ವಿದೇಶಕ್ಕೆ ಹೋಗೋ ಪ್ಲಾನ್ ಇದ್ಯಾ? ಯಾವುದು ಅತ್ಯುತ್ತಮ ನಗರ?

By Suvarna NewsFirst Published Dec 13, 2023, 2:07 PM IST
Highlights

ಪ್ರತಿಯೊಂದು ದೇಶದಲ್ಲೂ ಒಳ್ಳೆಯದು, ಕೆಟ್ಟದ್ದು ಇದ್ದೇ ಇರುತ್ತೆ. ಆದ್ರೆ ಕೆಲವೊಂದು ದೇಶದಲ್ಲಿ ಕೆಟ್ಟದ್ದೇ ಹೆಚ್ಚಿರುವ ಕಾರಣ ಅಲ್ಲಿ ಸಮಸ್ಯೆ ಹೆಚ್ಚು. ನೀವು ವಿದೇಶಕ್ಕೆ ಹೋಗುವ ಆಲೋಚನೆಯಲ್ಲಿದ್ದರೆ ಮೊದಲು ಇದ್ರ ಬಗ್ಗೆ ತಿಳಿದುಕೊಳ್ಳಿ.
 

ವಿದೇಶದಲ್ಲಿ ಕೆಲಸ ಹಾಗೂ ವಾಸ ಒಂದು ದೊಡ್ಡ ಹಾಗೂ ಕಠಿಣ ನಿರ್ಧಾರವಾಗಿರುತ್ತದೆ. ಕುಟುಂಬದಿಂದ, ನಮ್ಮವರಿಂದ ಸಂಪೂರ್ಣ ದೂರ ಇರಬೇಕಾಗುತ್ತದೆ. ನಾವು ಜನಿಸಿದ ಭೂಮಿಯಲ್ಲಿ ಸಿಗುವ ಭದ್ರತೆ, ಬೆಂಬಲ ನಮಗೆ ಹೊರ ದೇಶದಲ್ಲಿ ಸಿಗೋದು ಕಷ್ಟ. ಪ್ರತಿ ಕ್ಷಣವನ್ನು ಅಭದ್ರತೆಯಲ್ಲಿ ಕಳೆಯಬೇಕಾಗುತ್ತದೆ. ವಿದೇಶಕ್ಕೆ ಹೋಗುವ ತೀರ್ಮಾನಕ್ಕೆ ಬರುವ ಮೊದಲು ಯಾವ ದೇಶ ವಾಸಕ್ಕೆ ಹಾಗೂ ಕೆಲಸಕ್ಕೆ ಸೂಕ್ತ ಎಂಬುದನ್ನು ತಿಳಿದಿರಬೇಕು. ವಿಶ್ವದಲ್ಲಿ ಅನೇಕ ದೇಶಗಳಿವೆ, ಎಲ್ಲ ದೇಶಗಳಲ್ಲೂ ವಿದೇಶಿಗರು ನೆಲೆಸಿದ್ದಾರೆ. ಆದ್ರೆ ಕೆಲವೊಂದು ದೇಶ ವಾಸ ಹಾಗೂ ಕೆಲಸಕ್ಕೆ ಸುರಕ್ಷಿತವಾಗಿದ್ದರೆ ಮತ್ತೆ ಕೆಲ ದೇಶಗಳಲ್ಲಿ ಬಹಳ ಕಷ್ಟಕರ ಜೀವನ ನಡೆಸಬೇಕಾಗುತ್ತದೆ. ನಾವಿಂದು ಯಾವ ದೇಶ ಸೇಫ್ ಯಾವುದು ಅನ್ ಸೇಫ್ ಎನ್ನುವ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.

