Travel Tips: ಮೆಟ್ರೋದಲ್ಲಿ ಪ್ರಯಾಣ ಮಾಡುವಾಗ ಈ ಎಲ್ಲಾ ವಿಷ್ಯ ಗೊತ್ತಿರ್ಲಿ

Published : May 13, 2023, 12:17 PM IST
Travel Tips: ಮೆಟ್ರೋದಲ್ಲಿ ಪ್ರಯಾಣ ಮಾಡುವಾಗ ಈ ಎಲ್ಲಾ ವಿಷ್ಯ ಗೊತ್ತಿರ್ಲಿ

ಸಾರಾಂಶ

ಬೇಗ ಬೇಗ ಜಾಗ ತಲುಪ್ಬೇಕು, ಯಾವುದೇ ಟ್ರಾಫಿಕ್ ಜಂಜಾಟ ಇರಬಾರದು ಎನ್ನುವವರು ಮೆಟ್ರೊ ಹತ್ತುತ್ತಾರೆ. ಮೆಟ್ರೋ ನಮ್ಮ ಅನೇಕ ಕೆಲಸವನ್ನು ಸುಗಮಗೊಳಿಸಿದೆ. ಆದ್ರೆ ಈ ಮೆಟ್ರೋ ಬಗ್ಗೆ ತಿಳಿಯೋದು ಸಾಕಷ್ಟಿದೆ.  

ಭಾರತದ ಅನೇಕ ಕಡೆ ಮೆಟ್ರೋ ಲಗ್ಗೆಯಿಟ್ಟಿದೆ. ನಮ್ಮ ಸಂಚಾರವನ್ನು ಸುಗಮಗೊಳಿಸುವಲ್ಲಿ ಮೆಟ್ರೋ ಪಾತ್ರ ದೊಡ್ಡದಿದೆ. ಸಮಯ ಉಳಿಸುವ ಜೊತೆಗೆ ಆರಾಮದಾಯಕ ಸಂಚಾರಕ್ಕೆ ಮೆಟ್ರೋ ಒಳ್ಳೆಯದು. ಮೆಟ್ರೋದಲ್ಲಿ ಬಹುಬೇಗ ಗಮ್ಯ ಸ್ಥಾನವನ್ನು ತಲುಪಬಹುದು. ಯಾವುದೇ ಟ್ರಾಫಿಕ್ ಜಾಮ್ ಕಿರಿಕಿರಿಯಿಲ್ಲ. ಸಿಗ್ನಲ್ ನಲ್ಲಿ ನಿಲ್ಲಬೇಕೆಂಬ ಟೆನ್ಷನ್ ಇಲ್ಲ. ಎಸಿ ಬೋಗಿಯಲ್ಲಿ ಕುಳಿತು ಸಂಚಾರ ನಡೆಸಲು ಇದ್ರಲ್ಲಿ ಎಲ್ಲ ಪ್ರಯಾಣಿಕರಿಗೆ ಅವಕಾಶವಿರುತ್ತದೆ. ಇದೇ ಕಾರಣಕ್ಕೆ ಪ್ರತಿನಿತ್ಯ ಲಕ್ಷಾಂತರ ಮಂದಿ ಮೆಟ್ರೋದಲ್ಲಿ ಪ್ರಯಾಣ ಬೆಳೆಸುತ್ತಾರೆ. ಪ್ರತಿ ದಿನ ಮೆಟ್ರೋದಲ್ಲಿಯೇ ಸಂಚರಿಸುವ ಅನೇಕರಿದ್ದಾರೆ. ನಿತ್ಯ ಕಚೇರಿಗೆ ಅಥವಾ  ಬೇರೆ ಕೆಲಸಕ್ಕೆ ಮೆಟ್ರೋ ಬಳಸುವ ಜನರಿಗೇ ಮೆಟ್ರೋಗೆ ಸಂಬಂಧಿಸಿದ ಕೆಲ ಸಂಗತಿ ತಿಳಿದಿರೋದಿಲ್ಲ. ನಾವಿಂದು ಮೆಟ್ರೋಗೆ ಸಂಬಂಧಿಸಿದ ಕೆಲ ವಿಷ್ಯಗಳನ್ನು ನಿಮಗೆ ಹೇಳ್ತೇವೆ.

