ಯಾವಾಗ್ಲೂ ಅದೇ ಆಫೀಸು, ಅದೇ ಕೆಲಸ, ಅದೇ ಮನೆ, ಅದೇ ಕಿರಿಕಿರಿ.ಯಾರಿಗಾದರೂ ಸಾಕಪ್ಪಾ ಸಾಕು ಅನಿಸುವುದು ಸುಳ್ಳಲ್ಲ. ಮಾನಸಿಕವಾಗಿಯೂ ಇದು ಸಾಕಷ್ಟು ಕಿರಿಕಿರಿಯೆನಿಸುತ್ತದೆ. ಹೀಗಿರುವಾಗ ಕೆಲಸದ ಮಧ್ಯೆ ರಜೆ ತೆಗೆದುಕೊಂಡು ಟ್ರಾವೆಲ್ ಹೋಗೋದು ತುಂಬಾ ಒಳ್ಳೆಯದು ಅಂತಾರೆ ತಜ್ಞರು.
ಬಿಡುವಿಲ್ಲದ ಸಾಮಾಜಿಕ ಜೀವನ (Social life), ಒತ್ತಡದ ಕೆಲಸದಿಂದ ಇತ್ತೀಚಿಗೆ ರಜೆಗಾಗಿ ಸಮಯವನ್ನು ಹುಡುಕುವುದು ಹಲವರಿಗೆ ಕಷ್ಟಕರವಾಗಿದೆ. ಹೀಗಾಗಿ ಕಚೇರಿ (Office), ಮನೆ ಎಂದು ಮತ್ತಷ್ಟು ಒತ್ತಡದಿಂದ ಬಳಲುವಂತಾಗುತ್ತದೆ. ಆದರೆ ಪ್ರಯಾಣವು ಮಾನಸಿಕ ಆರೋಗ್ಯದ ದೃಷ್ಟಿಯಿಂದ ನೋಡಿದಾಗ ತುಂಬಾ ಒಳ್ಳೆಯದು. ಯಾಕೆಂದರೆ ಪ್ರಯಾಣವು (Travel) ಮೆದುಳಿನ ಆರೋಗ್ಯಕ್ಕೆ ಮಹತ್ವದ ಸಂಪರ್ಕವನ್ನು ಹೊಂದಿದೆ. ನೀವು ನಿಮ್ಮ ಆರಾಮ ವಲಯದಿಂದ ಹೊರಗೆ ಹೆಜ್ಜೆ ಹಾಕಿದಾಗ ಮತ್ತು ಹೊಸ ಜನರ ಜೊತೆ ಸಂವಹನ ನಡೆಸಿದಾಗ ಇದು ಮನಸ್ಸನ್ನು ಸಹ ರಿಫ್ರೆಶ್‌ಗೊಳಿಸುತ್ತದೆ.
ನಿಮ್ಮ ಬಿಡುವಿಲ್ಲದ ಕೆಲಸದಿಂದ ವಿರಾಮವನ್ನು ತೆಗೆದುಕೊಳ್ಳುವುದು ನಿಮ್ಮ ಒಟ್ಟಾರೆ ದೈಹಿಕ (Physical) ಮತ್ತು ಮಾನಸಿಕ (Mental) ಆರೋಗ್ಯದಲ್ಲಿ ದೊಡ್ಡ ವ್ಯತ್ಯಾಸವನ್ನು ಉಂಟುಮಾಡಬಹುದು ಎಂದು ತಜ್ಞರು (Experts) ಹೇಳುತ್ತಾರೆ. ನಿಯಮಿತವಾಗಿ ಹಾಲಿಡೇಸ್ ಹೋಗೋದ್ರಿಂದ ಮಾನಸಿಕ ಆರೋಗ್ಯಕ್ಕೆ ಸಿಗುವ ಅದ್ಭುತ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ.
