ರೈಡ್​ ಕ್ಯಾನ್ಸಲ್​ ಮಾಡಿ, ನಿದ್ದೆ ಬರ್ತಿದೆ; ಉಬರ್ ಡ್ರೈವರ್​ನ ಪ್ರಾಮಾಣಿಕತೆ ನೆಟ್ಟಿಗರ ಮೆಚ್ಚುಗೆ

By Vinutha Perla  |  First Published Jan 29, 2023, 12:50 PM IST

ಓಲಾ, ಉಬರ್‌ನಲ್ಲಿ ಕ್ಯಾಬ್ ಮಾಡಿದಾಗ ಕೆಲವೊಮ್ಮೆ ಕ್ಯಾಬ್ ಲೇಟಾಗಿ ಬರುವುದು, ರೈಡ್ ಕ್ಯಾನ್ಸಲ್ ಆಗೋದು ಸಾಮಾನ್ಯವಾಗಿದೆ. ಹೀಗೆ ಬೇಜವಾಬ್ದಾರಿಯಿಂದ ವರ್ತಿಸೋ ಡ್ರೈವರ್‌ಗಳ ಬಗ್ಗೆ ಸಿಕ್ಕಾಪಟ್ಟೆ ಕೋಪ ಬರುತ್ತದೆ. ಆದ್ರೆ ಇಲ್ಲೊಬ್ಬ ಕ್ಯಾಬ್‌ ಡ್ರೈವರ್ ರೈಡ್ ಕ್ಯಾನ್ಸಲ್‌ ಮಾಡಿದ್ರೂ ಯಾರಿಗೂ ಕೋಪಾನೇ ಬಂದಿಲ್ಲ. ಅದಕ್ಕೇನು ಕಾರಣ ?


ನಗರದಲ್ಲಿ ಸುಲಭವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಓಡಾಡೋದಕ್ಕೆ ಹೆಚ್ಚಿನವರು ಉಪಯೋಗಿಸೋದು ಓಲಾ, ಉಬರ್ ಮೊದಲಾದ ಕ್ಯಾಬ್‌ಗಳನ್ನು. ಮೊಬೈಲ್ ಅಪ್ಲಿಕೇಶನ್‌ನಲ್ಲಿ ಬುಕ್ ಮಾಡಿದರೆ ಸಾಕು ಕ್ಯಾಬ್ ಮನೆ ಮುಂದಿರುತ್ತದೆ. ಸೇಫಾಗಿ ಲೊಕೇಶನ್‌ಗೆ ತಲುಪಿಸುತ್ತದೆ. ಎಷ್ಟು ಸಮಯದಲ್ಲಿ ಬೇಕಾದರೂ ಕ್ಯಾಬ್‌ ಲಭ್ಯವಿರುತ್ತದೆ. ಎಕ್ಸ್‌ಟ್ರಾ ಚಾರ್ಜ್‌ ಎಂಬ ಕಿರಿಕಿರಿಯಿಲ್ಲ ಅನ್ನೋ ಕಾರಣಕ್ಕೆ ಹೆಚ್ಚಿನವರು ಇಂಥಾ ಕ್ಯಾಬ್‌ಗಳನ್ನೇ ನೆಚ್ಚಕೊಳ್ಳುತ್ತದೆ. ಆದ್ರೆ ಇಂಥಾ ಓಲಾ, ಉಬರ್‌ನಿಂದಲೂ ಕೆಲವೊಮ್ಮೆ ತೊಂದ್ರೆ ಆಗುತ್ತೆ.

ಕ್ಯಾಬ್ ಬುಕ್ ಮಾಡಿದ ಗಂಟೆಗಳ ಕಾಲ ಬಳಿಕವೂ ಬಾರದಿರುವುದು, ಲೊಕೇಶನ್‌ ತಿಳಿಯದೆ ಒದ್ದಾಡುವುದು, ರೈಡ್ ಕೊನೆಯಲ್ಲಿ ಎಕ್ಸ್‌ಟ್ರಾ ಬಿಲ್ ಪಾವತಿಸುವಂತಾಗುವುದು ಕೆಲವೊಮ್ಮೆ ನಡೆಯುತ್ತದೆ. ಇದಲ್ಲದೆ ಕೆಲವೊಮ್ಮೆ ಚಾಲಕರು (Drivers) ಕೊನೆ ಕ್ಷಣದಲ್ಲಿ ರೈಡ್ ಕ್ಯಾನ್ಸಲ್ ಮಾಡಿ ಇಕ್ಕಟ್ಟಿಗೆ ಸಿಲುಕಿಸಿಬಿಡುತ್ತಾರೆ. ಎಷ್ಟೊತ್ತಾದರೂ ಬಾರದ ಕ್ಯಾಬ್​ ಬಗ್ಗೆ, ವಿನಾಕಾರಣ ಕ್ಯಾನ್ಸಲ್ ಮಾಡುವ ಡ್ರೈವರ್​ಗಳ ಬಗ್ಗೆ ಕೋಪ ಎಂದೂ ಕಡಿಮೆಯಾಗುವುದೇ ಇಲ್ಲ. ಆದರೆ ಈ ಬೆಂಗಳೂರಿನ ಕ್ಯಾಬ್​ ಡ್ರೈವರ್ ಬಗ್ಗೆ ನಿಮಗೆ ಕೋಪ ಖಂಡಿತ ಬಾರದು. ಯಾಕಂದ್ರೆ ಆತ ರೈಡ್ ಕ್ಯಾನ್ಸಲ್ ಮಾಡಿರೋದಕ್ಕೆ ನಿರ್ಧಿಷ್ಟ ಕಾರಣವನ್ನು (Reason) ತಿಳಿಸಿದ್ದಾನೆ.

