ಬೆಂಗಳೂರು-ಕಾರವಾರ ವಿಶೇಷ ಎಕ್ಸ್‌ಪ್ರೆಸ್ ರೈಲು, ಇಲ್ಲಿದೆ ವೇಳಾಪಟ್ಟಿ ಮಾಹಿತಿ

By Gowthami KFirst Published Jul 24, 2024, 12:55 PM IST
Highlights

ಪ್ರಯಾಣಿಕರ ಬೇಡಿಕೆಯ ಮೇರೆಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಾರವಾರ ನಿಲ್ದಾಣಗಳ ನಡುವೆ ಎರಡು ಟ್ರಿಪ್ ವಿಶೇಷ ರೈಲು ಸಂಚಾರ ಮಾಡಲಿದೆ.

ಬೆಂಗಳೂರು (ಜು.24): ಪ್ರಯಾಣಿಕರ ಬೇಡಿಕೆಯ ಮೇರೆಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಾರವಾರ ನಿಲ್ದಾಣಗಳ ನಡುವೆ ಎರಡು ಟ್ರಿಪ್ ವಿಶೇಷ ರೈಲು ಸಂಚಾರ ಮಾಡಲಿದೆ. ಜುಲೈ 26 ಮತ್ತು 28ರಂದು ಎಸ್ಎಂವಿಟಿ ಬೆಂಗಳೂರು-ಕಾರವಾರ ವಿಶೇಷ ಎಕ್ಸ್‌ಪ್ರೆಸ್ ರೈಲು (06567) ಎಸ್ಎಂವಿಟಿ ಬೆಂಗಳೂರಿನಿಂದ ಮಧ್ಯರಾತ್ರಿ 12.30 ಗಂಟೆಗೆ ಹೊರಟು, ಸಂಜೆ 4 ಗಂಟೆಗೆ ಕಾರವಾರ ನಿಲ್ದಾಣ ತಲುಪಲಿದೆ. ಪುನಃ ಇದೇ ರೈಲು (06568) ಜುಲೈ 26 ಮತ್ತು 28 ರಂದು ಕಾರವಾರ ನಿಲ್ದಾಣದಿಂದ ರಾತ್ರಿ 11:30 ಗಂಟೆಗೆ ಹೊರಟು, ಮರುದಿನ ಸಂಜೆ 3:30 ಗಂಟೆಗೆ ಎಸ್ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ. 

ದಾವಣಗೆರೆಯಿಂದ ಶ್ರೀಶೈಲಕ್ಕೆ ರೈಲು ಸೇವೆಗೆ ಪ್ರಯತ್ನ
ದಾವಣಗೆರೆಯಿಂದ ಆಂಧ್ರಪ್ರದೇಶದ ಶ್ರೀಶೈಲ ಪುಣ್ಯಕ್ಷೇತ್ರಕ್ಕೆ ಹೋಗಿ ಬರುವ ಭಕ್ತರ ಅನುಕೂಲಕ್ಕಾಗಿ ರೈಲು ಸಂಚಾರ ಆರಂಭಿಸುವಂತೆ ಕೇಂದ್ರ ರೈಲ್ವೆ ಸಚಿವರು, ಇಲಾಖೆ ಉನ್ನತ ಅಧಿಕಾರಿಗಳ ಮೇಲೆ ಒತ್ತಡ ಹೇರುವುದಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭರವಸೆ ನೀಡಿದರು.

Latest Videos

ಬೆಂಗಳೂರಿನ ಶ್ರೀಶೈಲ ಪೀಠದಲ್ಲಿ ಗುರುವಾರ ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಇಷ್ಟಲಿಂಗ ಪೂಜೆ ಹಾಗೂ ಧಾರ್ಮಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ಬೆಂಗಳೂರಿನಲ್ಲಿ ಬಾಡಿಗೆ ಮನೆ ಪಡೆಯಲು ಅಲೆದಾಟ, ಆದ್ರೆ ಇಲ್ಲಿ ದಾಖಲೆಯ 9 ಮಿಲಿಯನ್ ಮನೆಗಳು ಖಾಲಿ!

