ವಿಮಾನ ಟೇಕ್ ಆಫ್, ಲ್ಯಾಂಡಿಂಗ್ ವೇಳೆ ಟ್ರೇ ಟೇಬಲ್ ಪೋಲ್ಡ್ ಮಾಡೋದು ಯಾಕೆ?

Published : May 03, 2025, 12:13 PM ISTUpdated : May 05, 2025, 12:29 PM IST
ವಿಮಾನ ಟೇಕ್ ಆಫ್, ಲ್ಯಾಂಡಿಂಗ್ ವೇಳೆ ಟ್ರೇ ಟೇಬಲ್ ಪೋಲ್ಡ್ ಮಾಡೋದು ಯಾಕೆ?

ಸಾರಾಂಶ

ವಿಮಾನದ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ವೇಳೆ ಸುರಕ್ಷತೆಗಾಗಿ ಟ್ರೇ ಟೇಬಲ್ ಮಡಚಿ, ಸೀಟು ನೇರವಾಗಿಡಬೇಕು. ಅಪಘಾತದಲ್ಲಿ ಟ್ರೇ ಟೇಬಲ್ ಹಾರಿ ಗಾಯಗಳಾಗಬಹುದು, ತುರ್ತು ನಿರ್ಗಮನಕ್ಕೂ ಅಡ್ಡಿಯಾಗಬಹುದು. ಓರೆಯಾದ ಸೀಟು ಅಪಾಯಕಾರಿ. ಹಿಂದಿನ ಸೀಟುಗಳು ಹೆಚ್ಚು ಸುರಕ್ಷಿತ. ಮಧ್ಯದ ಸೀಟುಗಳು ಅಪಾಯಕಾರಿ.

ವಿಮಾನ (Airplane)ದಲ್ಲಿ ಪ್ರಯಾಣ ಬೆಳೆಸೋದು ಯಾರಿಗೆ ಇಷ್ಟವಿಲ್ಲ ಹೇಳಿ.  ಅತ್ಯಂತ ಸುರಕ್ಷಿತ ಹಾಗೂ ಆರಾಮದಾಯಕ, ವೇಗದ ಪ್ರಯಾಣಕ್ಕೆ ವಿಮಾನ ಹೆಸರಾಗಿದೆ. ವಿಮಾನ ಹತ್ತುತ್ತಿದ್ದಂತೆ ಸೀಟ್ ಹಿಂದೆ ಒರಗಿಸಿಕೊಂಡು, ಟ್ರೇ ಟೇಬಲ್ (tray table) ಮೇಲೆ ನೀರಿನ ಬಾಟಲ್ ಇಟ್ಟು, ಕಿವಿಗೆ ಇಯರ್ ಫೋನ್ ಹಾಕಿ ಹಾಯಾಗಿ ಕುಳಿತುಕೊಳ್ತಾರೆ. ಇನ್ನೇನು ರೆಸ್ಟ್ ತೆಗೆದುಕೊಳ್ಬೇಕು, ಅಷ್ಟರಲ್ಲಿ ಗಗನ ಸಖಿ ಬಂದು ಸೀಟ್ ನೇರ ಮಾಡಿಕೊಳ್ಳೋ ಸೂಚನೆ ನೀಡೋದಲ್ದೆ, ಸೀಟ್ ಬೆಲ್ಟ್ ಹಾಕಿಕೊಂಡು, ಟ್ರೇ ಟೇಬಲ್ ಪೋಲ್ಡ್ ಮಾಡುವ ಸೂಚನೆ ನೀಡ್ತಾರೆ. ಸೀಟ್ ಬೆಲ್ಟ್ (seat belt) ಹಾಕಿಕೊಳ್ಳೋದು ಸರಿ, ಟ್ರೇ ಟೇಬಲ್ ಯಾಕೆ ಪೋಲ್ಡ್ ಮಾಡ್ಬೇಕು ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತದೆ. 

