ಬಸ್ ರೈಲುಗಳಲ್ಲಿ ವಿಂಡೋ ಸೀಟಿಗಾಗಿ ಕಿತ್ತಾಡುವುದು ನೋಡಿದ್ದೇವೆ. ಆದರೆ ವಿಮಾನದಲ್ಲಿ ಪ್ರಯಾಣಿಸುವವರು ಹೈ ಕ್ಲಾಸ್ ಜನಗಳು ತುಂಬಾ ಘನತೆ ಇರುವವರು ಅಂತ ಜನ ಸಾಮಾನ್ಯರಾದ ನಾವು ನೀವು ಯೋಚಿಸುತ್ತೇವೆ. ಆದರೆ ವಿಮಾನದಲ್ಲಾಗುವ ಕೆಲವು ಘಟನೆಗಳನ್ನು ನೋಡಿದರೆ ಈ ನಂಬಿಕೆ ನಿಜವಲ್ಲ ಎಂಬುದು ಸಾಬೀತಾಗಿದೆ.
ಕಿಟಕಿ ಪಕ್ಕದ ಸೀಟು ಎಂದರೆ ಅನೇಕರಿಗೆ ಅದೆಂಥದ್ದೋ ಪ್ರೇಮ. ಪ್ರಯಾಣ ಮಾಡುವಾಗ ಕಿಟಕಿ ಪಕ್ಕದ ಸೀಟೇ ಬೇಕು ಎಂಬುದು ಬಹುತೇಕ ಜನರ ಆಸೆ. ಕಿಟಕಿ ಪಕ್ಕ ಕೂತರೆ ಕಾಣುವ ಹೊರಂಗಣ ನೋಟವನ್ನು ಸವಿಯಲು ಚೆನ್ನಾಗಿರುತ್ತದೆ, ಗಾಳಿ ಚೆನ್ನಾಗಿ ಬರುತ್ತದೆ, ಏನೋ ಒಂಥರಾ ಖುಷಿ ಇರುತ್ತೆ ಎಂಬುದು ಕಿಟಕಿ ಪ್ರಿಯರ ಅನುಭವದ ಮಾತು. ಬಸ್, ರೈಲು, ಕಾರು ವಿಮಾನ ಎಲ್ಲದರಲ್ಲೂ ಬಹುತೇಕರು ಕಿಟಕಿ ಪಕ್ಕದ ಜಾಗವನ್ನೇ ಆಯ್ಕೆ ಮಾಡುತ್ತಾರೆ. ಕಿಟಕಿ ಪಕ್ಕದ ಸೀಟಿಗಾಗಿ ಜನ ಬಸ್‌ಗಳಲ್ಲಿ ಕಿತ್ತಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬಳು ಮಹಿಳೆ ವಿಮಾನದಲ್ಲಿ ಕೂಡ ಕಿಟಕಿ ಪಕ್ಕದ ಸೀಟಿಗಾಗಿ ಮಾಡಿರುವ ಕಿತಾಪತಿಗೆ ನೆಟ್ಟಿಗರು ಗರಂ ಆಗಿದ್ದಾರೆ.
ಟ್ವಿಟರ್ ಬಳಕೆದಾರ ಬ್ರ್ಯಾಂಡನ್ ಎಂಬುವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಮಹಿಳೆಯೊಬ್ಬರು ಕಿಟಕಿ ಪಕ್ಕದ ಸೀಟಿಗಾಗಿ ಆ ಸೀಟಿನ ಪಕ್ಕ ಸೀಟುಗಳನ್ನು ಜನರಿದ್ದರು ತುಳಿದುಕೊಂಡು ಮತ್ತೊಂದು ಪಕ್ಕಕ್ಕೆ ಹೋಗುತ್ತಿರುವ ದೃಶ್ಯವಿದೆ. ಈಕೆಯ ಈ ಅಮಾನವೀಯ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪರಿಚಿತ ಮಹಿಳೆ ಇತರ ಜನರ ಮೇಲೆ ಹತ್ತಿಕೊಂಡು ಕಿಟಕಿ ಪಕ್ಕದ ಸೀಟಿನತ್ತ ಹೋಗುತ್ತಿರುವುದನ್ನು ಈ ವಿಡಿಯೋ ತೋರಿಸುತ್ತಿದೆ. ಆಕೆ ಕೇಳಿದ್ದರೆ ಆಕೆಯ ಪಕ್ಕದ ಮೂರು ಸೀಟುಗಳಲ್ಲಿದ್ದವರು ಆಕೆಗೆ ದಾರಿ ಮಾಡಿ ಕೊಡುತ್ತಿದ್ದರೇನೋ. ಆದರೆ ಆಕೆ ಹಾಗೆ ಮಾಡಿಲ್ಲ. ಕುಳಿತಿದ್ದವರ ಸೀಟಿನ ಮೇಲೆಯೇ ತುಳಿದುಕೊಂಡು ಹೋಗಿ ವಿಂಡೋ ಪಕ್ಕದ ಸೀಟಿನಲ್ಲಿ ಕುಳಿತಿದ್ದಾಳೆ.
