ಹಿಮಾಲಯದ ತಪ್ಪಲಲ್ಲಿ ವರ್ಕ್ ಫ್ರಂ ಹೋಮ್; ಹೀಗೊಂದು ಕ್ವಾರಂಟೈನ್ ಟೂರ್

By Suvarna News  |  First Published Jul 14, 2020, 7:37 PM IST

ಹಿಮಚ್ಛಾದಿತ ಬೆಟ್ಟಗುಡ್ಡ ನೋಡುತ್ತ, ಪ್ರಕೃತಿಯ ಮಡಿಲಲ್ಲಿ ಕೂತು ಲ್ಯಾಪ್‍ಟಾಪ್ ಹಿಡಿದು ಆಫೀಸ್ ಕೆಲ್ಸ ಮಾಡುವ ಸುಖವನ್ನು ಯಾರು ತಾನೇ ಬೇಡ ಎನ್ನುತ್ತಾರೆ ಹೇಳಿ? ಇಂಥದೊಂದು ಅವಕಾಶವನ್ನು ಉತ್ತರಾಖಂಡ್ ಹಾಗೂ ಹಿಮಾಚಲ ಪ್ರದೇಶದ ಸರ್ಕಾರಗಳು ಪ್ರವಾಸಿಗರಿಗೆ ನೀಡಿವೆ.


ಕೊರೋನಾ ಕಾರಣಕ್ಕೆ ಮನೆಯೇ ಕಚೇರಿ,ಶಾಲೆಯಾಗಿ ಮಾರ್ಪಟಾಗಿದೆ. ಈಗ ಮನೆಮಂದಿಯೆಲ್ಲ ಒಟ್ಟಿಗಿರಲು ಅವಕಾಶ ಸಿಕ್ಕಿದೆ.ಆದ್ರೆ ಎಲ್ಲದ್ರೂ ಸುತ್ತಾಡಿಕೊಂಡು ಬರೋಣ ಅಂದ್ರೆ ಕೊರೋನಾ ಭಯ, ಲಾಕ್‍ಡೌನ್ ನಿಯಮಗಳು ಅಡ್ಡಿ ತರುತ್ತಿವೆ. ಟ್ರಾವೆಲಿಂಗ್ ಅನ್ನೋದು ಇನ್ನು ಸ್ವಲ್ಪ ಕಾಲ ಕನಸೇ ಸರಿ. ಆದ್ರೆ ಇಂಥ ಹೊತ್ತಲ್ಲೇ ಗಿರಿಶಿಖರಗಳ ರಾಜ್ಯಗಳಾದ ಉತ್ತರಾಖಂಡ್ ಹಾಗೂ ಹಿಮಾಚಲ ಪ್ರದೇಶ ಹೊಸ ಮಾದರಿಯ ಪ್ರವಾಸೋದ್ಯಮಕ್ಕೆ ನಾಂದಿ ಹಾಡಿವೆ.ಅರೇ, ಕೊರೋನಾ ಹೊತ್ತಲ್ಲಿ ಇವೆಲ್ಲ ಬೇಕಾ ಎಂಬ ಪ್ರಶ್ನೆ ಮೂಡಬಹುದು. ಆದ್ರೆ ಈ ಹೊಸ ಮಾದರಿಯ ಟೂರಿಸ್‍ಂನಲ್ಲಿ ನೀವು ಗಿರಿಧಾಮಗಳಿಗೆ ತೆರಳಿ ಅಲ್ಲಿಯೇ ಕೆಲವು ದಿನಗಳ ಕಾಲ ಹೋಟೆಲ್ ಅಥವಾ ರೆಸಾರ್ಟ್‍ನಲ್ಲಿ ತಂಗಬಹುದೇ ಹೊರತು ಹೊರಗಡೆ ಬೇಕಾಬಿಟ್ಟಿ ಸುತ್ತಾಟ ನಡೆಸುವ ಹಾಗಿಲ್ಲ.ಇದೊಂಥರ ಕ್ವಾರಂಟೈನ್ ಟೂರಿಸ್‍ಂ. ಮನೆಯಲ್ಲೇ ಕುಳಿತು ಆಫೀಸ್ ಕೆಲ್ಸ್ ಮಾಡಿ ಬೇಸತ್ತವರಿಗೆ, ಹೊಸತನ ಬೇಕೆನ್ನುವವರಿಗೆ ಹಿಮಾಚ್ಛಾದಿತ ಗಿರಿಧಾಮಗಳಲ್ಲಿ ಸ್ವಲ್ಪ ದಿನಗಳ ಕಾಲ ನೆಲೆ ನಿಂತು ಅಲ್ಲೇ ಆಫೀಸ್ ಕೆಲ್ಸ ಮಾಡೋ ಅವಕಾಶ. ಈ ಕ್ವಾರಂಟೈನ್ ಟೂರ್‍ಗೆ ಹೋಗಬೇಕೆಂದ್ರೆ ನಿಮ್ಮ ಹಾಗೂ ನಿಮ್ಮೊಂದಿಗೆ ಬರುವ ಕುಟುಂಬ ಸದಸ್ಯರ ಬಳಿ ಕೋವಿಡ್-19 ನೆಗೆಟಿವ್ ಸರ್ಟಿಫಿಕೇಟ್ ಇರೋದು ಮಸ್ಟ್. ಹಾಗಿದ್ರೆ ಮಾತ್ರ ಉತ್ತರಾಖಂಡ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳ ಗಡಿಯೊಳಗೆ ಎಂಟ್ರಿ. 

