ಭಾರತದ ಸಾವಿರಾರು ಕೋಟ್ಯಧಿಪತಿಗಳು 2024ನಲ್ಲಿ 'ಈ' ದೇಶಕ್ಕೆ ಸ್ಥಳಾಂತರ

By Reshma Rao  |  First Published Jun 20, 2024, 3:04 PM IST

2024ರಲ್ಲಿ, ಸುಮಾರು 4,300 ಭಾರತೀಯ ಮಿಲಿಯನೇರ್‌ಗಳು ಈ ಒಂದು ದೇಶಕ್ಕೆ ತಮ್ಮ ವಲಸೆ ಬದಲಿಸುತ್ತಿದ್ದಾರೆ. 


ಹತ್ತಿಪ್ಪತ್ತು ವರ್ಷಗಳ ಕೆಳಗೆ ಭಾರತೀಯರಿಗೆ ಅಮೆರಿಕದಲ್ಲಿ ಕೆಲಸ ಗಳಿಸಿ ಅಲ್ಲಿ ಹೋಗುವ ಆಕಾಂಕ್ಷೆ ಜೋರಾಗಿತ್ತು. ನಂತರದಲ್ಲಿ ಯೂರೋಪಿ ಕಡೆಗೆ ಆಕರ್ಷಣೆ ಹೆಚ್ಚಿತು. ಆದರೆ, ಈ ವರ್ಷ ಭಾರತೀಯರ ಆಕರ್ಷಣೆ ಮತ್ತೊಂದು ದೇಶಕ್ಕೆ ಬದಲಾಗಿದೆ. ಹೌದು, 2024ರಲ್ಲಿ, ಸುಮಾರು 4,300 ಮಿಲಿಯನೇರ್‌ಗಳು ಭಾರತವನ್ನು ತೊರೆಯುವ ನಿರೀಕ್ಷೆಯಿದೆ. ಅವರಲ್ಲಿ ಹೆಚ್ಚಿನವರು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅನ್ನು ತಮ್ಮ ಅಂತಿಮ ತಾಣವಾಗಿ ಆಯ್ಕೆ ಮಾಡುತ್ತಾರೆ ಎಂದು ಅಂತರರಾಷ್ಟ್ರೀಯ ಹೂಡಿಕೆ ವಲಸೆ ಸಲಹಾ ಸಂಸ್ಥೆ ಹೆನ್ಲಿ ಮತ್ತು ಪಾಲುದಾರರು ಇತ್ತೀಚಿನ ವರದಿಯಲ್ಲಿ ತಿಳಿಸಿದ್ದಾರೆ.

2023ರಲ್ಲಿ, ಕನಿಷ್ಠ 5,100 ಭಾರತೀಯ ಮಿಲಿಯನೇರ್‌ಗಳು ವಿದೇಶಕ್ಕೆ ತೆರಳಿದ್ದಾರೆ ಎಂದು ವರದಿಯು ಎತ್ತಿ ತೋರಿಸಿದೆ. ಚೀನಾ ಮತ್ತು ಯುನೈಟೆಡ್ ಕಿಂಗ್‌ಡಮ್ ನಂತರ ಜಾಗತಿಕವಾಗಿ ಮಿಲಿಯನೇರ್ ವಲಸೆಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ ಎಂದು ವರದಿ ಗಮನಿಸಿದೆ.


 

Tap to resize

Latest Videos

'ಭಾರತವು ಪ್ರತಿ ವರ್ಷ ಸಾವಿರಾರು ಮಿಲಿಯನೇರ್‌ಗಳನ್ನು ಕಳೆದುಕೊಳ್ಳುತ್ತಿದ್ದು, ಅನೇಕರು ಯುಎಇಗೆ ವಲಸೆ ಹೋಗುತ್ತಾರೆ. ಈ ವಲಸೆಯಿಂದಾಗಿ ಕಳೆದ ದಶಕದಲ್ಲಿ 85% ನಷ್ಟು ಸಂಪತ್ತಿನ ಬೆಳವಣಿಗೆ ತಗ್ಗಬೇಕಿತ್ತು. ಆದರೆ, ಆಶಾಾಯಕ ವಿಷಯೆಂದರೆ ಭಾರತವು ಹೆಚ್ಚು ಹೊಸ ಮಿಲಿಯನೇರ್‌ಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗುತ್ತಿದೆ' ಎಂದು ವರದಿ ಹೇಳುತ್ತದೆ.

