Interesting Facts : ವಿಶ್ವದಲ್ಲಿರೋ ಈ ಗ್ರಾಮದ ಸುದ್ದಿ ಕೇಳಿದ್ರೆ ದಂಗಾಗ್ತೀರಾ..

Published : May 10, 2023, 02:39 PM IST
Interesting Facts : ವಿಶ್ವದಲ್ಲಿರೋ ಈ ಗ್ರಾಮದ ಸುದ್ದಿ ಕೇಳಿದ್ರೆ ದಂಗಾಗ್ತೀರಾ..

ಸಾರಾಂಶ

ನಮ್ಮ ಸುತ್ತಮುತ್ತಲಿನ ಪರಿಸರವೇ ನಮಗೆ ತಿಳಿದಿರೋದಿಲ್ಲ. ಇನ್ನು ಬೇರೆ ದೇಶ, ಊರಿನ ಬಗ್ಗೆ ಸರಿಯಾದ ಮಾಹಿತಿ ಹೇಗೆ ಸಿಗ್ಬೇಕು. ನಮ್ಮೂರೇ ನಮಗೆ ವಿಚಿತ್ರವೆನ್ನಿಸಬಹುದು. ಆದ್ರೆ ಇನ್ನೂ ಚಿತ್ರವಿಚಿತ್ರವಾಗಿರುವ ಹಳ್ಳಿಗಳು ವಿಶ್ವದಲ್ಲಿವೆ ಎಂಬುದು ನಿಮಗೆ ಗೊತ್ತಾ?  

ವಿಶ್ವದಲ್ಲಿ ಚಿತ್ರವಿಚಿತ್ರ ಹಳ್ಳಿಗಳಿವೆ. ಕೆಲ ಗ್ರಾಮಗಳ ವಿಷ್ಯ ಕೇಳಿದ್ರೆ ಅಚ್ಚರಿಯಾಗುತ್ತದೆ. ಸೌಂದರ್ಯದ ವಿಷ್ಯಕ್ಕೆ ಕೆಲ ಹಳ್ಳಿ ಪ್ರಸಿದ್ಧಿಯಾದ್ರೆ ಮತ್ತೆ ಕೆಲ ಹಳ್ಳಿ ಕೊಳಕಿಗೆ ಸುದ್ದಿಯಾಗುತ್ತದೆ. ಒಂದು ಹಳ್ಳಿಯಲ್ಲಿ ಮಳೆಯಾದ್ರೆ ಇನ್ನೊಂದು ಗ್ರಾಮದಲ್ಲಿ ಸೂರ್ಯನೇ ಬರೋದಿಲ್ಲ. ಮತ್ತೊಂದ ಹಳ್ಳಿ ಜನ ಬಟ್ಟೆ ಧರಿಸದೆ ಇದ್ರೆ ಇನ್ನೊಂದು ಹಳ್ಳಿಯ ಬಣ್ಣವೇ ಭಿನ್ನವಾಗಿದೆ. ನಾವಿಂದು ಅಚ್ಚರಿ ಹುಟ್ಟಿಸುವ ಕೆಲ ಹಳ್ಳಿಗಳ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಚಿತ್ರವಿಚಿತ್ರವಾಗಿದೆ ಈ ಹಳ್ಳಿ (Village) ಗಳು : 

ಜುಜ್ಕರ್ (Juzkar) ಗ್ರಾಮ : ಜುಜ್ಕರ್ ಎಂಬ ಗ್ರಾಮ ಸ್ಪೇನ್‌ನಲ್ಲಿದೆ. ಈ ಗ್ರಾಮ ಮನೆಯ ಬಣ್ಣದ ವಿಷ್ಯಕ್ಕೆ ಪ್ರಸಿದ್ಧಿಯಾಗಿದೆ. ಜುಜ್ಕರ್ ಗ್ರಾಮದ ಎಲ್ಲ  ಮನೆಗೂ ನೀಲಿ (blue) ಬಣ್ಣವನ್ನು ಹಚ್ಚಲಾಗಿದೆ. 2011ರಲ್ಲಿ 3ಡಿ ಚಿತ್ರಕ್ಕಾಗಿ ಕೆಲವರು ತಮ್ಮ ಮನೆಗೆ ನೀಲಿ ಬಣ್ಣ ಬಳಿದಿದ್ದರು. ಆರಂಭದಲ್ಲಿ ಕೆಲವೇ ಮನೆಗಳಿಗೆ ನೀಲಿ ಬಣ್ಣವನ್ನು ಹಚ್ಚಲಾಗಿತ್ತು. ಕ್ರಮೇಣ ಗ್ರಾಮದ ಎಲ್ಲರ ಮನೆಗೂ ನೀಲಿ ಬಣ್ಣವನ್ನು ಬಳಿಯಲಾಯ್ತು. 2022ರ ವೇಳೆಗೆ ಎಲ್ಲರ ಮನೆಯೂ ನೀಲಿ ಬಣ್ಣದಿಂದ ಕಂಗೊಳಿಸುತ್ತಿದೆ. ಹೊಸದಾಗಿ ಮನೆ ನಿರ್ಮಾಣ ಮಾಡಿದವರು ಕೂಡ ನೀಲಿ ಬಣ್ಣ ಬಳಿಯುತ್ತಿದ್ದಾರೆ. 

