ಭಾರತದ ಕೊನೆಯ ರೈಲು ನಿಲ್ದಾಣ, ಇಲ್ಲಿ ಇಳಿದು ನಡೆದುಕೊಂಡೇ ಬೇರೆ ದೇಶಕ್ಕೆ ಹೋಗಬಹುದು!

By Vinutha Perla  |  First Published Apr 22, 2023, 4:30 PM IST

ದೇಶದಲ್ಲಿ ಅನೇಕ ರೈಲು ನಿಲ್ದಾಣಗಳಿವೆ. ಅವುಗಳಲ್ಲಿ ಒಂದೊಂದು ರೈಲು ನಿಲ್ದಾಣವೂ ಒಂದೊಂದು ವಿಶೇಷತೆಯಿಂದ ಕೂಡಿರುತ್ತೆ. ಇದರ ಬಗ್ಗೆ ಕೆಲವೇ ಜನರಿಗೆ ತಿಳಿದಿರುತ್ತದೆ. ಅವುಗಳಲ್ಲಿ ಒಂದು ಭಾರತೀಯ ನಿಲ್ದಾಣವಾಗಿದೆ. ಇದು ದೇಶದ ಕೊನೆಯ ರೈಲು ನಿಲ್ದಾಣವಾಗಿದೆ. ಅಲ್ಲಿಂದ ನೀವು ಇನ್ನೊಂದು ದೇಶಕ್ಕೆ ದಾಟಿ ಹೋಗಬಹುದು. ಯಾವುದು ಆ ರೈಲ್ವೇ ಸ್ಟೇಷನ್‌.


ವಿದೇಶಕ್ಕೆ ಪ್ರಯಾಣಿಸುವ ಅವಕಾಶ ಸಿಕ್ಕರೆ, ಯಾರು ಪ್ರಯಾಣಿಸಲು ಬಯಸುವುದಿಲ್ಲ. ಆದರೆ, ವಿದೇಶಕ್ಕೆ ಹೋಗುವ ಯೋಚನೆ ಬಂದ ಕೂಡಲೇ ವಿಮಾನ ಪ್ರಯಾಣದ ವೆಚ್ಚ ಮನದಲ್ಲಿ ಓಡಾಡತೊಡಗುತ್ತದೆ. ಆದರೆ, ಕಾಲ್ನಡಿಗೆಯಲ್ಲೂ ವಿದೇಶಕ್ಕೆ ಹೋಗಬಹುದಾದ ಹಲವು ಪ್ರದೇಶಗಳು ನಮ್ಮ ದೇಶದಲ್ಲಿವೆ ಎಂಬುದು ನಿಮಗೆ ತಿಳಿದಿದೆಯೇ? ಹೌದು, ನೆರೆಯ ದೇಶಗಳ ಗಡಿಯಲ್ಲಿರುವ ದೇಶದ ಗಡಿ ಪ್ರದೇಶಗಳಿಂದ ಇದು ಸಾಧ್ಯ. ಉದಾಹರಣೆಗೆ, ನೇಪಾಳವು ಮೂರು ಕಡೆಗಳಲ್ಲಿ ಭಾರತದ ಗಡಿಗಳಿಂದ ಸುತ್ತುವರಿದಿದೆ ಮತ್ತು ಬಿಹಾರದ ಅರಾರಿಯಾ ಜಿಲ್ಲೆಯ ಜೋಗ್ಬಾನಿ ಭಾರತದ ಕೊನೆಯ ರೈಲು ನಿಲ್ದಾಣವಾಗಿದೆ, ಇಲ್ಲಿಂದ ನೀವು ಕಾಲ್ನಡಿಗೆಯಲ್ಲಿ ನೇಪಾಳಕ್ಕೆ ಹೋಗಬಹುದು. ಬನ್ನಿ, ಇಂದು ನಾವು ಪಶ್ಚಿಮ ಬಂಗಾಳದಲ್ಲಿರುವ ಅಂಥಾ ಒಂದು ರೈಲು ನಿಲ್ದಾಣದ ಬಗ್ಗೆ ಹೇಳುತ್ತೇವೆ.