Tap to resize

Latest Videos

ರೈಡ್ ಸ್ವೀಕರಿಸಿ ಬಳಿಕ ಕ್ಯಾನ್ಸಲ್ ಮಾಡುವುದೇಕೆ? ಒಲಾ ಡ್ರೈವರ್ ವರ್ತನೆ ಕುರಿತು ಸಿಇಒ ಸ್ಪಷ್ಟನೆ!

ನಿದ್ದೆ ಬರುತ್ತಿದೆಯೆಂದು ಕ್ಯಾಬ್ ಕ್ಯಾನ್ಸಲ್ ಮಾಡಲು ಹೇಳಿದ ಚಾಲಕ
ಕ್ಯಾಬ್ ಬುಕ್ ಮಾಡಿದಾಗ ಸಾಮಾನ್ಯವಾಗಿ ಜನರು ಮೆಸೇಜ್ ಅಥವಾ ಫೋನ್ ಮೂಲಕ ಚಾಲಕನನ್ನು ಸಂಪರ್ಕಿಸುತ್ತಾರೆ. ಹೀಗಿದ್ದೂ, ಕೆಲವೊಮ್ಮೆ, ಎಲ್ಲಾ ಕಾಯುವಿಕೆ ಮತ್ತು ಕರೆಗಳ (Call) ನಂತರವೂ, ಚಾಲಕರು ರೈಡ್‌ನ್ನು ರದ್ದುಗೊಳಿಸುತ್ತಾರೆ. ಅಂತಹ ನಿದರ್ಶನಗಳು ಹೊಸದಲ್ಲ ಎಲ್ಲರಿಗೂ ಇಂಥಾ ಅನುಭವ (Experience) ಆಗಿರುತ್ತದೆ. ಆದರೆ ಡ್ರೈವ್‌ನ್ನು ಯಾಕೆ ರದ್ದುಗೊಳಿಸಲಾಗಿದೆ ಎಂಬುದರ ಬಗ್ಗೆ ಯಾರೂ ಮಾಹಿತಿ ನೀಡಿರುವುದಿಲ್ಲ. ಆದರೆ ಇಲ್ಲೊಬ್ಬ ಕ್ಯಾಬ್ ಡ್ರೈವರ್‌, ರೈಡ್ ಕ್ಯಾನ್ಸಲ್ ಮಾಡಲು ಕಾರಣ ಹೇಳಿದ್ದಾರೆ. ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರುವ ಈ ಪೋಸ್ಟ್‌ ಮೆಚ್ಚುಗೆಗೆ ಪಾತ್ರವಾಗಿದೆ.

ಆಶಿ ಎನ್ನುವ ಟ್ವಿಟರ್​ ಖಾತೆದಾರರು ಭರತ್​ ಎಂಬ ಉಬರ್ ಡ್ರೈವರ್ ಚಾಟ್​ನ ಸ್ಕ್ರೀನ್​ ಶಾಟ್​ ಹಂಚಿಕೊಂಡಿದ್ದಾರೆ.  'ನಿದ್ದೆ ಬರುತ್ತಿದೆ, ರೈಡ್ ಕ್ಯಾನ್ಸಲ್ ಮಾಡಿ ಎಂದಿದ್ದಾನೆ' ಎಂಬುದಾಗಿ ತಿಳಿಸಿದ್ದಾರೆ. ಜನವರಿ 26ರಂದು ಈ ಟ್ವೀಟ್​ ಮಾಡಲಾಗಿದೆ. ಇದ್ದಿದ್ದನ್ನು ಇದ್ದಹಾಗೆ ಹೇಳಿದ್ದಾನೆ ಅದರಲ್ಲೇನಿದೆ? ಎಂದು ಡ್ರೈವರ್​ನನ್ನು ನೆಟ್ಟಿಗರು ಶ್ಲಾಘಿಸುತ್ತಿದ್ದಾರೆ. ಈತನಕ 3 ಲಕ್ಷಕ್ಕೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. 4,000ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ದಾರೆ. ಸುಮಾರು 200 ಜನರು ರೀಟ್ವೀಟ್ ಮಾಡಿ ಚರ್ಚಿಸಿದ್ದಾರೆ.

