ಸ್ವತಃ ವಿಮಾನ ಓಡಿಸಿ ಭೂತಾನ್ ತಲುಪಿದ ಥಾಯ್ಲೆಂಡ್ ರಾಜ, ರಾಣಿ!

Published : Apr 30, 2025, 11:04 AM ISTUpdated : Apr 30, 2025, 11:07 AM IST
ಸ್ವತಃ ವಿಮಾನ ಓಡಿಸಿ ಭೂತಾನ್ ತಲುಪಿದ ಥಾಯ್ಲೆಂಡ್ ರಾಜ, ರಾಣಿ!

ಸಾರಾಂಶ

ಥಾಯ್ಲೆಂಡ್ ರಾಜ ವಜಿರಲಾಂಗ್‌ಕಾರ್ನ್ ಮತ್ತು ರಾಣಿ ಸುತಿದಾ ಅವರು ಸ್ವತಃ ವಿಮಾನ ಚಲಾಯಿಸಿ ಭೂತಾನ್‌ಗೆ ಭೇಟಿ ನೀಡಿದ್ದಾರೆ. ರಾಜನು ತರಬೇತಿ ಪಡೆದ ಪೈಲಟ್ ಆಗಿದ್ದು, ರಾಣಿ ಸಹ-ಪೈಲಟ್ ಆಗಿ ನೆರವು ನೀಡಿದ್ದಾರೆ. ಈ ಘಟನೆ ಜನರಲ್ಲಿ ಅಚ್ಚರಿ ಮೂಡಿಸಿದೆ.

ಪಾರೋ: ಜಾಗತಿಕ ನಾಯಕರ ಪ್ರವಾಸದ ವೇಳೆ ಅಂಗರಕ್ಷಕರು, ಬಿಗಿ ಭದ್ರತಾ ವ್ಯವಸ್ಥೆ, ಹತ್ತಾರು ನಿಯಮಗಳು ಸಾಮಾನ್ಯವಾಗಿರುವ ದಿನಗಳಲ್ಲಿ ಥಾಯ್ಲೆಂಡ್ ರಾಜ, ರಾಣಿ ಸ್ವತಃ ತಾವೇ ವಿಮಾನ ಚಲಾಯಿಸಿ ಭೂತಾನ್‌ಗೆ ಭೇಟಿ ನೀಡಿ ಹುಬ್ಬೇರುವಂತೆ ಮಾಡಿದ್ದಾರೆ. ಥಾಯ್ಲೆಂಡ್ ರಾಜ ವಜಿರಲಾಂಗ್‌ ಕಾರ್ನ್ ಏ.25ರಂದು ಭೂತಾನ್‌ನ ಪಾರೋಗೆ ಭೇಟಿ ನೀಡಿದ್ದು, ತಾವೇ ವಿಮಾನ ಚಲಾಯಿಸಿದ್ದಾರೆ. ರಾಣಿ ಸುತಿದಾ ಸಹ-ಪೈಲಟ್ ಆಗಿ ನೆರವು ನೀಡಿದ್ದಾರೆ. ದಂಪತಿ ತಮ್ಮ ಬೋಯಿಂಗ್ 737-800 ವಿಮಾನದಲ್ಲಿ ವಿಶ್ವದ ಅತ್ಯಂತ ಸವಾಲಿನ ವಿಮಾನ ನಿಲ್ದಾಣವಾದ ಪಾರೋದಲ್ಲಿ ಇಳಿಯುವುದನ್ನು ಕಂಡು ವಾಯುಯಾನ ವೀಕ್ಷಕರು ಅಚ್ಚರಿಗೊಂಡಿದ್ದಾರೆ.

ವಜಿರಲಾಂಗ್‌ಕಾರ್ನ್ ಈ ಹಿಂದೆ ಸೇನೆಯಲ್ಲಿ ಪೈಲಟ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಅವರು ನಾರ್ಥ್ರಾಪ್ ಎಫ್ -5, ಎಫ್ -16 ಮತ್ತು ಬೋಯಿಂಗ್ 737-400 ವಿಮಾನಗಳನ್ನು ಹಾರಿಸಲು ಅರ್ಹತೆ ಪಡೆದ ಸೇನಾ ಪೈಲಟ್. 2019ರಲ್ಲಿ ಥಾಯ್ಲೆಂಡ್ ರಾಜನಾಗಿ ಅಧಿಕಾರಕ್ಕೇರಿದ ಬಳಿಕ ಇದು ಅವರ ಮೊದಲ ಅಧಿಕೃತ ವಿದೇಶ ಭೇಟಿ.

