Asianet Suvarna News Asianet Suvarna News

ಹೊಟೇಲ್ ರೂಮ್ ಕಬೋರ್ಡ್ ತೆರೆಯುತ್ತಿದ್ದಂತೆ ಸೀಕ್ರೇಟ್ ರೂಂ ಪತ್ತೆ, ನೋಡಿದರೆ?

ಹೊಟೇಲ್ ಗಳ ವಿನ್ಯಾಸ ಭಿನ್ನವಾಗಿರುತ್ತದೆ. ಕೆಲವೊಂದು ಹೊಟೇಲ್ ಗಳಲ್ಲಿ ಕೆಲ ರಹಸ್ಯ ಅಡಗಿರುತ್ತದೆ. ಅದು ಗ್ರಾಹಕರ ಕಣ್ಣಿಗೆ ಕಾಣೋದಿಲ್ಲ. ಆದ್ರೆ ಈ ಮಹಿಳೆಗೆ ಹೊಟೇಲ್ ನ ರಹಸ್ಯವೊಂದನ್ನು ಪತ್ತೆ ಮಾಡಿದ್ದಾಳೆ. ಅದನ್ನು ಆಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. 
 

Woman Finds Secret Door Inside Hotel Room roo
Author
First Published Dec 12, 2023, 4:56 PM IST

ಹೊಟೇಲ್ ನಲ್ಲಿ ತಂಗೋದು ಪ್ರವಾಸಿಗರಿಗೆ ಅನಿವಾರ್ಯ. ಕೆಲಸದ ಮೇಲೆ ಊರಿಂದ ಹೊರಗೆ ಹೋದಾಗ ಅಥವಾ ಪ್ರವಾಸಕ್ಕೆ ಹೋದಾಗ ನಾವೆಲ್ಲ ಹೊಟೇಲ್ ನಲ್ಲಿ ಉಳಿದುಕೊಳ್ತೇವೆ. ಹೊಟೇಲ್ ರೂಮಿಗೆ ಹೋದ್ಮೇಲೆ ರೂಮಿನ ಎಲ್ಲ ಜಾಗವನ್ನು ಒಮ್ಮೆ ನೋಡೋದು ಅಭ್ಯಾಸ. ಬಹುತೇಕರು ತಮ್ಮ ಬ್ಯಾಗ್ ಇಟ್ಟು, ರೂಮ್ ಬೆಡ್ ನಿಂದ ಹಿಡಿದು ಕಪಾಟು, ಬಾತ್ ರೂಮ್ ಎಲ್ಲವನ್ನೂ ಒಮ್ಮೆ ನೋಡಿ ಬರ್ತಾರೆ. ಹೊಟೇಲ್ ರೂಮ್ ಸುಂದರವಾಗಿದ್ದರೆ ಫೋಟೋ ಕ್ಲಿಕ್ಕಿಸಿ, ವಿಡಿಯೋ ಮಾಡಿ ತಮ್ಮ ಆಪ್ತರಿಗೆ ಕಳುಹಿಸುತ್ತಾರೆ. ರೂಮಿನಲ್ಲಿ ಅಮೂಲ್ಯ ವಸ್ತುಗಳಿದ್ದರೆ ಅದರ ಫೋಟೋ ತೆಗೆದಿಕೊಳ್ಳಬೇಕು ಅಂತಾ ತಿಳಿದವರು ಹೇಳ್ತಾರೆ. ಯಾಕೆಂದ್ರೆ ಕೆಲವೊಂದು ಹೊಟೇಲ್ ಗಳಲ್ಲಿ ಅಮೂಲ್ಯ ವಸ್ತುವನ್ನು ನೀವು ಹಾಳು ಮಾಡದೆ ಇದ್ರೂ ಹಾಳಾಗಿದೆ ಎಂಬ ಕಾರಣ ಹೇಳಿ ನಿಮ್ಮ ತಲೆ ಮೇಲೆ ಹೆಚ್ಚಿನ ಬಿಲ್ ಹಾಕಿ ಕಳಿಸ್ತಾರೆ. ಮೊದಲೇ ವಸ್ತು ಹಾಳಾಗಿತ್ತು ಎಂಬುದನ್ನು ತೋರಿಸಲು ನಿಮ್ಮ ಬಳಿ ಯಾವುದೇ ಸಾಕ್ಷ್ಯ ಇರೋದಿಲ್ಲ. ಅದೇನೇ ಇರಲಿ, ಈಗ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಅದೇನು ಎಂಬುದನ್ನು ನಾವು ಹೇಳ್ತೇವೆ.

