ಕಿಟಕಿ ನೋಡಿ ರೂಮ್ ಬುಕ್ ಮಾಡಿ ಹೋಟೆಲ್‌ಗೆ ಬಂದ ಯುವತಿ ಫುಲ್ ಶಾಕ್!

By Mahmad RafikFirst Published Aug 6, 2024, 9:25 PM IST
Highlights

ಆನ್‌ಲೈನ್‌ನಲ್ಲಿ ಯುವತಿಯೊಬ್ಬಳು ಹೋಟೆಲ್‌ವೊಂದರ ಕೋಣೆ ಬುಕ್ ಮಾಡಿದ್ದರು. ಆದ್ರೆ ಹೋಟೆಲ್‌ಗೆ ಬಂದಾಗ ಯುವತಿ ಫುಲ್ ಶಾಕ್ ಆಗಿದ್ದಾಳೆ.

ರಜಾ ದಿನಗಳು ಸಿಕ್ಕರೆ ಸಾಕು ಪ್ರವಾಸ ಮಾಡೋದು ಇಂದಿನ ಟ್ರೆಂಡ್. ಮೊದಲೆಲ್ಲಾ ರಜೆ ಸಿಕ್ಕರೆ ಮನೆಯಲ್ಲಿದ್ದು, ಕುಟುಂಬಸ್ಥರ ಜೊತೆ ಸಮಯ ಕಳೆಯುತ್ತಿದ್ದರು. ಆದ್ರೆ ಈಗ ಕಾಲ ಬದಲಾಗಿದ್ದು, ರಜೆ ಸಿಕ್ಕರೆ ಬ್ಯಾಗ್ ಪ್ಯಾಕ್ ಮಾಡ್ಕೊಂಡು ಪ್ರವಾಸಕ್ಕೆ ಹೊರಡುತ್ತಾರೆ. ಹಾಗಾಗಿಯೇ ಅಂತರ್ಜಾಲದಲ್ಲಿ ಪ್ರವಾಸ ಆಯೋಜನೆ ಮಾಡುವ ಹಲವು ವೆಬ್‌ಸೈಟ್‌ಗಳು ಸಿಗುತ್ತವೆ. ಈ ವೆಬ್‌ಸೈಟ್‌ಗಳ ಮೂಲಕವೇ ಜನರು ಪ್ರವಾಸದ ಪ್ಲಾನ್ ಮಾಡುತ್ತಾರೆ. ಇದರ ಹೊರತಾಗಿಯೂ ಆನ್‌ಲೈನ್‌ನಲ್ಲಿ ಸಿಗುವ ಸಂಖ್ಯೆಗಳಿಗೆ ಕರೆ ಮಾಡಿ ಹೋಟೆಲ್, ರೈಡ್, ಸಫಾರಿ, ಗೇಮ್, ನಿಮ್ಮ ನೆಚ್ಚಿನ ಆಹಾರವವನ್ನು ಸಹ ಮೊದಲೇ ಬುಕ್ ಮಾಡಿಕೊಳ್ಳಬಹುದಾಗಿದೆ. ಇದೇ ರೀತಿ ಆನ್‌ಲೈನ್‌ನಲ್ಲಿ ಯುವತಿಯೊಬ್ಬಳು ಹೋಟೆಲ್‌ವೊಂದರ ಕೋಣೆ ಬುಕ್ ಮಾಡಿದ್ದರು. ಆದ್ರೆ ಹೋಟೆಲ್‌ಗೆ ಬಂದಾಗ ಯುವತಿ ಫುಲ್ ಶಾಕ್ ಆಗಿದ್ದಾಳೆ.

ಹೌದು, ಈ ಬಗ್ಗೆ ಯುವತಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು, ವಿಷಯ ಹಂಚಿಕೊಂಡಿದ್ದು, ಒಳ್ಳೆದಾಯ್ತು. ಕೆಲವೊಮ್ಮೆ ಎಷ್ಟೇ ಮುಂಜಾಗ್ರತ ಕ್ರಮ ತೆಗೆದುಕೊಂಡರೂ ನಾವು ಮೋಸ ಹೋಗುತ್ತವೆ. ಆದರೆ ಇದು ಮೋಸವಲ್ಲ, ನೀವು ಮಾಡಿಕೊಂಡ ಎಡವಟ್ಟು. ಪರವಾಗಿಲ್ಲ, ಕೋಣೆಯಾದ್ರೂ ಚೆನ್ನಾಗಿತ್ತಾ ಎಂದು ಕೇಳಿದ್ದಾರೆ. ಇದೇ ರೀತಿ ಹಲವರು ಕಮೆಂಟ್ ಮಾಡಿದ್ದಾರೆ. 

Latest Videos

ಯುವತಿ ಶಾಕ್ ಆಗಿದ್ದೇಕೆ?

