ಟಾರ್ಪಲ್‌ನಿಂದ ಮಾಡಿದ ದೇವಾಲಯ ನೋಡಿದ್ದಾರೆ. ದೇವಾಲಯದ ಸುತ್ತಲೂ ಅನೇಕ ಪ್ಲಾಸ್ಟಿಕ್ ಬಾಟೆಲ್ ಕಂಡು ಆಶ್ಚರ್ಯಚಕಿತರಾಗಿ ಸ್ಥಳದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಶ್ರೀನಗರ: ಜಮ್ಮು ಕಾಶ್ಮೀರ ಭಾರತದ ಮುಕುಟ ಶಿರಮಣಿ. ಸ್ವರ್ಗ ಹೇಗಿದೆ ಅಂತ ಗೊತ್ತಾಗಬೇಕಾದ್ರೆ ಜಮ್ಮು-ಕಾಶ್ಮೀರಗೆ ಹೋಗಿ ಅಂತ ಹೇಳುತ್ತಾರೆ. ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಜಮ್ಮು ಕಾಶ್ಮೀರದಲ್ಲಿ ಹಲವು ರಹಸ್ಯ ಸ್ಥಳಗಳಿವೆ. ಪಾಕಿಸ್ತಾನದ ಗಡಿ ಹೊಂದಿರುವ ಕಾರಣ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೈನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿರುತ್ತದೆ. ಇಂದು ನಾವು ನಿಮಗೆ ಜಮ್ಮು ಕಾಶ್ಮೀರದಲ್ಲಿರುವ ದೆವ್ವದ ಸ್ಥಳದ ಬಗ್ಗೆ ಹೇಳುತ್ತಿದ್ದೇವೆ. ಓರ್ವ ಟ್ರಾವೆಲ್ಲರ್ ಈ ಸ್ಥಳಕ್ಕೆ ಭೇಟಿ ನೀಡಿದ್ದು, ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಪುಟ್ಟ ದೇವಸ್ಥಾನದ ಮಾದರಿಯಲ್ಲಿರುವ ಕಟ್ಟಡದ ಮುಂದೆ ನೂರಾರು ನೀರಿನ ಪ್ಲಾಸ್ಟಿಕ್ ಬಾಟೆಲ್ ಬಿದ್ದಿರೋದನ್ನು ಗಮನಿಸಬಹುದು. ಯಾಕೆ ಈ ರೀತಿ ಬಾಟೆಲ್ ಎಸೆಯಲಾಗಿದೆ ಎಂಬುದರ ಮಾಹಿತಿ ಇಲ್ಲಿದೆ.
ಇಡೀ ಜಗತ್ತಿನಲ್ಲಿ ದೆವ್ವ ಇದೆಯಾ ಅಥವಾ ಇಲ್ಲವಾ ಎಂಬ ಚರ್ಚೆಗಳು ನಡೆಯುತ್ತಿರುತ್ತವೆ. ನಂಬಿಕೆ ಮತ್ತು ಆಚರಣೆಗಳು ಸಹ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತಿರುತ್ತವೆ. ಕೆಲವು ಪ್ರದೇಶಗಳು ರಹಸ್ಯವನ್ನು ತನ್ನೊಡಲೊಳಗೆ ಇರಿಸಿಕೊಂಡಿರುತ್ತಾರೆ. ಅಂತಹ ಸ್ಥಳಗಳಿಗೆ ಹೋಗಲು ಜನರು ಭಯಪಡ್ತಾರೆ. ಆ ಸ್ಥಳಗಳ ಬಗ್ಗೆ ಸ್ಥಳೀಯರು ಹಲವು ಕಥೆಗಳನ್ನು ಹೇಳುತ್ತಿರುತ್ತಾರೆ.
ಅಂತಹವುದೇ ಒಂದು ಪ್ರದೇಶ ಜಮ್ಮು ಕಾಶ್ಮೀರದ ಮಡಿಲಿನಲ್ಲಿದೆ. ಟ್ರಾವೆಲ್ಲರ್ ಒಬ್ಬರು ಪ್ರಯಾಣಿಸುತ್ತಿರುವಾಗ ಲಡಾಖ್ ಪ್ರದೇಶದಲ್ಲಿ ಟಾರ್ಪಲ್‌ನಿಂದ ಮಾಡಿದ ದೇವಾಲಯ ನೋಡಿದ್ದಾರೆ. ದೇವಾಲಯದ ಸುತ್ತಲೂ ಅನೇಕ ಪ್ಲಾಸ್ಟಿಕ್ ಬಾಟೆಲ್ ಕಂಡು ಆಶ್ಚರ್ಯಚಕಿತರಾಗಿ ಸ್ಥಳದ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ಪೋಸ್ಟ್ ಮಾಡಿ, ಈ ಸ್ಥಳದ ಮಾಹಿತಿ ಕೇಳಿದ್ದರು. ಇದಕ್ಕೆ ಹಲವು ಸೋಶಿಯಲ್ ಮೀಡಿಯಾ ಬಳಕೆದಾರರು ಕಮೆಂಟ್ ಮಾಡಿ ತಮಗೆ ಗೊತ್ತಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಭಾರತದ ಮೋಸ್ಟ್ ಹಾಂಟೆಡ್ ರೈಲ್ವೆ ನಿಲ್ದಾಣಗಳಿವು! ಒಂದೊಂದರೂ ಕಥೆ ಕೇಳಿದ್ರೆ ಎದೆ ಝಲ್ ಎನ್ನುತ್ತೆ!