ಜಾಗತಿಕ ಸಲಹಾ ಸಂಸ್ಥೆಯಾದ ಮರ್ಸರ್‌ (Mercer), 2023 ರ ವಲಸಿಗರ ಜೀವನದ ಗುಣಮಟ್ಟದ ಸಮೀಕ್ಷೆ (Survey) ಯನ್ನು ಮಾಡಿದೆ. ಮರ್ಸರ್ ವಿಶ್ವಾದ್ಯಂತ 450 ಕ್ಕೂ ಹೆಚ್ಚು ನಗರಗಳಲ್ಲಿನ ಜೀವನ ಪರಿಸ್ಥಿತಿಗಳನ್ನು ವಿಶ್ಲೇಷಿಸಿದೆ. ರಾಜಕೀಯ ಮತ್ತು ಸಾಮಾಜಿಕ ಪರಿಸರ, ಆರೋಗ್ಯ, ಶಿಕ್ಷಣ (Education), ಮನರಂಜನೆ ಮತ್ತು ವಸತಿ ಸೇರಿದಂತೆ 39 ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪಟ್ಟಿ ತಯಾರಿಸಿದೆ. ಯಾವ ದೇಶ ವಲಸಿಗರಿಗೆ ಯೋಗ್ಯ ಎಂಬುದನ್ನು ವರದಿಯಲ್ಲಿ ಹೇಳಿದೆ. ಆ ಪಟ್ಟಿಯಲ್ಲಿ ವಿಯೆನ್ನಾ, ಜ್ಯೂರಿಚ್ ಅಥವಾ ಆಕ್ಲೆಂಡ್‌ ಸ್ಥಾನ ಪಡೆದಿದೆ.  ಆಸ್ಟ್ರಿಯನ್ ರಾಜಧಾನಿಯು ಪಟ್ಟಿಯ ಅಗ್ರಸ್ಥಾನದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ.  ಸಮೀಕ್ಷೆಯಲ್ಲಿ ರೋಮಾಂಚಕ ಸಾಂಸ್ಕೃತಿಕ ದೃಶ್ಯ, ವಾಸ್ತುಶಿಲ್ಪ ಮತ್ತು ಇತಿಹಾಸವನ್ನು ಹೈಲೈಟ್ ಮಾಡಿದ್ದಾರೆ. 

Latest Videos

12 ಮಹಿಳೆಯರ ವಾಮಾಚಾರಕ್ಕೆ ಜಾಗ ಬಲಿ, 400 ವರ್ಷವಾದ್ರೂ ಜನರಿಗಿಲ್ಲ ಭಯ!

ಎರಡನೇ ಸ್ಥಾನದಲ್ಲಿ ಸ್ವಿಸ್ ನಗರವಾದ ಜ್ಯೂರಿಚ್ ಇದೆ. ಇದು ರಾಜಕೀಯ ಸ್ಥಿರತೆ ಮತ್ತು ಉನ್ನತ ಗುಣಮಟ್ಟದ ಮೂಲಸೌಕರ್ಯಕ್ಕಾಗಿ ಪ್ರಶಂಸಿಸಲ್ಪಟ್ಟಿದೆ. ಇನ್ನು ನ್ಯೂಜಿಲೆಂಡ್ ನ ಆಕ್ಲೆಂಡ್ ಮೂರನೇ ಸ್ಥಾನದಲ್ಲಿದೆ. ತನ್ನ ಉನ್ನತ ಗುಣಮಟ್ಟದ ಆರೋಗ್ಯ ಮತ್ತು ಸಾಂಸ್ಕೃತಿಯನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. ಡೆನ್ಮಾರ್ಕ್‌ನ ರಾಜಧಾನಿ ಕೋಪನ್‌ಹೇಗನ್ ಮತ್ತು ಸ್ವಿಟ್ಜರ್ಲೆಂಡ್‌ನ ಜಿನೀವಾ ನಾಲ್ಕು ಮತ್ತು ಐದನೇ ಸ್ಥಾನಗಳನ್ನು ಪಡೆದುಕೊಂಡಿವೆ.
79 ನೇ ಸ್ಥಾನ ಪಡೆದಿರುವ ದುಬೈ, ಮಧ್ಯಪ್ರಾಚ್ಯ ನಗರದಲ್ಲಿ ಸರ್ವಶ್ರೇಷ್ಠ ಎನ್ನಿಸಿಕೊಂಡಿದೆ. ಮಾರಿಷಸ್ ರಾಜಧಾನಿ ಪೋರ್ಟ್ ಲೂಯಿಸ್ ಆಫ್ರಿಕಾದ ಅಗ್ರ ನಗರವಾಗಿದೆ 88ನೇ ಸ್ಥಾನದಲ್ಲಿದೆ. 

