ಎಲ್ಲಿ ಭೇಟಿಯಾಗೋದು ಎಂಬ ಪ್ರಶ್ನೆ ಅವಿವಾಹಿತ ಜೋಡಿಯನ್ನು ಹೆಚ್ಚಾಗಿ ಕಾಡುತ್ತದೆ. ಒಂದೆರಡು ದಿನ ಒಟ್ಟಿಗೆ ಕಳೆಯಲು ಯಾವ ಜಾಗ ಬೆಸ್ಟ್ ಎಂದು ಅವರು ಹುಡುಕಾಟ ನಡೆಸುತ್ತಾರೆ. ಅವರಲ್ಲಿ ನೀವೂ ಒಬ್ಬರಾಗಿದ್ದರೆ ಈ ಸ್ಥಳಕ್ಕೆ ಹೋಗ್ಬನ್ನಿ.
ಮದುವೆಯಾಗಿದೆ ಅಂದ್ರೆ ಲೈಸೆನ್ಸ್ ಸಿಕ್ಕಿದೆ ಎಂದೇ ಅರ್ಥ. ದಂಪತಿ ಭಾರತದ ಯಾವುದೇ ಪ್ರವಾಸಿ ಸ್ಥಳವನ್ನು ಆರಾಮವಾಗಿ ಸುತ್ತಾಡಬಹುದು. ಹೊಟೇಲ್ ನಲ್ಲಿ ತಂಗಬಹುದು. ಆದ್ರೆ ಅವಿವಾಹಿತ ಜೋಡಿಗೆ ಇದು ಅಸಾಧ್ಯವಾದ ಮಾತು. ಭಾರತದಲ್ಲಿ ಅವಿವಾಹಿತ ಜೋಡಿ ಪ್ರವಾಸದ ಪ್ಲಾನ್ ಮಾಡುವಾಗ ಸಾಕಷ್ಟು ಆಲೋಚನೆ ಮಾಡಿ ಮಾಡ್ಬೇಕು. ಯಾಕೆಂದ್ರೆ ಅವಿವಾಹಿತ ಜೋಡಿ ಒಟ್ಟಿಗೆ ಓಡಾಡ್ತಿದ್ದರೆ ಅವರನ್ನು ನೋಡುವ ದೃಷ್ಟಿ ಇನ್ನೂ ಬದಲಾಗಿಲ್ಲ. ಮದುವೆಯಾಗದೆ ಇಬ್ಬರು ಒಟ್ಟಿಗೆ ಹೊಟೇಲ್ ರೂಮ್ ಬುಕ್ ಮಾಡಿದ್ರೆ, ಸಾರ್ವಜನಿಕ ಪ್ರದೇಶದಲ್ಲಿ ಕೈ ಹಿಡಿದು ನಡೆದಾಡುತ್ತಿದ್ದರೆ ಜನರು ಅವರನ್ನು ಅನುಮಾನದಿಂದ ನೋಡೋದಲ್ಲದೆ ಅವರ ಬಗ್ಗೆ ಗುಸುಗುಸು ಶುರು ಮಾಡ್ತಾರೆ.
ಯಾರ ತಂಟೆಯೂ ಇಲ್ಲದೆ, ಯಾರ ಅನುಮಾನಕ್ಕೂ, ಅವಮಾನಕ್ಕೂ ಈಡಾಗದೆ ಆರಾಮವಾಗಿ ಸುತ್ತಾಡಬೇಕೆಂದ್ರೆ ಜೋಡಿ ವಿದೇಶಿ ಪ್ರವಾಸ (Trip) ಮಾಡ್ಬೇಕು. ಅಲ್ಲಿ ಯಾರನ್ನು ಯಾರೂ ನೋಡೋರಿಲ್ಲ, ಕೇಳೋರಿಲ್ಲ. ಹಾಗಂತ ಎಲ್ಲ ಬಾರಿ ವಿದೇಶಿ ಪ್ರವಾಸ ಸಾಧ್ಯವಿಲ್ಲ. ಭಾರತ (India) ದಲ್ಲಿಯೇ ಇರುವ ಕೆಲ ಕಡೆ ಪ್ರವಾಸಕ್ಕೆ ನೀವು ಪ್ಲಾನ್ ಮಾಡಬಹುದು. ಅಲ್ಲಿ ನಿಮ್ಮನ್ನು ಕೇಳೋರು ಯಾರೂ ಇರೋದಿಲ್ಲ. ನಾವಿಂದು ಅವಿವಾಹಿತ ದಂಪತಿ ಓಡಾಡಬಹುದಾದ ಜಾಗಗಳು ಯಾವುವು ಎಂಬುದನ್ನು ಹೇಳ್ತೇವೆ.
