ಉಡುಪಿಯ ಫೇಮಸ್ ಟೂರಿಸ್ಟ್ ಪ್ಲೇಸ್‌ಗಳಲ್ಲೊಂದು ಸೈಂಟ್ ಮೇರಿಸ್ ದ್ವೀಪ. ಇಲ್ಲಿ ಸೆಲ್ಫಿ ತೆಗೆಯಲು ಹೋಗಿ ಹಲವಾರು ಪ್ರವಾಸಿಗರು ಜೀವ ಕಳೆದುಕೊಂಡಿದ್ದರು. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಜಿಲ್ಲಾಡಳಿತ ಭರವಸೆ ನೀಡಿತ್ತು. ಇದೀಗ ದ್ವೀಪಕ್ಕೆ ಪ್ರವಾಸಿಗರ ಪ್ರವೇಶವಾಗುತ್ತಿದ್ದಂತೆ, ಸುರಕ್ಷಿತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ ಮಲ್ಪೆಯ ಸೈಂಟ್ ಮೆರೀಸ್ ದ್ವೀಪ ಇದೀಗ ಪ್ರವಾಸಿಗರಿಗೆ ತೆರೆದುಕೊಂಡಿದೆ. ನಿಷೇಧಿತ ಅವಧಿ ಮುಗಿದಿದ್ದರೂ ಪ್ರತಿಕೂಲ ಹವಾಮಾನದಿಂದಾಗಿ ಸೈಂಟ್ ಮೇರಿಸ್ ದ್ವೀಪಕ್ಕೆ ಹೋಗಲು ಅವಕಾಶ ಇರಲಿಲ್ಲ. ಇದೀಗ ಸುರಕ್ಷತಾ ಕ್ರಮಗಳೊಂದಿಗೆ ಸೈಂಟ್ ಮೇರಿಸ್ ದ್ವೀಪಕ್ಕೆ ಹೋಗಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ಸೈಂಟ್ ಮೆರೀಸ್ ದ್ವೀಪದಲ್ಲಿ ಈ ಹಿಂದೆ ಈಜಲು ಹಾಗೂ ಸೆಲ್ಫಿ ತೆಗೆಯಲು ಹೋಗಿ ಹಲವಾರು ಪ್ರವಾಸಿಗರು ಜೀವ ಕಳೆದುಕೊಂಡಿದ್ದರು. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಜಿಲ್ಲಾಡಳಿತ ಭರವಸೆ ನೀಡಿತ್ತು. ಇದೀಗ ದ್ವೀಪಕ್ಕೆ ಪ್ರವಾಸಿಗರ ಪ್ರವೇಶವಾಗುತ್ತಿದ್ದಂತೆ, ಸುರಕ್ಷಿತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.
ಸೈಂಟ್ ಮೆರೀಸ್‌ನಲ್ಲಿ ಎಂಟು ಲಕ್ಷ ವೆಚ್ಚದ ಅಭಿವೃದ್ಧಿ ಕಾರ್ಯಕ್ರಮ
ಸುಮಾರು ಎಂಟು ಲಕ್ಷ ವೆಚ್ಚದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸುಮಾರು 300 ಮೀಟರ್ ಉದ್ದದ ಕಾಲುನಡಿಗೆ ಮಾರ್ಗ, ಪುರುಷರು (Men) ಮತ್ತು ಮಹಿಳೆಯರಿಗೆ (Woman) ಬಟ್ಟೆ ಬದಲಿಸಲು ಕೊಠಡಿ (Room), ಶೌಚಾಲಯದ ನವೀಕರಣ, ದ್ವೀಪದ ಈಶಾನ್ಯ ಭಾಗದಲ್ಲಿ ಸುಮಾರು 110 ಮೀಟರ್ ಅಗಲ ಮತ್ತು 100 ಮೀಟರ್ ಉದ್ದದ ಈಜು ವಲಯವನ್ನು ನಿರ್ಮಿಸಲಾಗುತ್ತಿದೆ.
ಬೆಂಗಳೂರು-ಉಡುಪಿ ರಸ್ತೆಯ ಜಂಗಲ್ ಡ್ರೈವ್‌ನ ಸುಂದರ ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರಾ
ಪ್ರವಾಸಿಗರ ಮೇಲೆ ಗಮನ ಇರಿಸಲು ನಾಲ್ಕು ಕಡೆಗಳಲ್ಲಿ ಗಡಿಯಾರ ಗೋಪುರ ಹಾಕಲಾಗುತ್ತಿದೆ. ಈ ದ್ವೀಪಕ್ಕೆ ಬಂದವರೆಲ್ಲಾ ಸೆಲ್ಫಿ ತೆಗೆದುಕೊಳ್ಳಲು ಹರಸಾಹಸ (Adventure) ಪಡುತ್ತಾರೆ. ಸೆಲ್ಫಿ ತೆಗೆಯಲು ಹೋಗಿ ಅನೇಕ ಮಂದಿ ಜೀವ ಕಳೆದುಕೊಂಡದ್ದು ಇದೆ. ಹಾಗಾಗಿ ದ್ವೀಪದ ಏಳು ಕಡೆಗಳಲ್ಲಿ ಸೆಲ್ಫಿ ಪಾಯಿಂಟ್ ಗಳನ್ನು ರಚಿಸಲಾಗುತ್ತಿದೆ. ನೈಸರ್ಗಿಕ ವಸ್ತುಗಳಾದ ಅರೆಕಾ, ತೆಂಗಿನ ಮರ ಮತ್ತು ತೆಂಗಿನ ಸೋಗೆಯಿಂದ ಒಂದು ಪ್ರವೇಶ ದ್ವಾರ ಮತ್ತು ನಿರ್ಗಮನ ದ್ವಾರವನ್ನು ವ್ಯವಸ್ಥೆ (Facility) ಮಾಡಲಾಗುತ್ತಿದೆ.