ವಿಮಾನದ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಅನೇಕ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದ್ರಲ್ಲಿ ಟ್ರೇ ಟೇಬಲ್ ಪೋಲ್ಡ್  ಕೂಡ ಒಂದು. ಈ ವೇಳೆ ವಿಮಾನ ಸಿಬ್ಬಂದಿ ತಮ್ಮ ಆಸನಗಳನ್ನು ಸರಿಪಡಿಸಿಕೊಳ್ಳಲು ಸಲಹೆ ನೀಡುತ್ತಾರೆ. ಟೇಕ್ ಆಪ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ವಿಮಾನ ಅಪಘಾತಕೊಳ್ಳಗಾಗುವ ಸಾಧ್ಯತೆ ಇರುತ್ತದೆ. ಈ ಸಮಯದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಮಹತ್ವ ನೀಡಲಾಗುತ್ತದೆ. ಒಂದ್ವೇಳೆ ಅಪಘಾತ ಸಂಭವಿಸಿದರೆ    ಟ್ರೇ ಟೇಬಲ್ಗಳಂತಹ ವಸ್ತುಗಳು ಸ್ಥಳಾಂತರಗೊಂಡು ಹಾರುವ ಸಾಧ್ಯತೆ ಇರುತ್ತದೆ. ಇದ್ರಿಂದ ಪ್ರಯಾಣಿಕರಿಗೆ ಮತ್ತಷ್ಟು ಗಾಯಗಳಾಗುತ್ವೆ. ತುರ್ತು ಸಂದರ್ಭದಲ್ಲಿ ವಿಮಾನದಿಂದ ನಿರ್ಗಮಿಸಲು ಈ ಟ್ರೇ ಟೇಬಲ್ ಅಡ್ಡಿಯಾಗ್ಬಹುದು. ಹಾಗಾಗಿ ಟ್ರೇ ಟೇಬಲ್ ಪೋಲ್ಡ್ ಮಾಡುವಂತೆ, ಅದ್ರಲ್ಲಿರುವ ಆಹಾರ ಪ್ಲೇಟನ್ನು ತೆಗೆಯಲು ಸಿಬ್ಬಂದಿ ಮುಂದಾಗ್ತಾರೆ. 

ಸೀಟ್ ನೇರಗೊಳಿಸಲು ಕಾರಣ ಏನು? :  ಟೇಕ್ ಆಫ್ ಮತ್ತು ಲ್ಯಾಂಡಿಂಗ್ ವೇಳೆ ಪ್ರಯಾಣಿಕರು ತಮ್ಮ ಸೀಟನ್ನು ನೇರಗೊಳಿಸುತ್ತಾರೆ.  ಯಾವುದೇ ವಿಮಾನದ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸಮಯವು ಹೆಚ್ಚಿನ ವಿಮಾನ ಅಪಘಾತಗಳು ಸಂಭವಿಸುವ ಸಮಯ. ಅಂತಹ ಸಂದರ್ಭದಲ್ಲಿ, ಆಸನವನ್ನು ಹಿಂದಕ್ಕೆ ಓರೆಯಾಗಿಸಿದರೆ, ಅದು ಲಾಕ್ ಆಗುವುದಿಲ್ಲ, ಇದರಿಂದಾಗಿ ಆಘಾತದ ಸಮಯದಲ್ಲಿ ವ್ಯಕ್ತಿಯು ಸಾಯಬಹುದು. ಇದೇ ಕಾರಣಕ್ಕಾಗಿ ಈ ಸಮಯದಲ್ಲಿ ಸೀಟನ್ನು ನೇರವಾಗಿ ಇಟ್ಟು ಸೀಟ್ ಬೆಲ್ಟ್ ಕಟ್ಟಿಕೊಳ್ಳಲು ಹೇಳಲಾಗುತ್ತದೆ.