ಪಟ್ಟಿಯಲ್ಲಿ  241 ದೇಶಗಳಿದ್ದು, ಕೊನೆ ಸ್ಥಾನವನ್ನು ಸುಡಾನ್ ರಾಜಧಾನಿ, ಖಾರ್ಟೂಮ್ ಪಡೆದಿದೆ. ಅಂದ್ರೆ ಖಾರ್ಟೂಮ್ ವಾಸಕ್ಕೆ ಯೋಗ್ಯವಾಗಿಲ್ಲ ಎಂದರ್ಥ. ಭೌಗೋಳಿಕ ರಾಜಕೀಯ ಪ್ರಕ್ಷುಬ್ಧತೆ, ನೈಸರ್ಗಿಕ ವಿಪತ್ತುಗಳು ಮತ್ತು ಇತರ ಆರ್ಥಿಕ ಸವಾಲು ನಗರದ ಮೇಲೆ ಗಮನವಾದ ಪ್ರಭಾವ ಬೀರಿವೆ. 

ಉತ್ತಮ ಗುಣಮಟ್ಟದ ಜೀವನಶೈಲಿಯನ್ನು ಹೊಂದಿರುವ 10 ನಗರಗಳು : 
1.    ವಿಯೆನ್ನಾ, ಆಸ್ಟ್ರಿಯಾ
2.     ಜುರಿಚ್, ಸ್ವಿಟ್ಜರ್ಲೆಂಡ್
3.     ಆಕ್ಲೆಂಡ್, ನ್ಯೂಜಿಲೆಂಡ್
4.     ಕೋಪನ್ ಹ್ಯಾಗನ್, ಡೆನ್ಮಾರ್ಕ್
5.     ಜಿನೀವಾ, ಸ್ವಿಟ್ಜರ್ಲೆಂಡ್
6.    ಫ್ರಾಂಕ್‌ಫರ್ಟ್, ಜರ್ಮನಿ
7.    ಮ್ಯೂನಿಚ್, ಜರ್ಮನಿ
8.     ವ್ಯಾಂಕೋವರ್, ಕೆನಡಾ
9.     ಸಿಡ್ನಿ, ಆಸ್ಟ್ರೇಲಿಯಾ 
10.    ಡಸೆಲ್ಡಾರ್ಫ್, ಜರ್ಮನಿ

ಹೊಟೇಲ್ ರೂಮ್ ಕಬೋರ್ಡ್ ತೆರೆಯುತ್ತಿದ್ದಂತೆ ಸೀಕ್ರೇಟ್ ರೂಂ ಪತ್ತೆ, ನೋಡಿದರೆ?

ವಾಸಕ್ಕೆ ಸೂಕ್ತವಲ್ಲದ ದೇಶಗಳು : 
1.    ಖಾರ್ಟೂಮ್, ಸುಡಾನ್
2.     ಬಾಗ್ದಾದ್, ಇರಾಕ್
3.     ಬಂಗುಯಿ, ಮಧ್ಯ ಆಫ್ರಿಕಾ ಗಣರಾಜ್ಯ
4.    ಸನಾ, ಯೆಮೆನ್
5.     ಪೋರ್ಟ್-ಔ-ಪ್ರಿನ್ಸ್, ಹೈಟಿ
6.    ಎನ್ ಜಮೆನಾ, ಚಾಡ್ 
7.    ಡಮಾಸ್ಕಸ್, ಸಿರಿಯಾ
8.     ಔಗಡೌಗೌ, ಬುರ್ಕಿನಾ ಫಾಸೊ
9.     ಟ್ರಿಪೋಲಿ, ಲಿಬಿಯಾ
10.    ಬ್ರಜ್ಜವಿಲ್ಲೆ, ಕಾಂಗೋ ಗಣರಾಜ್ಯ

click me!