ಚಳಿಗಾಲ ಬಂತೆಂದ್ರೆ ಬೆಚ್ಚಗಿನ ಆಹಾರ,ಬೆಚ್ಚಗಿರುವ ಬಟ್ಟೆ ಧರಿಸಲು ಮುಂದಾಗ್ತೇವೆ. ನಮ್ಮೂರಲ್ಲಿರುವ ಚಳಿಯನ್ನೇ ನಮಗೆ ತಡೆದುಕೊಳ್ಳೋದು ಕಷ್ಟ. ಹಾಗಿರುವಾಗ ಮೈನಸ್ ಡಿಗ್ರಿ ತಾಪಮಾನದ ಊರಿಗೆ ಹೋದ್ರೆ ಪರಿಸ್ಥಿತಿ ಏನಾಗ್ಬೇಡ.
ಸಿಲಿಕಾನ್ ಸಿಟಿ ಬೆಂಗಳೂರಿ (Bangalore)ನಲ್ಲಿಯೇ ಮೈ ನಡುಗುವ ಚಳಿಯಿದೆ. ಇನ್ನು ಪ್ರತಿ ವರ್ಷವೂ ದಾಖಲೆ ಬರೆಯುವ ಚಳಿ ಪ್ರದೇಶಗಳ ಸ್ಥಿತಿ ಹೇಗಿರಬೇಡ. ದೇಶದಾದ್ಯಂತ ಇಂತಹ ಅನೇಕ ಗಿರಿಧಾಮಗಳಿವೆ. ಚಳಿಗಾಲದಲ್ಲಿ ಇಲ್ಲಿ ದಾಖಲೆ ಮಟ್ಟದಲ್ಲಿ ಚಳಿ (Cold )ಬೀಳುತ್ತದೆ. ಅಲ್ಲಿನ ತಾಪಮಾನಗಳು 10 ಡಿಗ್ರಿಗಿಂತ ಕಡಿಮೆಯಿರುತ್ತವೆ. ಹಿಮಪಾತ ಮತ್ತು ಶೀತ ಗಾಳಿಯ ನಡುವೆ ಬದುಕುವುದು ಒಂದು ಸವಾಲಿನ ಕೆಲಸವಾಗುತ್ತದೆ.
ಅನೇಕರು ಚಳಿಯನ್ನು ಇಷ್ಟಪಡ್ತಾರೆ. ಹಿಮಪಾತ,ಚಳಿಯನ್ನು ಎಂಜಾಯ್ ಮಾಡಲು ಬಯಸ್ತಾರೆ. ಅಂತವರು ವಿದೇಶಕ್ಕೆ ಹೋಗುವ ಅಗತ್ಯವಿಲ್ಲ. ನಮ್ಮ ಭಾರತದ ಅತೀ ಹೆಚ್ಚು ಚಳಿ ಬೀಳುವ ಹಾಗೂ ಹಿಮಪಾತವಾಗುವ ಪ್ರದೇಶಗಳಿವೆ. ಆದ್ರೆ ಎಲ್ಲ ಪ್ರದೇಶಗಳಿಗೆ ಚಳಿಗಾಲದಲ್ಲಿ ಹೋಗಲು ಸಾಧ್ಯವಿಲ್ಲ. ಅಂತ ಪ್ರದೇಶಗಳಿಗೆ ನೀವು ಬೇಸಿಗೆ (Summer)ಯಲ್ಲಿ ಭೇಟಿ ನೀಡಬಹುದು. ಭಾರತ (India)ದಲ್ಲಿ ದಾಖಲೆ ಮಟ್ಟದಲ್ಲಿ ಚಳಿಯಾಗುವ ಕೆಲ ನಗರಗಳ ವಿವರ ಇಲ್ಲಿದೆ.
ಭಾರತದ ಚಳಿ ಪ್ರದೇಶಗಳು(Coldest Places) :
ಮುನ್ಸಿಯಾರಿ (Munsiyari) : ಮುನ್ಸಿಯಾರಿಯು ಉತ್ತರಾಖಂಡ (Uttarakhand)ದ ಪಿಥೋರಗಢ ಜಿಲ್ಲೆಯಲ್ಲಿದೆ. ಮುನ್ಸಿಯಾರಿ ಸಮುದ್ರ (Sea) ಮಟ್ಟದಿಂದ ಸುಮಾರು 2,500 ಮೀಟರ್ ಎತ್ತರದಲ್ಲಿದೆ. ನೈಸರ್ಗಿಕ ಸೌಂದರ್ಯ (Natural beauty) ಆನಂದಿಸಲು ಈ ಸ್ಥಳವನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಇಲ್ಲಿನ ಹವಾಮಾನವು ವರ್ಷವಿಡೀ ತಂಪಾಗಿರುತ್ತದೆ. ಮುನ್ಸಿಯಾರಿ ತಾಪಮಾನದ ಬಗ್ಗೆ ಹೇಳುವುದಾದ್ರೆ ಅಲ್ಲಿನ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ. ಮುನ್ಸಿಯಾರಿ,ಅಪರೂಪದ ಪಕ್ಷಿಗಳು, ಹಿಮದಿಂದ ಆವೃತವಾದ ಪರ್ವತಗಳು ಮತ್ತು ಹಿಮಾವೃತ ಸರೋವರಗಳ ಮೂಲಕ ಪ್ರವಾಸಿಗ (tourist)ರನ್ನು ಸೆಳೆಯುತ್ತದೆ.
