
ವಿದೇಶದಲ್ಲಿ ನೆಲೆ ನಿಲ್ಲಬೇಕು ಎನ್ನುವುದು ಅನೇಕರ ಕನಸು. ಒಮ್ಮೆ ವಿದೇಶ ಸುತ್ತಾಡಿ ಬರೋದೇ ಕಷ್ಟ. ಹಾಗಿರುವಾಗ ಅಲ್ಲಿಯೇ ವಾಸ ಮಾಡ್ಬೇಕು ಅಂದ್ರೆ ಮತ್ತಷ್ಟು ಪರಿಶ್ರಮ ಅಗತ್ಯ. ಒಂದಿಷ್ಟು ಹಣ ಕೈನಲ್ಲಿ ಇರಬೇಕು. ಒಳ್ಳೆ ಕೆಲಸ ಸಿಗ್ಬೇಕು. ಎಲ್ಲ ದೇಶದಲ್ಲೂ ನೀವು ವಾಸ ಮಾಡಲು ಸಾಧ್ಯವಿಲ್ಲದೆ ಹೋದ್ರೂ ಕೆಲ ದೇಶಗಳು ನಿಮಗೆ ವಾಸಕ್ಕೆ ಅಗತ್ಯವಿರುವ ಸೌಲಭ್ಯವನ್ನು ನೀಡುತ್ತದೆ. ಹೌದು, ಜಗತ್ತಿನ ಕೆಲವು ದೇಶಗಳಲ್ಲಿ ಹಣದ ಹೊರತಾಗಿ ಮನೆ, ಕಾರು ಸೇರಿದಂತೆ ಹಲವು ವಸ್ತುಗಳು ಉಚಿತವಾಗಿ ದೊರೆಯುತ್ತವೆ. ಆ ದೇಶಗಳು ಯಾವುವು ಎಂಬ ವಿವರ ಇಲ್ಲಿದೆ.
ಪೊಂಗಾ (Ponga) : ಉತ್ತರ ಸ್ಪೇನ್‌ನ ಪರ್ವತ (Mountain) ಪ್ರದೇಶದಲ್ಲಿರುವ ಒಂದು ಸಣ್ಣ ಹಳ್ಳಿ ಪೊಂಗಾ. ನವವಿವಾಹಿತರಿಗೆ ಪೊಂಗಾ ಸ್ವರ್ಗ ಎನ್ನಬಹುದು. ಯುವ ಜೋಡಿಗಳಿಗೆ ಇಲ್ಲಿ ವಾಸಿಸಲು ಎಲ್ಲ ಅವಕಾಶಗಳನ್ನು ನೀಡಲಾಗುತ್ತದೆ. ಸುಮಾರು 3,600 ಡಾಲರ್ ಅಂದ್ರೆ 3 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಅಲ್ಲದೆ ಇಲ್ಲೇ ವಾಸಿಸುವ ವಿದೇಶಿಗಳಿಗೆ ಮಗು ಜನಿಸಿದ್ರೆ ಆ ಮಗುವಿಗೆ 3,600 ಡಾಲರ್ ನೀಡಲಾಗುತ್ತದೆ.
ಜಪಾನೀಯರಿಗೆ 4 ಅಶುಭ ಸಂಖ್ಯೆ.. ಇದರ ಹಿಂದಿನ ಇಂಟ್ರೆಸ್ಟಿಂಗ್ ಕಹಾನಿ ಇದು!
ವರ್ಮೊಂಟ್ (Vermont) : ವರ್ಮೊಂಟ್ ಯುನೈಟೆಡ್ ಸ್ಟೇಟ್ ನ ಪರ್ವತದಲ್ಲಿರುವ ರಾಜ್ಯ. ಮರ್ಮೊಂಟ್ ಚೆಡ್ಡಾರ್ ಚೀಸ್ ಮತ್ತು ಪ್ರಸಿದ್ಧ ಬೆನ್ & ಜೆರ್ರಿ ಐಸ್ ಕ್ರೀಮ್ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯ ಜನರನ್ನು ಸೆಳೆಯುತ್ತದೆ. ವರ್ಮೊಂಟ್ ಇಲ್ಲಿಗೆ ಬರುವ ಕೆಲಸಗಾರರಿಗೆ ಹಣದ ಸಹಾಯ ನೀಡುತ್ತದೆ. ಈ ರಾಜ್ಯದ ರಿಮೋಟ್ ವರ್ಕರ್ ಗ್ರಾಂಟ್ ಪ್ರೋಗ್ರಾಂ ಅರ್ಜಿದಾರರಿಗೆ 2 ವರ್ಷಗಳವರೆಗೆ 10,000 ಡಾಲರ್ ಅಂದ್ರೆ 7.4 ಲಕ್ಷ ರೂಪಾಯಿ ನೀಡುತ್ತದೆ.
ಈ ದೇಶದ ಜನರು ದೀರ್ಘಾಯುಷಿಗಳಂತೆ! ಏನವರ ಆರೋಗ್ಯದ ಗುಟ್ಟು?