ಭಾರತವಲ್ಲ ಈ ದೇಶದಲ್ಲಿದೆ ವಿಶ್ವದ ಅತಿ ದೊಡ್ಡ ಹಿಂದೂ ದೇವಸ್ಥಾನ!

Tap to resize

Latest Videos

ಏನಿದು ವರ್ಕ್ ಅಟ್ ಹಿಲ್ ಸ್ಟೇಷನ್?
ಹಿಮಚ್ಛಾದಿತ ಬೆಟ್ಟಗುಡ್ಡ ನೋಡುತ್ತ, ಪ್ರಕೃತಿಯ ಮಡಿಲಲ್ಲಿ ಕೂತು ಲ್ಯಾಪ್‍ಟಾಪ್ ಹಿಡಿದು ಆಫೀಸ್ ಕೆಲ್ಸ ಮಾಡುವ ಸುಖವನ್ನು ಯಾರು ತಾನೇ ಬೇಡ ಎನ್ನುತ್ತಾರೆ ಹೇಳಿ? ಅದೆಷ್ಟೇ ವರ್ಕ್‍ಫ್ರೆಶರ್ ಇದ್ರೂ ಪ್ರಕೃತಿ ಮಡಿಲಿಗೆ ಅದನ್ನೆಲ್ಲ ಮರೆಸಿ ಬಿಡುವ ಶಕ್ತಿಯಿದೆ. ಕಳೆದ 3-4 ತಿಂಗಳಿಂದ ಮನೆಯೊಳಗೇ ಕೂತು ಬೇಸತ್ತ ಮನಸ್ಸುಗಳಿಗೆ ಇಂಥ ತಾಣಗಳಲ್ಲಿ ಕುಳಿತು ಕೆಲ್ಸ ಮಾಡೋದ್ರಿಂದ ಮೈಂಡ್ ಫ್ರೆಶ್ ಆಗುವ ಜೊತೆ ಖುಷಿಯಿಂದ ಕೆಲ್ಸ ಮಾಡಲು ಸಾಧ್ಯವಾಗುತ್ತೆ. ಇದನ್ನೇ ಬಂಡವಾಳ ಮಾಡಿಕೊಂಡು ಸಂಪೂರ್ಣವಾಗಿ ನಿಂತಿರುವ ಪ್ರವಾಸೋದ್ಯಮಕ್ಕೆ ಚೇತರಿಕೆ ನೀಡಲು ಉತ್ತರಾಖಂಡ್ ಹಾಗೂ ಹಿಮಾಚಲ ಪ್ರದೇಶದ ರಾಜ್ಯ ಸರ್ಕಾರಗಳು ಮುಂದಾಗಿವೆ. 

