
ನವದೆಹಲಿ: ಭಾರತ ಪ್ರವಾಸೋದ್ಯಮದಿಂದಲೇ ಜಗತ್ತಿನಾದ್ಯಂತ ಹೆಸರು ಪಡೆದುಕೊಂಡಿದೆ. ಭಾರತದ ವಿವಿಧ ರಾಜ್ಯಗಳಲ್ಲಿರುವ ಸುಂದರ ತಾಣಗಳು ಎಲ್ಲರ ಮನಸೂರೆಗೊಳ್ಳುತ್ತವೆ. ಸುಂದರವಾದ ಪರ್ವತಗಳು, ಕಣಿವೆಗಳು, ಜಲಪಾತಗಳುಮ ಪಾರ್ಕ್‌ಗಳು ದೇಶವಿದೇಶದಿಂದ ಜನರನ್ನು ಸೆಳೆಯುತ್ತವೆ. ಪ್ರವಾಸೋದ್ಯಮದಿಂದಲೇ ಸಾಕಷ್ಟು ಖ್ಯಾತಿ ಪಡೆದಿರುವ ರಾಜ್ಯಗಳೂ ಇವೆ. ಟೈಮ್ಸ್ ನಿಯತಕಾಲಿಕೆಯು ಪಟ್ಟಿ ಮಾಡಿರುವ ವಿಶ್ವದ ಶ್ರೇಷ್ಠ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕೇರಳ ಹಾಗೂ ಗುಜರಾತ್‌ನ ಅಹ್ಮದಾಬಾದ್ ಸ್ಥಾನ ಪಡೆದಿವೆ. ಕೇರಳದಲ್ಲಿ ಪ್ರವಾಸೋದ್ಯಮ ಉಚ್ಛಾಯ ಮಟ್ಟಕ್ಕೇರಿ ರುವುದನ್ನುಟೈಮ್ಸ್ ಶ್ಲಾಘಿಸಿದೆ. ಭಾರತದ ಅತ್ಯಂತ ಸುಂದರವಾದ ರಾಜ್ಯಗಳಲ್ಲಿ ಕೇರಳವೂ ಒಂದಾಗಿದೆ, ಅದು ಮೋಟಾರ್ ಹೋಮ್ ಟೂರಿಸಂನ ತವರಾಗಿದೆ ಎಂದು ಹೇಳಿದೆ.
ಪ್ರವಾಸಿಗರ ಸ್ವರ್ಗ ಕೇರಳ
ಕಳೆದೆರಡು ವರ್ಷಗಳಿಂದ ಕೋವಿಡ್ ಸೋಂಕು (Covid virus) ಹರಡುವಿಕೆ, ಕರ್ಫ್ಯೂ, ಲಾಕ್‌ಡೌನ್‌ನಿಂದ ಪ್ರವಾಸೋದ್ಯಮಕ್ಕೆ (Tourism) ತೀವ್ರವಾದ ಹೊಡೆತ ಬಿದ್ದಿತ್ತು. ಸದ್ಯ ಜನಜೀವನ ಸಹಜಸ್ಥಿತಿಗೆ ಮರಳಿರುವುದರ ಜೊತೆಗೆ ಟೂರಿಸಂ ಕೂಡಾ ಚೇತರಿಸಿಕೊಂಡಿದೆ. ಕೇರಳ, ಪ್ರವಾಸಿಗರನ್ನು (Tourist) ಆಕರ್ಷಿಸಲು ಪ್ರತಿ ವರ್ಷವೂ ಒಂದಿಲ್ಲೊಂದು ಹೊಸದಾದ, ಆಕರ್ಷಣೀಯ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಈ ವರ್ಷ, ಮೊಟ್ಟಮೊದಲ ಬಾರಿಗೆ ಕಾರವಾನ್ ಮಿಡೋಸ್ ಪಾರ್ಕ್ ನಿರ್ಮಾಣ ಮಾಡಲಾಗಿದೆ. ರಾಜ್ಯದ ಮೊದಲ ಕಾರವಾನ್ ಪಾರ್ಕ್ ವಾಗಮೋನ್‌ನಲ್ಲಿ ಪ್ರಾರಂಭವಾಗುವುದರಿಂದ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರ ಮತ್ತಷ್ಟು ಚೇತರಿಸಿಕೊಂಡಿದೆ.
