
- ಕಾಗತಿ ನಾಗರಾಜಪ್ಪ
ಗುಹಾಂತರ ದೇವಾಲಯ ಅಂದ ತಕ್ಷಣ ಅಜಂತಾ, ಎಲ್ಲೋರ ನೆನಪಿಗೆ ಬರುತ್ತದೆ. ಆದರೆ ಬಯಲು ಸೀಮೆಯ ಅಪರೂಪದ ಎಲ್ಲೋರವನ್ನು ನೋಡಬೇಕಾದರೆ ಚಿಕ್ಕಬಳ್ಳಾಪುರ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿ ಸಮೀಪದ ಕೈಲಾಸಗಿರಿಗೆ ಭೇಟಿ ಕೊಡಬೇಕು. ಇಡೀ ಏಕಶಿಲಾ ಬೆಟ್ಟವನ್ನು ಕೊರೆದು ಇದನ್ನು ನಿರ್ಮಿಸಲಾಗಿದೆ. ಹೊರಗೆಲ್ಲ ಬಿಸಿಲಿದ್ದರೂ ಒಳಗೆ ತಣ್ಣನೆಯ ಹವೆ. ಪ್ರವಾಸಿಗರ ಗಲಾಟೆ ಇಲ್ಲದಿದ್ದರೆ ಪ್ರಶಾಂತತೆ ಸವಿಯಬಹುದು. ಗುಹಾಂತರ ದೇಗುಲದ ಒಳಭಾಗ ಬಹಳಷ್ಟುವಿಶಾಲವಾಗಿದೆ.
ಚಿಂತಾಮಣಿಯ ಅಂಬಾಜಿದುರ್ಗ ಹೋಬಳಿಯಲ್ಲಿರುವ ಈ ಕೈಲಾಸಗಿರಿ ಬೆಟ್ಟಕ್ಕೆ ಮೂರು ಸುರಂಗ ಮಾರ್ಗಗಳಿವೆ. ಮೊದಲ ಸುರಂಗದಲ್ಲಿ ಪ್ರವೇಶಿಸಿದರೆ ವಲ್ಲಭ ಗಣಪತಿಯ ದರ್ಶನವಾಗುತ್ತದೆ. ಎರಡನೇ ಸುರಂಗದಲ್ಲಿ ನಾಲ್ಕು ದಿಕ್ಕುಗಳಿಗೆ ಮುಖ ಮಾಡಿರುವ ಚತುರ್ಮುಖ ಶಿವಲಿಂಗವಿದೆ. 3ನೇ ಸುರಂಗದಲ್ಲಿ ಪಾರ್ವತಿ ದೇವಿ ದರ್ಶನ ಆಗುತ್ತದೆ. ಗುಹಾಂತರದೊಳಗೆ 300 ಮಂದಿ ಕೂರುವ ಬೃಹತ್ ಸಭಾಂಗಣ ಇದೆ. ಪ್ರತಿ ಸುರಂಗ ಮಾರ್ಗವೂ ವಿಭಿನ್ನ ಅನುಭವ ಕೊಡುತ್ತದೆ. ಸಮೀಪದಲ್ಲೇ ಶತಶೃಂಗ ಬೆಟ್ಟದ ಸಾಲುಗಳಿವೆ. ಸುತ್ತಮುತ್ತ ಮನಸ್ಸಿಗೆ ಮುದ ನೀಡುವ ಪ್ರಾಕೃತಿಕ ನೈಸರ್ಗಿಕ ಸೊಬಗು ಎದ್ದು ಕಾಣುತ್ತದೆ. ಹಚ್ಚ ಹಸಿರಿನಿಂದ ಕಂಗೊಳಿಸುವ ಗಿಡ, ಮರಗಳು, ಮಳೆಗಾಲದಲ್ಲಿ ಬೆಟ್ಟದ ಸಾಲಿನಿಂದ ಹರಿದು ಬರುವ ನೀರು, ಮಳೆ ನೀರು ಸಂಗ್ರಹವಾಗುವ ಕಲ್ಯಾಣಿಯೂ ಚೆನ್ನಾಗಿದೆ.
ಕೂತಲ್ಲಿ ಕೂರಾದ ಮಕ್ಕಳ ಹಾವಳಿ ತಡೆಯೋಕೆ ಆಗ್ತಿಲ್ವಾ: ಬೇಸಿಗೆ ರಜೆ ಟೂರ್ ಪ್ಲಾನ್ ಮಾಡ್ತಿದ್ರೆ ಇಲ್ಲಿಗೆ ಹೋಗಿ
ಇದು ಬೆಂಗಳೂರಿನಿಂದ ಕೇವಲ 72 ಕಿ.ಮೀ ದೂರದಲ್ಲಿದೆ. ಬೆಂಗಳೂರು ಮಾರ್ಗವಾಗಿ ಕೆ.ಆರ್.ಪುರಂ, ಹೊಸಕೋಟೆ, ನಂದಗುಡಿ, ಹೆಚ್.ಕ್ರಾಸ್, ಕೈವಾರ ಮೂಲಕ ಕೈಲಾಸಗಿರಿಗೆ ಬರಬಹುದು. ಚಿಂತಾಮಣಿಯಿಂದ ಬರೀ ಆರೇಳು ಕಿ.ಮೀ ದೂರದಲ್ಲಿದೆ. ವಿಶಾಲವಾದ ರಸ್ತೆ ಇದೆ.
ಚಿಂತಾಮಣಿಯಲ್ಲಿ ಕಡಲೇ ಬೀಜದ ಘಮಲು
ಚಿಂತಾಮಣಿಗೆ ಭೇಟಿ ಕೊಟ್ಟವರು ಒಂದೆರಡು ಪ್ಯಾಕೆಟ್ ಶೇಂಗಾ ತರದೇ ವಾಪಸ್ಸು ಬರಲ್ಲ. ವಿಶಿಷ್ಟಖಾರ ಬೆರಸಿ ಒಗ್ಗರಣೆ ಹಾಕಿದ ಕಡಲೇ ಬೀಜ ಪ್ರವಾಸಿಗರಿಗೆ ಅಚ್ಚುಮೆಚ್ಚು. ಇಲ್ಲಿನ ಅಜಾದ್ ಚೌಕದಲ್ಲಿ ಹುರಿಗಾಳು ಶ್ರೀರಾಮಯ್ಯ ಅಂಗಡಿಯಲ್ಲಿ ಈ ವಿಶಿಷ್ಟಕಡಲೇ ಬೀಜ ದೊರೆಯುತ್ತದೆ. ಈ ಶೇಂಗಾ ವಿಶೇಷವೆಂದರೆ ಗಾತ್ರ, ಆಕಾರ ಒಂದೇ ರೀತಿ.
ಈ ದೇವಾಲಯದಿಂದ ಸ್ವರ್ಗಕ್ಕಿದೆ ಮೆಟ್ಟಿಲು! ಆದ್ರೆ ಸಣ್ಣ ಪ್ರಾಬ್ಲಂ ಇದೆ..
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.