ಮಕ್ಕಳ ಜೊತೆ ಟ್ರಿಪ್ ಪ್ಲಾನ್ ಮಾಡಿದ್ರೆ ಇಷ್ಟೆಲ್ಲಾ ಬೆನಿಫಿಟ್ ಸಿಗುತ್ತೆ

By Suvarna News  |  First Published Sep 16, 2022, 12:46 PM IST

ಟ್ರಿಪ್‌, ಟೂರ್ ಅಂತ ಸುತ್ತಾಡೋಕೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದ್ರೆ ಹೆಚ್ಚಿನವರು ಎಲ್ಲಿ ಹೋಗೋದಿದ್ರೂ ಮಕ್ಕಳಾಗೋ ಮೊದ್ಲೇ ಹೋಗಿ ಬಿಡ್ಬೇಕಪ್ಪಾ, ಆಮೇಲಾಗಲ್ಲ ಅಂದು ಬಿಡ್ತಾರೆ. ಆದ್ರೆ ಚಿಕ್ಕ ಮಕ್ಕಳೊಂದಿಗೆ ಪ್ರಯಾಣ ಮಾಡುವದರಿಂದಲೂ ಹಲವು ಪ್ರಯೋಜನಗಳು ಸಿಗುತ್ತವೆ ಅನ್ನೋದು ನಿಮ್ಗೊತ್ತಾ ?


ಮಗುವನ್ನು ಪ್ಲಾನ್ ಮೊದಲು ದಂಪತಿಗಳು ಪ್ರವಾಸ ಹೋಗಬೇಕೆಂದು ಆಗಾಗ ಯೋಚಿಸುತ್ತಾರೆ. ಏಕೆಂದರೆ ಮಗು ಮತ್ತೆ ಬೆಳೆದು ದೊಡ್ಡವರಾಗುವವ ವರೆಗೆ ಅವರು ಎಲ್ಲಿಯೂ ಹೋಗಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ. ಮಕ್ಕಳಾದ್ರೆ ಸಾಕು ಕೆಲವೊಬ್ಬರು ಬಾಯಿಯೊಳಗಿನ ಕಪ್ಪೆಯಂತೆ ಮನೆಯೊಳಗೇ ಇದ್ದು ಬಿಡ್ತಾರೆ. ಮಕ್ಕಳು ಚಿಕ್ಕವರು ಎಲ್ಲಿಗೂ ಹೋಗೋಕಾಗಲ್ಲ ಅಂತ ಗೋಳು ಹೇಳ್ಕೋತಾರೆ. ಪುಟ್ಟ ಮಕ್ಕಳಿದ್ದಾಗ ಟ್ರಿಪ್‌ ಪ್ಲಾನ್ ಮಾಡೋದ್ರಿಂದ ಹಲವಾರು ತೊಂದರೆಗಳಿವೆ ನಿಜ. ಆದ್ರೆ ಅದರ ಜೊತೆಗೂ ಹಲವು ಪ್ರಯೋಜನಗಳೂ ಇವೆ ಅನ್ನೋ ವಿಷ್ಯ ನಿಮ್ಗೊತ್ತಾ ? ನಿಮ್ಮ ಮಗು ಇನ್ನೂ ಚಿಕ್ಕದಾಗಿದ್ದರೆ ಅಥವಾ ಅಂಬೆಗಾಲಿಡುವ ವಯಸ್ಸನ್ನು ತಲುಪಿಲ್ಲ ಮತ್ತು ಈ ಕಾರಣದಿಂದಾಗಿ ನೀವು ನಿಮ್ಮ ಪ್ರಯಾಣದ ಯೋಜನೆಗಳನ್ನು ಮುಂದೂಡುತ್ತಿದ್ದರೆ, ಈ ಲೇಖನದಲ್ಲಿ ತಿಳಿಸಲಾದ ವಿಷಯಗಳು ನಿಮ್ಮ ಆಲೋಚನೆಯನ್ನು ಬದಲಾಯಿಸಬಹುದು.