The most criminal activity I’ve ever seen on an airplane. This woman was hopping over other passengers the whole 7 hour flight. pic.twitter.com/drET3BGBWv
— brandon🚀 (@In_jedi)'ನಾನು ವಿಮಾನದಲ್ಲಿ ನೋಡಿದ ಅತ್ಯಂತ ಕ್ರಿಮಿನಲ್ ಚಟುವಟಿಕೆ' ಇದು ಎಂದು ಬ್ರ್ಯಾಂಡನ್ ವೀಡಿಯೊದೊಂದಿಗೆ ಟ್ವೀಟ್ ಮಾಡಿದ್ದಾರೆ. ಈ ವೀಡಿಯೊ ತಕ್ಷಣವೇ ಟ್ವಿಟರ್‌ನಲ್ಲಿ ಕಾಮೆಂಟ್‌ಗಳ ಕೋಲಾಹಲಕ್ಕೆ ಕಾರಣವಾಯಿತು. ಅನೇಕರು ಮಹಿಳೆಯ ಸೌಜನ್ಯದ ಕೊರತೆಯನ್ನು ಟೀಕೆ ಮಾಡಿದರು. ಹೀಗೆ ಸೀಟುಗಳ ಮೇಲೇರುವುದು ಎಷ್ಟು ಸರಿ ಅವು ಕೊಳೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
Travel Tips: ಸಾಮಾಜಿಕ ಜಾಲತಾಣದಲ್ಲಿ ಬೋರ್ಡಿಂಗ್ ಪಾಸ್ ಪೋಸ್ಟ್ ಮಾಡುವ ಮುನ್ನ ಎಚ್ಚರ
ಬಸ್ ರೈಲುಗಳಲ್ಲಿ ವಿಂಡೋ ಸೀಟಿಗಾಗಿ ಕಿತ್ತಾಡುವುದು ನೋಡಿದ್ದೇವೆ. ಆದರೆ ವಿಮಾನದಲ್ಲಿ ಪ್ರಯಾಣಿಸುವವರು ಹೈ ಕ್ಲಾಸ್ ಜನಗಳು ತುಂಬಾ ಘನತೆ ಇರುವವರು ಅಂತ ಜನ ಸಾಮಾನ್ಯರಾದ ನಾವು ನೀವು ಯೋಚಿಸುತ್ತೇವೆ. ಆದರೆ ವಿಮಾನದಲ್ಲಾಗುವ ಕೆಲವು ಘಟನೆಗಳನ್ನು ನೋಡಿದರೆ ಈ ನಂಬಿಕೆ ನಿಜವಲ್ಲ ಎಂಬುದು ಸಾಬೀತಾಗಿದೆ.
ಕೆಲಸಕ್ಕೆ ಮಹತ್ವ ಕೊಟ್ಟ ಮೋದಿ: ಸಮೋಸಾ, ಕೇಕ್ ತಿನ್ನೋದ್ರಲ್ಲಿ ಬ್ಯುಸಿಯಾದ ನಾಯಕರು ಫುಲ್ ಟ್ರೋಲ್!
ಪ್ರವಾಸದ ಖುಷಿಯಲ್ಲಿ ನಾವೇನು ಮಾಡ್ತೇವೆ ಎಂಬುದೇ ಅನೇಕ ಬಾರಿ ತಿಳಿದಿರುವುದಿಲ್ಲ. ಕುಟುಂಬಸ್ಥರೆಲ್ಲ ಪ್ರವಾಸಕ್ಕೆ ಹೊರಟ ಪೋಟೋ ಹಾಕಿದ್ದೇ ತಡ, ಈ ಕಡೆ ಕಳ್ಳರು ಕೈಚಳ ತೋರಿಸ್ತಾರೆ. ಹಾಗೆ ಬೋರ್ಡಿಂಗ್ ಪಾಸ್ ಫೋಟೋ ಹಾಕಿ ಖಾತೆಯನ್ನು ಹ್ಯಾಕರ್ ಬಾಯಿಗೆ ನೀಡಿದವರು ಸಾಕಷ್ಟು ಮಂದಿ ಇದ್ದಾರೆ. ಯಾಣ (Travel) ಬಹುತೇಕರಿಗೆ ಇಷ್ಟ.
ಪ್ರವಾಸದ ಪ್ರತಿ ಕ್ಷಣವನ್ನು ಕ್ಯಾಮರಾ (Camera) ದಲ್ಲಿ ಸೆರೆ ಹಿಡಿದು ಅದನ್ನು ಹಂಚಿಕೊಳ್ತಾರೆ. ಫೋಟೋ (Photo ) ಹಂಚಿಕೊಳ್ಳುವಾಗ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಆದ್ರೆ ನಾವು ಖುಷಿ (Enjoy) ಯಲ್ಲಿ ಎಲ್ಲವನ್ನೂ ಪೋಸ್ಟ್ ಮಾಡ್ತೇವೆ. ಕೆಲವೊಮ್ಮೆ ಪೂರ್ವಾಪರ ಆಲೋಚನೆ ಮಾಡದೆ ಬೋರ್ಡಿಂಗ್ ಪಾಸ್ (Boarding Pass), ಫೋಟೋಗಳನ್ನು ಅಂತರ್ಜಾಲದಲ್ಲಿ ಹಾಕುತ್ತೇವೆ. ಆದ್ರೆ ಈ ತಪ್ಪನ್ನು ಎಂದಿಗೂ ಮಾಡ್ಬಾರದು. ಇದು ಅತ್ಯಂತ ಅಪಾಯಕಾರಿ ಕೆಲಸವಾಗಿದೆ