ಅಂದರೆ,ಈ ವಲಸೆ ಭಾರತಕ್ಕೆ ಕಾಳಜಿಯ ವಿಷಯವಲ್ಲ. ಏಕೆಂದರೆ ಅದು ವಲಸೆಯಿಂದ ಕಳೆದುಕೊಳ್ಳುವುದಕ್ಕಿಂತ ಹೆಚ್ಚು ಹೊಸ ಹೈ-ನೆಟ್-ವರ್ತ್ ವ್ಯಕ್ತಿಗಳನ್ನು (HNWIs) ಉತ್ಪಾದಿಸುವುದನ್ನು ಮುಂದುವರೆಸಿದೆ. ದೇಶವನ್ನು ತೊರೆಯುತ್ತಿರುವ ಬಹುಪಾಲು ಮಿಲಿಯನೇರ್‌ಗಳು ವ್ಯಾಪಾರದ ಆಸಕ್ತಿಗಳು ಮತ್ತು ಎರಡನೇ ಮನೆಗಳನ್ನು ಇಲ್ಲಿಯೇ ಉಳಿಸಿಕೊಂಡಿದ್ದಾರೆ ಎಂದು ವರದಿ ಹೈಲೈಟ್ ಮಾಡಿದೆ.

ಗಮನಾರ್ಹವಾಗಿ, ಭಾರತೀಯ ಖಾಸಗಿ ಬ್ಯಾಂಕ್‌ಗಳು ಮತ್ತು ಸಂಪತ್ತು ನಿರ್ವಹಣಾ ವೇದಿಕೆಗಳು ತಮ್ಮ ಗ್ರಾಹಕರಿಗೆ ತಡೆರಹಿತ ಹೂಡಿಕೆ ಸಲಹಾ ಸೇವೆಗಳನ್ನು ಒದಗಿಸುವ ಸಲುವಾಗಿ ಯುಎಇ ಮಾರುಕಟ್ಟೆಗೆ ದಾರಿ ಮಾಡಿಕೊಡುತ್ತಿವೆ.

ತುಂಬಾ ಸಿಂಪಲ್ ಆಗಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ ಧರಿಸಿದ್ದ ಒಡವೆ ಬೆಲ ...
 

'ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು 360 ಒನ್ ವೆಲ್ತ್ ಯುಎಇಯಲ್ಲಿ ಭಾರತೀಯ ಕುಟುಂಬಗಳಿಗೆ ಸಂಪತ್ತು ನಿರ್ವಹಣಾ ಸೇವೆಗಳನ್ನು ಒದಗಿಸುತ್ತಿವೆ,' ಎಂದು ಹೆನ್ಲಿ ವರದಿ ಹೇಳಿದೆ.

ವರದಿಯ ಪ್ರಕಾರ, 2024ರಲ್ಲಿ, ಪ್ರಪಂಚದಾದ್ಯಂತ ಸುಮಾರು 1,28,000 ಮಿಲಿಯನೇರ್‌ಗಳು ಯುನೈಟೆಡ್ ಸ್ಟೇಟ್ಸ್ ಮತ್ತು ಯುಎಇಗೆ ತಮ್ಮ ಆದ್ಯತೆಯ ತಾಣಗಳಾಗಿ ಸ್ಥಳಾಂತರಗೊಳ್ಳುವ ನಿರೀಕ್ಷೆಯಿದೆ.

ವಲಸೆ ಹೋಗುವ ಮಿಲಿಯನೇರ್‌ಗಳು ವಿದೇಶೀ ವಿನಿಮಯ ಆದಾಯದ ಪ್ರಮುಖ ಮೂಲವಾಗಿದ್ದಾರೆ. ಏಕೆಂದರೆ ಅವರು ಹೊಸ ದೇಶಕ್ಕೆ ತೆರಳುವಾಗ ತಮ್ಮ ಹಣವನ್ನು ತಮ್ಮೊಂದಿಗೆ ತೆಗೆದುಕೊಡು ಹೋಗುತ್ತಾರೆ.

click me!