H1, H2 ಅಥವಾ A1 ಹೀಗೆ ಟಿಕೆಟ್ ಮೇಲೆ ನಮೂದಿಸಿದಾಗ ಕೆಲ ಪ್ರಯಾಣಿಕರು ಗೊಂದಲಕ್ಕೆ ಒಳಗಾಗುತ್ತಾರೆ. ಇಂದು ನಾವು ನಿಮಗೆ H1, H2, A1 ಅಂತ ಟಿಕೆಟ್ ಮೇಲೆ ಬರೆಯಲಾಗಿದ್ರೆ ಎಲ್ಲಿ ಕುಳಿತುಕೊಳ್ಳಬೇಕು ಎಂಬುದರ ಮಾಹಿತಿ ನೀಡುತ್ತಿದ್ದೇವೆ.
ರೈಲಿನಲ್ಲಿ ಪ್ರಯಾಣ (Railway Journey) ಮಧ್ಯಮ ವರ್ಗದ ಜೀವನಾಡಿ. ರೈಲು ಟಿಕೆಟ್ ದರ ಬೇರೆ ಸಾರಿಗೆಗಿಂತ ಕಡಿಮೆ ಇರೋ ಕಾರಣ ಬಹುತೇಕರು ಭಾರತೀಯ ರೈಲ್ವೆಯಲ್ಲಿ (Indian Railways) ಪ್ರಯಾಣಿಸಲು ಇಷ್ಟಪಡ್ತಾರೆ. ಮುಂಗಡವಾಗಿ ರೈಲು ಟಿಕೆಟ್ ಬುಕ್ (Railway Ticket Booking) ಮಾಡಿದ್ರೆ ಅದರಲ್ಲಿ ಪ್ರಯಾಣಿಕರ ಹೆಸರು, ವಯಸ್ಸು ಎಲ್ಲಿಂದ ಎಲ್ಲಿಯವರೆಗೆ ಪ್ರಯಾಣ ಹಾಗೂ ಆಸನದ ಸಂಖ್ಯೆ ನಮೂದು ಆಗಿರುತ್ತದೆ. ಆದ್ರೆ ಆಸನದ ಸಂಖ್ಯೆಯನ್ನು ಸಂಕ್ಷಿಪ್ತವಾಗಿ ನಮೂದಿಸಲಾಗಿರುತ್ತದೆ. ಕೆಲವೊಮ್ಮೆ H1, H2 ಅಥವಾ A1 ಹೀಗೆ ಟಿಕೆಟ್ ಮೇಲೆ ನಮೂದಿಸಿದಾಗ ಕೆಲ ಪ್ರಯಾಣಿಕರು ಗೊಂದಲಕ್ಕೆ ಒಳಗಾಗುತ್ತಾರೆ. ಇಂದು ನಾವು ನಿಮಗೆ H1, H2, A1 ಅಂತ ಟಿಕೆಟ್ ಮೇಲೆ ಬರೆಯಲಾಗಿದ್ರೆ ಎಲ್ಲಿ ಕುಳಿತುಕೊಳ್ಳಬೇಕು ಎಂಬುದರ ಮಾಹಿತಿ ನೀಡುತ್ತಿದ್ದೇವೆ.
ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸಲು ರೈಲುಗಳು ಅತ್ಯುತ್ತಮ ಸಾರಿಗೆ ಸೌಕರ್ಯವಾಗಿದೆ. ಆರಾಮದಾಯಕ ಮತ್ತು ಬಜೆಟ್ ಫ್ಲೆಂಡ್ಲೀ. ಬಸ್, ವಿಮಾನಗಳಿಗೆ ಹೋಲಿಸಿದರೆ ರೈಲಿನಲ್ಲಿ ಕಡಿಮೆ ದರದಲ್ಲಿ ಪ್ರಯಾಣಿಸಬಹುದು. ಹಾಗಾಗಿ ಎಲ್ಲಾ ವರ್ಗದ ಜನರು ರೈಲು ಪ್ರಯಾಣಿಕರಿಗೆ ಮೊದಲ ಆದ್ಯತೆಯ್ನು ನೀಡುತ್ತಾರೆ.
ಮುಂಗಡವಾಗಿ ಟಿಕೆಟ್ ಬುಕ್ ಮಾಡಿದಾಗ SL1, H1, H2 A1, B1, CC ಅಂತಾ ಆಸನದ ಸಂಖ್ಯೆಯನ್ನು ಫಿಕ್ಸ್ ಮಾಡಲಾಗಿರುತ್ತದೆ. SL ಅಂದ್ರೆ ಸ್ಲೀಪರ್ ಕ್ಲಾಸ್ ಎಂದರ್ಥ. ಎಲ್ಲಾ ರೈಲುಗಳಲ್ಲಿ ಸ್ಲೀಪರ್ ಕೋಚ್ ಸಂಖ್ಯೆ ಹೆಚ್ಚಾಗಿರುತ್ತದೆ. CC ಅಂದ್ರೆ ಕಾರ್ ಕಂಪಾರ್ಟ್‌ಮೆಂಟ್. ಮೂರನೇ ದರ್ಜೆಯ ಎಸಿ ಕೋಚ್‌ಗಳ ಟಿಕೆಟ್ ಮೇಲೆ B3 ಎಂದು ಬರೆಯಲಾಗಿರುತ್ತದೆ.
ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್; ಇನ್ಮುಂದೆ ವೈಟಿಂಗ್ ಲಿಸ್ಟ್ ಇಲ್ಲ, ದಟ್ಟಣೆಯೂ ಇರಲ್ಲ!
ಫಸ್ಟ್ ಕ್ಲಾಸ್ ಎಸಿ ಕೋಚ್ ಟಿಕೆಟ್ ಮೇಲೆ H1 ಎಂದು ಬರೆಯಲಾಗಿರುತ್ತದೆ. ಮೊದಲ ದರ್ಜೆಯ ಕ್ಲಾಸ್ ಕೋಚ್‌ಗಳ ತುಂಬಾ ವಿಭಿನ್ನ ಮತ್ತು ವಿಶೇಷ ಸೌಲಭ್ಯಗಳನ್ನು ಹೊಂದಿರುತ್ತಿರುತ್ತೇವೆ. ಈ ಕೋಚ್‌ಗಳಲ್ಲಿ ಸ್ಪೆಷಲ್ ಕ್ಯಾಬಿನ್ ಇರುತ್ತೇವೆ. ಒಂದು ಕ್ಯಾಬಿನ್‌ನಲ್ಲಿ ಎರಡು ಆಸನಗಳು ಮಾತ್ರ ಇರುತ್ತವೆ. ಈ ಕೋಚ್ ಆಸನಗಳ ಮೇಲೆ H1 ಬರೆಯಲಾಗಿರುತ್ತದೆ. H2 ಅಂತ ಬರೆದಿದ್ದರೆ ನಿಮ್ಮ ಟಿಕೆಟ್ ಪ್ರಥಮ ದರ್ಜೆಯ ಎರಡನೇ ಕೋಚ್‌ನಲ್ಲಿದೆ ಎಂದು ತಿಳಿದುಕೊಳ್ಳಬೇಕು.
ಅದೇ ರೀತಿ ಟಿಕೆಟ್ ಮೇಲೆ A1 ಅಥವಾ A2 ಅಂತ ಬರೆದ್ರೂ ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ಟಿಕೆಟ್ ಮೇಲೆ A1 ಅಂತ ಬರೆದಿದ್ದರೆ ನಿಮ್ಮ ಆಸನ ಎರಡನೇ ದರ್ಜೆಯ ಮೊದಲ ಎಸಿ ಕೋಚ್‌ನಲ್ಲಿದೆ ಎಂದು ತಿಳಿದುಕೊಳ್ಳಬೇಕು. A2 ಅಂತ ಬರೆದಿದ್ದರೆ ನಿಮ್ಮ ಸೀಟ್ ಎರಡನೇ ದರ್ಜೆಯ ಸೆಕೆಂಡ್ ಕೋಚ್‌ನಲ್ಲಿದೆ ಎಂದು ತಿಳಿದುಕೊಳ್ಳಬೇಕು.
ಜನರಲ್ ,ವೈಟ್‌ಲಿಸ್ಟ್ ರೈಲು ಟಿಕೆಟ್ ಖರೀದಿಸಿ ರಿಸರ್ವ್ ಬೋಗಿಯಲ್ಲಿ ಪ್ರಯಾಣಿಕ್ಕಿಲ್ಲ ಅವಕಾಶ
ಇನ್ನು ಟಿಕೆಟ್ ಮೇಲೆ B1, B2, B3 ಅಂತಾ ಬರೆದಿದ್ದರೆ ನಿಮ್ಮ ಸೀಟ್ ಮೂರನೇ ದರ್ಜೆಯ ಎಸಿ ಕೋಚ್‌ನಲ್ಲಿದೆ ಎಂದರ್ಥ. ಕೆಲವೊಮ್ಮೆ ಸ್ಲೀಪರ್ ಕೋಚ್ ಟಿಕೆಟ್‌ಗಳನ್ನು ಮೂರನೇ ದರ್ಜೆಯ ಕೋಚ್‌ಗೆ ಶಿಫ್ಟ್ ಮಾಡಲಾಗಿರುತ್ತದೆ. ಇದರಿಂದ ಬಹುತೇಕ ಪ್ರಯಾಣಿಕರು ಗೊಂದಲಕ್ಕೆ ಒಳಗಾಗುತ್ತಾರೆ.