ಈ ಮಹಿಳೆ ಕೂಡ ಹೊಟೇಲ್ (Hotel) ಗೆ ಹೋಗಿದ್ದಾಳೆ. ಅಲ್ಲಿ ರೂಮ್ ಕೇಳಿದ್ದಾಳೆ. ರೂಮ್ ರೇಟ್ ಕಡಿಮೆ ಮಾಡುವಂತೆ ಸಾಕಷ್ಟು ಚೌಕಾಸಿ ಕೂಡ ಮಾಡಿದ್ದಾಳೆ. ಎಲ್ಲ ಆದ್ಮೇಲೆ ರೂಮಿಗೆ ಬಂದು ಬ್ಯಾಗ್ ಎಸೆದು ಕಬೋರ್ಡ್ (Cupboard) ಚೆಕ್ ಮಾಡಲು ಹೋಗಿದ್ದಾಳೆ. ಆಕೆಯ ರೂಮ್ ನಲ್ಲಿ ದೊಡ್ಡ ಕಬೋರ್ಡ್ ಇತ್ತು. ಅದ್ರ ಬಾಗಿಲು ತೆಗೆಯುತ್ತಿದ್ದಂತೆ ಅವಳಿಗೊಂದು ಅಚ್ಚರಿ ಕಾದಿತ್ತು. ಅದ್ರ ವಿಡಿಯೋವನ್ನು ಆಕೆ ಟಿಕ್ ಟಾಕ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಅದೇ ವಿಡಿಯೋ ಈಗ ಸದ್ದು ಮಾಡ್ತಿದೆ. ಹೊಟೇಲ್ ರೂಮಿನಲ್ಲಿ ಹಿಂಗೆಲ್ಲ ಇರುತ್ತಾ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಫಾರಿನ್ ಟ್ರಿಪ್ ಆಸೆ ಈಡೇರಿಸಿಕೊಳ್ಳಲ್ಲೊಂದು ಅವಕಾಶ, ಐಲ್ಯಾಂಡ್ ಟ್ರಿಪ್ ಉಚಿತ! ಶ್, ಇದು ಬ್ಲೈಂಡ್ ಡೇಟ್!

ಕಬೋರ್ಡ್ ನಲ್ಲಿ ಕಂಡಿದ್ದೇನು? : Crazy Clips ಹೆಸರಿನ ಎಕ್ಸ್ ಖಾತೆಯಲ್ಲೂ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದ್ರಲ್ಲಿ Diana Álvarez  ಹೆಸರಿನ ಮಹಿಳೆ ಬೆಡ್ ತೋರಿಸ್ತಾಳೆ. ನಂತ್ರ ಒಂದು ಕಬೋರ್ಡ್ ಬಾಗಿಲು ತೆರೆದು ತೋರಿಸ್ತಾಳೆ. ನಂತ್ರ ದೊಡ್ಡ ಕಬೋರ್ಡ್ ಬಾಗಿಲು ತೆರೆಯುತ್ತಾಳೆ. ಆ ಕಬೋರ್ಡ್ ಬಾಗಿಲಿನ ಒಳಭಾಗದಲ್ಲಿ ಇನ್ನೊಂದು ಬಾಗಿಲು ಕಾಣಿಸುತ್ತದೆ. ರೂಮ್ ಕೀ ಬಳಸಿ ಅದನ್ನು ತೆರೆಯುತ್ತಾಳೆ. ಆಗ ಆಕೆಗೊಂದಯ ದೊಡ್ಡ ಗ್ಯಾಲರಿ ಕಾಣಿಸುತ್ತದೆ. ಒಂದು ರೌಂಡ್ ಗ್ಯಾಲರಿ ಸುತ್ತಿದವಳಿಗೆ ಇನ್ನೊಂದು ಬಾಗಿಲು ಕಾಣಿಸುತ್ತದೆ. ಅದನ್ನು ತೆರೆದ್ರೆ ಒಂದು ಸುರಂಗದಂತಹ ಸ್ಥಳ ಗೋಚರಿಸುತ್ತದೆ. 

