Holi Festival : ಜೀವನದಲ್ಲಿ ಒಮ್ಮೆಯಾದ್ರೂ ಆ ಬಣ್ಣದೋಕುಳಿಯಲ್ಲಿ ಮಿಂದೇಳಿ..

By Suvarna News  |  First Published Feb 13, 2023, 12:03 PM IST

ಇನ್ನೇನು ಶಿವರಾತ್ರಿ ಹತ್ತಿರ ಬರ್ತಿದೆ. ಅದಾದ್ಮೇಲೆ ಬರೋದೇ ಬಣ್ಣದ ಹಬ್ಬ ಹೋಳಿ. ಈ ಬಾರಿ ಹೋಳಿ ಸ್ವಲ್ಪ ಸ್ಪೇಷಲ್ ಆಗಿರಲಿ ಎನ್ನುವವರು ಕೃಷ್ಣನ ಊರಿಗೆ ಹೋಗ್ಬನ್ನಿ. ಅಲ್ಲಿನ ಹೋಳಿ ಸಡಗರವನ್ನು ಕಣ್ತುಂಬಿಕೊಳ್ಳಿ. 
 


ಕೆಂಪು, ನೀಲಿ, ಹಳದಿ, ಗುಲಾಬಿ ಹೀಗೆ ಬಣ್ಣ ಬಣ್ಣಗಳ ಹಬ್ಬ ಹೋಳಿ.   ಭಾರತದಲ್ಲಿ ಬಣ್ಣದೋಕುಳಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಜನರು ಬಣ್ಣದ ನೀರಿನಲ್ಲಿ ಮಿಂದೇಳುತ್ತಾರೆ. ಹೋಳಿ ಉತ್ಸಾಹ ಎಲ್ಲಡೆ ಮನೆ ಮಾಡಿರುತ್ತದೆ. ಉತ್ತರ ಭಾರತದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದಲ್ಲೂ ಕೂಡ ಜನರು ಹೋಳಿಯನ್ನು ಸಂಭ್ರಮದಿಂದ ಆಚರಿಸ್ತಾರೆ. 

ಈ ಬಾರಿ ಮಾರ್ಚ್ 8ರಂದು ಹೋಳಿ (Holi) ಹಬ್ಬವನ್ನು ಆಚರಿಸಲಾಗುವುದು. ನಿಮ್ಮ ಕಾಲೋನಿಯಲ್ಲಿ ಇಲ್ಲವೆ ಮನೆಯಲ್ಲಿ ಬರೀ ಕುಟುಂಬ (Family) ಸ್ಥರ ಜೊತೆ ನೀವು ಹೋಳಿ ಹಬ್ಬ ಆಚರಿಸ್ತಿದ್ದು, ಈ ಬಾರಿ ಹೋಳಿ ಸ್ವಲ್ಪ ಸ್ಪೇಷಲ್ ಆಗಿರಲಿ ಎಂದು ಬಯಸುವವರು ಟ್ರಿಪ್ (trip )ಪ್ಲಾನ್ ಮಾಡಬಹುದು. ಭಾರತದ ಕೆಲ ನಗರಗಳಲ್ಲಿ ಹೋಳಿಯ ಸಂಭ್ರಮ ಡಬಲ್ ಆಗಿರುತ್ತದೆ. ಈ ಬಾರಿ ಹೋಳಿ ಆಚರಣೆಗೆ ನೀವು ವೃಂದಾವನ (Vrindavan) ಕ್ಕೆ ಹೋಗಿ. ವೃಂದಾವನದಲ್ಲಿ ಹೋಳಿಯನ್ನು ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಕೃಷ್ಣನ ನಾಡಲ್ಲಿ ನೀವು ಮೂರು ದಿನ ಹೋಳಿ ಹಬ್ಬವನ್ನು ಎಂಜಾಯ್ ಮಾಡ್ಬಹುದು. ನಾವಿಂದು ವೃಂದಾವನದಲ್ಲಿ ಹೋಳಿ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.

Tap to resize

Latest Videos

ವೃಂದಾವನದಲ್ಲಿ ಮೊದಲ ದಿನ : 
ಬಂಕೆ ಬಿಹಾರಿ ದೇವಾಲಯ :
ವೃಂದಾವನಕ್ಕೆ ಭೇಟಿ ನೀಡಿದ ಮೊದಲ ದಿನ ನೀವು ಬಂಕೆ ಬಿಹಾರಿ ದೇವಾಲಯಕ್ಕೆ ಹೋಗಿ. ಇದು ಅತ್ಯಂತ ಪ್ರಸಿದ್ಧ ಮತ್ತು ಪವಿತ್ರ ದೇವಾಲಯವಾಗಿದೆ. ಬಂಕೆ ಬಿಹಾರಿ ದೇವಾಲಯದ ಹೋಳಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಹೋಳಿಯನ್ನು ಈ ದೇವಾಲಯದ ಸುತ್ತ ಜನರು ಆಚರಿಸುತ್ತಾರೆ. ದೇವಾಲಯದ ಕಿರಿದಾದ ಬೀದಿಗಳಲ್ಲಿ ಮತ್ತು ದೇವಾಲಯದ ಆವರಣದಲ್ಲಿ ಹೋಳಿ ತಯಾರಿ ಒಂದು ವಾರದಿಂದಲೇ ಶುರುವಾಗುತ್ತದೆ. ಹೋಳಿಯ ಅಧ್ಬುತವನ್ನು ನೀವಿಲ್ಲಿ ನೋಡ್ಬಹುದು.