ಇದನ್ನೂ ಓದಿ: ಜೇನೊಣ ತುಂಬಿರುವ ಈ ಸ್ವೀಟ್‌ನ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!


15 ಸ್ಥಳೀಯ ಕಾಶ್ಮೀರಿಗಳ ಹಿಡಿದು ರುಬ್ಬಿದ NIA: ಬಯಲಾಯ್ತು ಹಲವು ಸ್ಫೋಟಕ ಸಂಗತಿ

ನವದೆಹಲಿ: 26 ಪ್ರವಾಸಿಗರ ಬಲಿ ಪಡೆದ ಪಹಲ್ಗಾಮ್‌ ಹತ್ಯಾಕಾಂಡದಲ್ಲಿ ಭಾಗಿಯಾದವರಲ್ಲಿ ಒಬ್ಬನೆನಿಸಿದ ಪಾಕಿಸ್ತಾನಿ ಮೂಲದ ಉಗ್ರ ಹಾಶಿಮ್ ಮೂಸಾ ಪಾಕಿಸ್ತಾನ ಸೇನೆಯ ವಿಶೇಷ ಪಡೆಯ ಪ್ಯಾರಾ ಕಮಾಂಡೋ ಆಗಿ ಕೆಲಸ ಮಾಡುತ್ತಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಪಹಲ್ಗಾಮ್‌ ದಾಳಿಗೆ ಸಹಾಯ ಮಾಡಿದ್ದ ಶಂಕೆಯ ಮೇರೆಗೆ ಸ್ಲೀಪರ್‌ ಸೆಲ್‌ನಂತೆ ಕೆಲಸ ಮಾಡುತ್ತಿದ್ದ 15 ಜನರನ್ನು ತನಿಖಾ ಸಂಸ್ಥೆಗಳು ಬಂಧಿಸಿ ವಿಚಾರಣೆ ನಡೆಸಿದ್ದು, ಈ ವಿಚಾರಣೆಯ ನಂತರ ಹಲವು ಸಂಗತಿಗಳು ಬೆಳಕಿಗೆ ಬಂದಿವೆ. 

ದಾಳಿ ನಡೆದ ವೇಳೆಯೇ ಪ್ರವಾಸಿಗನೋರ್ವ ಅಲ್ಲಿ ಜಿಪ್‌ಲೈನ್ ಹೋಗುತ್ತಿದ್ದಾಗ ಆತ ಸೆರೆ ಹಿಡಿದ ವೀಡಿಯೋದಲ್ಲಿ ಭಯೋತ್ಪಾದಕ ಕೃತ್ಯಗಳು ಸೆರೆಯಾಗಿದ್ದವು. ಇದರ ಜೊತೆಗೆ ದಾಳಿ ಆರಂಭವಾದ ವೇಳೆಯೇ ಜಿಪ್‌ಲೈನ್ ನಿರ್ವಾಹಕ ಅಲ್ಲಾಹು ಅಕ್ಬರ್‌ ಎಂದಿದ್ದ, ಆದರೆ ಈ ಪ್ರವಾಸಿಗನ ಪತ್ನಿ ಮಕ್ಕಳು ಇದಕ್ಕೂ ಮೊದಲು ಜಿಪ್‌ಲೈನ್ ಹೋಗಿದ್ದು, ಆ ವೇಳೆ ಆತ ಅಲ್ಲಾಹು ಅಕ್ಬರ್ ಎಂದಿರಲಿಲ್ಲ, ದಾಳಿ ಆರಂಭವಾದ ನಂತರವೇ ಆತ ಅಲ್ಲಾಹು ಅಕ್ಬರ್‌ ಎಂದಿದ್ದ. ಹೀಗಾಗಿ ಆತನೂ ಸೇರಿದಂತೆ ಭಯೋತ್ಪಾದಕರಿಗೆ ಪರೋಕ್ಷವಾಗಿ ನೆರವಾದ 15 ಕಾಶ್ಮೀರಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ವೇಳೆ ಹಲವು ಅಂಶಗಳು ಬಯಲಾಗಿವೆ.  