ಚಿಕ್ಕ ಮಕ್ಕಳೊಂದಿಗೆ ಪ್ರಯಾಣ ಮಾಡುವದರಿಂದ ಸಿಗುವ ಪ್ರಯೋಜನಗಳು

Tap to resize

Latest Videos

ಮಕ್ಕಳು ಉಚಿತವಾಗಿ ಪ್ರಯಾಣಿಸಬಹುದು: ರೈಲು (Train) ಅಥವಾ ವಿಮಾನ ಮತ್ತು ಯಾವುದೇ ಸಾರಿಗೆ ವಿಧಾನದಲ್ಲಿ ಮಕ್ಕಳಿಗೆ ಟಿಕೆಟ್ ಇಲ್ಲ. ಆದ್ದರಿಂದ ನೀವು ನಿಮ್ಮ ಮಕ್ಕಳೊಂದಿಗೆ ಯಾವುದೇ ಟಿಕೆಟ್ ಖರ್ಚಿಲ್ಲದೆ ಸುತ್ತಾಡಬಹುದು. ಇದಕ್ಕಾಗಿ ನೀವು ಯಾವುದೇ ಹೆಚ್ಚುವರಿ ಹಣವನ್ನು ಪಾವತಿಸಬೇಕಾಗಿಲ್ಲ. ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು (Children) ದೇಶೀಯ ವಿಮಾನಗಳಲ್ಲಿ ಟಿಕೆಟ್‌ಗೆ ಅರ್ಹರಲ್ಲ. ಈ ರೀತಿಯಾಗಿ, ನೀವು ನಿಮ್ಮ ಮಗುವಿನೊಂದಿಗೆ ಪ್ರವಾಸಕ್ಕೆ ಹೋಗಬಹುದು ಮತ್ತು ಅದು ನಿಮಗೆ ಹಣ ಖರ್ಚಾಗುವುದಿಲ್ಲ.

Travel Tips : ಹಿಂದಿ ಬಂದ್ರೆ ಸಾಕು, ಈ ದೇಶವನ್ನು ಆರಾಮ್ ಸುತ್ಬಹುದು

ಹೊಂದಿಕೊಳ್ಳುವ ವೇಳಾಪಟ್ಟಿ: ಅಂಬೆಗಾಲಿಡಲು ಶುರು ಮಾಡಿ ನಂತರ, ಮಗು ಪ್ರಿಸ್ಕೂಲ್‌ಗೆ ಮತ್ತು ನಂತರ ಶಾಲೆಗೆ ಹೋಗಲು ಪ್ರಾರಂಭಿಸುತ್ತದೆ. ಮಗು ಶಾಲೆಗೆ (School) ಹೋಗುವುದರಿಂದ ಅನೇಕ ಬಾರಿ ಪೋಷಕರು ತಮ್ಮ ಪ್ರವಾಸವನ್ನು ರದ್ದುಗೊಳಿಸಬೇಕಾಗುತ್ತದೆ ಅಥವಾ ಮಕ್ಕಳ ಪರೀಕ್ಷೆಗಳ ಕಾರಣ ಪ್ರವಾಸವನ್ನು (Tour) ಮುಂದೂಡಬೇಕಾಗುತ್ತದೆ. ಆದರೆ, ಚಿಕ್ಕ ಮಕ್ಕಳ ವಿಷಯದಲ್ಲಿ ಹಾಗಾಗುವುದಿಲ್ಲ. ನೀವು ಯಾವಾಗ ಬೇಕಾದರೂ ಅವರೊಂದಿಗೆ ಎಲ್ಲಿ ಬೇಕಾದರೂ ತಿರುಗಾಡಲು ಪ್ಲಾನ್ ಮಾಡಬಹುದು.

ಕೆಲವು ಕೌಶಲ್ಯಗಳನ್ನು ಕಲಿಯಬಹುದು: ಮಕ್ಕಳೊಂದಿಗೆ ಪ್ರಯಾಣ ಮಾಡುವುದು ಅವರಿಗೆ ಕೆಲವು ಕೌಶಲ್ಯಗಳನ್ನು ಕಲಿಸಲು ಉತ್ತಮ ಮಾರ್ಗವಾಗಿದೆ. ದಟ್ಟಗಾಲಿಡುವವರು ನಕ್ಷೆಗಳನ್ನು ವೀಕ್ಷಿಸಲು, ಸಾರ್ವಜನಿಕ ಸಾರಿಗೆಯನ್ನು ನ್ಯಾವಿಗೇಟ್ ಮಾಡಲು ಮತ್ತು ರೆಸ್ಟೋರೆಂಟ್‌ಗಳಲ್ಲಿ ಆಹಾರವನ್ನು ಆರ್ಡರ್ ಮಾಡಲು ಕಲಿಯುತ್ತಾರೆ. ಈ ಮಕ್ಕಳು ಶಾಲೆಯ ತರಗತಿಯಲ್ಲಿ ಕಲಿಯಲು ಸಾಧ್ಯವಿಲ್ಲ.

