ಪ್ರವಾಸಿ ತಾಣದಲ್ಲಿ ಆಫೀಸ್ ಕೆಲಸ, ಕೊರೊನಾ ನಂತ್ರ ಬದಲಾಗಿದೆ ಟ್ರೆಂಡ್

By Roopa HegdeFirst Published Jul 13, 2022, 6:15 PM IST
Highlights

ವರ್ಕ್ ಫ್ರಂ ಹೋಮ್ ಅಂದ್ರೆ ಮನೆಯಲ್ಲೇ ಕುಳಿತು ಕೆಲಸ ಮಾಡ್ಬೇಕಾಗಿಲ್ಲ. ಈ ಸತ್ಯವನ್ನು ಅರಿತ ಅನೇಕ ಯುವಜನರು ತಮ್ಮಿಷ್ಟದ ಪ್ರವಾಸಿ ತಾಣದಲ್ಲಿ ಕೆಲಸ ಮಾಡಿದ್ದಾರೆ. ಪ್ರಕೃತಿ ಸೌಂದರ್ಯ ಎಂಜಾಯ್ ಮಾಡ್ತಾ ಕಚೇರಿ ಕೆಲಸ ಪೂರ್ಣಗೊಳಿಸಿದ್ದಾರೆ.  
 

ಕೊರೊನಾ ಸಮಯದಲ್ಲಿ ವರ್ಕ್ ಫ್ರಂ ಹೋಮ್ ಗೆ ಹೆಚ್ಚು ಮಹತ್ವ ಬಂದಿತ್ತು. ಲಾಕ್ ಡೌನ್ ಹಾಗೂ ಕೊರೊನಾ ಸಮಯದಲ್ಲಿ ಬಹುತೇಕ ಎಲ್ಲ ಕಂಪನಿಗಳು ವರ್ಕ್ ಫ್ರಂ ಹೋಮ್ ಗೆ ಆದ್ಯತೆ ನೀಡಿದ್ದವು. ಕೊರೊನಾ ನಿಯಂತ್ರಣಕ್ಕೆ ಬರ್ತಿದ್ದಂತೆ ಕೆಲ ಕಂಪನಿಗಳು ವರ್ಕ್ ಫ್ರಂ ಹೋಮ್ ಮುಂದುವರೆಸಿದ್ರೆ ಮತ್ತೆ ಬಹುತೇಕ ಕಂಪನಿಗಳು ಕಚೇರಿಯಲ್ಲಿ ಕೆಲಸ ಶುರು ಮಾಡಿವೆ. ಆದ್ರೆ ಕೊರೊನಾ, ಕೆಲಸ ಮಾಡುವ ಟ್ರೆಂಡ್ ಬದಲಿಸಿದೆ. ಮನೆಯಲ್ಲಿ ಕೆಲಸ ಮಾಡುವ ಜನರು ಕೆಲಸದ ಜೊತೆಗೆ ರಜೆ ಚಟುವಟಿಕೆ ಎಂಜಾಯ್ ಮಾಡಿದ್ದಾರೆ. ಇದೇ  ಪ್ರವೃತ್ತಿ ಈಗಲೂ ಮುಂದುವರೆದಿದೆ. ಪ್ರಯಾಣದಲ್ಲಿ ಆಸಕ್ತಿಯಿರುವ ಜನರು, ಮನೆಯಲ್ಲಿ ಕೆಲಸ ಮಾಡುವ ಬದಲು ಪ್ರಯಾಣ ಮಾಡ್ತಾ ಕೆಲಸ ಮಾಡ್ತಿದ್ದಾರೆ. ತಮ್ಮ ನೆಚ್ಚಿನ ಸ್ಥಳಗಳಲ್ಲಿ ಕೆಲಸ ಮಾಡಲು ಮುಂದಾಗ್ತಿದ್ದಾರೆ. ನಾಲ್ಕು ಗೋಡೆ ಮಧ್ಯೆ ಕುಳಿತು ಕೆಲಸ ಮಾಡುವುದನ್ನು ಅವರು ಇಷ್ಟಪಡ್ತಿಲ್ಲ. ಪ್ರಕೃತಿಯ ಮಡಿಲಲ್ಲಿ ಕೆಲಸದ ಜೊತೆ ಸುಂದರ ಸಮಯ ಕಳೆಯುವ ಅವಕಾಶವೂ ಅವರಿಗೆ ಸಿಕ್ಕಿದೆ. ಪ್ರವಾಸಿ ಸ್ಥಳಗಳ ಅಭಿವೃದ್ಧಿಯಾದ್ರೆ ವೃತ್ತಿಪರರನ್ನು ಆಕರ್ಷಿಸುವುದು ಸುಲಭವಾಗುತ್ತದೆ. ಹಾಗಾಗಿ ಪ್ರವಾಸಿಗರನ್ನು ಆಕರ್ಷಿಸುವ ಮತ್ತು ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ FICCI ಸಹಯೋಗದೊಂದಿಗೆ ನಂಗಿಯಾ ಆಂಡರ್ಸನ್ ಎಲ್ ಎಲ್ ಪಿ ವರದಿಯನ್ನು ಸಿದ್ಧಪಡಿಸಿದೆ. ಆ ವರದಿಯಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕೆಲ ಸಲಹೆಗಳನ್ನು ಸರ್ಕಾರಕ್ಕೆ ನೀಡಲಾಗಿದೆ.  