ಚೀನಾ ಹೊಗಳಿ ಪೇಚಿಗೆ ಸಿಲುಕಿದ್ರಾ ಡಾ.ಬ್ರೋ ಸುದ್ದಿ ಬೆನ್ನಲ್ಲೇ ಅಪಾಯಕಾರಿ ವಿಡಿಯೋ ಶೇರ್: ಫ್ಯಾನ್ಸ್​ ಡವಡವ...

ನಿಮ್ಮ ಹೋಟೆಲ್ ಕೋಣೆಯಲ್ಲಿ ಇಂಥದ್ದೊಂದು ಸ್ಥಳವಿದೆ ಎಂಬುದನ್ನು ನೀವು ಕಲ್ಪಿಸಿಕೊಳ್ಳಿ. ಭಯಾನಕ, ಎಷ್ಟು ವಿಚಿತ್ರ. ಅದು ಯಾವುದಕ್ಕಾಗಿ ಇರಬಹುದು. ಹೊಟೇಲ್ ರೂಮಿನಲ್ಲಿ ಇಂಥ ವಿಚಿತ್ರ ಅನುಭವಗಳಾದ ಬಗ್ಗೆ ನಾನು ಕೇಳಿದ್ದೇನೆ ಎಂದು ಆಕೆ ತನ್ನ ವಿಡಿಯೋಕ್ಕೆ ಶೀರ್ಷಿಕೆ ಹಾಕಿದ್ದಾಳೆ. 

ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಇದು ಹಾರರ್ ಸಿನಿಮಾದಂತಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದು ಚಿಲಿಯಲ್ಲಿದೆ. ಇವು ಭೂಕಂಪದ ರಕ್ಷಣೆಗಾಗಿ. ನೀವು ಎತ್ತರದ ಮಹಡಿಯಲ್ಲಿದ್ದರೆ, ನೀವು ಇಲ್ಲಿಂದ ಹೊರಗೆ ಬರಬಹುದು ಎಂದು ಇನ್ನೊಬ್ಬರು ಬರೆದಿದ್ದಾರೆ. ಕೆಲ ಹೊಟೇಲ್ ರೂಮುಗಳ ಹಿಂದೆ ಇಂಥ ಗ್ಯಾಲರಿಗಳು ಇರುತ್ತವೆ. ಅದು ಹೊಟೇಲ್ ಸಿಬ್ಬಂದಿಗೆ ಮಾತ್ರ ಗೊತ್ತಿರುತ್ತದೆ. ಗಹ್ರಾಹಕರ ಮೇಲೆ ಕಣ್ಣಿಡಲು ಇದನ್ನು ಬಳಸಿಕೊಳ್ಳುತ್ತಾರೆ. ಈ ಬಗ್ಗೆ ನನಗೆ ಗೊತ್ತು ಎಂದು ಇನ್ನೊಬ್ಬ ವ್ಯಕ್ತಿ ಕಮೆಂಟ್ ಮಾಡಿದ್ದಾನೆ.
 

Follow Us:
Download App:
  • android
  • ios