Travel Sickness: ಪ್ರಯಾಣದ ವೇಳೆ ಕಾಡುವ ವಾಂತಿಗೆ ಹೇಳಿ ಗುಡ್ ಬೈ

By Suvarna News  |  First Published Dec 6, 2021, 5:09 PM IST

ಕಾರು ಬೇಡ, ಆಟೋದಲ್ಲಿ ಹೋಗೋಣ. ನನಗೆ ಕಾರು, ಬಸ್ ನಲ್ಲಿ ಹೋದರೆ ವಾಂತಿಯಾಗುತ್ತದೆ ಅಂತಾ ಅನೇಕರು ಹೇಳೋದನ್ನು ಕೇಳಿದ್ದೀರಾ. ಕೆಲವರಿಗೆ ವಾಹನ ಹತ್ತುತ್ತಿದ್ದಂತೆ ವಾಂತಿ ಶುರುವಾಗುತ್ತದೆ. ದೀರ್ಘ ಪ್ರಯಾಣದ ವೇಳೆ ಇದು ದೊಡ್ಡ ಸಮಸ್ಯೆಯಾಗುತ್ತದೆ. ಪ್ರಯಾಣದಲ್ಲಿ ವಾಂತಿ,ವಾಕರಿಕೆ ಕಾಡಿದರೆ ಏನು ಮಾಡಬೇಕು ಗೊತ್ತಾ?


ಕಾರು(car) ಅಥವಾ ಬಸ್ಸಿ (bus)ನಲ್ಲಿ ದೀರ್ಘ ಪ್ರಯಾಣದ (journey ) ಸಮಯದಲ್ಲಿ, ಅನೇಕರಿಗೆ ವಾಕರಿಕೆ ಮತ್ತು ವಾಂತಿ ಸಮಸ್ಯೆ ಶುರುವಾಗುತ್ತದೆ. ಇದೇ ಕಾರಣಕ್ಕೆ ದೂರದ ಪ್ರಯಾಣ ಕೈಬಿಡುವವರಿದ್ದಾರೆ. ಅನೇಕ ಜನರಿಗೆ ಈ ಸಮಸ್ಯೆಯು ತುಂಬಾ ಗಂಭೀರವಾಗಿರುತ್ತದೆ. ಪ್ರಯಾಣದ ಸಮಯದಲ್ಲಿ ಮಾತ್ರವಲ್ಲ,ಪ್ರಯಾಣ ಬೆಳೆಸಿದ ಮೂರ್ನಾಲ್ಕು ದಿನಗಳವರೆಗೂ ತಲೆನೋವು,ತಲೆ ಸುತ್ತು,ಹೆದರಿಕೆ,ವಾಕರಿಗೆ,ವಾಂತಿ ಕಾಡುತ್ತದೆ.  ಪ್ರಯಾಣದ ವೇಳೆ ಆಗುವ ಈ ವಾಂತಿ,ವಾಕರಿಕೆಗೆ ಮೋಷನ್ ಸಿಕ್ನೆಸ್ (Motion Sickness) ಎಂದು ಕರೆಯಲಾಗುತ್ತದೆ. ಆದರೆ ಪ್ರಯಾಣದ ಸಮಯದಲ್ಲಿ ಮಾತ್ರ ಇದು ಏಕೆ ಕಾಡುತ್ತದೆ ಎಂಬುದಕ್ಕೆ ಉತ್ತರ ಇಲ್ಲಿದೆ. ಮೋಷನ್ ಸಿಕ್ನೆಸ್ ಒಂದು ರೋಗವಲ್ಲ. ಆದರೆ ನಮ್ಮ ಮೆದುಳು ಒಳಗಿನ ಕಿವಿ, ಕಣ್ಣುಗಳು ಮತ್ತು ಚರ್ಮದಿಂದ ವಿಭಿನ್ನ ಸಂಕೇತಗಳನ್ನು ಸ್ವೀಕರಿಸುತ್ತದೆ. ಈ ಸಂದರ್ಭದಲ್ಲಿ, ಕೇಂದ್ರ ನರಮಂಡಲವು ಗೊಂದಲಕ್ಕೊಳಗಾಗುತ್ತದೆ. ಆಗ ವಾಂತಿ,ವಾಕರಿಕೆ ಸಮಸ್ಯೆ ಕಾಡುತ್ತದೆ. ಪ್ರಯಾಣಕ್ಕಿಂತ ಮೊದಲೇ ಎಚ್ಚರಿಕೆ ಕ್ರಮಕೈಗೊಂಡಲ್ಲಿ ನೀವು ಇದರಿಂದ ಹೊರಗೆ ಬರಬಹುದು.   