ಸ್ವಾವಲಂಬನೆ ಬರುತ್ತದೆ: ಮಕ್ಕಳು ತಮ್ಮ ಮನೆ ಮತ್ತು ದಿನಚರಿಯಿಂದ ದೂರವಿದ್ದಾಗ, ಅವರು ತಮ್ಮ ಮೇಲೆ ಅವಲಂಬಿತರಾಗಲು ಕಲಿಯುತ್ತಾರೆ, ಇದು ಅವರ ಆತ್ಮವಿಶ್ವಾಸವನ್ನು (Confidence) ಹೆಚ್ಚಿಸುತ್ತದೆ.

ವಿಭಿನ್ನ ಜನರನ್ನು ಭೇಟಿ ಮಾಡಬಹುದು: ವಿಭಿನ್ನ ಸಂಸ್ಕೃತಿಗಳನ್ನು ತಿಳಿದುಕೊಳ್ಳಲು ಪ್ರಯಾಣವು ಉತ್ತಮ ಮಾರ್ಗವಾಗಿದೆ. ಮಕ್ಕಳಿಗೆ ಬಾಲ್ಯದಿಂದಲೇ ವಿವಿಧ ಸಂಸ್ಕೃತಿಗಳ ಬಗ್ಗೆ ಅರಿವು ಮೂಡಿಸುವುದು ಒಳ್ಳೆಯದು. ಈ ಕೌಶಲ್ಯವು ಇಡೀ ಜೀವನದಲ್ಲಿ (Life) ಉಪಯೋಗಕ್ಕೆ ಬರುತ್ತದೆ.

ನಂದಿ ಗಿರಿಧಾಮದ ಅಮೃತ ಸರೋವರ ಭರ್ತಿ, ಸುಂದರ ತಾಣಕ್ಕೆ ಪ್ರವಾಸಿಗರ ದಂಡು

ಉತ್ತಮ ನೆನಪುಗಳನ್ನು ಕೂಡಿಡಬಹುದು: ಪ್ರವಾಸ ಉತ್ತಮ ನೆನಪುಗಳನ್ನು (Memory) ದಾಖಲಿಸುತ್ತದೆ. ಮಕ್ಕಳ ಜೊತೆ ಪ್ರವಾಸ ಹೋದರೆ ಅವರು ಯಾವಾಗಲೂ ಇಂಥಾ ನೆನಪುಗಳನ್ನು ಮೆಲುಕು ಹಾಕುತ್ತಿರುತ್ತಾರೆ. ಇದು ಮಕ್ಕಳ ಮನಸ್ಸಿಗೆ ಖುಷಿ ನೀಡುತ್ತದೆ. ಮಾತ್ರವಲ್ಲ ಅವರಲ್ಲಿ ಜೀವಾನಾನುಭವವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಪ್ರವಾಸದಿಂದ ಮಗು ತನ್ನ ಹೆತ್ತವರಿಗೆ ಸಾರ್ವಕಾಲಿಕ ಹತ್ತಿರದಲ್ಲಿ ಉಳಿಯಲು ಸಾಧ್ಯವಾಗುತ್ತದೆ. ಇದು ಪೋಷಕ-ಮಕ್ಕಳ ಬಾಂಧವ್ಯವನ್ನು ಕೂಡ ಬಲಪಡಿಸುತ್ತದೆ.

ಗೊತ್ತಾಯ್ತಲ್ಲ, ಮಕ್ಕಳು ಚಿಕ್ಕವರಿದ್ದಾಗ ಪ್ರಯಾಣಿಸುವುದರಿಂದ ಎಷ್ಟೆಲ್ಲಾ ಪ್ರಯೋಜನವಿದೆ ಅಂತ. ಹೀಗಾಗಿ ಇನ್ಮುಂದೆ ಮಕ್ಕಳು ಸಣ್ಣೋರು ಎಲ್ಲಿಗೂ ಹೋಗೋಕಾಗಲ್ಲ ಅನ್ಬೇಡಿ. ಮಗು ಇನ್ನೂ ಚಿಕ್ಕದಾಗಿದೆ ಮತ್ತು ಅವನೊಂದಿಗೆ ನೀವು ಪ್ರಯಾಣಿಸಲು ಸಾಧ್ಯವಾಗದ ಕಾರಣ ನೀವು ಇಲ್ಲಿಯವರೆಗೆ ಉಳಿದಿದ್ದರೆ, ಈಗ ನಿಮ್ಮ ಆಲೋಚನೆಯನ್ನು ಬದಲಿಸಿ. ಮಕ್ಕಳ ಜೊತೆಯೇ ಟ್ರಾವೆಲ್ ಮಾಡಿ ಇಷ್ಟೆಲ್ಲಾ ಪ್ರಯೋಜನ ಸಿಗುತ್ತೆ.

click me!