ಲೆಬಿಬಾನ್ನಲ್ಲಿ ವಿಧವಿಧ ಭಕ್ಷ್ಯಗಳನ್ನು ಸೇವನೆ ಮಾಡುತ್ತಲೇ ಅದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ ಡಾ.ಬ್ರೋ. ಇದಕ್ಕೆ ಅಭಿಮಾನಿಗಳು ಏನು ಹೇಳ್ತಿದ್ದಾರೆ ನೋಡಿ...
ಸದ್ಯ ಕರ್ನಾಟದಲ್ಲಿ ಅದರಲ್ಲಿಯೂ ಬೆಂಗಳೂರಿನಲ್ಲಿ ಮಟನ್ ಗಲಾಟೆ ಜೋರಾಗಿ ನಡೆಯುತ್ತಿದೆ. ಕುರಿ ಮಾಂಸಕ್ಕೆ ನಾಯಿಯ ಮಾಂಸವನ್ನು ಮಿಕ್ಸ್ ಮಾಡಿ ಎಲ್ಲೆಡೆ ಸರಬರಾಜು ಮಾಡಲಾಗುತ್ತಿದೆ ಎಂಬ ಬಗ್ಗೆ ನಿನ್ನೆಯಿಂದ ದೊಡ್ಡ ರಾದ್ಧಾಂತವೇ ನಡೆದು ಹೋಗಿದೆ. ಇದರ ಜಾಡು ಹಿಡಿದು ಹೋದವರ ಮೇಲೆ ಪೊಲೀಸರಿಂದಲೇ ಹಲ್ಲೆ ನಡೆಯುತ್ತಿದೆ, ಇದರಲ್ಲಿ ದೊಡ್ಡ ದೊಡ್ಡವರ ಕೈವಾಡ ಇದೆ, ಕಮಿಷನ್ ಇದೆ... ಹೀಗೆ ಏನೇನೋ ಆರೋಪಗಳು ಸುತ್ತಿಕೊಳ್ಳುತ್ತಲೇ ಇವೆ. ಮಾಂಸದ ಕೆಲವೇ ಸ್ಯಾಂಪಲ್ಗಳನ್ನು ಪ್ರಯೋಗಾಲಯಕ್ಕೆ ಕೊಂಡೊಯ್ಯಲಾಗಿದೆ, ಆರೋಪಿಗಳು ಬೇಡ ಎಂದ ಸ್ಯಾಂಪಲ್ಗಳನ್ನು ಅಲ್ಲಿಯೇ ಬಿಡಲಾಗಿದೆ, ಇದು ದೊಡ್ಡ ಗುಮಾನಿ ಹುಟ್ಟುಹಾಕಿದೆ... ಹೀಗೆ ಕುರಿ ಮಾಂಸದ ವಿಷಯ ಸದ್ಯ ಕರ್ನಾಟಕದ ಜನರಲ್ಲಿ ಹಲ್ಚಲ್ ಸೃಷ್ಟಿಸುತ್ತಿದೆ.
ಇದರ ನಡುವೆಯೇ ಡಾ.ಬ್ರೋ ಎಂದೇ ಫೇಮಸ್ ಆಗಿರೋ ಗಗನ್ ಅವರು ವಿದೇಶದ ನೆಲದಲ್ಲಿ ಬಗೆಬಗೆ ತಿನಿಸುಗಳನ್ನು ತಿನ್ನುವ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಇದು ಲೆಬಿನಾನ್ನ ಪ್ರವಾಸದ ಸಂದರ್ಭದಲ್ಲಿನ ವಿಡಿಯೋ ಆಗಿದೆ. ಇದರಲ್ಲಿ ಅಲ್ಲಿಯ ವಿವಿಧ ಭಕ್ಷ್ಯಗಳನ್ನು ಸೇವನೆ ಮಾಡಿದ್ದಾರೆ ಗಗನ್. ಲೆಬಿನಾನ್ನ ವಿವಿಧ ಭಕ್ಷ್ಯಗಳನ್ನು ಕ್ಯಾಮೆರಾಕ್ಕೆ ತೋರಿಸಿ ತೋರಿಸಿ ತಿನ್ನುತ್ತಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು, ನಮಗೂ ಸ್ವಲ್ಪ ತಂದುಕೊಡಿ ಎಂದಿದ್ರೆ, ಹೊಟ್ಟೆ ಉರಿಸ್ಬೇಡ ಅಣ್ಣೋ ಎಂದು ಇನ್ನು ಕೆಲವರು ಹೇಳ್ತಿದ್ದಾರೆ. ಆದರೆ ಹಲವರು ಹೇಳಿ ಕೇಳಿ ಅದು ಲೆಬಿನಾನ್ ಕಣಣ್ಣೋ... ನೀನು ಪ್ಯೂರ್ ವೆಜ್ಜು. ಅದರಲ್ಲಿ ಬೌ ಬೌ ಇದ್ರೂ ಇರ್ಬೋದು ಎಂದು ತಮಾಷೆ ಮಾಡುತ್ತಿದ್ದಾರೆ.
undefined
ಅರಬ್ ದೇಶ ಲೆಬಿನಾನ್ನಲ್ಲಿ ಅರಳಿದ ಕಮಲ! ಒಂದೇ ದಿನ 8 ಲಕ್ಷ ವ್ಯೂಸ್ ಕಂಡ ಡಾ.ಬ್ರೋ ವಿಡಿಯೋದಲ್ಲೇನಿದೆ?
