ಭಾರತವಲ್ಲ ಈ ದೇಶದಲ್ಲಿದೆ ವಿಶ್ವದ ಅತಿ ದೊಡ್ಡ ಹಿಂದೂ ದೇವಸ್ಥಾನ!
ವಿಶ್ವಾದ್ಯಂತ ಕೊರೋನಾ ವೈರಸ್ ಆತಂಕ ಸೃಷ್ಟಿಸಿದೆ. ಈ ಮಹಾಮಾರಿಯ ದಾಳಿ ಕಂಡು ಮಂದಿರ, ಮಸೀದಿ ಹಾಗೂ ಸಾರ್ವಜನಿಕ ಸ್ಥಳಗಳನ್ನು ಬಂದ್ ಮಾಡಲಾಗಿದೆ. ಆದರೀಗ ಕೊರೋನಾ ನಡುವೆ ದೇವಸ್ಥಾನ, ಮಂದಿರಗಳನ್ನು ನಿಧಾನವಾಗಿ ತೆರೆಯಲಾಗುತ್ತಿದೆ. ಹೀಗಿರುವಾಗ ಕಾಂಬೋಡಿಯಾದ ಅಂಕೋರ್‌ವಾಟ್ ಮಂದಿರ ಕೂಡಾ ಕಳೆದ ಕೆಲ ದಿನಗಳಿಂದ ತೆರೆಯಲಾಗಿದೆ. ಇದು ವಿಶ್ವದ ಅತಿದೊಡ್ಡ ಮಂದಿರವಾಗಿದೆ. ಇನ್ನು ವಿಶ್ವದಲ್ಲೇ ಅತಿ ಹೆಚ್ಚು ಹಿಂದೂಗಳಿರುವ ರಾಷ್ಟ್ರವೆಂದರೆ ಭಾರತ, ಹಹೀಗಿದ್ದರೂ ವಿಶ್ವದ ಅತಿದೊಡ್ಡ ದೇವಸ್ಥಾನ ಭಾರತದಲ್ಲಿಲ್ಲ, ಕಾಂಬೋಡಿಯಾದಲ್ಲಿದೆ ಎಂದರೆ ವಿಚಿತ್ರವೆನಿಸುತ್ತದೆ. ಆದ್ರೆ ಈ ಮಂದಿರಕ್ಕೆ ಹಿಂದೂ ಹಾಗು ಬೌದ್ಧ ಹೀಗೆ ಎರಡೂ ಧರ್ಮದವರು ಇದನ್ನು ತಮ್ಮ ಧಾರ್ಮಿಕ ಸ್ಥಳವಾಗಿ ಪರಿಗಣಿಸುತ್ತಾರೆ. ಹೀಗಾಗೇ ಈ ಮಮದಿರಕ್ಕೆ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ.
ಅಂಕೋರ್‌ವಾಟ್ ಸ್ಥಾಪನೆಯಾದಾಗ ಹಿಂದೂ ಮಂದಿರವಾಗಿತ್ತು. ಆದರೆ ಇದಾದ ಬಳಿಕ ಬೌದ್ಧ ಧಾರ್ಮಿಕ ಸ್ಥಳವಾಗಿ ಮಾಡಲಾಯ್ತು. ಹಿಂದೂ ಹಾಗೂಬೌದ್ಧ ಧರ್ಮ ನಂಬುವವರು ಸಮಾನ ನಂಬಿಕೆ ಇಟ್ಟುಕೊಂಡಿರುವವರು.
ಈ ಮಂದಿರ ಕಂಬೋಡಿಯಾದ ರಾಜಧಾನಿ ನೋಮ್ ಪೆನ್ಹ್‌ನಿಂದ 206 ಕಿ. ಮೀ ದೂರವಿದೆ. ಇದು ವಿಶ್ವದ ಅತಿದೊಡ್ಡ ಧಾರ್ಮಿಕ ಸ್ಮಾರಕವೆನ್ನಲಾಗುತ್ತದೆ. 2019ರಲ್ಲಿ ಸುಮಾರು ಇಪ್ಪತ್ತೆರಡು ಲಕ್ಷ ಮಂದಿ ಪ್ರವಾಸಿಗರು ಇಲ್ಲಿ ಭೇಟಿ ನೀಡಿದ್ದಾರೆ.
ಕಾಂಬೋಡಿಯಾದಲ್ಲಿ ನಿರ್ಮಿಸಲಾಗಿರುವ ಈ ಮಂದಿರ ವಿಶ್ವದ ಅತಿ ದೊಡ್ಡ ಹಾಗೂ ಭವ್ಯ ಮಂದಿರವಾಗಿದೆ. ಈ ಮಂದಿರ ಅಂಕೋರ್‌ನಲ್ಲಿ ಸಿಮ್‌ರಿಪ್ ನಗರದಲ್ಲಿ ಮೀಕಾಂಗ್ ನದಿ ದಡದಲ್ಲಿ ನಿರ್ಮಿಸಲಾಗಿದೆ.
ಈ ದೇಗುಲ ಎರಡನೇ ರಾಜಾ ಸೂರ್ಯ ವರ್ಮನ್ 12ನೇ ಶತಮಾನದಲ್ಲಿ ನಿರ್ಮಿಸಿದ್ದರೆನ್ನಲಾಗುತ್ತದೆ. ಆಗ ಈ ಸ್ಥಳ ಖಮೇರ್ ಸಾಮ್ರಾಜ್ಯದ ರಾಜಧಾನಿ ಯಶೋಧರಪುರವಾಗಿತ್ತು.