ಟ್ರೈನ್ ಲೇಟಾಗಿ ಬಂದ್ರೆ ಟೆನ್ಶನ್ ಬೇಡ, ಪ್ರಯಾಣಿಕರಿಗೆ ಈ ಸೌಲಭ್ಯ ಸಂಪೂರ್ಣ ಉಚಿತ

ವಿಗಾನೆಲ್ಲಾ ಗ್ರಾಮ : ವಿಗಾನೆಲ್ಲಾ ಇಟಲಿ (Italy)ಯ ಒಂದು ಹಳ್ಳಿ. ಈ ಗ್ರಾಮವು ಮಿಲನ್ ನಗರದ ಆಳವಾದ ಕಣಿವೆಯ ಕೆಳಭಾಗದಲ್ಲಿದೆ. ಈ ಗ್ರಾಮವು ಸಂಪೂರ್ಣವಾಗಿ ಕಣಿವೆಗಳಿಂದ ಆವೃತವಾಗಿದೆ. ಚಳಿಗಾಲದಲ್ಲಿ ಸುಮಾರು ಮೂರು ತಿಂಗಳವರೆಗೆ ಸೂರ್ಯನ ಬೆಳಕು ಇಲ್ಲಿಗೆ ಬರೋದಿಲ್ಲ. ಸೂರ್ಯನ ಬೆಳಕಿಲ್ಲದೆ ಮೂರು ತಿಂಗಳು ಇಲ್ಲಿನ ಜನರು ಕತ್ತಲೆಯಲ್ಲಿ ಕಳೆಯಬೇಕಾಗಿತ್ತು. ಆದ್ರೀಗ ಗ್ರಾಮದ ಕೆಲವು ಎಂಜಿನಿಯರ್‌ಗಳು ಮತ್ತು ವಾಸ್ತುಶಿಲ್ಪಿಗಳು ದೊಡ್ಡ ಕನ್ನಡಿಯನ್ನು ತಯಾರಿಸಿ, ಅದನ್ನು ಅಳವಡಿಸಿದ್ದಾರೆ.  ಸೂರ್ಯನ ಕಿರಣಗಳ ಪ್ರತಿಫಲ ಕನ್ನಡಿ ಮೂಲಕ ಗ್ರಾಮವನ್ನು ತಲುಪುತ್ತವೆ. ಇದ್ರಿಂದ ಗ್ರಾಮಕ್ಕೆ ಸೂರ್ಯನ ಬೆಳಕು ಸಿಗುತ್ತದೆ. ಮೂರು ತಿಂಗಳ ಕಾಲ ಕನ್ನಡಿಯೇ ಇಲ್ಲಿನವರಿಗೆ ಆಧಾರವಾಗಿದೆ. ಸೂರ್ಯನ ಕಿರಣ ತಲುಪದ ಕಾರಣ ಈ ವೆಗಾನೆಲ್ಲ ಗ್ರಾಮ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ.

