
ಇತ್ತೀಚಿನ ದಿನಗಳಲ್ಲಿ ವಿಮಾನ (Flight) ಪ್ರಯಾಣ (Travel)ಕ್ಕೆ ಹೆಚ್ಚು ಆದ್ಯತೆಯನ್ನು ನೀಡಲಾಗ್ತಿದೆ. ಬಹುಬೇಗ ಗಮ್ಯಸ್ಥಾನ ತಲುಪಬಹುದು ಎಂಬ ಕಾರಣಕ್ಕೆ ಬಸ್ (Bus),ರೈಲಿ (Train)ಗಿಂತ ಸ್ವಲ್ಪ ಖರ್ಚು (Expense) ಹೆಚ್ಚಿದ್ದರೂ ವಿಮಾನ ಪ್ರಯಾಣ ಬೆಳೆಸುತ್ತಿದ್ದಾರೆ. ವಿಮಾನದಲ್ಲಿ ಮಗು ಜನಿಸಿದ ಕೆಲ ಪ್ರಕರಣಗಳೂ ವರದಿಯಾಗಿವೆ. ಮಗು ಜನಿಸಿದ ದೇಶದ ಪೌರತ್ವ(Citizenship)ಮಗುವಿಗೆ ನೀಡಲಾಗುತ್ತದೆ. ಮಗು ಭಾರತದಲ್ಲಿ ಜನಿಸಿದರೆ ಭಾರತ(India)ದ ಪೌರತ್ವ ಸಿಗುತ್ತದೆ. ವಿದೇಶದಲ್ಲಿ ಜನಿಸಿದರೆ ವಿದೇಶ (Abroad)ದ ಪೌರತ್ವ ಪಡೆಯಬಹುದು. ಹಾಗಿರುವಾಗ, ಅಂತರಾಷ್ಟ್ರೀಯ(International )ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೆರಿಗೆಯಾದರೆ ಯಾವ ಪೌರತ್ವ ಸಿಗಬಹುದು. ಇದರ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಇಂದು ನಾವು,ಅಂತರಾಷ್ಟ್ರೀಯ ವಿಮಾನ ಹಾರಾಟದ ವೇಳೆ ಹೆರಿಗೆ(Childbirth)ಯಾದ್ರೆ ಮಗುವಿಗೆ ಯಾವ ದೇಶ(Country)ದ ಪೌರತ್ವ ಸಿಗುತ್ತದೆ ಎಂಬುದನ್ನು ಹೇಳುತ್ತೇವೆ.
ಮೊದಲನೆಯದಾಗಿ, ಭಾರತದಲ್ಲಿ 7 ತಿಂಗಳ ಪೂರೈಸಿದ ಗರ್ಭಿಣಿ (Pregnant)ಯರಿಗೆ ವಿಮಾನ ಪ್ರಯಾಣವನ್ನು ನಿಷೇಧಸಲಾಗಿದೆ. 7 ತಿಂಗಳು ತುಂಬಿದ ಗರ್ಭಿಣಿಯರಿಗೆ ವಿಮಾನ ಪ್ರಯಾಣ ಯೋಗ್ಯವಲ್ಲ. ಹಾಗಾಗಿ ವಿಮಾನ ಪ್ರಯಾಣಕ್ಕೆ ಅವಕಾಶ ನೀಡಲಾಗುವುದಿಲ್ಲ. ಕೆಲವು ವಿಶೇಷ ಸಂದರ್ಭಗಳಲ್ಲಿ,ತುರ್ತು ಸಂದರ್ಭಗಳಲ್ಲಿ ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ನೀಡಲಾಗುತ್ತದೆ.
ಒಂದು ವೇಳೆ ವಿಮಾನದಲ್ಲಿ ಪ್ರಯಾಣಿಸುವ ವೇಳೆಯೇ ಹೆರಿಗೆಯಾದಲ್ಲಿ ಮಗುವಿಗೆ ಪೌರತ್ವ ನೀಡುವ ಮುನ್ನ ಕೆಲ ಸಂಗತಿಗಳನ್ನು ಗಮನಿಸಲಾಗುತ್ತದೆ. ಭಾರತದಿಂದ ಬ್ರಿಟನ್‌ಗೆ ಹೋಗುವ ವಿಮಾನದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದರೆ, ಮಗುವಿನ ಜನ್ಮಸ್ಥಳ ಮತ್ತು ಪೌರತ್ವದ ಬಗ್ಗೆ ಪ್ರಶ್ನೆ ಬರುತ್ತದೆ. ಆಗ ಮಗು ಹುಟ್ಟುವ ವೇಳೆಗೆ ವಿಮಾನ ಯಾವ ದೇಶದಲ್ಲಿ ಹಾರಿತ್ತು ಎಂಬುದನ್ನು ನೋಡಬೇಕಾಗುತ್ತದೆ.
ಆರೋಗ್ಯಕರ ಮಗುವಿಗಾಗ ಜಾತಕವಲ್ಲ, RH factor ಆಗಬೇಕು ಮ್ಯಾಚ್!
