಪಾರದರ್ಶಕ ಗೋಡೆಗಳೊಂದಿಗೆ ಸ್ನಾನಗೃಹವಿದೆ.
ಪಾರದರ್ಶಕ ಹೋಟೆಲ್ ಕೋಣೆಯ ಬಗ್ಗೆ ಜನರು ಬೇರೆ ಬೇರೆ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ.

ದೇವರನಾಡಿನ ದೇವಿಕುಲಂನಲ್ಲಿದೆ ಸೀತೆ ಸ್ನಾನ ಮಾಡಿದ ಸರೋವರ

ಇದೊಂದು ಕೆಟ್ಟ ಕನಸಿನಂತಿದೆ ಎಂದು ಕೆಲವೊಬ್ಬರು ಹೇಳಿದರೆ, ಇನ್ನು ಕೆಲವರು ರೂಮಿನಲ್ಲಿ ಇಂಥಾ ಗೋಡೆಗಳ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ಆಕಸ್ಮಿಕವಾಗಿ ಬಟ್ಟೆಯಿಲ್ಲದೆ ಸಾರ್ವಜನಿಕವಾಗಿ ಹೋಗುವ ಕನಸುಗಳಂತೆಯೇ ಇದು ನನಗೆ ಅನಿಸುತ್ತದೆ ಎಂದು ಕಾಮೆಂಟಿಸಿದ್ದಾರೆ. ಉಚಿತವಾಗಿ ನೀಡುತ್ತಿರುವ ಕಾರಣಕ್ಕೆ ಮಾತ್ರ ಹೊಟೇಲ್‌ನ ಈ ಕೋಣೆಗಳು ಪಾರದರ್ಶಕವಾಗಿದೆ.

ಪ್ಯಾರಡಿಸೊ ಆರ್ಟ್ ಹೋಟೆಲ್‌ನಲ್ಲಿರುವ ಎಲ್ಲಾ ಕೊಠಡಿಗಳು ಪಾರದರ್ಶಕ ಗೋಡೆಗಳನ್ನು ಹೊಂದಿಲ್ಲ. ಹೀಗಾಗಿ ಈ ಲಕ್ಸುರಿ ಹೊಟೇಲ್‌ನಲ್ಲಿ ಉಳಿದುಕೊಳ್ಳಲು ಬಯಸುವವರು ಅಪಾರದರ್ಶಕ ಗೋಡೆಗಳನ್ನು ಹೊಂದಿರುವ ಕೊಠಡಿಗಳನ್ನು ಬುಕ್ ಮಾಡಬಹುದು. ಆದರೆ ಅವು ಉಚಿತವಾಗಿಲ್ಲ.

click me!