ಡ್ರೈವರ್ ಪ್ರಾಮಾಣಿಕತೆಗೆ ನೆಟ್ಟಿಗರ ಮೆಚ್ಚುಗೆ
ಇಂಟರ್ನೆಟ್ ಬಳಕೆದಾರ ಆಶಿ ಈ ಉದಾಹರಣೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕ್ಯಾಬ್ ಬುಕ್ ಮಾಡಲು ಉಬರ್ ಬಳಸಲು ನಿರ್ಧರಿಸಿದಳು. ಭರತ್ ಎಂಬ ಚಾಲಕನು ರೈಡ್‌ನ್ನು ಒಪ್ಪಿಕೊಂಡನು. ಆದರೆ 'ತಾನು ನಿದ್ದೆ (Sleep) ಮಾಡುತ್ತಿದ್ದಾನೆ ಎಂಬ ಕಾರಣಕ್ಕಾಗಿ ರೈಡ್ ಅನ್ನು ರದ್ದುಗೊಳಿಸಲು ಅಪ್ಲಿಕೇಶನ್‌ನ ಚಾಟ್ ಬಾಕ್ಸ್ ಅನ್ನು ಬಳಸಿಕೊಂಡು ಆಕೆಗೆ ಸಂದೇಶವನ್ನು ಕಳುಹಿಸಿದನು. ಆಶಿ ಹಂಚಿಕೊಂಡ ಸ್ಕ್ರೀನ್‌ಶಾಟ್‌ನಲ್ಲಿ, "ಈ ರೈಡ್ ಅನ್ನು ರದ್ದುಮಾಡಿ, ನಾನು ನಿದ್ರಿಸುತ್ತಿದ್ದೇನೆ" ಎಂದು ಚಾಲಕ ಹೇಳುತ್ತಾನೆ. ಇದಕ್ಕೆ, ಬಳಕೆದಾರರು "ಸರಿ" ಎಂದು ಹೇಳುವ ಮೂಲಕ ಸರಳವಾಗಿ ಪ್ರತಿಕ್ರಿಯಿಸಿದರು.

ಸದ್ಯ ಈ ವ್ಯಕ್ತಿ ಪ್ರಾಮಾಣಿಕನಾಗಿದ್ದಾನೆ. ಹಿಂದೊಮ್ಮೆ ನಾನು ಬೆಂಗಳೂರು ವಿಮಾನ ನಿಲ್ದಾಣದಿಂದ ಕ್ಯಾಬ್​ನಲ್ಲಿ ಮನೆಗೆ ಬರುತ್ತಿರುವಾಗ ಒಬ್ಬ ಡ್ರೈವರ್ ದಾರಿಮಧ್ಯೆ, ಮೇಡಮ್​ ನನಗೆ ನಿದ್ದೆ ಬರುತ್ತಿದೆ, ಇನ್ನು ಗಾಡಿ ಓಡಿಸಲಾಗದು ಎಂದುಬಿಟ್ಟ. ಆಗ ಬೆಳಗಿನ ಜಾವ 3ಗಂಟೆ. ನಾನೋ ಜೆಟ್​​ಲ್ಯಾಗ್​ನಿಂದ ನರಕವನ್ನು ಅನುಭವಿಸುತ್ತಿದ್ದೆ ಎಂದು ಒಬ್ಬರು ಹೇಳಿದ್ದಾರೆ. ​

ಆ್ಯಪ್‌ ಆಟೋ ಸೇವಾ ಶುಲ್ಕ ಶೇ.10ಕ್ಕೆ ಹೆಚ್ಚಿಸಲು ಅವಕಾಶ: ಹೈಕೋರ್ಟ್‌

ಹಿಂದೊಮ್ಮೆ ಆಟೋ ಡ್ರೈವರ್ ಯೂಟ್ಯೂಬ್​ ನೋಡುತ್ತಿದ್ದರು. ಅದಕ್ಕಾಗಿ ನನಗೆ ಅವರು ಡ್ರಾಪ್​ ಕೊಡಲಿಲ್ಲ ಎಂದು ಮತ್ತೊಬ್ಬರು ನೆನಪಿಸಿಕೊಂಡಿದ್ದಾರೆ. ಒಬ್ಬ ಕ್ಯಾಬ್​​ ಡ್ರೈವರ್ ರೈಡ್​ ಸ್ವೀಕರಿಸಿದರು. ಆದರೆ ಐದು ನಿಮಿಷಗಳಾದರೂ ಅವರು ಬರಲೇ ಇಲ್ಲ. ನಂತರ ಫೋನ್ ಮಾಡಿದೆ. ಅದಕ್ಕವರು, ನೀವು ಫೋನ್ ಮಾಡಲೆಂದು ಕಾಯುತ್ತಿದ್ದೆ ಎಂದರು. ಒಟ್ನಲ್ಲಿ ಊಬರ್ ಡ್ರೈವರ್ ಪ್ರಾಮಾಣಿಕತೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿರೋದಂತೂ ನಿಜ.

At least this guy was honest. There was this one time - on my way back from BLR airport, the cab guy just pulled over on ORR and said “madam, I can’t drive anymore - I’m sleepy”. It was around 3:30AM, I was jet lagged and scared as hell.

— Pranava Tandra (@pranavatandra)
click me!