ಹಿಂದಿನ ಸೀಟಿನಲ್ಲಿದೆ ಸಮಸ್ಯೆ (avoid the back seat) : ಪ್ರಯಾಣದ ಸಮಯದಲ್ಲಿ ವಾಂತಿಯಾಗುತ್ತೆ ಎನ್ನುವವರು,ಮುಂದಿನ ಸೀಟ್ ಗೆ ಆದ್ಯತೆ ನೀಡಿ. ದೊಡ್ಡ ವಾಹನದ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವ ತಪ್ಪನ್ನು ಮಾಡಬೇಡಿ. ದೊಡ್ಡ ವಾಹನದಲ್ಲಿ ಪ್ರಯಾಣ ಬೆಳೆಸುವಾಗ ಮಧ್ಯದ ಸೀಟನ್ನು ಆಯ್ಕೆ ಮಾಡಿಕೊಳ್ಳಬಹುದು. ಆದ್ರೆ ಕಾರಿನಲ್ಲಿ ಮುಂದಿನ ಸೀಟ್ ನಲ್ಲಿಯೇ ಕುಳಿತುಕೊಳ್ಳಿ.

Tap to resize

Latest Videos

undefined

ಪುಸ್ತಕ ಓದಬೇಡಿ,ಮೊಬೈಲ್ ಬಳಕೆ ಬೇಡ : ಪ್ರಯಾಣದ ಸಮಯದಲ್ಲಿ ವಾಕರಿಗೆ ಬರುವವರು ಪುಸ್ತಕ ಓದಬಾರದು. ಮೆದುಳಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ.ಆಗ ತಲೆನೋವು,ವಾಂತಿಯ ಅನುಭವವಾಗುತ್ತದೆ. ಪ್ರಯಾಣ ಬೆಳೆಸುವ ವೇಳೆ ಮೊಬೈಲ್ ಬಳಕೆ ಹೆಚ್ಚಾಗಿದೆ. ಅನೇಕರಿಗೆ ಪ್ರಯಾಣದ ವೇಳೆ ಮೊಬೈಲ್ ಬಳಸಿದರೆ ವಾಂತಿ,ತಲೆನೋವು ಕಾಣಿಕೊಳ್ಳುತ್ತದೆ.

ಅನ್ನದ ಜೊತೆ ರೊಟ್ಟಿ ತಿಂದರೇನಾಗುತ್ತೆ?

ಶುದ್ಧ ಗಾಳಿ : ಎಸಿ ಬಸ್ ಹೊರತುಪಡಿಸಿ ಸಾಮಾನ್ಯ ಬಸ್ ನಲ್ಲಿ ಪ್ರಯಾಣ ಬೆಳೆಸುವವರು ಬಸ್ ಕಿಟಕಿ ತೆಗೆದು ಶುದ್ಧ ಗಾಳಿ ತೆಗೆದುಕೊಳ್ಳುತ್ತಾರೆ. ಕಾರಿನಲ್ಲಿ ಎಸಿ ಬಳಕೆ ಹೆಚ್ಚಾಗಿರುವ ಕಾರಣ,ಕಿಟಕಿ ತೆಗೆಯುವುದಿಲ್ಲ. ಕಾರಿನ ಎಸಿ,ಅನೇಕರಿಗೆ ದೊಡ್ಡ ಕಿರಿಕಿರಿಯುಂಟು ಮಾಡುತ್ತದೆ. ಕಾರು ಹತ್ತುತ್ತಿದ್ದಂತೆ ವಾಂತಿ,ವಾಕರಿಕೆ,ತಲೆ ನೋವು ಬರುತ್ತದೆ. ಹಾಗಾಗಿ ಕಾರಿನಲ್ಲಿ ಪ್ರಯಾಣಿಸುವ ವೇಳೆ ಎಸಿ ಬಳಸದೆ,ಶುದ್ಧ ಗಾಳಿಗಾಗಿ ಕಿಟಕಿ ತೆರೆಯಿರಿ. 