ತಾಲಿಬಾನ್, ಪಾಕಿಸ್ತಾನ್ದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ. ಇದೀಗ ಇನ್ನೊಂದು ಮುಸ್ಲಿಂ ರಾಷ್ಟ್ರ ಲಿಬಿನಾನ್ಗೆ ಹೋಗಿರುವ ಡಾ.ಬ್ರೋ ಅಲ್ಲಿಯ ವಿಶೇಷ ಮಾಹಿತಿಗಳನ್ನು ಕನ್ನಡದಲ್ಲಿಯೇ ನೀಡಿದ್ದಾರೆ. ಮಧ್ಯ ಪ್ರಾಚೀನ ರಾಷ್ಟ್ರವಾಗಿರುವ ಲೆಬಿನಾನ್ನಲ್ಲಿ ಅಂದಾಜಿನ ಪ್ರಕಾರ, ದೇಶದ ಒಟ್ಟು ಜನಸಂಖ್ಯೆಯ 63% ಜನರು ಇಸ್ಲಾಂ ಅನುಸರಿಸುತ್ತಿದ್ದಾರೆ. ಸುನ್ನಿಗಳು 31.9% ರಷ್ಟಿದ್ದಾರೆ, ಟ್ವೆಲ್ವರ್ ಶಿಯಾ 31.2% ರಷ್ಟಿದ್ದಾರೆ, ಅಲಾವೈಟ್ಸ್ ಮತ್ತು ಇಸ್ಮಾಯಿಲಿಗಳಂತಹ ಇತರ ಶಿಯಾ ಶಾಖೆಗಳ ಜನರೂ ಇದ್ದಾರೆ. ಇದರ ಬಗ್ಗೆ ಇದಾಗಲೇ ಹಲವು ವಿಡಿಯೋಗಳನ್ನು ಶೇರ್ ಮಾಡಿದ್ದಾರೆ ಡಾ.ಬ್ರೊ.
ಲೆಬಿನಾನ್ನ ಹಲವು ಭಾಗಗಳು, ರಾಸಾಯನಿಕ ಕಾರ್ಖಾನೆಗಳು, ಅಲ್ಲಿಯ ಜನರ ನೋವು, ಬವಣೆಗಳು, ದೇಶ ಬಿಟ್ಟು ಓಡಿ ಹೋದ ಜನರ ಹಿನ್ನೆಲೆ, ಎಲ್ಲಾ ಕಷ್ಟಗಳನ್ನೂ ಸಹಿಸಿಕೊಂಡು ನಗುತ್ತಲೇ ಇರುವ ಕೆಲವು ವರ್ಗಗಳು, ವೈನ್ ಫ್ಯಾಕ್ಟರಿ... ಹೀಗೆ ಲೆಬಿನಾನ್ನ ಹತ್ತು-ಹಲವು ವಿಶೇಷತೆಗಳನ್ನು ತಿಳಿಸಿರುವ ಡಾ.ಬ್ರೋ ಅಲ್ಲಿನ ವಾಸ್ತುಶಿಲ್ಪದ ಮೇಲೆ ಬೆಳಕು ಚೆಲ್ಲಿದ್ದಾರೆ. ಅಸಾಧ್ಯ ಎಂಬಂಥ ಕಲ್ಲು ಕಂಬಗಳನ್ನು ನಿಲ್ಲಿಸಿರುವುದರ ಬಗ್ಗೆ ತಿಳಿಸುತ್ತಲೇ ಇದು ಭಾರತೀಯ ವಾಸ್ತುಶಿಲ್ಪಿಗಳಿಂದ ತಯಾರಾಗಿರುವ ಮಾಹಿತಿ ನೀಡಿದ್ದಾರೆ. ಅಲ್ಲಿನ ಹಲವಾರು ಕಲ್ಲಿನ ಕೆತ್ತನೆಗಳ ಮೇಲೆ ಭಾರತೀಯ ವಾಸ್ತುಶಿಲ್ಪದ ಛಾಯೆ ಇರುವುದನ್ನು ನೋಡಬಹುದು. ತಮ್ಮ ಮಾತಿಗೆ ಇನ್ನಷ್ಟು ಪುಷ್ಟಿ ನೀಡಲು ಅಲ್ಲಿನ ಕಲ್ಲಿನ ಕಂಬದ ಮೇಲೆ ಇರುವ ಕಮಲದ ಹೂವಿನ ಶಿಲ್ಪವನ್ನು ತೋರಿಸಿದ್ದಾರೆ ಡಾ.ಬ್ರೋ. ಸಾಮಾನ್ಯವಾಗಿ ಭಾರತದ ಶಿಲ್ಪಿಗಳು ಶಿಲ್ಪದ ಆರಂಭಕ್ಕೂ ಮುನ್ನ ಚಿತ್ರಿಸುವ ಕಮಲದ ಹೂವು ಇದಾಗಿದೆ. ಮಧ್ಯ ಪ್ರಾಚೀನ ಅರಬ್ ರಾಷ್ಟ್ರದವರು ಕಮಲ ಎನ್ನುವ ಹೆಸರೇ ಕೇಳಿರಲಿಕ್ಕಿಲ್ಲ. ಇನ್ನು ಹೂವಿನದ್ದು ದೂರದ ಮಾತು. ಆದ್ದರಿಂದ ಇದು ಭಾರತದ ವಾಸ್ತುಶಿಲ್ಪ ಎನ್ನುವುದಕ್ಕೆ ಸ್ಪಷ್ಟ ಉತ್ತರ ಎಂದಿದ್ದಾರೆ ಡಾ.ಬ್ರೋ.
ಭೂಮಿ ಬಿಟ್ಟು ಬೇರೆ ಗ್ರಹಕ್ಕೆ ಲಗ್ಗೆ ಇಟ್ಟು ಬಿಟ್ರಾ ಡಾ.ಬ್ರೋ? ಮೈ ಝುಂ ಎನ್ನುವ ಭಯಾನಕ ದೃಶ್ಯದ ಸೆರೆ...