ಲಭ್ಯವಾದ ಮಾಹಿತಿ ಅನ್ವಯ ಖಮೇರ್ ವಂಶದ ಶೈವ ಸಂಪ್ರದಾಯದ ಅನುಯಾಯಿಯಾಗಿದ್ದರು. ಅಂದರೆ ಅವರು ಶಿವನನ್ನು ಆರಾಧಿಸುತ್ತಿದ್ದರು. ಹೀಗಿದ್ದರೂ ರಾಜಾ ಎರಡನೇ ಸೂರ್ಯವರ್ಮನ್ ಈ ಭಗವಾನ್ ವಿಷ್ಣು ಮಂದಿರವವನ್ನು ನಿರ್ಮಿಸಿದರು.
ಇದು ವಿಷ್ಣು ಮಂದಿರವಾಗಿದ್ದು, ಸುಮಾರು 500 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಇಂಡೋನೇಷ್ಯಾ ನಿವಾಸಿ ಇದನ್ನು ನೀರಿನಲ್ಲಿ ಮುಳುಗಿದ ಮಂದಿರವೆನ್ನುತ್ತಾರೆ. ಇನ್ನು ವಾರ್ಷಿಕ ಇಲ್ಲಿ ಇಪ್ಪತ್ತು ಲಕ್ಷ ಮಂದಿ ಈ ಮಂದಿರ ವೀಕ್ಷಿಸಲೆಂದೇ ಮಂದಿರಕ್ಕೆ ಆಗಮಿಸುತ್ತಾರೆ.
ಇದು ಖಮೇರ್ ವಂಶದ ವಾಸ್ತುಶಿಲ್‌ಪ, ಶಾಸ್ತ್ರೀಯ ಶೈಲಿಯನ್ನು ಪರಿಚಯಿಸುತ್ತದೆ. ಇದನ್ನು ಮೇರು ಪರ್ವತದ ರೂಪ ಎನ್ನಲಾಗುತ್ತದೆ.
ಈ ಪರ್ವತವನ್ನು ಬ್ರಹ್ಮ ಸೇರಿ ಎಲ್ಲಾ ದೇವತೆಗಳ ಮನೆ ಎನ್ನಲಾಗುತ್ತದೆ.
ಕಂಬೋಡಿಯಾವನ್ನು ಈ ಹಿಂದೆ ಕಂಪೂಚಿಯಾ ಹೆಸರಿನಿಂದ ಕರೆಯಲಾಗುತ್ತಿತ್ತು. ಇದು ಹಿಂದೂ ಹಾಗೂ ಬೌದ್ಧ ಧರ್ಮದ ಸಾಮ್ರಾಜ್ಯವಿತ್ತು. ಖಮೇರ್ ಸಾಮ್ರಾಜ್ಯ ಇಡೀ ಏಷ್ಯಾದಲ್ಲೇ ಅಸ್ತಿತ್ವ ಹೊಂದಿತ್ತು.
ಕಂಬೋಡಿಯಾ ದಕ್ಷಿಣ ಪೂರ್ವ ಏಷ್ಯಾದಲ್ಲಿದೆ. ಇಲ್ಲಿ ಸುಮಾರು 1.5 ಕೋಟಿ ಜನಸಂಖ್ಯೆ ಇದೆ.
ಕಂಬೋಡಿಯಾ ತನ್ನ ರಾಷ್ಟ್ರೀಯ ಧ್ವಜದಲ್ಲೂ ಈ ಮಂದಿರಕ್ಕೆ ಸ್ಥಾನ ನೀಡಿದೆ. ಇದನ್ನು ಹೊರತುಪಡಿಸಿ ಅಫ್ಘಾನಿಸ್ತಾನದ ರಾಷ್ಟ್ರೀಯ ಧ್ವಜದಲ್ಲೂ ಈ ಚರಿತ್ರೆ ಇದೆ. 1992ರಲ್ಲಿ ಯುನೆಸ್ಕೋ ಈ ಮಂದಿರವನ್ನು ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಗೆ ಶಾಮೀಲು ಮಾಡಿತು.
ಕೆಲ ವಿಚಾರಗಳು ಈ ಮಂದಿರವನ್ನು ಇತರ ದೇಗುಲಗಳಿಗಿಂತ ಭಿನ್ನವವಾಗಿಸುತ್ತದೆ. ಈ ಮಂದಿರದ ಮುಖ್ಯ ದ್ವಾರ ಪಶ್ಚಿಮ ದಿಕ್ಕಿನಲ್ಲಿದೆ. ಸಾಮಾನ್ಯವಾಗಿ ಹಿಂದೂ ದೇಗುಲಗಳ ದ್ವಾರ ಪೂರ್ವ ದಿಕ್ಕಿಗಿರುತ್ತದೆ.
ಪ್ರತಿ ಮಂದಿರದಲ್ಲಿ ಸೂರ್ಯೋದಯದ ಕಿರಣ ದೇಗುಲದೊಳಗೆ ಬೀಳುತ್ತದೆ. ಆದರೆ ಇಲ್ಲಿ ಪಶ್ಚಿಮ ದಿಕ್ಕಿಗೆ ದ್ವಾರ ಇರುವುದರಿಂದ ಮುಳುಗುವ ಸೂರ್ಯ ಈ ದೇಗುಲಕ್ಕೆ ಪ್ರಣಾಮ ಮಾಡುತ್ತಾನೆ.
ಮಂದಿರದ ಗೋಡೆಗಳಲ್ಲಿ ದೇವ ದೇವತೆಗಳ ಪ್ರತಿಮೆ ಕೆತ್ತಲಾಗಿದೆ.
ಈ ದೇಗುಲದ ಗೋಡೆಗಳಲ್ಲಿ ಅಪ್ಸರೆಯರ ಶಿಲ್ಪ ಹಾಗೂ ಸಮುದ್ರ ಮಂಥನದ ದೃಶ್ಯವನ್ನೂ ಕೆತ್ತಲಾಗಿದೆ.