ಮಹಾರಾಷ್ಟ್ರದ ಈ ಕೆರೆ ರಾತ್ರೋರಾತ್ರಿ ಗುಲಾಬಿ ಬಣ್ಣಕ್ಕೆ ತಿರುಗಿದ್ದೇಕೆ?!

ಕ್ವಾರಂಟೈನ್ ಟೂರಿಸ್‍ಂ ಪ್ಯಾಕೇಜ್
ಉತ್ತರಾಖಂಡ್ ಹಾಗೂ ಹಿಮಾಚಲ ಪ್ರದೇಶ ಅನೇಕ ಆಕರ್ಷಕ ಪ್ರವಾಸಿ ತಾಣಗಳ ತವರೂರು. ಹಿಮಾಲಯದ ತಪ್ಪಲಿನ ಈ ರಾಜ್ಯಗಳ ಸೊಬಗು ನೋಡಲು ದೇಶ-ವಿದೇಶಗಳಿಂದ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ.ಈ ರಾಜ್ಯಗಳಿಗೆ ಪ್ರವಾಸೋದ್ಯಮದಿಂದ ದೊಡ್ಡ ಆದಾಯವೇ ಬರುತ್ತದೆ. ಈ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಆದ್ರೆ ಕೊರೋನಾ ಇವರೆಲ್ಲರಿಗೂ ದೊಡ್ಡ ಹೊಡೆತ ನೀಡಿದೆ. ಅದ್ರಲ್ಲೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಹೋಟೆಲ್, ಲಾಡ್ಜ್, ಹೋಂ ಸ್ಟೇಗಳು ಖಾಲಿ ಹೊಡೆಯುತ್ತಿವೆ.ಈ ಹಿನ್ನೆಲೆಯಲ್ಲಿ ‘ಕ್ವಾರಂಟೈನ್ ಟೂರಿಸ್‍ಂ’ ಎಂಬ ಹೊಸ ಯೋಚನೆಯೊಂದಿಗೆ ಈಗಾಗಲೇ ಇಲ್ಲಿನ ಕೆಲವು ಹೋಟೆಲ್‍ಗಳು ಕಾರ್ಯಾರಂಭಿಸಿವೆ. ಕೆಲವೊಂದು ರೆಸಾರ್ಟ್, ಹೋಂ ಸ್ಟೇಗಳಲ್ಲಿ ರೂಮ್‍ಗಳನ್ನು ತಿಂಗಳಿಗೆ ಇಂತಿಷ್ಟು ಬಾಡಿಗೆ ಆಧಾರದಲ್ಲಿ ಪ್ರವಾಸಿಗರಿಗೆ ತಂಗಲು ನೀಡಲಾಗುತ್ತಿದೆ. ಸ್ಟಡಿ ಟೇಬಲ್, ಉತ್ತಮ ವೈಫೈ ಕನೆಕ್ಷನ್ ಹಾಗೂ ಸುಸಜ್ಜಿತ ಕಿಚನ್‍ಗಳನ್ನೊಳಗೊಂಡ ಹೋಂ ಸ್ಟೇಗಳಿಗೆ ಬೇಡಿಕೆ ಹೆಚ್ಚುತ್ತಿದೆ. 15, 21 ಹಾಗೂ 30 ದಿನಗಳ ಪ್ಯಾಕೇಜ್‍ಗಳನ್ನು ಡಿಸ್ಕೌಂಟ್ ದರದಲ್ಲಿ ನೀಡಲಾಗುತ್ತಿದೆ. ಕೆಲವು ಕಂಪನಿಗಳು ಕೂಡ ತಮ್ಮ ಉದ್ಯೋಗಿಗಳನ್ನು ಕುಟುಂಬ ಸಮೇತರಾಗಿ ಹಿಲ್ ಸ್ಟೇಷನ್‍ಗಳಿಗೆ ಕಳುಹಿಸುತ್ತಿವೆ. ಈ ಮೂಲಕ ವರ್ಕ್ ಹಾಗೂ ಫ್ಯಾಮಿಲಿ ಲೈಫ್ ಎರಡನ್ನೂ ಒಟ್ಟಿಗೆ ಎಂಜಾಯ ಮಾಡಲು ಅವಕಾಶ ಕಲ್ಪಿಸುತ್ತಿವೆ. 

