
ಬೇಸಿಗೆ ರಜಾ ಶುರುವಾಗಿದೆ. ಎಲ್ಲ ಪ್ರವಾಸಿ ಸ್ಥಳಗಳು ಜನರಿಂದ ಕಿಕ್ಕಿರಿದಿವೆ. ಈ ಬಾರಿ ಭಾರತ ಬೇಡ ಬೇರೆ ದೇಶ ಸುತ್ತೋಣ ಅಂತ ಕೆಲವರು ಪ್ಲಾನ್ ಮಾಡ್ತಿರುತ್ತಾರೆ. ಆದ್ರೆ ವೀಸಾ ಇಲ್ಲದ ಕಾರಣಕ್ಕೆ ವಿದೇಶಿ ಪ್ಲಾನ್ ಕ್ಯಾನ್ಸಲ್ ಮಾಡಿ, ದೇಶದಲ್ಲಿಯೇ ಸೂಕ್ತ ಸ್ಥಳವನ್ನು ನೀವು ಹುಡುಕುತ್ತಿದ್ದರೆ ಚಿಂತೆ ಮಾಡುವ ಅಗತ್ಯವಿಲ್ಲ. ವೀಸಾ ಇಲ್ಲದೆ ಸುತ್ತಬಹುದಾದ ಕೆಲ ದೇಶಗಳಿವೆ. ಬೇಸಿಗೆಯಲ್ಲಿ ನೀವು ಆರಾಮವಾಗಿ ಆ ದೇಶಗಳಿಗೆ ಹೋಗಿ ರಜೆಯ ಮಜಾ ಸವಿರಬಹುದು. ನಾವಿಂದು ಬೇಸಿಗೆಯಲ್ಲಿ ಸುತ್ತಾಡಬಹುದಾದ ಕೆಲ ದೇಶಗಳ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಭೂತಾನ್ (Bhutan) : ಸುತ್ತಲೂ ಪರ್ವತ ಮತ್ತು ಸುಂದರ ಕಣಿವೆ ನಡುವೆ ಭೂತಾನ್ ಪ್ರವಾಸಿಗರನ್ನು ಸೆಳೆಯುತ್ತದೆ. ಪ್ರವಾಸಿಗರ ಅಚ್ಚುಮೆಚ್ಚಿನ ಜಾಗಗಳಲ್ಲಿ ಭೂತಾನ್ ಕೂಡ ಒಂದು. ಕೆಲವು ಷರತ್ತುಗಳೊಂದಿಗೆ ವೀಸಾ (Visa) ಇಲ್ಲದೆ ಇಲ್ಲಿಗೆ ಪ್ರಯಾಣಿಸಲು ಭಾರತೀಯರಿಗೆ ಅನುಮತಿ ನೀಡಲಾಗುತ್ತದೆ. ಇಲ್ಲಿಗೆ ಹೋಗಲು ನೀವು ಪ್ರವೇಶ ಪರವಾನಗಿಯನ್ನು ಪಡೆಯಬೇಕು. ಭೂತನ್ ನಮ್ಮ ನೆರೆ ದೇಶವಾಗಿರುವ ಕಾರಣ ನೀವು ಹೆಚ್ಚು ಖರ್ಚು ಮಾಡ್ಬೇಕಾಗಿಲ್ಲ. ಒಂದು ಲಕ್ಷ 25 ಸಾವಿರ ರೂಪಾಯಿಯಲ್ಲಿ ನೀವು ಭೂತಾನ್ ನೋಡಿ ಬರಬಹುದು. ಮಾರ್ಚ್ ನಿಂದ ಮೇ ತಿಂಗಳವರೆಗೆ ನೀವು ಆರಾಮವಾಗಿ ಭೂತಾನ್ ಸುತ್ತಿ ಬರಬಹುದು.
Nude Travel : ನಗ್ನರಾಗಿ ಪ್ರವಾಸ ಮಾಡೋ ದಂಪತಿ, ಕಾರಣವೂ ಇದೆ
ಮಾರಿಷಸ್ (Mauritius) : ಬೇಸಿಗೆ ರಜೆಯಲ್ಲಿ ನೀವು ಮಾರಿಷಸ್ ಗೆ ಕೂಡ ಪ್ಲಾನ್ ಮಾಡಬಹುದು. ಭಾರತೀಯರು ವೀಸಾ ಇಲ್ಲದೆ ಈ ದೇಶವನ್ನು ಸುತ್ತಬಹುದು. ಮೂರು ತಿಂಗಳ ಕಾಲ ವೀಸಾ ಇಲ್ಲದೆ ಮಾರಿಷಸ್ ನಲ್ಲಿ ಇರಬಹುದು. ಇಲ್ಲಿರುವ ಬೀಚ್ ಮತ್ತು ಕಾಡು ನಿಮ್ಮ ಪ್ರವಾಸದ ಮಜವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಮೇ ತಿಂಗಳಿನಿಂದ ಡಿಸೆಂಬರ್ ತಿಂಗಳು ಮಾರಿಷಸ್ ಗೆ ಪ್ರಯಾಣ ಬೆಳೆಸಲು ಒಳ್ಳೆಯ ಸಮಯ. ಮಾರಿಷಸ್ ಗೆ ಕೂಡ ನೀವು ಕಡಿಮೆ ಖರ್ಚಿನಲ್ಲಿ ಹೋಗಿ ಬರಬಹುದು. 90 ಸಾವಿರದಿಂದ ಒಂದುವರೆ ಲಕ್ಷದಲ್ಲಿ ನೀವು ಮಾರಿಷಸ್ ಸುತ್ತಿ ಬರಬಹುದು.