ಕೇರಳ ಟ್ರಿಪ್ ಹೋಗೋ ಪ್ಲ್ಯಾನ್ ಇದ್ಯಾ? ಮುನ್ನಾರ್‌ನಲ್ಲಿ ಈ ಪ್ಲೇಸ್ ನೋಡಲು ಮರೀಬೇಡಿ!
ಕಾರವಾನ್ ಪಾರ್ಕ್‌ನ ಪ್ರಮುಖ ವೈಶಿಷ್ಟ್ಯವೆಂದರೆ ಕಾರವಾನ್‌ನಲ್ಲಿ ಪ್ರಯಾಣಿಸುವಾಗ ಬೆಟ್ಟಗಳು, ಕಾಡು, ಹಿನ್ನೀರು ಮತ್ತು ನದಿಗಳು ಸೇರಿದಂತೆ ಸುಂದರವಾದ ದೃಶ್ಯಾವಳಿಗಳನ್ನು ನೋಡಬಹುದು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಾರಂಭವಾದ ಯೋಜನೆಗೆ ಖಾಸಗಿ ಏಜೆನ್ಸಿಗಳಿಂದ 303 ಕಾರವಾನ್‌ಗಳಿಗೆ 154 ಅರ್ಜಿಗಳು ಬಂದಿದ್ದವು. ಹವಾನಿಯಂತ್ರಿತ ಪ್ರದೇಶ, ಸಂಪೂರ್ಣ ಸಂರಕ್ಷಿತ ಆಸನಗಳು, ಇನ್ಫೋಟೈನ್‌ಮೆಂಟ್ ವ್ಯವಸ್ಥೆ, ಎಲ್ಲಾ ಸೌಲಭ್ಯಗಳೊಂದಿಗೆ ಅಡುಗೆಮನೆ, ಸ್ನಾನದ ಸ್ನಾನಗೃಹ ಮತ್ತು ವಿಶಾಲವಾದ ಮಲಗುವ ಕೋಣೆಗಳು ಕಾರವಾನ್‌ನ ವೈಶಿಷ್ಟ್ಯಗಳಾಗಿವೆ.
ಕಾರವನ್ ಕೇರಳ ಯೋಜನೆಯಲ್ಲಿ ಕೃಷಿ, ಒಳನಾಡು ಮೀನುಗಾರಿಕೆ, ಸಾಂಪ್ರದಾಯಿಕ ಕೈಗಾರಿಕೆಗಳು, ಕರಕುಶಲ ವಲಯ ಮತ್ತು ಸೂಕ್ಷ್ಮ ಉದ್ಯಮಗಳು ಪ್ರಾಮುಖ್ಯತೆಯನ್ನು ಪಡೆದಿವೆ.. ಕಲಾವಿದರು, ಕುಶಲಕರ್ಮಿಗಳು ಮತ್ತು ಕುಟುಂಬಶ್ರೀ ಮಿಷನ್ ಕೂಡ ಈ ಯೋಜನೆಯ ಭಾಗವಾಗಿದ್ದಾರೆ..