ಸಿಂಗಾಬಾದ್ ರೈಲು ನಿಲ್ದಾಣ
ಭಾರತದಲ್ಲಿ 8 ಸಾವಿರಕ್ಕೂ ಹೆಚ್ಚು ರೈಲು ನಿಲ್ದಾಣಗಳಿವೆ. ಭಾರತೀಯ ರೈಲ್ವೆ (Indian Railways) ದೇಶದ ಮೂಲೆ ಮೂಲೆಯನ್ನು ತಲುಪುತ್ತದೆ. ದೇಶದಲ್ಲಿ ಅನೇಕ ರೈಲು ನಿಲ್ದಾಣಗಳಿವೆ (Railway station). ಒಂದೊಂದು ರೈಲ್ವೇ ನಿಲ್ದಾಣವು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಹಾಗೆಯೇ ಪಶ್ಚಿಮಬಂಗಾಳದಲ್ಲಿರುವ ಸಿಂಗಾಬಾದ್ ರೈಲ್ವೇ ಸ್ಟೇಷನ್ ದೇಶದ ಕೊನೆಯ ರೈಲು ನಿಲ್ದಾಣ ಎಂದು ಕರೆಯಲ್ಪಡುತ್ತದೆ. ಸಿಂಗಾಬಾದ್ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಹಬೀಬ್ಪುರ್ ಪ್ರದೇಶದಲ್ಲಿ ಬರುತ್ತದೆ. ಸಿಂಗಾಬಾದ್ ಎಂದು ಕರೆಯಲ್ಪಡುವ ಭಾರತದ ಮೂಲೆಯಲ್ಲಿರುವ ಕೊನೆಯ ರೈಲು ನಿಲ್ದಾಣವು ಬಾಂಗ್ಲಾದೇಶದ ಗಡಿಯಾಗಿದೆ. ಆದರೆ, ಈಗ ಇಲ್ಲಿಗೆ ಕೇವಲ ಸರಕು ರೈಲುಗಳನ್ನು ಮಾತ್ರ ಸಾಗಿಸಲಾಗುತ್ತಿದೆ.

Tap to resize

Latest Videos

ಭಾರತದ ಈ ರೈಲು ಹತ್ತೋಕೆ ಟಿಕೆಟ್ ಬೇಕಾಗಿಲ್ಲ, ಎಷ್ಟು ದೂರ ಬೇಕಾದ್ರೂ ಫ್ರೀಯಾಗಿ ಹೋಗ್ಬೋದು!

ವಿಶೇಷವೆಂದರೆ ಈ ನಿಲ್ದಾಣವು ಬಾಂಗ್ಲಾದೇಶದ ಗಡಿಗೆ ಹತ್ತಿರದಲ್ಲಿದೆ, ಇಲ್ಲಿಂದ ನಡೆದುಕೊಂಡು ನೀವು ಇನ್ನೊಂದು ದೇಶವನ್ನು ಅಂದರೆ ಬಾಂಗ್ಲಾದೇಶವನ್ನು ತಲುಪಬಹುದು. ಇಲ್ಲಿಂದ ಜನರು ಇತರ ದೇಶಗಳಿಗೆ ಭೇಟಿ ನೀಡಲು ಕಾಲ್ನಡಿಗೆಯಲ್ಲಿ ಹೋಗುತ್ತಾರೆ. ಭಾರತ-ಪಾಕಿಸ್ತಾನ ವಿಭಜನೆಯ ನಂತರ ಈ ನಿಲ್ದಾಣವನ್ನು ಮುಚ್ಚಲಾಯಿತು, ಆದರೆ 1978 ರಲ್ಲಿ ಈ ರೈಲು ನಿಲ್ದಾಣದಲ್ಲಿ ಮತ್ತೆ ರೈಲುಗಳು ಬರಲು ಮತ್ತು ಹೋಗಲಾರಂಭಿಸಿದವು. 

ಸಿಂಘಾಬಾದ್ ರೈಲು ನಿಲ್ದಾಣದಿಂದ ರೈಲುಗಳ ಮೂಲಕ ಬಾಂಗ್ಲಾದೇಶದಿಂದ ನೇಪಾಳಕ್ಕೆ ರಸಗೊಬ್ಬರವನ್ನು ರಫ್ತು ಮಾಡಲಾಗುತ್ತದೆ. ಇಲ್ಲಿ ಸಿಗ್ನಲ್ ನಿಂದ ಹಿಡಿದು ಯಂತ್ರದವರೆಗೆ ಎಲ್ಲವೂ ಬ್ರಿಟಿಷರ ಕಾಲದ ವಸ್ತುಗಳನ್ನು ಬಳಸಲಾಗುತ್ತಿದೆ. 2008ರಲ್ಲಿ ಪ್ರಾರಂಭವಾದ ಈ ರೈಲು ನಿಲ್ದಾಣದ ಮೂಲಕ ಕೇವಲ 2 ಪ್ಯಾಸೆಂಜರ್ ರೈಲುಗಳು ಮಾತ್ರ ಹಾದು ಹೋಗುತ್ತವೆ. ಭಾರತದ ಗಡಿಯನ್ನು ಅಂದರೆ ಕೊನೆಯ ರೈಲು ನಿಲ್ದಾಣವನ್ನು ಸಿಂಗಾಬಾದ್ ನಿಲ್ದಾಣದ ಬೋರ್ಡ್‌ನಲ್ಲಿ ಬರೆಯಲಾಗಿದೆ.