ನ್ಯೂಯಾರ್ಕ್ ಪೋಸ್ಟ್‌ನ ವರದಿಯ ಪ್ರಕಾರ, 28 ವರ್ಷದ ಸೋಂಜಾ ಡೆನಿಗ್ ಎಂಬವರು ತಮ್ಮ ಪ್ರವಾಸದ ವೇಳೆ ಕಿಟಕಿ ನೋಡಿ ರೂಮ್ ಬುಕ್ ಮಾಡಿದ್ದರು. ಸೋಂಜಾ ಡೆನಿಗ್ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸಹ ಆಗಿದ್ದು, ಇವರ ಪ್ರವಾಸದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಈ ಪೋಸ್ಟ್ ಸಹ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಸೋಂಜಾ ಡೆನಿಗ್ ರಜಾದಿನಗಳನ್ನು ಕಳೆಯಲು ಜರ್ಮನಿಯ ವೆಸ್ಟರ್‌ಲ್ಯಾಂಡ್‌ಗೆ ಹೋಗಬೇಕೆಂದು ಪ್ಲಾನ್ ಮಾಡಿದ್ದರು. ಹಾಗಾಗಿ ಆನ್‌ಲೈನ್‌ನಲ್ಲಿಯೇ ಇರೋ ವ್ಯವಸ್ಥೆ ಸೇರಿದಂತೆ ಎಲ್ಲವನ್ನು ಬುಕ್ ಮಾಡಿದ್ದರು. 

43 ವರ್ಷದ ಈ ವ್ಯಕ್ತಿ 1 ಸಾವಿರ ಮಕ್ಕಳ ತಂದೆ... ಈಗ ಒಂದೇ ಒಂದು ಮಗುವಾದ್ರೆ ಬೀಳಲಿದೆ 91 ಲಕ್ಷ  ದಂಡ!

ತಾವು ತೆರಳುತ್ತಿರುವ ಸ್ಥಳದಲ್ಲಿ ಸಮುದ್ರವಿದ್ದ ಕಾರಣ ಬೀಚ್‌ ವ್ಯೂವ್ ಇರೋ ಕೋಣೆ ಬುಕ್ ಮಾಡಲು ಯೋಚಿಸಿದ್ದರು. ಬುಕ್ ಮಾಡುವ ಮುನ್ನ ತಾವು ಉಳಿದುಕೊಳ್ಳುವ ಕೋಣೆಯ ಫೋಟೋಗಳನ್ನು ನೋಡಿದ್ದರು. ಅಂದುಕೊಂಡಂತೆ ಹೋಟೆಲ್‌ನಲ್ಲಿ ದೊಡ್ಡದಾದ ಕಿಟಕಿ ಇತ್ತು. ಹೊರಗೆ ಸಮುದ್ರದ ಕಿನಾರೆ ಸಹ ಕಾಣಿಸುತ್ತಿತ್ತು. ಹಾಗಾಗಿ ಅದೇ ಕೋಣೆಯನ್ನು ಬುಕ್ ಮಾಡಿದ್ದರು. ಆದ್ರೆ ಹೋಟೆಲ್‌ಗೆ ಬಂದಾಗ ಯುವತಿ ಫುಲ್ ಶಾಕ್ ಆಗಿದ್ದಳು. ಕಾರಣ ಯಾಕೆ ಬುಕ್ ಮಾಡಿದ್ದ ಹೋಟೆಲ್ ಫೋಟೋದಲ್ಲಿದ್ದಂತೆ ಇರಲಲ್ಲ. ಆದ್ರೂ ಅನಿವಾರ್ಯವಾಗಿ ಯುವತಿ  ಅಲ್ಲಿಯೇ ಉಳಿದುಕೊಳ್ಳುವಂತಾಯ್ತು.

ನೆಟ್ಟಿಗರಿಂದ ಯುವತಿಗೆ ಸಮಾಧಾನ

ಕೋಣೆಯಲ್ಲಿ ಕಿಟಕಿ ಇತ್ತು, ಆದ್ರೆ ಒಳಗಿನಿಂದ ನೋಡಿದ್ರೆ ಸಮುದ್ರ ಕಾಣಿಸುತ್ತಿರಲಿಲ್ಲ. ಕೋಣೆ ಸಂಪೂರ್ಣ ವಿಭಿನ್ನವಾಗಿತ್ತು. ಅಲ್ಲಿ ಕಿಟಕಿ ಇತ್ತು, ಆದರೆ ಸಮುದ್ರ ಕಾಣಿಸುತ್ತಿರಲಿಲ್ಲ. ಕಿಟಕಿ ಮಧ್ಯೆ ಬೀಚ್ ಇರೋ ಫೋಟೋವನ್ನು ಹಾಕಲಾಗಿತ್ತು. ಆ ಫೋಟೋವನ್ನೇ ಬೀಚ್ ವ್ಯೂವ್ ಎಂದು ತಿಳಿದು ಸೋಂಜಾ ರೂಮ್ ಬುಕ್ ಮಾಡಿದ್ದಳು. ಅದು ಸಹ ಗ್ರೌಂಡ್ ಫ್ಲೋರ್‌ನಲ್ಲಿತ್ತು ಎಂದು ಸೋಂಜಾ ಡೆನಿಗ್ ಹೇಳಿಕೊಂಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು, ಪೋಟೋ ತುಂಬಾ ನೈಜವಾಗಿ ಕಾಣಿಸಿದ್ರಿಂದ ಈ ರೀತಿ ಗೊಂದಲ ಆಗಿರಬಹುದು ಎಂದು ಸೋಂಜಾಗೆ ಸಮಾಧಾನ ಮಾಡಿದ್ದಾರೆ.

ನಾಲ್ಕು ಮಕ್ಕಳನ್ನು ಹೆತ್ತು, ಲಿಂಗ ಸಮಾನತೆ ಮೆರೆದ 21 ವರ್ಷದ ಮಹಿಳೆ

click me!