ಭಾನುವಾರ (Sunday) ಸಿಗುತ್ತೆ ರಿಯಾಯಿತಿ : ಇತ್ತೀಚಿನ ದಿನಗಳಲ್ಲಿ ದೆಹಲಿ ಮೆಟ್ರೋ (Metro) ಸಾಕಷ್ಟು ಸುದ್ದಿಯಲ್ಲಿದೆ. ಆದ್ರೆ ಮೆಟ್ರೋದಲ್ಲಿ ಪ್ರಯಾಣಿಸುವ ಕೆಲವೇ ಕೆಲವು ಪ್ರಯಾಣಿಕರಿಗೆ, ಭಾನುವಾರದಂದು ಮೆಟ್ರೋ ಟಿಕೆಟ್ (Ticket) ನಲ್ಲಿ ರಿಯಾಯಿತಿ ಇದೆ ಎಂಬ ವಿಷ್ಯ ತಿಳಿದಿದೆ. ಅನೇಕರಿಗೆ ಈ ಬಗ್ಗೆ ಮಾಹಿತಿ ಇಲ್ಲ. ನೀವು ಸ್ಮಾರ್ಟ್ ಕಾರ್ಡ್‌ನಿಂದ ಪಾವತಿ ಮಾಡ್ತಿದ್ದರೂ ನಿಮಗೆ ರಿಯಾಯಿತಿ ಸಿಗುತ್ತದೆ. ಕುಟುಂಬದ ಜೊತೆ ಮೆಟ್ರೋದಲ್ಲಿ ಪ್ರಯಾಣ ಬೆಳೆಸಲು ನಿರ್ಧರಿಸಿದ್ದರೆ ಭಾನುವಾರ ಇದಕ್ಕೆ ಬೆಸ್ಟ್ ದಿನ.

ಮೇ ತಿಂಗಳಲ್ಲಿ ನೀವು ನೋಡಲೇಬೇಕಾದ ಭಾರತದ ಅತ್ಯದ್ಭುತ ಜಾಗಗಳಿವು

ಮೆಟ್ರೋದಲ್ಲಿ ಇಂಥ ವಸ್ತು (Material) ಸಾಗಣೆ ಸಾಧ್ಯವಿಲ್ಲ : ಮೆಟ್ರೋದಲ್ಲಿ ನೀವು ಎಲ್ಲ ರೀತಿಯ ವಸ್ತುಗಳನ್ನು ತೆಗೆದುಕೊಂಡು ಬರಲು ಸಾಧ್ಯವಿಲ್ಲ. ಚಾಕುಗಳಂತಹ ತೀಕ್ಷ್ಣವಾದ ವಸ್ತುಗಳನ್ನು ನೀವು ಮೆಟ್ರೋದಲ್ಲಿ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗುವುದಿಲ್ಲ. ತಪಾಸಣೆಯ ಸಮಯದಲ್ಲಿ ನಿಮ್ಮ ಬ್ಯಾಗ್‌ನಲ್ಲಿ ಈ ರೀತಿಯ ವಸ್ತು  ಕಂಡುಬಂದರೆ, ಅಧಿಕಾರಿಗಳು ನಿಮ್ಮ ಸಾಮಾನುಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರೆ. ನೀವು ಮೆಟ್ರೋ ನಿಲ್ದಾಣ (Station) ಕ್ಕೆ ಹೋಗಿ ಈ ವಸ್ತುಗಳನ್ನು ಪಡೆಯಬೇಕು,

ಇಂಥವರಿಗೆ ನೆರವಾಗ್ತಾರೆ ಮೆಟ್ರೋ ಅಧಿಕಾರಿಗಳು : ವಿಕಲಾಂಗರಿಗೆ ಮೆಟ್ರೋ ನೆರವು ನೀಡುತ್ತದೆ. ಕಾಲಿನ ಸಮಸ್ಯೆ ಇರುವವರನ್ನು, ಗಾಲಿ ಖುರ್ಚಿಯಲ್ಲಿ ಪ್ರಯಾಣಿಸುವವರು ಮೆಟ್ರೋ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ಅದ್ರ ನಂತ್ರ ಸಹಾಯಕ್ಕೆ ಅಧಿಕಾರಿಗಳು ಬರ್ತಾರೆ. ಮೆಟ್ರೋ ಹತ್ತಿಸಿ, ಸೀಟ್ ಮೇಲೆ ಕುಳಿಸುವ ಜವಾಬ್ದಾರಿ ಅವರದ್ದಾಗಿರುತ್ತದೆ. ವಿಕಲಾಂಗರು ಇಳಿಯುವ ನಿಲ್ದಾಣದಲ್ಲೂ ಅಧಿಕಾರಿ ಬಂದು ಸಹಾಯ ಮಾಡುತ್ತಾರೆ. 