ತಾಯಿ-ಮಗು ವಿಮಾನ ಇಳಿಯುವ ದೇಶದ ವಿಮಾನ ನಿಲ್ದಾಣ (Airport) ದಲ್ಲಿ ದಾಖಲೆ (Document) ಪಡೆಯಬೇಕು. ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಜನ್ಮ (Birth)ಪುರಾವೆಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಬಹುದು. ಬೇರೆ ದೇಶದ ಪೌರತ್ವ ಪಡೆಯಲು ಪಾಲಕರಿಗೆ ಇಷ್ಟವಿಲ್ಲದೆ ಹೋದಲ್ಲಿ ಮಗುವಿಗೆ ಹೆತ್ತವರ ರಾಷ್ಟ್ರೀಯತೆಯನ್ನು ನೀಡಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಪೌರತ್ವಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಕಾನೂನು (Law)ಗಳಿವೆ.
ಭಾರತೀಯ ಕಾನೂನು ಏನು ಹೇಳುತ್ತದೆ ? (What does Indian Law Say? ):
ಉದಾಹರಣೆಗೆ ಬಾಂಗ್ಲಾದೇಶ(Bangladesh)ದಿಂದ ಅಮೆರಿಕ(America)ಕ್ಕೆ ತೆರಳುವ ವಿಮಾನವು ಭಾರತದ ಗಡಿಯ ಮೂಲಕ ಹಾದು ಹೋಗುತ್ತಿದೆ ಎಂದಿಟ್ಟುಕೊಳ್ಳಿ. ಈ ವಿಮಾನದಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದರೆ, ಮಗುವಿನ ಜನ್ಮಸ್ಥಳವನ್ನು ಭಾರತವೆಂದು ಪರಿಗಣಿಸಲಾಗುತ್ತದೆ. ಮಗುವಿಗೆ ಇಲ್ಲಿನ ಪೌರತ್ವ ನೀಡಲಾಗುತ್ತದೆ. ಮಗು ಭಾರತದ ಪೌರತ್ವ ಪಡೆಯುವ ಹಕ್ಕನ್ನು ಹೊಂದಿದೆ. ಮಗು ತನ್ನ ಹೆತ್ತವರ ರಾಷ್ಟ್ರೀಯತೆ ಮತ್ತು ಜನಿಸಿದ ದೇಶದ ಪೌರತ್ವ ಎರಡನ್ನೂ ಪಡೆಯಬಹುದು. ಆದರೆ ಭಾರತದಲ್ಲಿ ಎರಡು ದೇಶಗಳ ಪೌರತ್ವ ನೀಡಲಾಗುವುದಿಲ್ಲ.
YouTube ನೋಡಿ ಮಗುವಿಗೆ ಜನ್ಮ ನೀಡಿದ 17 ವರ್ಷದ ಯುವತಿ
ಅಮೆರಿಕದಲ್ಲಿ ಇಂಥ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ನೆದರ್ ಲ್ಯಾಂಡ್ ನ ರಾಜಧಾನಿ ಆಂಸ್ಟರ್ಡ್ಯಾಮ್ (Amsterdam) ನಿಂದ ಅಮೆರಿಕಕ್ಕೆ ವಿಮಾನವೊಂದು ತೆರಳುತ್ತಿತ್ತು. ಈ ವೇಳೆ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆ ಸಮಯದಲ್ಲಿ ವಿಮಾನವು ಅಟ್ಲಾಂಟಿಕ್ (Atlantic) ಸಾಗರದ ಮೇಲೆ ಹಾರುತ್ತಿತ್ತು. ವಿಮಾನ ಲ್ಯಾಂಡ್(Land) ಆದ ಬಳಿಕ ತಾಯಿ (Mother) ಮತ್ತು ಮಗುವನ್ನು ಅಮೆರಿಕದ ಆಸ್ಪತ್ರೆ(Hospital)ಗೆ ದಾಖಲಿಸಲಾಗಿತ್ತು. ಯುಎಸ್ ಗಡಿಯಲ್ಲಿ ಮಹಿಳೆ ಹೆಣ್ಣು ಮಗು(Girl Child)ವಿಗೆ ಜನ್ಮ ನೀಡಿದ್ದಳು.
ಈ ಕಾರಣದಿಂದಾಗಿ,ಮಗುವಿಗೆ ನೆದರ್ಲ್ಯಾಂಡ್ (Netherlands) ಮತ್ತು ಅಮೆರಿಕದ ಪೌರತ್ವ ಸಿಕ್ಕಿತ್ತು. ಪೌರತ್ವ ಆಯ್ದುಕೊಳ್ಳುವ ಹಕ್ಕು ಪಾಲಕ (Parents)ರಿಗಿದೆ. ಎರಡೂ ದೇಶಗಳ ಪೌರತ್ವವನ್ನೂ ಅವರು ಪಡೆಯಬಹುದು. ಇಲ್ಲವೇ ಹೆತ್ತವರ ರಾಷ್ಟ್ರೀಯತೆಯನ್ನು ಪಡೆಯಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.