ಅದರಲ್ಲೊಂದು ಪಹಲ್ಗಾಮ್‌ ದಾಳಿಕೋರನಲ್ಲಿ ಒಬ್ಬನಾದ ಹಾಸೀಂ ಮೂಸಾ ಪಾಕಿಸ್ತಾನ ಸೇನೆಯ ವಿಶೇಷ ಪಡೆಯ ಪ್ಯಾರಾ ಕಮಾಂಡೋ ಆಗಿ ಕೆಲಸ ಮಾಡುತ್ತಿದ್ದ ಎಂಬುದು. ಪಾಕಿಸ್ತಾನ ಮೂಲದ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತೈಬಾ (ಎಲ್‌ಇಟಿ) ದೊಂದಿಗೆ ಕೆಲಸ ಮಾಡುತ್ತಿರುವ ಕಟ್ಟಾ ಭಯೋತ್ಪಾದಕ ಮೂಸಾನನ್ನು ಎಲ್‌ಇಟಿ ಮಾಸ್ಟರ್‌ಮೈಂಡ್‌ಗಳು ಕಾಶ್ಮೀರಕ್ಕೆ ಕಳುಹಿಸಿದ್ದರು. ಈತನನ್ನು ಇಲ್ಲಿ ಸ್ಥಳೀಯರಲ್ಲದವರ ಮೇಲೆ ಹಾಗೂ ಭಾರತದ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕ ದಾಳಿ ನಡೆಸುವಂತಹ ನಿರ್ದಿಷ್ಟ ಕಾರ್ಯಾಚರಣೆಗಾಗಿ ಕಳುಹಿಸಿದ್ದರು. ಪಾಕಿಸ್ತಾನದ ವಿಶೇಷ ಸೇವಾ ಗುಂಪು (ಎಸ್‌ಎಸ್‌ಜಿ) ಆತನನ್ನು ಎಲ್‌ಇಟಿಗೆ ತಮ್ಮ ಗುರಿ ಸಾಧನೆಗಾಗಿ ಎರವಲು ನೀಡಿರಬಹುದು ಎಂದು ಭದ್ರತಾ ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಕಿಸ್ತಾನದ ಎಸ್‌ಎಸ್‌ಜಿಯ ಪ್ಯಾರಾ ಕಮಾಂಡೋಗಳು ನೇರಾನೇರವಲ್ಲದ ಅಸಾಂಪ್ರದಾಯಿಕ ಯುದ್ಧದಲ್ಲಿ ಹೆಚ್ಚು ತರಬೇತಿ ಪಡೆದಿದ್ದಾರೆ ಮತ್ತು ರಹಸ್ಯ ಕಾರ್ಯಾಚರಣೆಗಳಲ್ಲಿ ಹೆಚ್ಚು ಪರಿಣತಿ ಹೊಂದಿದ್ದಾರೆ. ಅವರ ತೀವ್ರ ಮತ್ತು ಕಠಿಣ ತರಬೇತಿ ವಿಧಾನವೂ, ಕಾರ್ಯತಂತ್ರದ ಚಿಂತನೆಯ ಜೊತೆಗೆ ದೈಹಿಕ ಸ್ಥಿತಿ ಮತ್ತು ಮಾನಸಿಕ ಸದೃಢತೆಯ ಮೇಲೆ ಕೇಂದ್ರೀಕರಿಸುತ್ತದೆ.  ಈ ಎಸ್ಎಸ್‌ಜಿ ಕಮಾಂಡೋಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವಲ್ಲಿ ಹಾಗೂ ಕೈ ಕೈ ಮಿಲಾಯಿಸಿ ಹೋರಾಡುವಲ್ಲಿಯೂ ಪ್ರವೀಣರಾಗಿದ್ದಾರೆ ಮತ್ತು ಹೆಚ್ಚಿನ ಸಂಚಾರ ಮತ್ತು ಬದುಕುಳಿಯುವ ಕೌಶಲ್ಯಗಳನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ. 

ಇದನ್ನೂ ಓದಿ:ಥೈಲ್ಯಾಂಡ್‌-ಮಯನ್ಮಾರ್‌ ಭೂಕಂಪದ Impact: ಗುಜರಾತ್‌ಗೆ ಆಗಲಿದೆ ಬೆಟ್ಟದಷ್ಟು ನಷ್ಟ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯಾವುದೇ ಪಾಸ್‌ಪೋರ್ಟ್ ಇಲ್ಲದೆ ಜಗತ್ತು ಸುತ್ತಬಲ್ಲ ಟಾಪ್- 3 ವ್ಯಕ್ತಿಗಳಿವರು!
ರಾಜಸ್ಥಾನದ ಈ ಜನಾಂಗದಲ್ಲಿ ಮದುವೆಗೂ ಮುನ್ನ Live in Relationship ಕಾಮನ್, ಮಗು ಆದ್ರೇನೆ ಮದುವೆ!