New Year 2023: ಕ್ರಿಸ್‌ಮಸ್‌ನಿಂದ ನ್ಯೂ ಇಯರ್‌ವರೆಗೆ ರಜೆ ಎಂಜಾಯ್ ಮಾಡಲು ಇಲ್ಲಿವೆ ಬೆಸ್ಟ್ ತಾಣಗಳು
1. ರಜೆಗಳು ಒತ್ತಡವನ್ನು ಕಡಿಮೆ ಮಾಡುತ್ತದೆ: ಮಾನಸಿಕ ಮತ್ತು ದೈಹಿಕ ಕಾಯಿಲೆಗೆ ಕಾರಣವಾಗುವ ಪ್ರಮುಖ ಅಂಶವೆಂದರೆ ಒತ್ತಡ (Pressure). ಆದರೆ ನೀವು ಹೆಚ್ಚು ಪ್ರಯಾಣಿಸುವ ಮೂಲಕ ಇದನ್ನು ಸಕ್ರಿಯವಾಗಿ ಎದುರಿಸಬಹುದು. ನಿಯಮಿತ ಚಟುವಟಿಕೆಗಳಿಂದ ನಿಮ್ಮ ಮನಸ್ಸಿನಿಂದ ಒತ್ತಡವನ್ನು ದೂರವಿಡುವ ಮೂಲಕ ಆರೋಗ್ಯವನ್ನು ರಿಫ್ರೆಶ್ ಮಾಡಬಹುದು. ಟ್ರಾವೆಲ್ ಹೋಗುವುದರಿಂದ ಮನಸ್ಸು ವರ್ಕ್ ಮೋಡ್‌ನಿಂದ ಹೊರಗೆ ಬರುತ್ತದೆ. ಹೊಸ ವಿಚಾರಗಳು ಮನಸ್ಸಿನಲ್ಲಿ ತುಂಬಿಕೊಳ್ಳುವುದರಿಂದ ದೃಹಿಕ ಹಾಗೂ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ.
2. ಚೇತರಿಸಿಕೊಳ್ಳುವಂತೆ ಮಾಡುತ್ತದೆ: ಅನಿರೀಕ್ಷಿತ ವೆಚ್ಚಗಳು, ಫ್ಲೈಟ್ ವಿಳಂಬಗಳು ಮತ್ತು ಸರಿಯಾದ ರೀತಿಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕಾದ ಕಾರಣ ಟ್ರಾವೆಲ್ ಮಾಡುವುದು ಯಾವಾಗಲೂ ಸುಲಭವಲ್ಲ. ಆರಂಭದಲ್ಲೇ ಇದು ನಿರಾಶಾದಾಯಕವಾಗಿ ತೋರುತ್ತದೆಯಾದರೂ, ಪ್ರಯಾಣದ ಅನಿಶ್ಚಿತತೆಯು ಅದರ ಉಲ್ಲಾಸವನ್ನು ಹೆಚ್ಚಿಸುತ್ತದೆ. ಸಮಸ್ಯೆಗಳು (Problems), ಸವಾಲುಗಳು ನಿಮಗೆ ಹೆಚ್ಚು ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
3. ಹೊಸ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ: ಮನೆಗಳು, ಕುಟುಂಬಗಳು ಮತ್ತು ಉದ್ಯೋಗದ ಸ್ಥಳಗಳಲ್ಲಿ ನಾವು ಯಾವಾಗಲೂ ಒಬ್ಬರನ್ನೇ ನೋಡುತ್ತಿರುತ್ತೇವೆ. ಇದರಿಂದ ಹೊಸ ಯಾವುದೇ ಬಂಧ ಏರ್ಪಡುವುದಿಲ್ಲ. ಆದರೆ ಹೊಸ ಪ್ರದೇಶಕ್ಕೆ ಪ್ರಯಾಣಿಸುವುದರಿಂದ ನಿಮಗೆ ಹೊಸ ಸ್ಥಳ, ಹೊಸಬರ ಪರಿಚಯ ಆಗುತ್ತದೆ. ಟ್ರಿಪ್ ವಿವಿಧ ಸಂಸ್ಕೃತಿಗಳು ಮತ್ತು ಜೀವನ ವಿಧಾನಗಳ ಬಗ್ಗೆ ತಿಳಿದುಕೊಳ್ಳಲು ನಮಗೆ ಅವಕಾಶ ನೀಡುತ್ತದೆ. ಇದು ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ.
New YearTravel Tips : ಈ ಸುಂದರ ಸ್ಥಳದಲ್ಲಿ ಹೊಸ ವರ್ಷವನ್ನು ಸ್ವಾಗತಿಸಿ!