ಕಡಿಮೆ ಕೆಲಸ, ಲಕ್ಷಾಂತರ ರೂಪಾಯಿ ಸಂಬಳ ಬೇಕೆ? ಇಲ್ಲಿದೆ ಅಂತಹ ಕೆಲಸ

ಶಾಪಿಂಗ್ ಜೊತೆ ಆಹಾರ : ಕೆಲ ಮೆಟ್ರೋ ನಿಲ್ದಾಣಗಳು ಸಾರ್ವಜನಿಕರಿಗೆ ಅನುಕೂಲಕರವಾಗಿದೆ. ಮೆಟ್ರೋ ನಿಲ್ದಾಣದಲ್ಲಿಯೇ ಶಾಪಿಂಗ್ ಗೆ ಅವಕಾಶವಿದೆ. ಹಾಗೆಯೇ ಆಹಾರ ಕೂಡ ನಿಮಗೆ ಸಿಗುತ್ತದೆ. ಅಗತ್ಯವಿರುವವರು ಇದ್ರ ಪ್ರಯೋಜನ ಪಡೆಯಬಹುದಾಗಿದೆ.

ಪರ್ಸನಲ್ ಬುಕ್ಕಿಂಗ್ ಗೆ ಅವಕಾಶ : ಮೆಟ್ರೋದಲ್ಲಿ ಪರ್ಸನಲ್ ಬುಕ್ಕಿಂಗ್ ಗೆ ಅವಕಾಶವಿದೆ. ಪ್ರವಾಸಿಗರು, ವಿದೇಶಿ ಪ್ರಯಾಣಿಕರು, ಸರ್ಕಾರಿ ಅಥವಾ ಖಾಸಗಿ ಶಾಲಾ ಮಕ್ಕಳು ಹಾಗೂ ಅಂಗವಿಕಲ ಮಕ್ಕಳ ಶಾಲೆಗಳನ್ನು ನಡೆಸುತ್ತಿರುವ ಎನ್‌ಜಿಒಗಳು ಪರ್ಸನಲ್ ಬುಕ್ಕಿಂಗ್ ಮಾಡಬಹುದು. 45 ರಿಂದ 150 ಜನರನ್ನು ಹೊಂದಿರುವ ಗುಂಪು ಕೋಚ್ ಬುಕ್ಕಿಂಗ್ ಮಾಡಬೇಕಾಗುತ್ತದೆ. ಇದ್ರ ದರ ಭಿನ್ನವಾಗಿರುತ್ತದೆ. 30,000 ರಿಂದ 50,000 ರೂಪಾಯಿ ಬೆಲೆಯಲ್ಲಿ ಮೆಟ್ರೋ ಪ್ರವಾಸಕ್ಕೆ ಕೋಚ್‌ಗಳನ್ನು ಕಾಯ್ದಿರಿಸಬಹುದು. 

ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ : ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್ ಸ್ಥಳವಿರುತ್ತದೆ. ನಿಮ್ಮ ವಾಹನವನ್ನು ಅಲ್ಲಿ ನಿಲ್ಲಿಸಿ ಯಾವುದೇ ಚಿಂತೆಯಿಲ್ಲದೆ ನೀವು ಮೆಟ್ರೋದಲ್ಲಿ ಪ್ರಯಾಣ ಬೆಳೆಸಬಹುದಾಗಿದೆ. ಮೆಟ್ರೋ ನಿಲ್ದಾಣದಲ್ಲಿ ನಿಂತ ವಾಹನ ಸುರಕ್ಷಿತವಾಗಿರುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!