ಚಿರತೆಯನ್ನು ಡಾ.ಬ್ರೋ ಹೊಗಳ್ತಿದ್ರೆ, ಸಿಟ್ಟಿಗೆದ್ದ ಸಿಂಹ ಅವ್ರ ಮೈಮೇಲೆ ಮೂತ್ರ ಮಾಡೋದಾ?

By Suvarna News  |  First Published Sep 6, 2023, 3:14 PM IST

ಡಾ.ಬ್ರೋ ಕಾಡಿಗೆ ಹೋಗಿ ಸಿಂಹಕ್ಕೆ ನೀನು ಕಾಡಿನ ರಾಜ ಅಲ್ಲ ಎಂದು ಚಿರತೆಗೆ ಪಟ್ಟಾಭಿಷೇಕ ಮಾಡಿದ್ದಾರೆ. ಕೂಡಲೇ ಸಿಂಹ ಅವರ ಮೈಮೇಲೆ ಮೂತ್ರ ವಿಸರ್ಜನೆ ಮಾಡಿದ್ದು, ಇದರ ವಿಡಿಯೋ ವೈರಲ್​ ಆಗಿದೆ.
 


ನಮಸ್ಕಾರ​ ದೇವ್ರು... ಎಂದರೆ ಸಾಕು. ಮೊದಲು ನೆನಪಾಗೋದೇ ಡಾ.ಬ್ರೋ (Dr. Bro). ಕನ್ನಡದ ಯುವಕನೊಬ್ಬ ಬಹುತೇಕ ಎಲ್ಲಾ ದೇಶಗಳನ್ನೂ ಸುತ್ತಿ ಅಲ್ಲಿನ ಪರಿಚಯ ಮಾಡುವ ಪರಿ ಅಂತೂ ಅತ್ಯದ್ಭುತವಾದದ್ದೆ. ಕನ್ನಡಿಗರಿಗೇ ಅಂಗೈನಲ್ಲೆ ಇಡೀ  ಜಗತ್ತನ್ನೇ (World) ತೋರಿಸ್ತಿದ್ದಾರೆ ಡಾ.ಬ್ರೋ. ಯೂಟ್ಯೂಬ್​ನಲ್ಲಿ ಅಲ್ಪ ಕಾಲದಲ್ಲಿಯೇ ಕೋಟಿ ಕೋಟಿ ಅಭಿಮಾನಿಗಳನ್ನು ಪಡೆದಿರುವ ಡಾ.ಬ್ರೋ ವಿಶೇಷತೆ ಎಂದರೆ ಯಾವ ದೇಶಕ್ಕೆ ಹೋದರೂ ಅಲ್ಲಿ ಕನ್ನಡದಲ್ಲಿಯೇ ಮಾತನಾಡಿ ಕನ್ನಡಿಗರ ಹೃದಯ ಗೆಲ್ಲುತ್ತಿದ್ದಾರೆ.  ಸಾಧಿಸುವ ಛಲ ಇದ್ದರೆ ಸಾಕು, ಜೀವನವನ್ನು ಹೇಗೆ ಬೇಕಾದರೂ ಸಾಗಿಸಬಹುದು ಎನ್ನುವುದಕ್ಕೆ ಈ 22ರ ಹರೆಯದ ಯುವಕನೇ ಸಾಕ್ಷಿ.   ಉಗಾಂಡಾಕ್ಕೆ ಹೋಗಿದ್ದ ಗಗನ್​ ಅವರು, ಅಲ್ಲಿಯ ಜನಜೀವನದ ಕುರಿತು ಮನಮುಟ್ಟುವಂತೆ ಮಾತನಾಡಿದ್ದರು. ತಾಲಿಬಾನ್, ಪಾಕಿಸ್ತಾನ್​ದಂಥ ರಾಷ್ಟ್ರಗಳಿಗೂ ಮುನ್ನುಗ್ಗಿ ಅಲ್ಲಿನವರನ್ನು ಮಾತನಾಡಿಸಿ ಅದರ ವಿಡಿಯೋ ಮಾಡುವ ಸಾಹಸ ಬಹುಶಃ ಸಾಮಾನ್ಯ ಜನರಿಗೆ ಕನಸಿನ ಮಾತೇ. ಇಂಥ ದುಸ್ಸಾಹಸಕ್ಕೂ ಕೈ ಹಾಕಿದವರು ಡಾ.ಬ್ರೋ. ಇವರ ಹೆಸರು ಗಗನ್​. ಅತ್ಯಂತ ಕಾಡು ಮನುಷ್ಯರಿಂದಲೇ ತುಂಬಿ ಹೋಗಿರುವ ದೇಶಗಳಿಗೂ ನುಗ್ಗಿದ್ದಿದೆ. ಇದನ್ನು ನೋಡಿ ಇವರ ಫ್ಯಾನ್ಸ್​ ದಂಗಾದದ್ದೂ ಇದೆ. ದಯವಿಟ್ಟು ನಿಮ್ಮ ಪ್ರಾಣ ಪಣಕ್ಕಿಡಬೇಡಿ ಎಂದಿದ್ದೂ ಇದೆ. ಆದರೂ ಧೈರ್ಯದಿಂದ ಗಗನ್​ ಎಲ್ಲಾ ದೇಶಗಳಿಗೂ ಲಗ್ಗೆ ಇಡುತ್ತಿದ್ದಾರೆ.  