ನೇಪಾಳ (Nepal) : ಭಾರತದ ನೆರೆ ದೇಶ ನೇಪಾಳ ಕೂಡ ತುಂಬಾ ಸುಂದರವಾಗಿದೆ. ಜೀವನದಲ್ಲಿ ಒಮ್ಮೆ ನೇಪಾಳ ನೋಡ್ಬೇಕು ಎನ್ನುವವರಿದ್ದಾರೆ. ಹಿಮಾಲಯದಿಂದ ಸುತ್ತುವರಿದ ನೇಪಾದ ನೈಸರ್ಗಿಕ ಸೌಂದರ್ಯ ಅದ್ಭುತವಾಗಿದೆ. ನೇಪಾಳದಲ್ಲಿ ಸಾಹಸ ಕ್ರೀಡೆಗಳನ್ನು ಸಹ ಆನಂದಿಸಬಹುದು. ಇಲ್ಲೂ ಭಾರತೀಯರಿಗೆ ವೀಸಾ ಅಗತ್ಯವಿಲ್ಲ. ಏಷ್ಯಾದಲ್ಲಿಯೇ ನೇಪಾಳ ಅತ್ಯಂತ ಅಗ್ಗದ ದೇಶವಾಗಿದೆ. ನೇಪಾಳಕ್ಕೆ ಭೇಟಿ ನೀಡಲು ಮೇ ಅತ್ಯುತ್ತಮ ತಿಂಗಳುಗಳಲ್ಲಿ ಒಂದಾಗಿದೆ. ಹವಾಮಾನವು ಆಹ್ಲಾದಕರವಾಗಿರುತ್ತದೆ. ನೇಪಾಳದ ಎರಡು ಹಬ್ಬಗಳು ಮೇ ತಿಂಗಳಲ್ಲಿ ನಡೆಯುತ್ತವೆ. ಟ್ರೆಕ್ಕಿಂಗ್‌ಗೆ ಮೇ ಅತ್ಯಂತ ಜನಪ್ರಿಯ ತಿಂಗಳಾಗಿದೆ.
ಈ ದೇವಾಲಯದಿಂದ ಸ್ವರ್ಗಕ್ಕಿದೆ ಮೆಟ್ಟಿಲು! ಆದ್ರೆ ಸಣ್ಣ ಪ್ರಾಬ್ಲಂ ಇದೆ..
ಟ್ರಿನಿಡಾಡ್ ಮತ್ತು ಟೊಬಾಗೊ : ಟ್ರಿನಿಡಾಡ್ ಮತ್ತು ಟೊಬಾಗೊ ಬೇಸಿಗೆ ರಜೆಯನ್ನು ಕಳೆಯಬಹುದಾದ ಅತ್ಯುತ್ತಮ ದೇಶಗಳಲ್ಲಿ ಒಂದಾಗಿದೆ. ವೀಸಾ ಇಲ್ಲದೆ ಇಲ್ಲಿ ನೀವು 3 ತಿಂಗಳ ಕಾಲ ಉಳಿಯಬಹುದು. ಇದು ಕೂಡ ಅತ್ಯಂತ ಕಡಿಮೆ ಖರ್ಚಿನಲ್ಲಿ ಪ್ರಯಾಣಿಸಬಹುದಾದ ದೇಶವಾಗಿದೆ. ಇಲ್ಲಿನ ನೈಸರ್ಗಿಕ ಸೌಂದರ್ಯ ಮತ್ತು ವನ್ಯಜೀವಿಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.
ಬಾರ್ಬಡೋಸ್ : ಅತ್ಯಂತ ಸುಂದರವಾದ ಕೆರಿಬಿಯನ್ ದೇಶ ಬಾರ್ಬಡೋಸ್. ಪ್ರವಾಸಕ್ಕೆ ಹೇಳಿ ಮಾಡಿಸಿದ ಜಾಗ ಇದು. ಭಾರತೀಯರಿಗೆ ಬಾರ್ಬಡೋಸ್ ಸುತ್ತಾಡಲು ವೀಸಾ ಅಗತ್ಯವಿಲ್ಲ. ನೀವಿಲ್ಲ 90 ದಿನಗಳವರೆಗೆ ವೀಸಾ ಇಲ್ಲದೆ ಪ್ರವಾಸ ಮಾಡಬಹುದು. ಡಿಸೆಂಬರ್ ನಿಂದ ಏಪ್ರಿಲ್ ಬಾರ್ಬಡೋಸ್ ಪ್ರವಾಸಕ್ಕೆ ಒಳ್ಳೆಯ ಸಮಯ. ಮೇನಲ್ಲಿ ಸ್ವಲ್ಪ ಮಳೆ ನಿಮ್ಮ ಪ್ರವಾಸಕ್ಕೆ ಅಡ್ಡಿಯುಂಟು ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.