ಅಂದಹಾಗೆ, ಈ ಚಿಕ್ಕ ರೈಲು ನಿಲ್ದಾಣದಲ್ಲಿ ಕೆಲವೇ ಜನರು ಕಾಣಸಿಗುತ್ತಾರೆ. ಈ ರೈಲು ನಿಲ್ದಾಣವನ್ನು ಸರಕು ರೈಲುಗಳ ಸಾಗಣೆಗಾಗಿ ಬಳಸಲಾಗುತ್ತದೆ. ಮೈತ್ರೀ ಎಕ್ಸ್‌ಪ್ರೆಸ್ ಹೆಸರಿನ ಎರಡು ಪ್ರಯಾಣಿಕ ರೈಲುಗಳು ಇಲ್ಲಿ ಹಾದು ಹೋಗುತ್ತವೆ.

IRCTC Rules: ರೈಲಿನಲ್ಲಿ ಸಂಪೂರ್ಣ ಬೋಗಿ ಬುಕ್ ಮಾಡುವುದು ಹೇಗೆ?

ಸ್ವಾತಂತ್ರ್ಯದ ನಂತರ ನಿರ್ಜನಗೊಂಡ ರೈಲು ನಿಲ್ದಾಣ
ಸ್ವಾತಂತ್ರ್ಯಾನಂತರ ದೇಶ ವಿಭಜನೆಯಾದಾಗ ಈ ನಿಲ್ದಾಣದ ಕಾಮಗಾರಿ ಸ್ಥಗಿತಗೊಂಡಿತ್ತು. ಅಂದಿನಿಂದ ಈ ನಿಲ್ದಾಣ ನಿರ್ಜನವಾಗಿತ್ತು. 1978 ರಲ್ಲಿ ಈ ಮಾರ್ಗದಲ್ಲಿ ಗೂಡ್ಸ್ ರೈಲುಗಳು ಪ್ರಾರಂಭವಾದವು. ಆಗ ಮತ್ತೆ ಸಿಳ್ಳೆಗಳ ಸದ್ದು ಇಲ್ಲಿ ಪ್ರತಿಧ್ವನಿಸತೊಡಗಿತು. ಈ ಮೊದಲು ಈ ವಾಹನಗಳು ಭಾರತದಿಂದ ಬಾಂಗ್ಲಾದೇಶಕ್ಕೆ ಮಾತ್ರ ಪ್ರಯಾಣಿಸುತ್ತಿದ್ದವು, ಆದರೆ 2011 ರ ನವೆಂಬರ್‌ನಲ್ಲಿ ಹಳೆಯ ಒಪ್ಪಂದಕ್ಕೆ ತಿದ್ದುಪಡಿ ಮಾಡಿದ ನಂತರ ನೇಪಾಳವನ್ನೂ ಅದರಲ್ಲಿ ಸೇರಿಸಲಾಯಿತು.

ಈ ನಿಲ್ದಾಣದಲ್ಲಿ ಸಿಗ್ನಲ್‌ಗಳು, ಸಂವಹನ ಮತ್ತು ನಿಲ್ದಾಣಕ್ಕೆ ಸಂಬಂಧಿಸಿದ ಇತರ ಅಗತ್ಯ ಉಪಕರಣಗಳೆಲ್ಲವೂ ಬ್ರಿಟಿಷರ ಕಾಲದ್ದೇ ಆಗಿದೆ. ಇಂದಿಗೂ ಇಲ್ಲಿ ಎಲ್ಲವೂ ಹಳೆಯ ಸಲಕರಣೆಗಳಿಂದಲೇ ನಡೆಯುತ್ತಿವೆ. ಇಲ್ಲಿ ಸಿಗ್ನಲ್‌ಗಳಿಗಾಗಿ ಹ್ಯಾಂಡ್ ಗೇರ್‌ಗಳನ್ನು ಬಳಸಲಾಗುತ್ತದೆ. ಇಲ್ಲಿನ ಟಿಕೆಟ್ ಕೌಂಟರ್ ಕೂಡ ಮುಚ್ಚಲಾಗಿದೆ. ಈಗ ಗೂಡ್ಸ್ ರೈಲುಗಳು ಮಾತ್ರ ಇಲ್ಲಿ ಸಿಗ್ನಲ್ ಗಾಗಿ ಕಾಯುತ್ತಿವೆ. ಈ ಸರಕು ರೈಲುಗಳು ರೋಹನ್‌ಪುರ ಮೂಲಕ ಬಾಂಗ್ಲಾದೇಶಕ್ಕೆ ಹೋಗುತ್ತವೆ.

click me!