 2004 ಮತ್ತು 2013 ರ ನಡುವೆ ಬೋಯಿಂಗ್ ವಿಮಾನಗಳ ಅಧ್ಯಯನವು ಶೇಕಡಾ 58 ರಷ್ಟು ಗಂಭೀರ ವಿಮಾನ ಅಪಘಾತಗಳು ಲ್ಯಾಂಡಿಂಗ್ ಸಮಯದಲ್ಲಿ ಸಂಭವಿಸಿದ್ದರೆ, ಶೇಕಡಾ 22 ರಷ್ಟು ಟೇಕ್ ಆಫ್ ಸಮಯದಲ್ಲಿ ಸಂಭವಿಸಿವೆ ಎಂದಿದ್ದಾರೆ. ವಿಮಾನದ ಸೀಟ್ ಗಳನ್ನು ತೀವ್ರ ಆಘಾತಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಅದು ನೇರವಾಗಿಲ್ಲದಿದ್ದರೆ, ಪ್ರಯಾಣಿಕನು ಬೀಳಬಹುದು ಮತ್ತು ಅವನ ಸುರಕ್ಷತೆಗೆ ಅಪಾಯವಿರಬಹುದು. ಕುರ್ಚಿಯ ಹಿಂಭಾಗ ಹಿಂದಕ್ಕೆ ಓರೆಯಾಗಿದ್ದರೆ, ಆ ವ್ಯಕ್ತಿಗೆ ಗಾಯವಾಗುವ ಸಾಧ್ಯತೆ ಹೆಚ್ಚು. 

ಯಾವ ಸೀಟು ಸುರಕ್ಷಿತ? : 35 ವರ್ಷಗಳ ವಿಮಾನ ಅಪಘಾತ ದತ್ತಾಂಶವನ್ನು ಪರಿಶೀಲಿಸಿದ 2015 ರ ಟೈಮ್ ತನಿಖೆಯು, ವಿಮಾನದಲ್ಲಿ ಅತ್ಯಂತ ಸುರಕ್ಷಿತವಾದ ಆಸನಗಳು ಹಿಂದಿನ ಆಸನಗಳು ಎಂದು ಕಂಡುಹಿಡಿದಿದೆ. ಯಾವುದೇ ಅಪಘಾತದಲ್ಲಿ ಇದು ಕಡಿಮೆ ಪರಿಣಾಮ ಬೀರುತ್ತದೆ. ಆದರೆ ಅಪಘಾತದ ಸಮಯದಲ್ಲಿ ಮೊದಲ ಸೀಟುಗಳು ಹೆಚ್ಚು ಹಾನಿಗೊಳಗಾಗುತ್ತವೆ. ಹಿಂಭಾಗದಲ್ಲಿ ಕುಳಿತ್ರೆ ತುರ್ತು ಪರಿಸ್ಥಿತಿಯಲ್ಲಿ ವೇಗವಾಗಿ ಹೊರಬರಲು ಸಹಾಯವಾಗುತ್ತೆ.  ವಿಮಾನದ ರೆಕ್ಕೆಗಳಲ್ಲಿ ಇಂಧನ ಸಂಗ್ರಹವಾಗುತ್ತದೆ. ಇದ್ರಿಂದ ಮಧ್ಯದ ಸೀಟಿನಲ್ಲಿ ಕುಳಿತುಕೊಳ್ಳುವುದು ಅತ್ಯಂತ ಅಪಾಯಕಾರಿ. ವಿಮಾನದ ಮಧ್ಯದಲ್ಲಿ ಕುಳಿತಿದ್ದರೆ ಅದು ಅತ್ಯಂತ ಅಸುರಕ್ಷಿತ ಎನ್ನಲಾಗುತ್ತದೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Traffic Mantra: ಟ್ರಾಫಿಕ್‌ನಲ್ಲಿ ಶಾಂತವಾಗಿರೋದು ಹೇಗೆ? ಈ ಮಂತ್ರ ಪಠಿಸಿ ಸಾಕು!
ಭಾರತೀಯರು 2025ರಲ್ಲಿ ಅತಿಹೆಚ್ಚು ಹುಡುಕಾಡಿದ ಪ್ರವಾಸಿ ಸ್ಥಳ ಯಾವುದು? ಟಾಪ್-10ರಲ್ಲಿ ಥೈಲ್ಯಾಂಡ್, ಮಾಲ್ಡೀವ್ಸ್