ಕೊರೊನಾ ನಂತ್ರ ಹುಟ್ಟಿಕೊಂಡ್ತು ಬ್ಲೇಜರ್ ಟ್ರಾವೆಲ್ ಎಂಬ ಹೊಸ ಪರ : ಎಫ್ ಐಸಿಸಿಐ ಸಹಯೋಗದೊಂದಿಗೆ ನಂಗಿಯಾ ಆಂಡರ್ಸನ್ ಎಲ್‌ಎಲ್‌ಪಿ `ರೀಬಿಲ್ಡಿಂಗ್ ಟೂರಿಸಂ ಫಾರ್ ದಿ ಫ್ಯೂಚರ್ 2022’ ಹೆಸರಿನ ವರದಿಯನ್ನು ಸಿದ್ಧಪಡಿಸಿದೆ. ಈ ವರದಿ ಪ್ರಕಾರ, ಪ್ರವಾಸಿ ತಾಣಗಳಲ್ಲಿ ಕೆಲಸ ಮಾಡುವ ಪದ್ಧತಿಗೆ ಹೊಸ ಹೆಸರು ಬಂದಿದೆ. ಕೋವಿಡ್ ಸಾಂಕ್ರಾಮಿಕದ ನಂತರ ಬ್ಲೇಜರ್ ಟ್ರಾವೆಲ್ ಎಂಬ ಹೊಸ ಪದ ಸೃಷ್ಟಿಯಾಗಿದೆ. ಪ್ರವಾಸಿ ತಾಣಗಳಲ್ಲಿ ಕೆಲಸ ಮಾಡುವ ಜನರು ಹೊಸ ಹೊಸ ಪ್ರವಾಸಿ ತಾಣಗಳ ಹುಡುಕಾಟ ನಡೆಸುತ್ತಾರೆ.  ರಜಾ ದಿನದ ಚಟುವಟಿಕೆಗಳನ್ನು ವೃತ್ತಿ ಚಟುವಟಿಕೆಗಳೊಂದಿಗೆ ಅವರು ಮಿಕ್ಸ್ ಮಾಡ್ತಿದ್ದಾರೆ. ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಹೊಂದಿದ್ದ ಯುವ ವೃತ್ತಿಪರರು ಹೆಚ್ಚಾಗಿ ಬ್ಲೇಜರ್ ಟ್ರಾವೆಲ್ ಆಯ್ಕೆ ಮಾಡಿಕೊಳ್ತಿದ್ದಾರೆ. ಅವರು ಪ್ರವಾಸಿ ತಾಣಗಳಲ್ಲಿ, ಪ್ರಕೃತಿ ಸೌಂದರ್ಯ ಸವಿಯುತ್ತ ಕೆಲಸ ಮಾಡಲು ಹೆಚ್ಚಿನ ಒತ್ತು ನೀಡ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. 

ರೈಲಿನಲ್ಲಿ ಪ್ರಯಾಣಿಸ್ತೀರಾ ? ಪ್ಯಾಸೆಂಜರ್ ಫ್ರೆಂಡ್ಲೀ ನಿಯಮಗಳ ಬಗ್ಗೆ ಗೊತ್ತಿರಲಿ

ಪ್ರವಾಸೋದ್ಯಮ ಪ್ರೋತ್ಸಾಹಕ್ಕೆ ಒತ್ತು : ರೀಬಿಲ್ಡಿಂಗ್ ಟೂರಿಸಂ ಫಾರ್ ದಿ ಫ್ಯೂಚರ್ 2022ರ ವರದಿಯಲ್ಲಿ, ಶ್ರೀಮಂತ ಪ್ರವಾಸಿಗರನ್ನು ಆಕರ್ಷಿಸಲು  ಉನ್ನತ ದರ್ಜೆಯ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸರ್ಕಾರ ಹಣ ವಿನಿಯೋಗಿಸಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, ಪ್ರವಾಸೋದ್ಯಮ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು ಭಾರತವು ವ್ಯಾಪಾರ ಕಾರ್ಯಕ್ರಮಗಳನ್ನು ಆಯೋಜಿಸಲು ಒತ್ತಾಯಿಸಬೇಕು ಎಂದು ವರದಿ ಹೇಳಿದೆ.

ಮೇಲ್ಮುಖವಾಗಿ ಚಲಿಸುವ ನೀರು... ನಾನೆಘಾಟ್ ಜಲಾಶಯದ ಅದ್ಭುತ ದೃಶ್ಯಕಾವ್ಯ

ತಂತ್ರಜ್ಞಾನದ ಬಳಕೆ : ಪ್ರಯಾಣಿಕರು ಮತ್ತು ಸ್ಥಳೀಯ ಪ್ರವಾಸಿಗರು ಉತ್ತಮ ಅನುಭವಕ್ಕಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ.   ವರ್ಚುವಲ್ ಅನುಭವಕ್ಕಾಗಿ ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ  ಸಾಧನಗಳು ಮತ್ತು ಮೆಟಾವರ್ಸ್‌ಗಳು ವ್ಯಾಪಕವಾಗಿ ಬಳಕೆಗೆ ಬರುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ. ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸಲು, ಭಾರತವು ವ್ಯಾಪಾರ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ಉನ್ನತ ಮಟ್ಟದ ಪ್ರವಾಸೋದ್ಯಮವನ್ನು ಉತ್ತೇಜಿಸಬೇಕು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ. ಬ್ಲೇಜರ್ ಟ್ರಾವೆಲ್, ಪ್ರವಾಸಿ ಕ್ಷೇತ್ರಗಳಲ್ಲಿ ಹೆಚ್ಚಾಗಿ ಕಂಡು ಬರ್ತಿದ್ದು, ಅದಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗ್ಬೇಕೆಂದ್ರೆ ಪ್ರವಾಸಿ ಕ್ಷೇತ್ರಗಳು ಅಭಿವೃದ್ಧಿಯಾಗ್ಬೇಕಿದೆ. 

click me!