ಆಂಟಿಕಿಥೆರಾ (Antikythera) : ಆಂಟಿಕಿಥೆರಾ ಗ್ರೀಕ್ ದ್ವೀಪ. ತನ್ನ ಜನಸಂಖ್ಯೆಯನ್ನು ಹೆಚ್ಚಿಸಲು ಆಂಟಿಕಿಥೆರಾ ಪ್ರಯತ್ನಿಸುತ್ತಿದೆ. ಇದೇ ಕಾರಣಕ್ಕೆ ವಿಶ್ವದಾದ್ಯಂತ ಇರುವ ಜನರನ್ನು ಇದು ಸ್ವಾಗತಿಸುತ್ತಿದೆ. ಈ ದ್ವೀಪದಲ್ಲಿ ವಾಸಿಸುವ ಜನರಿಗೆ ಸರ್ಕಾರ ಹಣ ಸಹಾಯ ನೀಡುತ್ತದೆ. ಪ್ರತಿಯೊಬ್ಬರಿಗೂ ಸತತ ಮೂರು ವರ್ಷಗಳ ಕಾಲ ತಿಂಗಳಿಗೆ 45 ಸಾವಿರ ರೂಪಾಯಿ ನೀಡುತ್ತದೆ. ಅಲ್ಲದೆ ಅವರಿಗೆ ಅಗತ್ಯವಿರುವ ಭೂಮಿ ಮತ್ತು ವಸತಿ ಸೌಲಭ್ಯವನ್ನು ನೀಡುತ್ತದೆ.
ಅಲಾಸ್ಕಾ (Alaska) : ಇದು ಅಮೆರಿಕಾದಲ್ಲಿದೆ. ನೀವು ಅಲಾಸ್ಕಾಕ್ಕೆ ಹೋಗಿ ನೆಲೆ ನಿಲ್ಲುತ್ತೀರಿ ಎಂದಾದ್ರೆ ನಿಮಗೆ ಹಣದ ಸಹಾಯ ಸಿಗುತ್ತದೆ. ಹಿಮ ಮತ್ತು ಚಳಿ ಇಲ್ಲಿನ ವೀಕ್ನೆಸ್. ಇದೇ ಕಾರಣಕ್ಕೆ ಜನರು ಇಲ್ಲಿಗೆ ಬರಲು ಹಿಂದೇಟು ಹಾಕ್ತಾರೆ. ಒಂದ್ವೇಳೆ ನೀವು ಇಲ್ಲಿ ವಾಸಿಸುವ ಮನಸ್ಸು ಮಾಡಿದ್ರೆ ನಿಮಗೆ ವಾರ್ಷಿಕ 1.5 ಲಕ್ಷ ರೂಪಾಯಿ ಸರ್ಕಾರದಿಂದ ಸಿಗುತ್ತದೆ. ಒಂದು ವರ್ಷದವರೆಗೆ ಇಲ್ಲಿ ನೀವು ವಾಸಿಸಬೇಕು. ಜೊತೆಗೆ ಕೆಲ ಷರತ್ತುಗಳನ್ನು ಪಾಲಿಸಬೇಕು.
ಅಲ್ಬಿನೆನ್ (Albinen) : ಅಲ್ಬಿನೆನ್, , ಸ್ವಿಟ್ಜರ್ಲೆಂಡ್ ನಲ್ಲಿದೆ. ಇದೊಂದು ಸುಂದರವಾದ ಹಳ್ಳಿ. ಸುತ್ತಲೂ ಸುಂದರವಾದ ಸ್ವಿಸ್ ಪರ್ವತ ಇದನ್ನು ಆವರಿಸಿದೆ. ಈ ಗ್ರಾಮದಲ್ಲಿ ನೆಲೆಸಲು ಜನರಿಗೆ ಸರ್ಕಾರದಿಂದ ಹಣ ಸಹಾಯ ಸಿಗುತ್ತದೆ. ನಿಮ್ಮ ವಯಸ್ಸು 45 ವರ್ಷಕ್ಕಿಂತ ಕೆಳಗಿದ್ದರೆ ನಿಮಗೆ 20 ಲಕ್ಷ ರೂಪಾಯಿ ಸಹಾಯಧನದ ರೂಪದಲ್ಲಿ ನೀಡುತ್ತದೆ. ಪ್ರತಿ ಮಗುವಿಗೂ ಸರ್ಕಾರ ಹಣದ ಸಹಾಯ ಮಾಡುತ್ತದೆ. ಮಗುವಿಗೆ ಸರ್ಕಾರ 8 ಲಕ್ಷ ರೂಪಾಯಿ ನೀಡುತ್ತದೆ. ಸರ್ಕಾರದ ಎಲ್ಲ ಸೌಲಬ್ಯವನ್ನು ನೀವು ಉಚಿತವಾಗಿ ಪಡೆಯಬೇಕು ಎಂದಾದ್ರೆ ನೀವು ಅಲ್ಬಿನೆನ್ ನಲ್ಲಿ ಕನಿಷ್ಠ ಹತ್ತು ವರ್ಷವಾದ್ರೂ ವಾಸ ಮಾಡ್ಬೇಕು.
ತಂತ್ರಜ್ಞಾನದಲ್ಲಿ ಮುಂದುವರೆದ ಈ ದೇಶದಲ್ಲಿ ಜನರು ಎಸ್ಕಲೇಟರ್‌ನಲ್ಲಿ ಓಡಾಡೋಹಾಗಿಲ್ಲ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.