ಬೇರೆಲ್ಲೂ ಇರದ ಕಲ್ಲಿನ ರಚನೆಗಳು ಈ ದ್ವೀಪದ ಪ್ರಧಾನ ಆಕರ್ಷಣೆ
ದಣಿದ ಪ್ರವಾಸಿಗರಿಗೆ ಕುಳಿತುಕೊಳ್ಳಲು ನೆರಳು ನೀಡುವ ಐದು ಗುಡಿಸಲುಗಳು (Hut) ಹಾಗೂ ಗಾರ್ಡ್ ಟವರ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.ಮುಂದಿನ ದಿನಗಳಲ್ಲಿ 8 ಮಂದಿ ಜೀವ ರಕ್ಷಕರು ಇಬ್ಬರು ಶುಚಿತ್ವ ಸಿಬ್ಬಂದಿಗಳು, ಶೌಚಾಲಯ ನಿರ್ವಹಣೆ ಸಿಬ್ಬಂದಿ, ಮೇಲ್ವಿಚಾರಕರ ಸಹಿತ ಏಳು ಆಹಾರ ಮಳಿಗೆಗಳು (Food court) ನಿರ್ಮಾಣವಾಗಲಿದೆ. ಮಲ್ಪೆ ಸೀ ವಾಕ್ ಬಳಿಯಿಂದ ಬೆಳಿಗ್ಗೆ 9:00 ರಿಂದ ಸಂಜೆ 5:00 ವರೆಗೆ ದೊಡ್ಡ ಬೋಟ್ ಹಾಗೂ ಸಣ್ಣ ಬೋಟುಗಳ ಸೌಲಭ್ಯ ತೆಗೆದುಕೊಳ್ಳಲಿದೆ ಸಂಜೆ 6:00ಗೆ ಕೊನೆಯ ಬೋಟ್ ದ್ವೀಪದಿಂದ ಮಲ್ಪೆಗೆ ಪ್ರಯಾಣ (Travel) ಬೆಳೆಸಲಿದೆ.
ಕೊಣಾಜೆಕಲ್ಲು ಸಿದ್ದಾಶ್ರಮ ಮಠವನ್ನೊಮ್ಮೆ ರಾಜ್ಯ ಸರ್ಕಾರ ನೋಡಬಾರದೇಕೆ ?
ಸೈಂಟ್ ಮೇರಿಸ್ ದ್ವೀಪ ಒಂದು ಅದ್ಭುತ ತಾಣವಾಗಿದ್ದು, ಬೇರೆಲ್ಲೂ ಇರದ ಕಲ್ಲಿನ ರಚನೆಗಳು ಈ ದ್ವೀಪದ ಪ್ರಧಾನ ಆಕರ್ಷಣೆಯಾಗಿದೆ.ಈ ದ್ವೀಪ (Island)ವನ್ನು ನೋಡಲೇಬೇಕೆಂದು ದೇಶ ವಿದೇಶಗಳಿಂದ ಪ್ರವಾಸಿಗರ (Tourist) ದಂಡು ಬರುತ್ತೆ. ಈ ದ್ವೀಪದ ಅವ್ಯವಸ್ಥೆಗಳು ಮತ್ತು ನೀಡಬೇಕಾಗಿರುವ ಸುರಕ್ಷಿತ ಕ್ರಮಗಳ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ 3 ಮೂಲಕ ಗಮನ ಸೆಳೆದಿತ್ತು, ಇದೀಗ ಸುರಕ್ಷತಾ ಕ್ರಮಗಳ ಜೊತೆಗೆ ಸೆಲ್ಫಿ ಪಾಯಿಂಟ್ ಸಹಿತ ಅನೇಕ ನಿರ್ಮಾಣಗಳು ಪ್ರವಾಸಿಗರ ಅನುಕೂಲಕ್ಕೆ ತಯಾರಾಗುತ್ತಿದೆ.
ವೀಕೆಂಡಲ್ಲಾದ್ರೂ ಔಟಿಂಗ್ ಹೋಗಿ! ಬೆಂಗಳೂರು ಹತ್ರದ ಬೆಸ್ಟ್ 5 ಜಾಗಗಳು!
ಒಟ್ನಲ್ಲಿ ಇನ್ಮುಂದೆ ಕರಾವಳಿ ಮಂದಿ ವೀಕೆಂಡ್‌ನಲ್ಲಿ ಏನ್ಮಾಡೋದು ಅಂತ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಸುಮ್ನೆ ಸೈಂಟ್ ಮೆರೀಸ್‌ಗೆ ಹೋದ್ರಾಯ್ತು ಅಷ್ಟೆ.