4. ಮನಸ್ಸಿಗೆ ಶಾಂತಿ ದೊರಕುತ್ತದೆ: ಪ್ರಯಾಣ ಮಾಡುವುದರಿಂದ ಮನಸ್ಸಿಗೆ ಶಾಂತಿ (Peace) ದೊರಕುತ್ತದೆ. ಹೊಸ ಸ್ಥಳಗಳಿಗೆ ಪ್ರಯಾಣಿಸುವ ಮೂಲಕ, ಹೊಸ ಜನರನ್ನು ಭೇಟಿ ಮಾಡುವ ಮೂಲಕ ಮತ್ತು ಸವಾಲುಗಳನ್ನು ಜಯಿಸುವ ಮೂಲಕ ನೀವು ಪೀಸ್ ಆಫ್ ಮೈಂಡ್‌ನ್ನು ಪಡೆದುಕೊಳ್ಳುತ್ತೀರಿ. ಮಾತ್ರವಲ್ಲ ಇದು ನಿಮಗೆ ನಿಮ್ಮ ಬಗ್ಗೆಯೇ ಯೋಚಿಸಲು ಪ್ರತ್ಯೇಕ ಸಮಯವನ್ನು ನೀಡುತ್ತದೆ. ನೀವು ಪ್ರಯಾಣದ ಸಂದರ್ಭದಲ್ಲಿ ನಿಮ್ಮ ಜೀವನದ ಪಾಸ್ಟ್ , ಫ್ಯೂಚರ್ ಬಗ್ಗೆ ಯೋಚಿಸಬಹುದು. ನಿಮ್ಮ ಪ್ರಸ್ತುತ ಬದುಕನ್ನು ಇನ್ನಷ್ಟು ಸುಧಾರಿಸಬಹುದು.
5. ಸೃಜನಶೀಲತೆಯನ್ನು ಹೆಚ್ಚಿಸುತ್ತದೆ: ಪ್ರಯಾಣವು ನಿಮ್ಮ ಆರಾಮ ವಲಯದಿಂದ ಹೊರಗೆ ಹೆಜ್ಜೆ ಹಾಕಲು ನಿಮ್ಮನ್ನು ಒತ್ತಾಯಿಸುತ್ತದೆ ಎಂಬ ಅಂಶವು ಅದರ ದೊಡ್ಡ ಪ್ರಯೋಜನಗಳಲ್ಲಿ ಒಂದಾಗಿದೆ. ಪ್ರಯಾಣ ಮಾಡುವಾಗ ಎಲ್ಲವೂ ಹೊಸದಾಗಿ ಮತ್ತು ತಾಜಾವಾಗಿ ಕಾಣುತ್ತದೆ, ವಿಶೇಷವಾಗಿ ನೀವು ಹಿಂದೆಂದೂ ಇಲ್ಲದ ಸ್ಥಳಕ್ಕೆ ಹೋಗುತ್ತಿದ್ದರೆ ಇದು ಖಂಡಿತವಾಗಿಯೂ ನಿಮ್ಮ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ.
Travel Guide: ಸೌತ್ ಇಂಡಿಯಾ ಟ್ರಿಪ್ ಪ್ಲಾನ್ ಮಾಡುವಾಗ ಈ ವಿಚಾರ ಗಮನದಲ್ಲಿರಲಿ
6. ಅರಿವನ್ನು ಸುಧಾರಿಸುತ್ತದೆ: ಪ್ರಯಾಣವು ಮೆದುಳಿಗೆ ಅನನ್ಯ ಅನುಭವಗಳನ್ನು ಒದಗಿಸುವ ಮೂಲಕ ಅರಿವನ್ನು ಸುಧಾರಿಸುತ್ತದೆ. ಹೊಸ ಸವಾಲುಗಳನ್ನು ಎದುರಿಸುವಾಗ ಪರಿಹಾರ ಕಂಡುಕೊಳ್ಳುವ ಜಾಣ್ಮೆ ಬೇಕು. ಇದರ ಫಲಿತಾಂಶವೆಂದರೆ ಮೆದುಳು ತಾಜಾ ನರ ಸಂಪರ್ಕಗಳನ್ನು ಸೃಷ್ಟಿಸುತ್ತದೆ. ಅದು ವಿಶಿಷ್ಟವಾದ ಅರಿವಿಗೆ ಕಾರಣವಾಗುತ್ತದೆ.