ಖಾಲಿ ಹೊಟ್ಟೆಯಲ್ಲಿ ಪ್ರಯಾಣ : ಖಾಲಿ ಹೊಟ್ಟೆಯಲ್ಲಿ ಪ್ರಯಾಣ ಬೆಳೆಸಿದರೆ ವಾಂತಿಯಾಗುವುದಿಲ್ಲ ಎಂದು ಅನೇಕರು ನಂಬಿದ್ದಾರೆ. ಆದ್ರೆ ಅದು ತಪ್ಪು. ಸಾಮಾನ್ಯವಾಗಿ ಏನನ್ನೂ ತಿನ್ನದೆ ಪ್ರಯಾಣ ಮಾಡುವವರಿಗೆ ವಾಂತಿಯಾಗುತ್ತದೆ. ಪ್ರಯಾಣದ ವೇಳೆ ಲಘು ಆಹಾರ ಸೇವನೆಗೆ ಆದ್ಯತೆ ನೀಡಿ.

ಮೋಷನ್ ಸಿಕ್ನೆಸ್ ಗೆ ಪರಿಹಾರ : ಪ್ರಯಾಣದ ಸಮಯದಲ್ಲಿ ವಾಂತಿ ಸಮಸ್ಯೆಯಿದ್ದರೆ  ಮನೆಯಿಂದ ಹೊರಡುವ ಮೊದಲು ಕೆಲವು ಸುಲಭವಾದ ಸಿದ್ಧತೆಗಳನ್ನು ಮಾಡಿಕೊಳ್ಳಿ. 
ಒಂದು ಹಣ್ಣಾದ ನಿಂಬೆ ಹಣ್ಣನ್ನು ಇಟ್ಟುಕೊಳ್ಳಿ.ವಾಕರಿಕೆ ಬಂದರೆ ತಕ್ಷಣ ಈ ನಿಂಬೆ ಹಣ್ಣಿನ ಸಿಪ್ಪೆ ತೆಗೆದು ವಾಸನೆ ತೆಗೆದುಕೊಳ್ಳಿ. ಇದರಿಂದ  ಮನಸ್ಸು ಫ್ರೆಶ್ ಆಗಿರುತ್ತದೆ.  
ಲವಂಗವನ್ನು ಹುರಿದು ಪುಡಿಮಾಡಿ ಜೊತೆಗಿಟ್ಟುಕೊಳ್ಳಿ. ಪ್ರಯಾಣದ ವೇಳೆ ವಾಕರಿಗೆ ಬರುವಂತಿದ್ದರೆ ಕೇವಲ ಒಂದು ಚಿಟಿಕೆ ಸಕ್ಕರೆ ಅಥವಾ ಕಪ್ಪು ಉಪ್ಪಿನೊಂದಿಗೆ ಲವಂಗದ ಹುಡಿ ಸೇವಿಸಿ. ತುಳಸಿ ಎಲೆ ಕೂಡ ಇದಕ್ಕೆ ಒಳ್ಳೆಯದು. ಅದನ್ನು ಜಗಿಯುತ್ತಿದ್ದರೆ ವಾಂತಿ ಬರುವುದಿಲ್ಲ.ನಿಂಬೆ ಮತ್ತು ಪುದೀನಾ ರಸಕ್ಕೆ ಕಪ್ಪು ಉಪ್ಪು ಸೇರಿಸಿ ಇಟ್ಟುಕೊಳ್ಳಿ. ಅದನ್ನು ಆಗಾಗ ಕುಡಿಯುತ್ತಿರಿ.  ಪ್ರಯಾಣದ ವೇಳೆ ಸೀಟ್ ಮೇಲೆ ಕಾಗದವನ್ನು ಹಾಕಿ ನಂತರ ಅದರ ಮೇಲೆ ಕುಳಿತುಕೊಳ್ಳಿ.ಇದು ಕೂಡ ವಾಂತಿ ಆಗುವುದನ್ನು ತಪ್ಪಿಸುತ್ತದೆ.

click me!