ಈ ವಿಡಿಯೋಗೆ ಕಮೆಂಟ್ ಮಾಡಿರುವ ಓರ್ವ ನೆಟ್ಟಿಗ ವಿಚಿತ್ರ ಆಚರಣೆಯ ಹಿಂದೆ ಟ್ರಕ್ ಚಾಲಕನ ದುರಂತ ಸಾವಿನ ರಹಸ್ಯವಿದೆ ಎಂದು ಹೇಳಿದ್ದಾರೆ. 1999ರಲ್ಲಿ ಈ ದೇವಸ್ಥಾನದ ಬಳಿಕ ಟ್ರಕ್ ಚಾಲಕ ಬಾಯಾರಿಕೆಯಿಂದ ಮೃತನಾಗುತ್ತಾನೆ. ಅಂದಿನಿಂದ ಈ ಪ್ರದೇಶದ ಮಾರ್ಗವಾಗಿ ತೆರಳುವ ಜನರು ನೀರಿನ ಬಾಟೆಲ್ ದೇವಸ್ಥಾನಕ್ಕೆ ಅರ್ಪಿಸುವ ಆಚರಣೆ ಶುರುವಾಗಿದೆ. ಆವತ್ತಿನಿಂದ ದೇವಸ್ಥಾನ ಮತ್ತು ಸುತ್ತಲಿನ ಪ್ರದೇಶ ದೆವ್ವದ ಸ್ಥಳ ಎಂದು ಬಿಂಬಿತವಾಗಿದೆ. ವ್ಲಾಗರ್ ಸಹ ಇಲ್ಲಿರುವ ಕಲ್ಲಿನ ಬಂಡೆ ಮೇಲೆ ನೀರು ಹಾಕಿ ಬಾಟೆಲ್ ಎಸೆದಿಲ್ಲ. ಕೆಲವರು ತಂಬಾಕು, ಜರ್ದಾ ಅಂತಹ ಉತ್ಪನ್ನಗಳನ್ನು ಸಹ ಅರ್ಪಿಸುತ್ತಾರೆ.
ಈ ವೈರಲ್ ವಿಡಿಯೋಗೆ 1 ಕೋಟಿಗೂ ಅಧಿಕ ವ್ಯೂವ್ ಬಂದಿದ್ದು, ಇದೊಂದು ಮೂಢನಂಬಿಕೆಯಾಗಿದೆ. ಗಾಳಿ ಸುದ್ದಿಯನ್ನು ನಂಬಿ ಜನರು ಪ್ಲಾಸ್ಟಿಕ್ ಎಸೆಯುವ ಮೂಲಕ ಪ್ರಾಕೃತಿಗೆ ಧಕ್ಕೆಯನ್ನುಂಟು ಮಾಡುತ್ತಿದ್ದಾರೆ. ಕೆಲ ಬಳಕೆದಾರರು ನಿಮಗೆ ನಂಬಿಕೆ ಇದ್ರೆ ನೀರು ಹಾಕಿ ಬಾಟೆಲ್ ತೆಗೆದುಕೊಂಡು ಹೋಗಿ. ಹೀಗೆ ಎಸೆಯಬೇಡಿ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕು. ಇಲ್ಲಾವಾದ್ರೆ ಇದೊಂದು ಪ್ಲಾಸ್ಟಿಕ್ ಸಂಗ್ರಹದ ಸ್ಥಳವಾಗಿ ಬದಲಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ದೆವ್ವಗಳು ತುಂಬಿರೋ ಊರಿದು… ಹೆಸರಲ್ಲಿದೆ ಗಿನ್ನಿಸ್ ದಾಖಲೆ… ಕಥೆ ಕೇಳಿದ್ರೆ ಹುಟ್ಟುತ್ತೆ ನಡುಕ!