ಜಪಾನ್ ಚೆರ್ರಿ ಬ್ಲಾಸಮ್ ಇಷ್ಟಪಡುವ ಕಾಜೋಲ್ ಗೆ ಇದು ಫೆವರೆಟ್ ಪ್ಲೇಸ್
ಅವಿವಾಹಿತ ಜೋಡಿಗೆ ಇವು ಬೆಸ್ಟ್ ಪ್ಲೇಸ್ :
ಊಟಿ (Ooty) : ಸಂಗಾತಿ ಜೊತೆ ವಿಶೇಷ ಕ್ಷಣಗಳನ್ನು ಎಂಜಾಯ್ ಮಾಡಲು ನೀವು ಬಯಸಿದ್ರೆ ನೀವು ಊಟಿಗೆ ಪ್ಲಾನ್ ಮಾಡಬಹುದು. ಅಲ್ಲಿ ನಿಮ್ಮನ್ನು ಯಾರೂ ಗಮನಿಸೋದಿಲ್ಲ. ಹೊಟೇಲ್ ನಲ್ಲಿ ಕೂಡ ನೀವು ಆರಾಮವಾಗಿ ರೂಮ್ ಬುಕ್ ಮಾಡಿಕೊಂಡು ತಂಗಬಹುದು. ತನ್ನ ಸುಂದರ ಪರಿಸರದಿಂದ ಪ್ರತಿ ವರ್ಷ ಲಕ್ಷಾಂತರ ಜನರನ್ನು ತನ್ನತ್ತ ಸೆಳೆಯುವ ಊಟಿ ನವ ಜೋಡಿಗೆ ಅತ್ಯುತ್ತಮ ಸ್ಥಳವಾಗಿದೆ. ಇಲ್ಲಿ ನಿಮ್ಮಂತೆಯೇ ಅನೇಕ ಜೋಡಿಗಳು ಬರ್ತಿರುತ್ತಾರೆ. ನಿಮ್ಮ ಪ್ರಪಂಚದಲ್ಲಿ ನೀವು ಆರಾಮವಾಗಿ ಕಳೆಯಲು ಇಲ್ಲಿ ಅವಕಾಶವಿದೆ.