ಹೋದ ಕಡೆಗಳಲ್ಲೆಲ್ಲಾ ಹಾಸ್ಯದ ತುಣುಕನ್ನು ಬಿತ್ತರಿಸುತ್ತಾ ತಮ್ಮದೇ ಆದ ವಿಶೇಷ ಶೈಲಿಯಲ್ಲಿ ಮಾತನಾಡುವುದೇ ಇವರ ಹೈಲೈಟ್​. ಅರೆಬರೆ ಹಿಂದಿ, ಇಂಗ್ಲಿಷ್​ ಮಾತನಾಡುತ್ತಲೇ ಕೋಟಿ ಕೋಟಿ ಮಂದಿಯ ಹೃದಯ ಗೆಲ್ಲುವುದು ಬಹುಶಃ ಗಗನ್​ಗೆ ಅಲ್ಲದೇ ಬೇರೆ ಯಾರಿಗೂ ಸಾಧ್ಯವೇ ಇಲ್ಲವೆನ್ನಬಹುದೇನೋ. ಇದೀಗ ಮೃಗಾಲಯದಲ್ಲಿ ಸಿಂಹಕ್ಕೆ  ಮಾತನಾಡಿಸಿದ್ದಾರೆ. ನೀನು ಕಾಡಿನ ರಾಜ ಅಲ್ಲ, ಶ್ವಾನ ಎಂದು ಹೇಳಿದ್ದಾರೆ. ನಂತರ ಅಲ್ಲಿಯೇ ಮಲಗಿದ್ದ ಚಿರತೆಗೆ ಕಿರೀಟ ಹಾಕಿ ಪಟ್ಟಾಭಿಷೇಕ ಮಾಡಿಸಿದ್ದಾರೆ. ಸಿಂಹದ ಎದುರಿಗೆ ಬಂದು ಮಾತನಾಡುವ ಸಮಯದಲ್ಲಿ ಸಿಂಹ ಅವರ ಮೈಮೇಲೆ ಮೂತ್ರ ವಿಸರ್ಜನೆ ಮಾಡಿದೆ. ನಂತರ ಎಡಿಟ್​  ಮಾಡಿ ಸಿಂಹಕ್ಕೂ ಡ್ಯಾನ್ಸ್​ ಮಾಡಿಸಿದ್ದಾ ಗಗನ್​. ಇವರ ಈ ವಿಡಿಯೋಗೆ ನೆಟ್ಟಿಗರು ನಕ್ಕು ನಗುತ್ತಿದ್ದಾರೆ. 

Tap to resize

Latest Videos

ಉಗಾಂಡಾ ಕಾಡಲ್ಲಿ ಡಾ. ಬ್ರೋಗೆ ಅವ್ರ ಅಜ್ಜಿ ಸಿಕ್ರಂತೆ! ವಿಡಿಯೋ ನೋಡಿ ಫ್ಯಾನ್ಸ್​ ಫುಲ್​ ಖುಷ್​

ಅಂದಹಾಗೆ ಗಗನ್​ ಕುರಿತು ಒಂದಿಷ್ಟು ಹೇಳಲೇಬೇಕು. ಬೆಂಗಳೂರಿನಲ್ಲಿ  ಹುಟ್ಟಿ ಬೆಳೆದಿರೋ ಗಗನ್​, ಹುಟ್ಟಿದ್ದು ಅರ್ಚಕರ ಮಗನಾಗಿ. ಇವರ ತಂದೆ ಶ್ರೀನಿವಾಸ್ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಾರೆ. ತಾಯಿ ಪದ್ಮಾ ಗೃಹಿಣಿ.  ಗಗನ್ ಅವರಿಗೆ ಎರಡನೆ ತರಗತಿಯಲ್ಲಿ ಓದುತ್ತಿರುವಾಗಲೇ ಪೌರೋಹಿತ್ಯ ಕಲಿತಿದ್ದ ಗಗನ್​ ಅವರು,  ಖುದ್ದು  ದೇವಸ್ಥಾನದ ಪೂಜೆ ಮಾಡುವುದೂ ಉಂಟು.  ಓದಿಗಿಂತ ಹೆಚ್ಚಾಗಿ  ಹಾಡು, ನೃತ್ಯ, ನಿರೂಪಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರೋ ಗಗನ್​ ಕೀರ್ತಿ ಈಗ ಕರ್ನಾಟಕದಾಚೆಗೂ ಸಾಗಿ, ದೇಶದಿಂದ ವಿದೇಶಕ್ಕೂ ಹೋಗಿದೆ.
 

click me!