Travel Tips : ಹ್ಯಾರಿ ಪಾಟರ್ ಫ್ಯಾನ್ಸ್ ನೀವಾಗಿದ್ರೆ ಈ ಸ್ಥಳ ನೋಡ್ಲೇಬೇಕು

ಇಸ್ಕಾನ್ ದೇವಾಲಯ : ನೀವು ವೃಂದಾವನಕ್ಕೆ ಭೇಟಿ ನೀಡಿದ ಮೊದಲ ದಿನ ಇಸ್ಕಾನ್ ದೇವಾಲಯಕ್ಕೆ ಹೋಗಿ ಹೋಗಿ ಬರಬಹುದು. ಇದು ಬಂಕೆ ಬಿಹಾರಿ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿದೆ. ಈ ದೇವಸ್ಥಾನದ ಸುತ್ತಲೂ ಪ್ರವಾಸಿಗರು ಬಣ್ಣದಲ್ಲಿ ಮಿಂದೇಳೋದನ್ನು ನೀವು ಕಾಣಬಹುದು. ದೇವಸ್ಥಾನ ಬಿಳಿ ಬಣ್ಣದಲ್ಲಿ ಇರುವ ಕಾರಣ ದೇವಸ್ಥಾನದ ಒಳಗೆ ಬಣ್ಣ ಬಳಸಲು ಒಪ್ಪಿಗೆಯಿಲ್ಲ. ನೀವು ದೇವಸ್ಥಾನದ ಒಳಗೆ ಹೂವಿನ ಓಕಳಿಯನ್ನು ಆಡ್ಬಹದು.

ವೃಂದಾವನದಲ್ಲಿ ಎರಡನೇ ದಿನ : 
ಪ್ರೇಮ ಮಂದಿರ : ಪ್ರೇಮ್ ಮಂದಿರವನ್ನು 2001 ರ ಸುಮಾರಿಗೆ ವೃಂದಾವನದ ಭೂಮಿಯಲ್ಲಿ ಸ್ಥಾಪಿಸಲಾಯಿತು. ಇದು ವೃಂದಾವನದ ಅತ್ಯಂತ ಪವಿತ್ರ ಮತ್ತು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯದ ಸಂಕೀರ್ಣದಲ್ಲಿ ಶ್ರೀಕೃಷ್ಣನ ಎಲ್ಲಾ ರೂಪಗಳನ್ನು ನಾವು ನೋಡ್ಬಹದು. ಬಿಳಿ ಅಮೃತಶಿಲೆಯಿಂದ ಮಾಡಿದ ಈ ದೇವಾಲಯದ ಸಂಕೀರ್ಣದಲ್ಲಿ ಬಣ್ಣಗಳನ್ನು ಬಳಸುವುದಿಲ್ಲ. ಹಾಗಾಗಿ ಲಕ್ಷಾಂತರ ಪ್ರವಾಸಿಗರು ದೇವಾಲಯದ ಹೊರಗೆ ಹೋಳಿ ಆಚರಿಸುತ್ತಾರೆ.

ಗೋವಿಂದ್ ದೇವ್ ಜೀ ದೇವಾಲಯ : ವೃಂದಾವನದಲ್ಲಿರುವ ಗೋವಿಂದ್ ದೇವ್ ಜಿ ದೇವಾಲಯವು ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಈ 7 ಅಂತಸ್ತಿನ ದೇವಾಲಯವನ್ನು ಕಲ್ಲುಗಳಿಂದ ನಿರ್ಮಿಸಲಾಗಿದೆ. ಮೊಘಲ್ ಆಕ್ರಮಣದ ನಂತರ, ಕೇವಲ 3 ಮಹಡಿಗಳು ಉಳಿದುಕೊಂಡಿವೆ. ನೀವು ವೃಂದಾನವಕ್ಕೆ ಭೇಟಿ ನೀಡಿದ ಎರಡನೇ ದಿನ ಈ ದೇವಸ್ಥಾನದಲ್ಲಿ ಹೋಳಿ ಸಡಗರ ವೀಕ್ಷಣೆ ಮಾಡಬಹುದು.

ಮುಸ್ಲಿಂ ದೇಶ ಇಂಡೋನೇಷ್ಯಾದಲ್ಲಿ ಅಷ್ಟೊಂದು ಹಿಂದೂಗಳಿರೋದು ಹೇಗೆ? ಡಾ. ಬ್ರೋ ಏನಂತಾರೆ?

ವೃಂದಾವನದಲ್ಲಿ ಮೂರನೇ ದಿನ : ಇಂದು ನೀವು ಶ್ರೀಕೃಷ್ಣನ ಜನ್ಮ ಸ್ಥಳದಲ್ಲಿ ಹೋಳಿ ಸಡಗರವನ್ನು ಕಣ್ತುಂಬಿಕೊಳ್ಳಬಹುದು. ವಾರಕ್ಕೆ ಮುನ್ನವೇ ಇಲ್ಲಿ ಹೋಳಿ ಸಂಭ್ರಮ ಕಾಣ್ಬಹುದು. ಇಡೀ ದಿನ ನೀವು ಇಲ್ಲಯೇ ಕಳೆಯಬಹುದು. ಇಲ್ಲಿ ಲಕ್ಷಾಂತರ ಮಂದಿ ಬಣ್ಣವನ್ನು ಪರಸ್ಪರ ಎರಚಿಕೊಂಡು ವಿಜ್ರಂಭಣೆಯಿಂದ ಹೋಳಿ ಆಚರಣೆ ಮಾಡ್ತಾರೆ. ರೈಲ್ವೆ ನಿಲ್ದಾಣ ಹತ್ತಿರವಿರುವ ಕಾರಣ ನಿಮಗೆ ಪ್ರಯಾಣ ಕೂಡ ಸುಲಭವಾಗುತ್ತದೆ. 
 

click me!