ವಿಶ್ವ ಪಾರಂಪರಿಕ ನಗರ ಅಹಮದಾಬಾದ್
ಅಹ್ಮದಾಬಾದ್ ಯುನೆಸ್ಕೋದಿಂದ ಅನುಮೋದಿಸಲ್ಪಟ್ಟ ಭಾರತದ ಮೊಟ್ಟಮೊದಲ ವಿಶ್ವ ಪಾರಂಪರಿಕ ನಗರವಾಗಿದೆ. ಅಹ್ಮದಾಬಾದ್‌ನಲ್ಲಿ ಗಾಂಧಿ ಆಶ್ರಮ, ಸೈನ್ಸ್ ಸಿಟಿ ತುಂಬಾ ಪ್ರಮುಖವಾದವು. ಸೈನ್ಸ್ ಸಿಟಿಯಲ್ಲಿರುವ ವಿಶ್ವದ ಬೃಹತ್ ಅಂಡರ್‌ವಾಟರ್ ಅಕ್ವೇರಿಯಂ, ರೋಬೋಟ್ ಗ್ಯಾಲರಿಗಳು ಆಕರ್ಷಣೀಯ ಎಂದು ವರ್ಣಿಸಲಾಗಿದೆ.
ದೇವರನಾಡಿನ ದೇವಿಕುಲಂನಲ್ಲಿದೆ ಸೀತೆ ಸ್ನಾನ ಮಾಡಿದ ಸರೋವರ
ಈ ಹಿಂದಿನ ಗುಜರಾತ್ ರಾಜಧಾನಿ ಅಹ್ಮದಾಬಾದ್ ನಗರವನ್ನು ಪ್ರತಿಷ್ಟಿತ ವಿಶ್ವ ಪರಂಪರೆ ನಗರಗಳ ಪಟ್ಟಿಗೆ ಸೇರಿಸಲಾಗಿತ್ತು.
ವಿಶ್ವಸಂಸ್ಥೆಯ ವಿಶ್ವ ಸಾಂಸ್ಕ್ರತಿಕ ಸಂಸ್ಥೆ ಯುನೆಸ್ಕೋ, ಪೊಲ್ಯಾಂಡ್ ನ ಕಾರ್ಲೋದಲ್ಲಿ ನಡೆದ ಯುನೆಸ್ಕೋದ ವಿಶ್ವ ಪರಂಪರೆ ಸಮಿತಿ ಸಭೆಯಲ್ಲಿ ಇದನ್ನು ಘೋಷಣೆ ಮಾಡಿತ್ತು. 2010ರಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಅಹ್ಮದಾಬಾದ್ ಅನ್ನು ವಿಶ್ವ ಪಾರಂಪರಿಕ ನಗರಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಪ್ರಸ್ತಾವನೆ ಕಳುಹಿಸಿದ್ದರು. ಸುದೀರ್ಘ ಸಭೆ ಮತ್ತು ಚರ್ಚೆಗಳ ಬಳಿಕ ಕೊನೆಗೂ ಅಹ್ಮದಾಬಾದ್ ಅನ್ನು ವಿಶ್ವ ಪರಂಪರೆ ನಗರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿತ್ತು.
ವಿಶ್ವ ಪರಂಪರೆ ನಗರಗಳ ಪಟ್ಟಿಯಲ್ಲಿ ಈಗಾಗಲೇ ಪ್ಯಾರಿಸ್, ವಿಯೆನ್ನಾ, ಕೈರೋ, ಬ್ರಸೆಲ್ಸ್, ರೋಮ್ ಮತ್ತು ಎಡಿನ್ಬರ್ಗ್ ನಗರಗಳಿದ್ದು, ಗುಜರಾತ್ ನ ಐತಿಹಾಸಿಕ ಗೋಡೆ ನಗರಿ ಕೂಡ ಸೇರ್ಪಡೆಯಾಗಿರುವುದು ಎಲ್ಲರಿಗೂ ಹೆಮ್ಮೆಯನ್ನುಂಟು ಮಾಡಿತ್ತು. ನೇಪಾಳದ ಭಕ್ತಪುರ ಮತ್ತು ಶ್ರೀಲಂಕಾದ ಗಾಲೆ ಕೂಡ ವಿಶ್ವಪರಂಪರೆ ನಗರಗಳ ಪಟ್ಟಿಗೆ ಸೇರ್ಪಡೆಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.