ಅಲ್-ಹುತೈಬ್ ಗ್ರಾಮ : ಅಲ್-ಹುತೈಬ್ ಗ್ರಾಮ, ಯೆಮೆನ್‌ನ ರಾಜಧಾನಿ ಸನಾದಿಂದ ಪಶ್ಚಿಮಕ್ಕೆ ನೆಲೆಗೊಂಡಿದೆ. ಈ ಗ್ರಾಮವು ಭೂಮಿಯ ಮೇಲ್ಮೈಯಿಂದ ಸುಮಾರು 3,200 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಈ ಗ್ರಾಮ ಅತಿ ಎತ್ತರದ ಪ್ರದೇಶದಲ್ಲಿರುವ ಕಾರಣ ಇಲ್ಲಿ ಎಂದಿಗೂ ಮಳೆಯಾಗುವುದಿಲ್ಲ. ಈ ಗ್ರಾಮದ ಕೆಳಗೆ ಮೋಡಗಳು ಸೃಷ್ಟಿಯಾಗುತ್ತವೆ. ಕೆಳಗೆ ಮಳೆ ಬೀಳುತ್ತದೆಯೇ ವಿನಃ ಗ್ರಾಮಕ್ಕೆ ಮಳೆಯಾಗುವುದಿಲ್ಲ. ಮಳೆಯಾಗದೆ ಹೋದ್ರೂ ಪ್ರವಾಸಿಗರನ್ನು ಸೆಳೆಯುವ ಗ್ರಾಮಗಳಲ್ಲಿ ಇದೂ ಒಂದು. ಈ ಗ್ರಾಮ ಅಧ್ಬುತವಾಗಿದ್ದು, ಅಲ್ಲಿನ ಪ್ರಕೃತಿ ಸೌಂದರ್ಯ ಎಲ್ಲರನ್ನು ಸಳೆಯುತ್ತದೆ.

Travel Tips : ಬೆಂಗಳೂರಿನಲ್ಲಿ ಎಷ್ಟು ಹೊಟೇಲ್ ಇದೆ ಗೊತ್ತಾ?

ಸ್ಪೀಲ್‌ಪ್ಲಾಟ್ಜ್ ಗ್ರಾಮ : ಯುಕೆಯ ಹರ್ಟ್‌ಫೋರ್ಡ್‌ಶೈರ್‌ನಲ್ಲಿ ಸ್ಪೀಲ್‌ಪ್ಲಾಟ್ಜ್ ಎಂಬ ಗ್ರಾಮವಿದೆ. ಈ ಗ್ರಾಮ ಕೂಡ ತನ್ನದೇ ವಿಚಿತ್ರ ಪದ್ಧತಿಯಿಂದ ಸುದ್ದಿಯಲ್ಲಿದೆ. ಇಲ್ಲಿ ವಾಸಿಸುವ ಜನರು ಬಟ್ಟೆ ಧರಿಸೋದಿಲ್ಲ. ಹಲವು ವರ್ಷಗಳಿಂದ ಈ ಸ್ಥಳದಲ್ಲಿ ಬಟ್ಟೆ ಇಲ್ಲದೆ ಜನರು ಜೀವನ ನಡೆಸುತ್ತಿದ್ದಾರೆ. ವಯಸ್ಸಾದವರು ಮಾತ್ರವಲ್ಲ ಚಿಕ್ಕ ಮಕ್ಕಳೂ ಕೂಡ ಇಲ್ಲಿ ಬಟ್ಟೆ ಧರಿಸೋದಿಲ್ಲ. ದೇವರು, ಬಟ್ಟೆಯಿಲ್ಲದೆ ಜನರನ್ನು ಭೂಮಿಗೆ ಕಳುಹಿಸುತ್ತಾರೆ ಎಂದು ಇಲ್ಲಿನ ಜನರು ನಂಬುತ್ತಾರೆ. ಹಾಗಾಗಿ ಬಟ್ಟೆಯನ್ನು ಧರಿಸಬಾರದು. ಬಟ್ಟೆ ಧರಿಸಿದ್ರೆ ದೇವರು ಕೋಪಗೊಳ್ತಾನೆ ಎಂದು ಇಲ್ಲಿನ ಜನರು ನಂಬುತ್ತಾರೆ. ಇಲ್ಲಿರುವ ಜನರು ಬಡವರಲ್ಲ. ಇಲ್ಲಿನ ಜನರು ದೊಡ್ಡ ಮನೆ, ಈಜುಕೊಳ, ಬಾರ್ ಮುಂತಾದ ಅನೇಕ ಐಷಾರಾಮಿ ಸೌಲಭ್ಯಗಳನ್ನು ಹೊಂದಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Tax Rules : ಎಷ್ಟು ಬೇಕಾದ್ರೂ ದುಡೀರಿ, ಈ ದೇಶಗಳಲ್ಲಿ ನೌಕರರು ಟ್ಯಾಕ್ಸ್ ಕಟ್ಬೇಕಾಗಿಲ್ಲ
ವೃದ್ಧನ ನಿಸ್ವಾರ್ಥ ಸೇವೆ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಪಂಜಾಬ್‌ನ ರೈಲು ನಿಲ್ದಾಣ