ಲೇಹ್ : ಅವಿವಾಹಿತ ದಂಪತಿಗೆ ಲೇಹ್/ಲಡಾಖ್‌ಗಿಂತ ಉತ್ತಮವಾದ ಸ್ಥಳ ಇನ್ನೊಂದಿಲ್ಲ. ಯಾಕೆಂದ್ರೆ ಇಲ್ಲಿಗೆ ಬರುವ ಬಹುತೇಕರು ತಮ್ಮ ಸಂಗಾತಿ ಜೊತೆ ಬಂದಿರುತ್ತಾರೆ. ಲೇಹ್/ಲಡಾಖ್ ಸ್ಥಳವನ್ನು ಫ್ಯಾಮಿಲಿ ಟ್ರಿಪ್ ಸ್ಥಳ ಎಂದು ಕರೆಯಲಾಗುವುದಿಲ್ಲ. ಇಲ್ಲಿನ ರಸ್ತೆಗಳು ಅತ್ಯಂತ ಅಪಾಯಕಾರಿಯಾಗಿವೆ. ಇವುಗಳಲ್ಲಿ ಜೋಜಿ ಲಾ ರಸ್ತೆಯನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಈ ರಸ್ತೆ ಶ್ರೀನಗರ ಮತ್ತು ಲೇಹ್ ನಡುವೆ ಹೋಗುತ್ತದೆ. ಲೇಹ್‌ನಲ್ಲಿ ಆಮ್ಲಜನಕದ ಮಟ್ಟವು ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ. ವಯಸ್ಸಾದ ಮಂದಿ ಇಲ್ಲಿಗೆ ಬಂದ್ರೆ ವಾತಾವರಣಕ್ಕೆ ಹೊಂದಿಕೊಳ್ಳೋದು ಕಷ್ಟವಾಗುತ್ತದೆ. ಹಾಗಾಗಿ ಬಹುತೇಕ ಯುವಕರೇ ಇಲ್ಲಿರ್ತಾರೆ. ನೀವು ನಿಮ್ಮ ಸಂಗಾತಿ ಜೊತೆ ಇಲ್ಲಿಗೆ ಬರಬಹುದು.
ಮಗಳು ಮೈ ನೆರೆದರೆ ನಡೆಯುತ್ತೆ ಇಲ್ಲೆಲ್ಲ ಹಬ್ಬ.. ಭಾರತದಲ್ಲಿಯೂ ಉಂಟು ಭಿನ್ನ ಪದ್ಧತಿ
ಮನಾಲಿ : ಅವಿವಾಹಿತರಿಗೆ ಮನಾಲಿ ಕೂಡ ಅತ್ಯುತ್ತಮ ಪ್ರವಾಸಿ ಸ್ಥಳವಾಗಿದೆ. ನೀವು ಕಡಿಮೆ ಬಜೆಟ್‌ನಲ್ಲಿ ಮನಾಲಿ ಪ್ರವಾಸವನ್ನು ಆನಂದಿಸಬಹುದು. ಮನಾಲಿಯಲ್ಲೂ ಬಹುತೇಕ ಜೋಡಿಗಳೇ ನಿಮ್ಮ ಕಣ್ಣಿಗೆ ಕಾಣಿಸುವ ಕಾರಣ ನೀವು ಬೇರೆಯವರ ಬಾಯಿಗೆ ಆಹಾರವಾಗುತ್ತೀರಿ ಎಂಬ ಭಯಬಿಟ್ಟು ಸುತ್ತಾಡಬಹುದು. ಹೊಟೇಲ್ ಖರ್ಚು ಕೂಡ ಕಡಿಮೆ ಇರುವ ಕಾರಣ ನಿಮ್ಮ ಸಂಗಾತಿ ಜೊತೆ ಏಕಾಂತದಲ್ಲಿ ಕಾಲ ಕಳೆಯಬೇಕು ಎಂದಾದ್ರೆ ನೀವು ಮನಾಲಿಗೆ ಪ್ಲಾನ್ ಮಾಡಬಹುದು.
ಗೋವಾ : ಪ್ರವಾಸಿಗರ ಸ್ವರ್ಗ ಗೋವಾ. ಇಲ್ಲಿ ನೋಡುವ ಸ್ಥಳಗಳು ಸಾಕಷ್ಟಿವೆ. ನೈಟ್ ಹೊಸ ಪ್ರಪಂಚವೇ ಇಲ್ಲಿ ತೆರೆದುಕೊಳ್ತದೆ. ಇಲ್ಲಿ ಸಾಕಷ್ಟು ಪ್ರೈವೆಟ್ ಬೀಚ್ ಗಳಿದ್ದು, ನೀವು ಅಲ್ಲಿಗೆ ಹೋದ್ರೆ ಆರಾಮವಾಗಿ ಪ್ರವಾಸವನ್ನು ಎಂಜಾಯ್ ಮಾಡಬಹುದು.