ಪ್ರವಾಸ ಮಿಸ್ ಮಾಡ್ಕೋತಿದೀರಾ? ಸದ್ಯಕ್ಕೆ ಹೀಗ್ ಮಾಡಿ

ಕೋವಿಡ್ ನೆಗೆಟಿವ್ ರಿಪೋರ್ಟ್ ಮಸ್ಟ್
ಪ್ರವಾಸಿ ತಾಣಗಳಲ್ಲಿ ತಂಗಿ ಕೆಲಸ ಮಾಡಲು ಬಯಸುವ ಪ್ರವಾಸಿಗರಿಗೆ ಉತ್ತರಾಖಂಡ್ ಹಾಗೂ ಹಿಮಾಚಲ ಪ್ರದೇಶ ಸರ್ಕಾರಗಳು ಈ ತಿಂಗಳಾರಂಭದಿಂದ ಗಡಿ ಮುಕ್ತಗೊಳಿಸಿವೆ.ಇಲ್ಲಿಗೆ ಭೇಟಿ ನೀಡಬಯಸುವ ಪ್ರವಾಸಿಗರು ಕಡ್ಡಾಯವಾಗಿ ಐಸಿಎಂಆರ್ ಅಂಗೀಕೃತ ಲ್ಯಾಬೋರೇಟರಿಯಿಂದ ಕೋವಿಡ್ -19 ನೆಗೆಟಿವ್ ರಿಪೋರ್ಟ್ ತರಬೇಕು. ಗಡಿ ಪ್ರವೇಶ ಬಯಸುವ 3 ದಿನ (72 ಗಂಟೆ) ಗಳೊಳಗೆ ಕೋವಿಡ್ -19 ಟೆಸ್ಟ್ ಮಾಡಿಸಿರಬೇಕು. 
ಉತ್ತರಾಖಂಡ್ ಹೋಟೆಲ್ ಮಾಲೀಕರ ಅಸೋಸಿಯೇಷನ್ ಅಂದಾಜಿನ ಪ್ರಕಾರ ವಿವಿಧ ರಾಜ್ಯಗಳಿಂದ 8 ಸಾವಿರಕ್ಕೂ ಅಧಿಕ ಪ್ರವಾಸಿಗರು ಕಳೆದ ಒಂದು ವಾರದಲ್ಲಿ ಅಲ್ಲಿನ ಪ್ರವಾಸಿ ತಾಣಗಳಿಗೆ ಬಂದು ತಂಗಿದ್ದಾರೆ. ಇನ್ನು ಹಿಮಾಚಲ ಪ್ರದೇಶದ ಹೋಟೆಲ್ ಮಾಲೀಕರ ಅಸೋಸಿಯೇಷನ್ ಅಂದಾಜಿನ ಪ್ರಕಾರ ಸುಮಾರು 6,500 ಪ್ರವಾಸಿಗರು ಹಿಮಾಚಲ ಪ್ರದೇಶಕ್ಕೆ ಆಗಮಿಸಿದ್ದಾರೆ.

click me!