undefined
ಲಡಾಖ್ (Ladakh): ಲಡಾಖ್ ಹಿಮಾಲಯ(Himalayas )ಶ್ರೇಣಿಗಳ ನಡುವೆ ಇರುವ ಅತ್ಯಂತ ಶೀತ ಪ್ರದೇಶವಾಗಿದೆ. ಜನವರಿ ತಿಂಗಳಲ್ಲಿ, ಲಡಾಖ್‌ನ ಗರಿಷ್ಠ ತಾಪಮಾನವು ಸುಮಾರು -12 ಡ್ರಿಗಿ ತಲುಪುತ್ತದೆ. ಬೇಸಿಗೆಯಲ್ಲಿ ಇಲ್ಲಿಗೆ ಭೇಟಿ ನೀಡುವುದು ಸೂಕ್ತವಾಗಿದೆ. ಚಳಿಗಾಲದಲ್ಲಿ ಭಾರೀ ಹಿಮಪಾತ ಮತ್ತು ಮೈನಸ್ ಡಿಗ್ರಿ ತಾಪಮಾನ ದಾಖಲಾಗುವುದ್ರಿಂದ ಚಳಿಗಾಲದಲ್ಲಿ ಇಲ್ಲಿಗೆ ಹೋಗುವುದು ಕಷ್ಟ.
ತವಾಂಗ್(Tawang) : ತವಾಂಗ್ ಅರುಣಾಚಲ ಪ್ರದೇಶ (Arunachal Pradesh)ದಲ್ಲಿದೆ. ಇದನ್ನು ಭಾರತದ ಅತ್ಯಂತ ಶೀತ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಭಾರೀ ಹಿಮಪಾತವನ್ನು ಆನಂದಿಸಲು ದೇಶ ಮತ್ತು ವಿದೇಶಗಳಿಂದ ಜನರು ಇಲ್ಲಿಗೆ ಬರಲು ಇಷ್ಟಪಡುತ್ತಾರೆ. ಚಳಿಯ ವಿಚಾರಕ್ಕೆ ತವಾಂಗ್ ಪ್ರವಾಸಿಗರನ್ನು ಸೆಳೆಯುತ್ತದೆ. ಚಳಿಗಾಲದಲ್ಲಿ ಭಾರೀ ಹಿಮಪಾತ ಮತ್ತು ಹಿಮಕುಸಿತಗಳ ಕಾರಣದಿಂದ ಇದನ್ನು ಆಫ್‌ಬೀಟ್ ಪ್ರವಾಸಿ ತಾಣವೆಂದು ಪರಿಗಣಿಸಲಾಗಿದೆ. ಇದಲ್ಲದೆ, ಇದು ದೇಶದ ಅತ್ಯಂತ ಅಪಾಯಕಾರಿ ಮತ್ತು ಶೀತ ಸ್ಥಳಗಳವಾಗಿದೆ.
ಸೋನ್ಮಾರ್ಗ್(Sonmarg) : ಸೋನ್ಮಾರ್ಗ್ ಬೇಸಿಗೆಯಲ್ಲಿ ಭೇಟಿ ನೀಡಲು ಅತ್ಯುತ್ತಮ ತಾಣವಾಗಿದೆ. ಚಳಿಗಾಲದಲ್ಲಿ ಅತಿ ಹೆಚ್ಚು ಚಳಿ ಬೀಳುವ ಪ್ರದೇಶಗಳಲ್ಲಿ ಸೋನ್ಮಾರ್ಗ್ ಕೂಡ ಒಂದು. ಚಳಿಗಾಲದಲ್ಲಿ, ಸೋನ್ಮಾರ್ಗ್ ತಾಪಮಾನವು ಸುಮಾರು 6 ಡಿಗ್ರಿ ಸೆಲ್ಸಿಯಸ್ ಗೆ ಇಳಿಯುತ್ತದೆ. ಚಳಿಗಾಲದಲ್ಲಿ, ಇಲ್ಲಿನ ಪರ್ವತಗಳು ಮತ್ತು ಸರೋವರಗಳು ಹಿಮದಿಂದ ಆವೃತವಾಗಿರುತ್ತವೆ.
ಮನಾಲಿ (Manali) : ಮನಾಲಿ ಹಿಮಾಚಲ ಪ್ರದೇಶದ ಕುಲ್ಲು (Kullu )ಜಿಲ್ಲೆಯಲ್ಲಿದೆ. ಈ ಗಿರಿಧಾಮವನ್ನು ಪ್ರತಿಯೊಬ್ಬರ ನೆಚ್ಚಿನ ತಾಣವೆಂದು ಪರಿಗಣಿಸಲಾಗಿದೆ. ಇಲ್ಲಿನ ರುದ್ರರಮಣೀಯ ನೋಟ ಮತ್ತು ಮೋಜಿನ ಚಟುವಟಿಕೆಗಳಿಂದಾಗಿ ವರ್ಷವಿಡೀ ಜನರು ಇಲ್ಲಿಗೆ ಭೇಟಿ ನೀಡಲು ಬರುತ್ತಾರೆ. ಬೇಸಿಗೆಯಲ್ಲಿ ಮನಾಲಿ ಬಿಸಿಯಾಗಿದ್ದರೆ, ಚಳಿಗಾಲದಲ್ಲಿ ತಾಪಮಾನವು 10 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುತ್ತದೆ. ವಿಶೇಷವಾಗಿ ಹೊಸದಾಗಿ ಮದುವೆಯಾದ ದಂಪತಿ ಮನಾಲಿಗೆ ಹನಿಮೂನ್ (Honeymoon) ಗೆ ಬರುವುದು ಹೆಚ್ಚು. ಇಲ್ಲಿ ನೀವು ಹೈಕಿಂಗ್, ರಿವರ್ ರಾಫ್ಟಿಂಗ್, ಟ್ರೆಕ್ಕಿಂಗ್ (Trekking) ಇತ್ಯಾದಿಗಳನ್ನು ಆನಂದಿಸಬಹುದು.