ಶ್ರೀ ಪೀಠದ ಭಕ್ತರ ಕೋರಿಕೆ ಮೇರೆಗೆ ದಾವಣಗೆರೆ-ಮಾರ್ಕಾಪುರ ಮಾರ್ಗವಾಗಿ ರೈಲು ಸಂಚಾರ ಆರಂಭಿಸುವ ಬಗ್ಗೆ ಕೇಂದ್ರ ರೈಲ್ವೆ ಸಚಿವರು, ಕೇಂದ್ರ ರೈಲ್ವೆ ಅಧಿಕಾರಿಗಳಿಗೆ ಒತ್ತಾಯಿಸಲಾಗುವುದು. ದಾವಣಗೆರೆ- ಶ್ರೀಶೈಲದ ಮಧ್ಯೆ ರೈಲು ಸೇವೆ ಆರಂಭಿಸುವ ಬಗ್ಗೆ ಸದ್ಯಕ್ಕೆ ಶ್ರೀಶೈಲದ ಸಮೀಪದ ಮಾರ್ಕಾಪುರ ರಸ್ತೆವರೆಗೂ ಮಾತ್ರ ರೈಲು ಸೇವೆ ನೀಡಲು ಅವಕಾಶ ಇದೆ. ದಾವಣಗೆರೆಯಿಂದ ನೇರವಾಗಿ ಮಾರ್ಕಾಪುರ ತಲುಪಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಶ್ರೀಕ್ಷೇತ್ರ ತಲುಪಬೇಕು. ನೇರವಾಗಿ ಶ್ರೀಶೈಲಕ್ಕೆ ರೈಲು ಸಂಚಾರ ಆರಂಭವಾದರೆ ಸಾವಿರಾರು ಭಕ್ತರಿಗೂ ಅನುಕೂಲ. ಇದರಿಂದ ಭಕ್ತರಿಗೆ ಸಮಯ ಉಳಿತಾಯ ಮತ್ತು ದೈಹಿಕ ಶ್ರಮ ಕಡಿಮೆ ಮಾಡಿದಂತಾಗುತ್ತದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಡಾ.ಪ್ರಭಾ ಹೇಳಿದರು. ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಯುವ ಮುಖಂಡ ಟಿ.ಆರ್‌.ಪ್ರಶಾಂತ ಇತರರು ಇದ್ದರು.

ರೈಲ್ವೆ ಮೇಲಿನ ಬಂಡವಾಳ ವೆಚ್ಚ 5 ವರ್ಷಗಳಲ್ಲಿ ಶೇ.77 ಹೆಚ್ಚಳ!: ಭಾರತದಲ್ಲಿ ಹೊಸ ರೈಲು ಮಾರ್ಗಗಳ ನಿರ್ಮಾಣ, ಗೇಜ್‌ ಪರಿವರ್ತನೆಯಲ್ಲಿ ಹೂಡಿಕೆ ದ್ವಿಗುಣಗೊಂಡಿದ್ದು ಕಳೆದ 5 ವರ್ಷದಲ್ಲಿ ರೈಲ್ವೆ ಮೇಲೆನ ಬಂಡವಾಳ ವೆಚ್ಚವು ಶೇ.77 ರಚ್ಟು ಹೆಚ್ಚಾಗಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. ಸಮೀಕ್ಷೆ ಪ್ರಕಾರ, 2019-20ರ ಹಣಕಾಸು ವರ್ಷದಲ್ಲಿ ಬಂಡವಾಳ ವೆಚ್ಚ 1.48 ಲಕ್ಷ ಕೋಟಿ ರು,ನಷ್ಟಿದ್ದು, 2023-24ರಲ್ಲಿ 2.62 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. ಅಮೃತ ಭಾರತ ಸ್ಟೇಷನ್‌ ಯೋಜನೆ, ಮುಂಬೈ-ಅಹಮದಾಬಾದ್‌ ಅತಿ ವೇಗದ ರೈಲು, ಮೀಸಲಾದ ಸರಕು ಕಾರಿಡಾರ್‌ಗಳು ಹಾಗೂ ಮುಂತಾದ ಯೋಜನೆಗಳ ಮೇಲೆ ಹೂಡಿಕೆ ಹೆಚ್ಚಾಗಿದೆ.

click me!